ಬಂಗಾಳಕ್ಕೆ ಬಾಲ್ಯದಿಂದ ಬೆಳಕಿನ ಕನಸು, ಎಳೆದ ಗೆರೆ, ಬರೆದ ಅಕ್ಷರ, ಹರಿದ ದನಿ ಎಲ್ಲದರಲ್ಲಿ ಅದನ್ನೇ ಅರಸುವ ಮನಸು, ಆಕಾಶದಂಗಳದಲ್ಲಿ ಬಿಕ್ಕಿದ ಅಕ್ಕಿಕಾಳನ್ನೆಲ್ಲ ಹೆಕ್ಕಿ ತರುವ ಹಬ್ಬಯಕೆ ಈ ಹಕ್ಕಿಗೆ, ಹೀಗಿದ್ದೂ ಅದನ್ನು ಸುತ್ತಿ ನಿಂತ ಪಂಜರ ಬಿರ...

ಯಾವುದು ಅಸಲಿ ಯಾವುದು ನಕಲಿ ಅತುಲತ್ ಮುದಲಿ ಅತುಲತ್ ಮುದಲಿ ಗುಡುಗಿತು ಕಾಡು ನಡುಗಿತು ನಾಡು ಉರುಳಿತು ಒಂದೊಂದೇ ಮನೆ ಮಾಡು ಇಲಿಯೋ ಹುಲಿಯೋ ಹುಡುಕಿಸಿ ನೋಡು ಯಾವುದು ಅಸಲಿ ಯಾವುದು ನಕಲಿ ಅತುಲತ್ ಮುದಲಿ ಅತುಲತ್ ಮುದಲಿ ಅವಲೋಕಿತೇಶ್ವರನಿಂದ ಕಲಿ!...

ಕಣಕಿ ಕೊಬ್ಬರಿ ಆತು ಹೊಟ್ಟು ಹುಗ್ಗಿಯು ಆತು ಏನ್ಕಾಲ ಬಂತವ್ವ ಕಂಗಾಲ ||ಪಲ್ಲ|| ರೊಟ್ಟೀಯ ಬೇಸಾಕ ಚಕಿಚೂರು ಇಲ್ಲಾತು ಹ್ಯಾಂಗವ್ವ ಮುಂದವ್ವ ಈ ಕಾಲ ಆರು ವರುಸಕ ಒಮ್ಮೆ ಬರಗಾಲ ಬರುತಿತ್ತು ಈಗೀಗ ವರುವರುಸ ಬರಗಾಲ ||೧|| ಏನು ಇಲ್ಲಾ ಅಂದ್ರು ಕಲ್ಲು ...

ಬಿದ್ದ ಮರಗಳ ಬುಡಕ್ಕೆ ಹತ್ತಿದ ಗೆದ್ದಲು ನಿಗಿ ನಿಗಿ ಕೆಂಡಕ್ಕೆ ಕಣ್ಣೀರು ಬಿದ್ದು ಬರಿ ಇದ್ದಿಲು ದಾರಿ ಬದಿಯಲ್ಲಿ ದುಗುಡ ತುಂಬಿದ ಗಿಡ ಮೇಲೆ ನೋಡಿದರೆ ನಡುಗುತ್ತಿರುವ ಮೋಡ. ಬಿದ್ದ ಮನೆಯ ಜಂತೆಗಳಲ್ಲಿ ಕಂತೆಕಂತೆ ಕತೆಗಳು ಸಂತೆ ಗದ್ದಲದ ನಡುವೆ ಮೌ...

ಎಷ್ಟು ಜನ್ಮದ ಪುಣ್ಯದ ಫಲವೋ ನಾ ಈ ಜನ್ಮದಲಿ ಕನ್ನಡಿಗನಾಗಿರುವುದಕೆ| ಹಿಂದಿನ ಜನ್ಮವ ಸ್ಥಿತಿಯ ನರಿಯೆ ಮುಂದಿನಜನ್ಮದಲೇನೋ ಕಾಣೆ|| ಎಷ್ಟು ಜನ್ಮದ ಪುಣ್ಯದ ಫಲವೊ ಈ ಕನ್ನಡ ನಾಡಲೇ ಜನಿಸಿದಕೆ| ಈ ನಾಡ ಸಿರಿ ಸೌಂದರ್ಯವ ಕಾಣುವುದಕೆ ಗಂಧ ಶ್ರೀಗಂಧ ಚೆಂ...

ಬಲು ಸುಲಭ ಬಲು ಸುಲಭ ಲೋಕದ ತಪ್ಪನೆಣಿಸಿ ಪೇಳುವುದಾದೊಡೆಂತದನು ತಿದ್ದುವುದು ? ಎಲ್ಲ ದೋಷಕು ಮೂಲವಲ್ಲಲ್ಲೇ ವ್ಯಕ್ತಿ ದೋಷ ದೊಳಿರುತಿರಲು ಪ್ರಜಾ ಪ್ರಭುವನಾರು ತಿದ್ದುವುದು ? ಬಲು ಪ್ರಭಲವಿಂದೆಮ್ಮ ಕಾನೂನು ಪ್ರಭುವ ರಕ್ಷಿಸಲು – ವಿಜ್ಞಾನೇಶ...

ಶಿರೀಷ ಹೇಳಲರಿಯದ ಆನಂದದ ಆವಿರ್ಭಾವವಾಗುವುದು ತೇಲಿ ಬರುವ ನಿನ್ನ ಮೂರ್ತಿಯನ್ನು ಕಂಡಾಗ, ಯೋಜಿಸುವುದು ಮನಸು ಸಾರಿ ಬರ ಸೆಳೆದು ಆಲಂಗಿಸಲೇ ಕಂಡು ಕಣ್ಣಿನಲ್ಲಿಯೇ ಹೀರಿ ಎದೆಯಲ್ಲಿ ಹಿಡಿದಿಟ್ಟುಕೊಳ್ಳಲೇ ಭದ್ರವಾಗಿ ಹೇಗೆ ? ಹೇಗೆ ತಣಿಯಲಿ ಎಂದು. ನಿನ...

೧ ಮಹಾಯಾನ ತಾನು ತುಂಬಾ ಸಣ್ಣವನು ಅಂದುಕೊಂಡವನು ಬೃಹತ್ ಬುದ್ಧನನು ಕೆತ್ತಿದ ಆಹಾ! ಏನು, ಆಳ, ಅಗಲ, ವಿಸ್ಕಾರ- ಆಕಾಶದೆತ್ತರ! ಗುಲಾಬಿ ಮೃದು ಪಾದಗಳನ್ನು ಕೆತ್ತುತ್ತಾ, ಕಿತ್ತುತ್ತಾ ಕಣ್ಣು, ತುಟಿ, ಮೂಗು ಮುಂಗುರುಳ ಅರಳಿಸುತ್ತಾ ನೆಲದಲ್ಲಿದ್ದವ ಮ...

ಈ ಮಾಹಾತ್ಮ್ಯೆ ಯಾವ ಪುರಾಣದಲ್ಲಿದೆ? ಎಲ್ಲಿ ಯಾರು ಹೇಳಿದ್ದು? ಯಾರು ಕೇಳಿದ್ದು? ಯಾವ ಇಷ್ಟಾರ್ಥಸಿದ್ದಿಗಾಗಿ? ಎಂದೆಲ್ಲ ಪ್ರಶ್ನೆಗಳನ್ನು ನೀವು ಕೇಳಬಹುದು. ಉತ್ತರ ಹೇಳುತ್ತಾ ಹೋದರೆ ಪೀಠಿಕಾ ಪ್ರಕರಣವೇ ಉದ್ದ ಬೆಳೆದು ಮಹಾತ್ಮ್ಯೆಯನ್ನು ಕೇಳುವಷ್ಟರಲ್ಲಿ ನಿಮಗೆ ಹಾಕಳಿಗೆ ತೊಡಗಿ ತೂಕಡ...

(ಒಂದು ಐತಿಹಾಸಿಕ ಕತೆ) ಹ್ಹಃ ಹ್ಹಃ ಹ್ಹಃ! ಅಹ್ಹಃ ಅಹ್ಹಃ ಅಹ್ಹಃ!! ಗಝುನಿ ಮಹಮೂದನಿಗೆ ಹಿಡಿಸಲಾರದ ನಗೆ. ನಕ್ಕು ನಕ್ಕು ಅವನ ಹೊಟ್ಟೆ ನೋಯುತ್ತಿದ್ದಿತು. ಆದರೂ ಅವನ ಆ ತಿರಸ್ಕಾರದ ನಗೆ ತಡೆಯಲಾರದಾಯಿತು. ಅದೊಂದು ಸುಪ್ರಸಿದ್ದವಾದ ಸೋಮನಾಥ ದೇವಾಲಯ. ಭಾರತದ ವೈಭವವನ್ನು ವಿಶ್ವಕ್ಕೆ ತೋ...

ಸರಲಾಕ್ಷ ಹುಲಿಮೀಸೆಯು ಮನೆಯಲ್ಲಿ ಬಂದಿರಲಾರಂಭಿಸಿದಂದಿನಿಂದ ತಾನು ತೊಂದರೆಗೊಂಡು ಬೇಸತ್ತು ಹೋಗಿರುವೆನೆಂದು ವಸತಿಗೃಹದ ಸ್ವಾಮಿನಿಯಾದ ಲೀಲಾಬಾಯಿಯು ದೂರಿಕೊಳ್ಳುತ್ತಿದ್ದಳು. “ಕೆಟ್ಟ ಮೋರೆಯವರೂ ಅಸಭ್ಯರೂ ಸುಟ್ಟಮನೆಯವರೂ ಸುಡದ ಮನೆಯವರೂ ತೆರವಿಲ್ಲದೆ ನನ್ನ ಮನೆಗೆ ಬರುತ್ತಿರುವ...

ಅವಳು ಅಡುಗೆ ಮನೆಯ ಕಪ್ಪಾದ ಡಬ್ಬಿಗಳನ್ನು, ಉಳಿದ ಸಾಮಾನುಗಳನ್ನು ತೆಗೆದು ತೊಳೆಯಲು ಆ ಮಣ್ಣಿನ ಮಾಡು ಹಂಚಿನ ಮನೆಯ ಮುಂದಿನ ತೆಂಗಿನಕಟ್ಟೆಯಲ್ಲಿ ಹಾಕಿದ ಅಗಲ ಹಾಸುಗಲ್ಲ ಮೇಲೆ ಕೈಲಿ ಹಿಡಿದಷ್ಟು ತಂದು ತಂದು ಇಡುತ್ತಿದ್ದಳು. ಏಳರ ಬಾಲೆ ಮಗಳು ಕೂಡ ತನ್ನ ಕೈಗೆ ಎತ್ತುವಂತಹ ಡಬ್ಬಿಗಳನ್ನು...

ಆಹಾ! ಏನು ಕಡಲು! ಅ೦ತವಿಲ್ಲದ ಕಡಲು!! ಅಪಾರವಾಗಿಹ ಕಡಲು! ದಿಟ್ಟಿ ತಾಗದ ಕಡಲು!! ಆ ಕಡಲ ಒಡಲಲ್ಲಿ ಏನು ತೆರೆ! ಏನು ನೊರೆ!! ಏನು ಅಂದ! ಎನಿತು ಚಂದ! ಬಿಚ್ಚಿ ಮುಚ್ಚುವ ಅದರ ನಯವಾದ ತುಟಿಗಳು ಹೊನ್ನರವಿ ಎಸೆದಿರುವ ಚಿನ್ನದಲುಗಳೇಸು! ಬಣ್ಣ ಬಣ್ಣಗಳುಗುವ ಅಚ್ಚು ಪಡಿಯಚ್ಚುಗಳ ಹೊಳಪಿನ ಏನ...

ಸರ್, ಗುಡ್ ಮಾರ್ನಿಂಗ್, ಮೇ ಐ ಕಮೀನ್ ಸರ್ – ನಿತ್ಯ ಆಫೀಸಿನ ಅವಧಿ ಪ್ರಾರಂಭವಾಗುತ್ತಲೇ ಹಿಂದಿನ ದಿನ ರೆಡಿ ಮಾಡಿದ ಹತ್ತಾರು ಕಾಗದ ಪತ್ರಗಳಿಗೆ ಸಹಿ ಪಡೆಯಲು, ಇಲ್ಲವೇ ಹಿಂದಿನ ದಿನದ ಎಲ್ಲ ಫೈಲುಗಳ ಚೆಕ್ ಮಾಡಿಸಲು, ಕೈಯಲ್ಲಿ ಫೈಲುಗಳ ಕಟ್ಟು ಹಿಡಿದು ಬಾಗಿಲ ಮರೆಯಲ್ಲಿ ನಿಂತು ...