ಹನುಮಂತಣ್ಣಾ ಶನಿವಾರಣ್ಣಾ
ಗುರುವಾರ್ ಶುಕ್ರಾರ್ ಬಾರಣ್ಣಾ ||ಪಲ್ಲ|

ನಿನ್ನಾ ಮ್ಯಾಲೆ ಚಿನ್ನಾ ಚಲುವೇರ್
ಯಾಕೆ ಹಾಯ್ ಹಾಯ್ ಅಂತಾರೆ
ಕಾಲೇಜ ಕಟ್ಟೀ ಹುಡುಗೂರ್ ಹುಡುಗೇರ್
ಬಾಯ್‍ಬಾಯ್ ಬಾಯ್‍ಬಾಯ್ ಬಿಡ್ತಾರೆ ||೧||

ದೇವ್ರೇ ಇಲ್ಲಾ ಅಂದಾ ಜಾನಿ
ಜಾಯ್ಲಿ ಶನಿವಾರ್ ಸೇರ್ತಾನೆ
ಮೂಢಾ ನಂಬ್ಕಿ ಅಂದಾ ಅಂಬಿ
ಜೋಡು ತೆಂಗು ತರ್ತಾಳೆ ||೨||

ಹಿಪ್ಪೀ ರಾಜಾ ತಿಪ್ಪೀ ರಾಜಾ
ಅಡ್ಡಾ ಉದ್ದಾ ಬೀಳ್ತಾರೆ
ಕಲಸೂ ಮಾಸ್ತರ ಲೇಡಿ ಟೀಚರ್
ನಿಂಗೆ ಕಣ್ಣು ಹೊಡಿತಾರೆ ||೩||

ಶನಿವಾರ್ ಸರದಿ ಗಮ್ಮತ್ ಗರದಿ
ನಿನ್ನಾ ಸುತ್ತಾ ಸೇರ್ತಾರೆ
ಪೌಡರಿಲ್ಲಾ ಲಿಪ್‍ಸ್ಟಿಕ್ಕಿಲ್ಲಾ
ನಿಂಗೆ ಹೆಂಗೆ ಒಲಿತಾರೆ ||೪||

ಅಣ್ಣಾ ಅಣ್ಣಾ ಹನುಮಂತಣ್ಣಾ
ನಿನ್ನಾ ಚಾನ್ಸು ತಾರಣ್ಣಾ
ಹೋಳ್ಗಿ ಹುಗ್ಗಿ ನಿಂಗೆ ನಿಂಗೆ
ಹುಡ್ಗೇರ್ ತುಡಿಗೇರ್ ನನಗಣ್ಣಾ ||೫||
*****