ಹೇಗಿದ್ದ ನಗರ ಹೇಗಾಗಿ ಹೋಯ್ತಣ್ಣ – ಉದ್ಯಾನ ನಗರ ಹೇಗಿದ್ದ ನಗರ ಹೇಗಾಗಿ ಹೋಯ್ತಣ್ಣ //ಪ// ಊರಗಲದ ಫುಟ್‌ಪಾತನ್ನು ರಸ್ತೆಯು ನುಂಗಿತಣ್ಣ ವಿಸ್ತರಿಸಿದ ಈ ರಸ್ತೆಯನು ಟ್ರಾಫಿಕ್ ನುಂಗಿತಣ್ಣ ಕಿವಿಗಡಚಿಕ್ಕುವ ಹಾರನ್ನು ಕಿವಿಯನು ತುಂಬಿತಣ್ಣ ಆ...

ಏಕೆ ನೀನು ಕಾಡುವೆ ನನ್ನನ್ನು ಪ್ರೇಮ ಪರಾಗದ ಹೂವೆ ಪರಮಾರ್ಥದ ಲೇಪ ನಿನಗಲ್ಲವೇ ಮಾನಸ ಸ್ಪರ್ಶದ ಚೆಲುವೆ || ಶಿವನಿಗಿಲ್ಲದ ಹರಿಗಿಲ್ಲದ ನೀತಿ ಕೃಷ್ಣ ಅವತಾರಿ ಬಲ್ಲವನು ರಾಧೇಯ ಪ್ರೇಮ ಸಲ್ಲಾಪ ನಿನ್ನ ಸ್ಪರ್ಶವೇ || ಬಿಡಿಸಲಾರದ ಬಂಧನ ಜನುಮ ಜನುಮವು ...

ಹುಲ್ಲುಗಾವಲ ಹುಡುಕಿ ಹೊರಟ ಪಶುಗಳ ಹಿಂಡು ಮುಂದೆ ಮುಂದೆ ಕಾಯುತ್ತ ಹೊರಟಿರುವ ಗಂಡು ಹೆಣ್ಣಿನ ದಂಡು ಅದರ ಹಿಂದೆ ಪಶುಗು ಪಶುಪತಿಗು ಇರುವೆಲ್ಲ ಅಂತರ ಪಾದಸಂಖ್ಯೆಯೊಂದೆ. ಕಾಲೆರಡು ಕೈಯಾಗಿ ಬಾಲ ಕ್ಷೀಣಿಸಿ ಅಡಗಿ ತಲೆ ಬದಲು ಬುದ್ಧಿಗೇ ಕೊಂಬು ಮೂಡಿ ಬ...

ಇದ್ದಿರಬಹುದು ನಿನಗೆ ಹದಿನಾರು ಸಾವಿರದ ನೂರಾ ಎಂಟು ಆದರೆ ನಿನ್ನ ಮನಸ್ಸು ಕದ್ದವಳು ಮಾತ್ರ ಬೇರೇನೇ ಒಬ್ಬಳುಂಟು. ಹೌದೋ ಅಲ್ಲೋ? ಏನಂತಿರಿ ಕಳ್ಳ, ಬೇಕಿದ್ರೆ ಅವಳ್ಯಾರೂಂತ ನಾನೇ ಹೇಳಿಬಿಡ್ತೇನೆ ಕೇಳು, ಆಕೀ ಹೆಸರು ದ್ರೌಪದಿ. *****...

ಕುದುರೆಮುಖ ಕುದುರೆಮುಖ ಆ ಹೆಸರಿನಲ್ಲೆ ಎಂಥ ಸುಖ ಗುಡ್ಡವಿಲ್ಲ ಬೆಟ್ಟವಿಲ್ಲ ಶಬ್ದ ಕೊರೆದ ನಿರ್ಮಿತಿ ಗಾಳಿಗಿಂತ ವೇಗವಾಗಿ ಎಲ್ಲಿ ನನ್ನನೊಯ್ಯುತಿ ದಾಟಿ ಕಡಲ ಮೀಟಿ ಮುಗಿಲ ಬಂದ ದೇಶ ಯಾವುದು ತೆರೆದು ಕಿಟಿಕಿ ಕಣ್ಣ ಮಿಟುಕಿ ಕಂಡ ರೂಪು ಯಾರದು ನಡೆದು...

ಕಣ್ಣಾಗ ನಗಿ ನಗಿ ಹೊಟ್ಯಾಗ ಹೊಗಿ ಹೊಗಿ ಏನ್ಕಂಡು ಏನಾತು ನನಬಾಳೆ ||ಪಲ್ಲ|| ನೀರ್‍ಲಣ್ಣು ಮರತುಂಬ ಪ್ಯಾರ್‍ಲಣ್ಣು ಗಿಡತುಂಬ ಹರದರ ಭುಸು ಭುಸು ಭುಸ್ಸಣ್ಣಾ ಪೈಪಾಟ ಥೈಥಾಟ ಮೈಮಾಟ ಸೈಸಾಟ ಮುಟ್ಟಂಬ್ಲಿ ಮುಚ್ಚಂಬ್ಲಿ ಮುಳ್ಳಣ್ಣಾ ||೧|| ಗಡಗಡ ಗಮ್ಮತ್...

ಭೂಮಿ ಒಳಗಿಂದ ಆಕಾಶ ಕಂಡವರು ಆಕಾಶದೊಳಗಿಂದ ಭೂಮಿಯ ಕಡೆದವರು ಕೆಲಸ ಕೊಟ್ಟವರನ್ನು ಮುಂದೆ ತಂದವರು ಕೆಲಸ ಮಾಡುತ್ತಲೇ ಹಿಂದೆ ಉಳಿದವರು. ಮುಟ್ಟಬಾರದು ಎಂದರೂ ಇತಿಹಾಸ ಕಟ್ಟಿದರು ಊಳಿಗದ ಸೆರೆಯಲ್ಲಿ ಉಸಿರನ್ನೆ ಉಂಡವರು ಬೆವರಿನ ಮಸಿಯಲ್ಲಿ ಬದುಕನ್ನು ...

ಆ ದೇವರಿತ್ತ ಈ ವರವ ನೀನೆಂದು ಭಾವಿಸಿ ನಿನ್ನ ಪ್ರೀತಿಸುವೆ| ನಿನ್ನ ಒಳಿತಿಗಾಗೆನ್ನ ಜೀವನವ ಮೀಸಲಿಡುವೆ| ಓ ನನ್ನ ಮಗುವೇ|| ಎಷ್ಟೇ ಕಷ್ಟವು ಬಂದರೆ ನನಗೆ ನೆರಳಾಗಿ ನಾನಿರುವೆ ನಿನ್ನ ಜೊತೆಗೆ| ಕಣ್ಣರೆಪ್ಪೆಯಂದದಿ ಕಾಯುವೆಹೊರಗೆ ತಾಯಿಯ ಪ್ರೀತಿಯನೆಲ...

ಒಂದು ಕವನಕಿನ್ನೊಂದು ಕವನಕುಂ ತರ್ಕ ಸಂಬಂಧವಿಲ್ಲದೊಡದೆನ್ನ ದೋಷವಿರಬಹುದಾದೊ ಡಂ ಪ್ರಕೃತಿಯೊಳಿಂಥ ತರ್ಕ ದೋಷಗಳಿರುತಿರಲು ಒಂದೆ ಸೂತ್ರದೊಳೆಲ್ಲ ಮರ, ಗಿಡ, ಬಳ್ಳಿ, ಕಳ್ಳಿ, ಕಳೆ ಕಂಟಿಗಳಿಲ್ಲದಿರುತಿರಲೆನ್ನ ದೋಷವನಿವಾರ್‍ಯ ಸಂಗತಿಯು – ವಿಜ್...

ಈ ಮಾಹಾತ್ಮ್ಯೆ ಯಾವ ಪುರಾಣದಲ್ಲಿದೆ? ಎಲ್ಲಿ ಯಾರು ಹೇಳಿದ್ದು? ಯಾರು ಕೇಳಿದ್ದು? ಯಾವ ಇಷ್ಟಾರ್ಥಸಿದ್ದಿಗಾಗಿ? ಎಂದೆಲ್ಲ ಪ್ರಶ್ನೆಗಳನ್ನು ನೀವು ಕೇಳಬಹುದು. ಉತ್ತರ ಹೇಳುತ್ತಾ ಹೋದರೆ ಪೀಠಿಕಾ ಪ್ರಕರಣವೇ ಉದ್ದ ಬೆಳೆದು ಮಹಾತ್ಮ್ಯೆಯನ್ನು ಕೇಳುವಷ್ಟರಲ್ಲಿ ನಿಮಗೆ ಹಾಕಳಿಗೆ ತೊಡಗಿ ತೂಕಡ...

(ಒಂದು ಐತಿಹಾಸಿಕ ಕತೆ) ಹ್ಹಃ ಹ್ಹಃ ಹ್ಹಃ! ಅಹ್ಹಃ ಅಹ್ಹಃ ಅಹ್ಹಃ!! ಗಝುನಿ ಮಹಮೂದನಿಗೆ ಹಿಡಿಸಲಾರದ ನಗೆ. ನಕ್ಕು ನಕ್ಕು ಅವನ ಹೊಟ್ಟೆ ನೋಯುತ್ತಿದ್ದಿತು. ಆದರೂ ಅವನ ಆ ತಿರಸ್ಕಾರದ ನಗೆ ತಡೆಯಲಾರದಾಯಿತು. ಅದೊಂದು ಸುಪ್ರಸಿದ್ದವಾದ ಸೋಮನಾಥ ದೇವಾಲಯ. ಭಾರತದ ವೈಭವವನ್ನು ವಿಶ್ವಕ್ಕೆ ತೋ...

ಸರಲಾಕ್ಷ ಹುಲಿಮೀಸೆಯು ಮನೆಯಲ್ಲಿ ಬಂದಿರಲಾರಂಭಿಸಿದಂದಿನಿಂದ ತಾನು ತೊಂದರೆಗೊಂಡು ಬೇಸತ್ತು ಹೋಗಿರುವೆನೆಂದು ವಸತಿಗೃಹದ ಸ್ವಾಮಿನಿಯಾದ ಲೀಲಾಬಾಯಿಯು ದೂರಿಕೊಳ್ಳುತ್ತಿದ್ದಳು. “ಕೆಟ್ಟ ಮೋರೆಯವರೂ ಅಸಭ್ಯರೂ ಸುಟ್ಟಮನೆಯವರೂ ಸುಡದ ಮನೆಯವರೂ ತೆರವಿಲ್ಲದೆ ನನ್ನ ಮನೆಗೆ ಬರುತ್ತಿರುವ...

ಅವಳು ಅಡುಗೆ ಮನೆಯ ಕಪ್ಪಾದ ಡಬ್ಬಿಗಳನ್ನು, ಉಳಿದ ಸಾಮಾನುಗಳನ್ನು ತೆಗೆದು ತೊಳೆಯಲು ಆ ಮಣ್ಣಿನ ಮಾಡು ಹಂಚಿನ ಮನೆಯ ಮುಂದಿನ ತೆಂಗಿನಕಟ್ಟೆಯಲ್ಲಿ ಹಾಕಿದ ಅಗಲ ಹಾಸುಗಲ್ಲ ಮೇಲೆ ಕೈಲಿ ಹಿಡಿದಷ್ಟು ತಂದು ತಂದು ಇಡುತ್ತಿದ್ದಳು. ಏಳರ ಬಾಲೆ ಮಗಳು ಕೂಡ ತನ್ನ ಕೈಗೆ ಎತ್ತುವಂತಹ ಡಬ್ಬಿಗಳನ್ನು...

ಆಹಾ! ಏನು ಕಡಲು! ಅ೦ತವಿಲ್ಲದ ಕಡಲು!! ಅಪಾರವಾಗಿಹ ಕಡಲು! ದಿಟ್ಟಿ ತಾಗದ ಕಡಲು!! ಆ ಕಡಲ ಒಡಲಲ್ಲಿ ಏನು ತೆರೆ! ಏನು ನೊರೆ!! ಏನು ಅಂದ! ಎನಿತು ಚಂದ! ಬಿಚ್ಚಿ ಮುಚ್ಚುವ ಅದರ ನಯವಾದ ತುಟಿಗಳು ಹೊನ್ನರವಿ ಎಸೆದಿರುವ ಚಿನ್ನದಲುಗಳೇಸು! ಬಣ್ಣ ಬಣ್ಣಗಳುಗುವ ಅಚ್ಚು ಪಡಿಯಚ್ಚುಗಳ ಹೊಳಪಿನ ಏನ...

ಸರ್, ಗುಡ್ ಮಾರ್ನಿಂಗ್, ಮೇ ಐ ಕಮೀನ್ ಸರ್ – ನಿತ್ಯ ಆಫೀಸಿನ ಅವಧಿ ಪ್ರಾರಂಭವಾಗುತ್ತಲೇ ಹಿಂದಿನ ದಿನ ರೆಡಿ ಮಾಡಿದ ಹತ್ತಾರು ಕಾಗದ ಪತ್ರಗಳಿಗೆ ಸಹಿ ಪಡೆಯಲು, ಇಲ್ಲವೇ ಹಿಂದಿನ ದಿನದ ಎಲ್ಲ ಫೈಲುಗಳ ಚೆಕ್ ಮಾಡಿಸಲು, ಕೈಯಲ್ಲಿ ಫೈಲುಗಳ ಕಟ್ಟು ಹಿಡಿದು ಬಾಗಿಲ ಮರೆಯಲ್ಲಿ ನಿಂತು ...