ಇಲ್ಲ ! ಬರಲಿಲ್ಲ ಆ ದಿನ ಬರಲಿಲ್ಲ. ಸಾಲು ಸಾಲು ಮೇಘ, ಮಾರುತಗಳ ಬರಳೊರಳಿಸಿ ಗುಡುಗು, ಮಿಂಚುಗಳ ಬಾಣ, ಬಿರುಸಿನ ಮಾಲೆ ಹೊತ್ತಿಸಿ ಗಿಡ, ಮರಗಳ ಬುಡ ನಡುಗಿಸಿ ತಲೆ ಕೊಡವಿಸಿ ಏಕಕಾಲಕೆ ಗಲಿಬಿಲಿ, ಸಂತಸ ಹುಟ್ಟಿಸಿ ಜನ, ದನ, ಕ್ರಿಮಿ, ಕೀಟ ಪಕ್ಷಿಗಳ ತ...

ಎಲ್ಲರೂ ಬೆಚ್ಚಗೆ ಹೊದ್ದು ಮಲಗಿರಲು ಇವಳು ಎದ್ದು ಜಿಮ್‌ನಲ್ಲಿ ಬೆವರು ಸುರಿಸುತ್ತಾ ಕಸರತ್ತು ಮಾಡುವಳು ಎಲ್ಲರೂ ಹಾಲು ತುಪ್ಪದಲ್ಲಿ ಕೈತೊಳೆದರೆ- ಇವಳು ಹಣ್ಣು-ತರಕಾರಿ ಒಣಗಿದ ಚಪಾತಿಯ ಮೇಲೆಯೇ ಜೀವಿಸುವಳು ಎದುರಿಗೆ ಯಾರೂ ಇಲ್ಲ ಆದರೂ ಕೈ ಬೀಸುವಳು...

ಶುಚಿಯು ನಗುತಲೆ ಹಿಂದೆ ಬರ್‍ಪಳು ಉಚಿತ ಮಾರ್‍ಗವು ತನಗಿದೆನುತಲೆ ಸಚಿವ! ಹೊಲೆಯನು ಹಿರಿಯ ಪೊರೆವನು ಹೊರಟು ನಿಂದೆಡೆಗೆ. ಸಚಿವ ಬಾ ಧರೆಯೆಲ್ಲವಳೆಯುವ……. ಶುಚಿಯ ಜಾನ್ಹವಿ ಹರಿದು ಶ್ರೀ ಹರಿ ಗುಚಿತದಾಸನವಾಗಲೀಧರೆ ಪರೆಯ ಬಾ ಧೊರೆಯೆ! ...

ಮೂಡಿದ ಮುಂಜಾನೆ ಹೊಸದಾಗಿದೆ ಪೂರ ಕಣ್ತೆರೆದ ಕರುಣೆಯಲಿ ಬದುಕಾಗಿದೆ ಹಗುರ /ಪ// ಹಾರಿದ ಬೆಳ್ಳಕ್ಕಿ ಬಿಡಿಸಿದೆ ರಂಗೋಲಿ ಎಂದಿನ ರಂಗೋಲಿ ಚೆಲ್ಲಿದೆ ಹೊಸ ಹೋಲಿ ಹಾಡಿದ ಗಿಳಿ ಕೋಗಿಲೆ ಹೊಸ ರಾಗ ಹಾಡಿದೆ ಅದರಲಿ ಹೊಸ ಚೇತನ ಹೊಸ ಬದುಕ ತೋರಿದೆ ದೂರದ ಗಿ...

ಪ್ರೀತಿ ಎಂಬ ಹೂದೋಟದಲ್ಲಿ ರಾಮನೆಂಬ ಗಿಳಿಯ ಅಡಗಿಸಿಕೊಂಡೆ || ಪ್ರೀತಿ ಎಂಬ ಹೊನ್ನ ಪಂಜರದಲ್ಲಿ ಮುದ್ದು ಮಾಡಿ ಬಚ್ಚಿಟ್ಟುಕೊಂಡೆ || ಚಂದಾದ ಗಿಳಿಯು ಬೆಳ್ಳಿ ಚಂದಕ್ಕಿ ಆಡುವ ಚಂಚಲೆ ನನ್ನ ಗಿಳಿಯು || ಬಾನಂಚಿನ ಸೆರೆಯ ಹೂ ತಾರೆಯಂತೆ ಬಿಟ್ಟರೆ ಹಾರಾ...

ಇವರು ಹಿರಿಯರು ತಾವರಿಯದ ಹೊನ್ನು ಕೊಪ್ಪರಿಗೆಗಟ್ಟಲೆ ಇದೆಯೆಂದು ಸುತರಾಂ ಅರಿಯರು ಎಳೆಯರು ಅದರ ಮಾತಾಡಿದರೊ ಇವರ ಬಾಯಿಂದ ಉರಿಯ ಮಳೆ ಕೆಸರ ಹೊಳೆ ಕಣ್ಣೆಲ್ಲ ಬೆಂಕಿಬಳೆ. ನದಿ ಹೊರಳಿದ್ದಕ್ಕೆ ನೆಲ ಕೆರಳಿದ್ದಕ್ಕೆ ಇಷ್ಟು ದಿನ ನಿಂತ ಬಂಡೆ ಈಗ ತಳ ಧಿಕ...

ಎಲ್ಲ ಕಪ್ಪೆಗಳಂತಲ್ಲ ನಮ್ಮ ಗೂಂಕುರು ಕಪ್ಪೆ ಇನ್ನುಳಿದ ಕಪ್ಪೆಗಳೆಲ್ಲ ಇದುರೆದುರು ಬರಿಯ ಸಪ್ಪೆ ಹೆಬ್ಬಂಡೆಯಂತೆ ಹೇಗೆ ಕುಳಿತು ಬಿಟ್ಟಿದೆ ನೋಡಿ ಹೀಗೆ ನಾವು ನಡೆವ ದಾರಿಗಡ್ಡ ಎಲ್ಲಿಂದ ಬಂತೊ ಈ ಗುಡ್ಡ! ಮೇಲೆಲ್ಲ ಕಣಿವೆ ಕೊಳ್ಳ ಅಲ್ಲಿಲ್ಲಿ ಕೆಲವು ...

ಈ ಮಾಹಾತ್ಮ್ಯೆ ಯಾವ ಪುರಾಣದಲ್ಲಿದೆ? ಎಲ್ಲಿ ಯಾರು ಹೇಳಿದ್ದು? ಯಾರು ಕೇಳಿದ್ದು? ಯಾವ ಇಷ್ಟಾರ್ಥಸಿದ್ದಿಗಾಗಿ? ಎಂದೆಲ್ಲ ಪ್ರಶ್ನೆಗಳನ್ನು ನೀವು ಕೇಳಬಹುದು. ಉತ್ತರ ಹೇಳುತ್ತಾ ಹೋದರೆ ಪೀಠಿಕಾ ಪ್ರಕರಣವೇ ಉದ್ದ ಬೆಳೆದು ಮಹಾತ್ಮ್ಯೆಯನ್ನು ಕೇಳುವಷ್ಟರಲ್ಲಿ ನಿಮಗೆ ಹಾಕಳಿಗೆ ತೊಡಗಿ ತೂಕಡ...

(ಒಂದು ಐತಿಹಾಸಿಕ ಕತೆ) ಹ್ಹಃ ಹ್ಹಃ ಹ್ಹಃ! ಅಹ್ಹಃ ಅಹ್ಹಃ ಅಹ್ಹಃ!! ಗಝುನಿ ಮಹಮೂದನಿಗೆ ಹಿಡಿಸಲಾರದ ನಗೆ. ನಕ್ಕು ನಕ್ಕು ಅವನ ಹೊಟ್ಟೆ ನೋಯುತ್ತಿದ್ದಿತು. ಆದರೂ ಅವನ ಆ ತಿರಸ್ಕಾರದ ನಗೆ ತಡೆಯಲಾರದಾಯಿತು. ಅದೊಂದು ಸುಪ್ರಸಿದ್ದವಾದ ಸೋಮನಾಥ ದೇವಾಲಯ. ಭಾರತದ ವೈಭವವನ್ನು ವಿಶ್ವಕ್ಕೆ ತೋ...

ಸರಲಾಕ್ಷ ಹುಲಿಮೀಸೆಯು ಮನೆಯಲ್ಲಿ ಬಂದಿರಲಾರಂಭಿಸಿದಂದಿನಿಂದ ತಾನು ತೊಂದರೆಗೊಂಡು ಬೇಸತ್ತು ಹೋಗಿರುವೆನೆಂದು ವಸತಿಗೃಹದ ಸ್ವಾಮಿನಿಯಾದ ಲೀಲಾಬಾಯಿಯು ದೂರಿಕೊಳ್ಳುತ್ತಿದ್ದಳು. “ಕೆಟ್ಟ ಮೋರೆಯವರೂ ಅಸಭ್ಯರೂ ಸುಟ್ಟಮನೆಯವರೂ ಸುಡದ ಮನೆಯವರೂ ತೆರವಿಲ್ಲದೆ ನನ್ನ ಮನೆಗೆ ಬರುತ್ತಿರುವ...

ಅವಳು ಅಡುಗೆ ಮನೆಯ ಕಪ್ಪಾದ ಡಬ್ಬಿಗಳನ್ನು, ಉಳಿದ ಸಾಮಾನುಗಳನ್ನು ತೆಗೆದು ತೊಳೆಯಲು ಆ ಮಣ್ಣಿನ ಮಾಡು ಹಂಚಿನ ಮನೆಯ ಮುಂದಿನ ತೆಂಗಿನಕಟ್ಟೆಯಲ್ಲಿ ಹಾಕಿದ ಅಗಲ ಹಾಸುಗಲ್ಲ ಮೇಲೆ ಕೈಲಿ ಹಿಡಿದಷ್ಟು ತಂದು ತಂದು ಇಡುತ್ತಿದ್ದಳು. ಏಳರ ಬಾಲೆ ಮಗಳು ಕೂಡ ತನ್ನ ಕೈಗೆ ಎತ್ತುವಂತಹ ಡಬ್ಬಿಗಳನ್ನು...

ಆಹಾ! ಏನು ಕಡಲು! ಅ೦ತವಿಲ್ಲದ ಕಡಲು!! ಅಪಾರವಾಗಿಹ ಕಡಲು! ದಿಟ್ಟಿ ತಾಗದ ಕಡಲು!! ಆ ಕಡಲ ಒಡಲಲ್ಲಿ ಏನು ತೆರೆ! ಏನು ನೊರೆ!! ಏನು ಅಂದ! ಎನಿತು ಚಂದ! ಬಿಚ್ಚಿ ಮುಚ್ಚುವ ಅದರ ನಯವಾದ ತುಟಿಗಳು ಹೊನ್ನರವಿ ಎಸೆದಿರುವ ಚಿನ್ನದಲುಗಳೇಸು! ಬಣ್ಣ ಬಣ್ಣಗಳುಗುವ ಅಚ್ಚು ಪಡಿಯಚ್ಚುಗಳ ಹೊಳಪಿನ ಏನ...

ಸರ್, ಗುಡ್ ಮಾರ್ನಿಂಗ್, ಮೇ ಐ ಕಮೀನ್ ಸರ್ – ನಿತ್ಯ ಆಫೀಸಿನ ಅವಧಿ ಪ್ರಾರಂಭವಾಗುತ್ತಲೇ ಹಿಂದಿನ ದಿನ ರೆಡಿ ಮಾಡಿದ ಹತ್ತಾರು ಕಾಗದ ಪತ್ರಗಳಿಗೆ ಸಹಿ ಪಡೆಯಲು, ಇಲ್ಲವೇ ಹಿಂದಿನ ದಿನದ ಎಲ್ಲ ಫೈಲುಗಳ ಚೆಕ್ ಮಾಡಿಸಲು, ಕೈಯಲ್ಲಿ ಫೈಲುಗಳ ಕಟ್ಟು ಹಿಡಿದು ಬಾಗಿಲ ಮರೆಯಲ್ಲಿ ನಿಂತು ...