ಅತುಲತ್ ಮುದಲಿ

ಯಾವುದು ಅಸಲಿ ಯಾವುದು ನಕಲಿ
ಅತುಲತ್ ಮುದಲಿ ಅತುಲತ್ ಮುದಲಿ

ಗುಡುಗಿತು ಕಾಡು ನಡುಗಿತು ನಾಡು
ಉರುಳಿತು ಒಂದೊಂದೇ ಮನೆ ಮಾಡು
ಇಲಿಯೋ ಹುಲಿಯೋ ಹುಡುಕಿಸಿ ನೋಡು
ಯಾವುದು ಅಸಲಿ ಯಾವುದು ನಕಲಿ
ಅತುಲತ್ ಮುದಲಿ ಅತುಲತ್ ಮುದಲಿ
ಅವಲೋಕಿತೇಶ್ವರನಿಂದ ಕಲಿ!

ತ್ರಿಂಕೊಮಲಿಯಲಿ ಹೆಣಗಳು ಬಿದ್ದು
ಅನುರಾಧಾಪುರದಲಿ ಅವು ಎದ್ದು
ನಡೆಯುವ ಸದ್ದು ಕುಣಿಯುವ ಸದ್ದು
ಯಾವುದು ಅಸಲಿ ಯಾವುದು ನಕಲಿ
ಅತುಲತ್ ಮುದಲಿ ಅತುಲತ್ ಮುದಲಿ
ಅವಲೋಕಿತೇಶ್ವರನಿಂದ ಕಲಿ!

ಕಡಲಿಗೆ ಹೋದವರು ಬರಲೇ ಇಲ್ಲ
ನೆರೆಮನೆ ಹುಡುಗನ ಪತ್ತೆಯ ಇಲ್ಲ
ಬುದ್ಧದೇವನೆ ಬಲ್ಲ ಇದೆಲ್ಲ
ಯಾವುದು ಅಸಲಿ ಯಾವುದು ನಕಲಿ
ಅತುಲತ್ ಮಲದಲಿ ಅತುಲತ್ ಮುದಲಿ
ಅವಲೊಕಿತೇಶ್ವೆರನಿಂದ ಕಲಿ!
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಧ್ಯಾನದಲ್ಲಿ ಕಂಡ ಜೇಡರ ಹುಳು : ಮೂರು ಕತೆಗಳು
Next post ಏನಮ್ಮಾ ಉಂಟು

ಸಣ್ಣ ಕತೆ

  • ಎರಡು ಮದುವೆಗಳು

    ಮುಂಗಾರು ಮಳೆಗಳು ಸರಿಯಾಗಿ ಬಾರದೇ ಭುವನೇಶ್ವರದ ಹಳ್ಳಿಯ ಜನರಲ್ಲಿ ಒಂದು ರೀತಿಯ ಕಳವಳವಾಗಿತ್ತು. ಮಳೆ ಬಂದರೆ ಬೆಳೆ, ಬೆಳೆ ಆದರೆ ಬಾಳು ಎಂದು ಬದುಕುತ್ತಿದ್ದ ಅವರಿಗೆ ಏನು… Read more…

  • ಹುಟ್ಟು

    ಶಾದಿ ಮಹಲ್‌ನ ಒಳ ಆವರಣದಲ್ಲಿ ದೊಡ್ಡ ಹಾಲ್‌ನಲ್ಲಿ ಹೆಂಗಸರೆಲ್ಲಾ ಸೇರಿದ್ದರು. ಹೊರಗಡೆ ಹಾಕಿದ್ದ ಶಾಮಿಯಾನದಲ್ಲಿ ಗಂಡಸರು ನೆರೆದಿದ್ದರು. ಒಂದು ಕಡೆಯ ಎತ್ತರವಾದ ವೇದಿಕೆಯ ಮೇಲೆ ಮದುವೆ ಗಂಡು,… Read more…

  • ಆವರ್ತನೆ

    ಒಬ್ಬ ಸಾಹಿತಿಯನ್ನು ನೋಡುವ ಕುತೂಹಲ ಯಾರಿಗಿಲ್ಲ? ಪಕ್ಕದೂರಿನ ಹೈಸ್ಕೂಲಿನಲ್ಲಿ ಕಾದಂಬರಿಕಾರ ಅ.ರ.ಸು.ರವರ ಕಾರ್ಯಕ್ರಮವಿದೆಯೆಂಬ ಸುದ್ದಿ ಕೇಳಿ ನಾವು ನೋಡಲು ಹೋದೆವು. ಅ.ರ.ಸು.ರವರ ಕೃತಿಗಳನ್ನು ನಾವಾರೂ ಹೆಚ್ಚಾಗಿ ಓದಿರಲಾರೆವು.… Read more…

  • ಯಾರು ಹೊಣೆ?

    "ಧಡ್....... ಧಡಲ್........ ಧಡಕ್" ಗಾಡಿ ನಿಂತಿತು. ಹೊರಗೆ ಮೋರೆಹಾಕಿ ನೋಡಿದೆ. ಕತ್ತಲು ಕವಿದಿತ್ತು. ಚುಕ್ಕೆಗಳು ಪಕಪಕ ಕಣ್ಣು ಬಿಡುತ್ತಿದ್ದವು. ಮೂಡಲ ಗಾಳಿ "ಸಿಳ್" ಎಂದು ಬೀಸುತ್ತಿತ್ತು. ನಾನು… Read more…

  • ಬಾಳ ಚಕ್ರ ನಿಲ್ಲಲಿಲ್ಲ

    ತಂದೆಯ ಸಾವು ಕುಟುಂಬವನ್ನೇ ಬೀದಿಪಾಲು ಮಾಡಿತು. ಹೊಸಪೇಟೆಯ ಚಪ್ಪರದ ಹಳ್ಳಿಯಲ್ಲಿ ವಾಸವಾಗಿದ್ದ ಇಮಾಮ್ ಸಾಬ್ ಹಾಗೂ ಝೈನಾಬ್ ದಂಪತಿಗಳಿಗೆ ೬ ಹೆಣ್ಣು ಮಕ್ಕಳು, ಒಂದು ಗಂಡು ಮಗು.… Read more…