ಅರಳಿಹುದು ನಮ್ಮ ಮಡಿಲೊಳಗೊಂದು ಮಲ್ಲಿಗೆಯ ಮುಗುಳು ತುಂಬಿಹುದು ಮನೆ, ಮಂದಿ ಮನಸೆಲ್ಲಾ ಒಮ್ಮುಖವಾಗಿ. ಮರೆಯುವೆವು ನಮ್ಮನು, ನಮ್ಮದನು ನೋಡುವುದರಲ್ಲಿ ನಿಸರ್ಗದೀ ವಿಶುದ್ಧ ಮೂರ್ತಿಯ ಒಂದೊಂದು ಚಿಗುರು ನಡೆ, ನುಡಿ, ಆಟ, ನೋಟಗಳ. ಅಂತೆಯೇ ಮಾತರಿಯದ ಕ...

ಸುಂದರ ಮನಸುಗಳು ಬಣ್ಣದ ಕನಸುಗಳು ಗರಿ ಬಿಚ್ಚಲಿ ಆಕಾಶದಲಿ ಬೆಳದಿಂಗಳು ತಾವಾಗುತಲಿ //ಪಲ್ಲವಿ// ನಿಮ್ಮಯ ಜೊತೆಗಿವೆ ಹಕ್ಕಿಗಳು ಕಾಂತಿಯ ಚಿಮ್ಮುವ ಕನಸುಗಳು ಜೊತೆಯಲಿ ಓಡುವ ಮೋಡಗಳು ಹಗುರಾಗಿರುವ ಮನಸುಗಳು ತೇಲುವ ಆಡುವ ಈ ಸೊಗಸು ತುಂಬಲಿ ನನ್ನೆಲ್ಲ...

ನಿನ್ನುಸಿರು ಬೆರೆತಿದೆ ಈ ಮನೆಯಲ್ಲಿ ಹಾಗಾಗಿ ಎದೆಯಲ್ಲಿ ಸಂತಸವಿದೆ ನೀನುಲಿದ ಶಬ್ದಗಳು ಪ್ರೀತಿಯ ಅಕ್ಷರಗಳ ಬರೆದಿವೆ ಹಾಗಾಗಿ ಹೂಗಳು ನಗುತ್ತಿವೆ ನಿಂಜೊತೆ ಹಾಕಿದ ಹೆಜ್ಜೆಗಳು ಮನೆಯಿಂದ ಕಡಲದಂಡೆತನಕ ಹರಡಿಕೊಂಡಿವೆ ಹಾಗಾಗಿ ದಾರಿಗಳಿಗೂ ನೆನಪು ಅಂಟ...

ಕಳೆಯಿತು ಕಳೆಯಿತು ಮಗದೊಂದು ವರ್ಷ ಬರುತಿದೆ ನಮಗಾಗಿ ಹೊಸದೊಂದು ವರ್ಷ ತರಲಿದಯೇ ನಮ್ಮೆಲ್ಲರ ಬಾಳಿಗೆ ಸದಾ ಹರ್ಷ? ಸಂತೋಷದಿಂದ ಬಾಳೋಣ ನಾವೆಲ್ಲ ನೂರಾರು ವರುಷ! ಗತ ವರ್ಷದ ನೋವು ನಲಿವುಗಳ ಮೆಲುಕು ಹಾಕುತ ನಲಿವಿನ ಆ ಸರೆಯಲಿ ಹಳೆಯ ನೋವುಗಳ ಮರೆಯುತ ...

ಗೆಳತಿ, ನೀನಾದರೆ ಸನಿಹ ಮೂಡುವುದು ಕವಿತೆ ಇಲ್ಲವಾದರೆ ಕತೆ ಆರಿಸಿಕೊ ನಿನಗ್ಯಾವುದು ಇಷ್ಟ ಬೇಡ ನನ್ನ ಚಿಂತೆ ನನಗಿರುವಾಗ ನಿನ್ನ ಚಿಂತೆ /ಪ// ನನ್ನ ಪ್ರೀತಿ ಅಚಲ ಇರಬಹುದು ಅದು ಹಿಮಾಚಲ ಇದಕೆ ಬೇಕಿಲ್ಲ ಸಮರ್ಥನೆ ಮಾಡಿದರೂ ನೀ ನಿರಾಕರಣೆ ನೀನು ಬದು...

ಹಸಿರು ಎಲೆಗಳ ಎಳೆಯಲಿ ಹಸಿರು ಉಸಿರಿನ ನರ್ತನ ಪ್ರಕೃತಿ ಇತ್ತಿಹ ದಿವ್ಯಕೊಡುಗೆಯ ಜೀವ ಜೀವದಾ ಚೇತನ || ಸುಪ್ರಭಾತದ ತನಿಯ ಚೆಲುವಲಿ ಹೂವು ಹೂವಿನ ಮೊಗದಲಿ ತುಂತುರು ನೀರ ಮಣಿಯರೂಪವು ಹೊಳೆಯುವ ಸಂಭ್ರಮ || ನಗುವ ಚೆಲ್ಲಿ ಬರುವ ದುಂಬಿಯ ಸಾಲು ಚೆಲುವಿ...

ಒಳಬನ್ನಿ ಗೆಳೆಯರೆ ಇದು ಒಬ್ಬ ಕವೀಂದ್ರನ ಗೋರಿ ಹುಸಿದಿದ್ದರೆ ಕಸಿದಿದ್ದರೆ ಮಾತಿಗೆ ತಪ್ಪಿ ತಪಿಸಿದ್ದರೆ ಕಣ್ಣದೀಪ ಕಂಡವರ ಕಷ್ಟಕ್ಕೆ ಉರಿದು ಎಂದಾದರೂ ಎರಡು ಹನಿ ಬೆಳಕ ಬಸಿದಿದ್ದರೆ ರಾತ್ರಿ ರಾಮಾಯಣ ಹಗಲು ಭಾರತ ಬಾಳೆಲ್ಲ ರಗಳೆ ಹೂಡಿದ ಒಂದು ಬೃಹತ...

ನಂಬು ನಂಬೆಲೆ ಮನವೆ ನಿನ್ನನು ನಂಬದಿದ್ದರೆ ನಶ್ವರಾ ತುಂಬು ಎದೆಯಲಿ ವಿಶ್ವಮೂರ್ತಿಯ ಇಲ್ಲದೆಲ್ಲವು ಅಪಸ್ವರಾ || ಪ|| ನಂಬಿ ನಿನ್ನನು ಸುಖವ ಕಂಡರು ತುಂಬು ಹೃದಯದಿ ಶರಣರು ನಂಬಿ ನಿನ್ನಯ ಹೊಗಳಿ ದಣಿಯದೆ ಹಾಡಿ ಕುಣಿದರು ದಾಸರು || ೧ || ಹುಟ್ಟಿ ಸಾ...

ಈ ಮಾಹಾತ್ಮ್ಯೆ ಯಾವ ಪುರಾಣದಲ್ಲಿದೆ? ಎಲ್ಲಿ ಯಾರು ಹೇಳಿದ್ದು? ಯಾರು ಕೇಳಿದ್ದು? ಯಾವ ಇಷ್ಟಾರ್ಥಸಿದ್ದಿಗಾಗಿ? ಎಂದೆಲ್ಲ ಪ್ರಶ್ನೆಗಳನ್ನು ನೀವು ಕೇಳಬಹುದು. ಉತ್ತರ ಹೇಳುತ್ತಾ ಹೋದರೆ ಪೀಠಿಕಾ ಪ್ರಕರಣವೇ ಉದ್ದ ಬೆಳೆದು ಮಹಾತ್ಮ್ಯೆಯನ್ನು ಕೇಳುವಷ್ಟರಲ್ಲಿ ನಿಮಗೆ ಹಾಕಳಿಗೆ ತೊಡಗಿ ತೂಕಡ...

(ಒಂದು ಐತಿಹಾಸಿಕ ಕತೆ) ಹ್ಹಃ ಹ್ಹಃ ಹ್ಹಃ! ಅಹ್ಹಃ ಅಹ್ಹಃ ಅಹ್ಹಃ!! ಗಝುನಿ ಮಹಮೂದನಿಗೆ ಹಿಡಿಸಲಾರದ ನಗೆ. ನಕ್ಕು ನಕ್ಕು ಅವನ ಹೊಟ್ಟೆ ನೋಯುತ್ತಿದ್ದಿತು. ಆದರೂ ಅವನ ಆ ತಿರಸ್ಕಾರದ ನಗೆ ತಡೆಯಲಾರದಾಯಿತು. ಅದೊಂದು ಸುಪ್ರಸಿದ್ದವಾದ ಸೋಮನಾಥ ದೇವಾಲಯ. ಭಾರತದ ವೈಭವವನ್ನು ವಿಶ್ವಕ್ಕೆ ತೋ...

ಸರಲಾಕ್ಷ ಹುಲಿಮೀಸೆಯು ಮನೆಯಲ್ಲಿ ಬಂದಿರಲಾರಂಭಿಸಿದಂದಿನಿಂದ ತಾನು ತೊಂದರೆಗೊಂಡು ಬೇಸತ್ತು ಹೋಗಿರುವೆನೆಂದು ವಸತಿಗೃಹದ ಸ್ವಾಮಿನಿಯಾದ ಲೀಲಾಬಾಯಿಯು ದೂರಿಕೊಳ್ಳುತ್ತಿದ್ದಳು. “ಕೆಟ್ಟ ಮೋರೆಯವರೂ ಅಸಭ್ಯರೂ ಸುಟ್ಟಮನೆಯವರೂ ಸುಡದ ಮನೆಯವರೂ ತೆರವಿಲ್ಲದೆ ನನ್ನ ಮನೆಗೆ ಬರುತ್ತಿರುವ...

ಅವಳು ಅಡುಗೆ ಮನೆಯ ಕಪ್ಪಾದ ಡಬ್ಬಿಗಳನ್ನು, ಉಳಿದ ಸಾಮಾನುಗಳನ್ನು ತೆಗೆದು ತೊಳೆಯಲು ಆ ಮಣ್ಣಿನ ಮಾಡು ಹಂಚಿನ ಮನೆಯ ಮುಂದಿನ ತೆಂಗಿನಕಟ್ಟೆಯಲ್ಲಿ ಹಾಕಿದ ಅಗಲ ಹಾಸುಗಲ್ಲ ಮೇಲೆ ಕೈಲಿ ಹಿಡಿದಷ್ಟು ತಂದು ತಂದು ಇಡುತ್ತಿದ್ದಳು. ಏಳರ ಬಾಲೆ ಮಗಳು ಕೂಡ ತನ್ನ ಕೈಗೆ ಎತ್ತುವಂತಹ ಡಬ್ಬಿಗಳನ್ನು...

ಆಹಾ! ಏನು ಕಡಲು! ಅ೦ತವಿಲ್ಲದ ಕಡಲು!! ಅಪಾರವಾಗಿಹ ಕಡಲು! ದಿಟ್ಟಿ ತಾಗದ ಕಡಲು!! ಆ ಕಡಲ ಒಡಲಲ್ಲಿ ಏನು ತೆರೆ! ಏನು ನೊರೆ!! ಏನು ಅಂದ! ಎನಿತು ಚಂದ! ಬಿಚ್ಚಿ ಮುಚ್ಚುವ ಅದರ ನಯವಾದ ತುಟಿಗಳು ಹೊನ್ನರವಿ ಎಸೆದಿರುವ ಚಿನ್ನದಲುಗಳೇಸು! ಬಣ್ಣ ಬಣ್ಣಗಳುಗುವ ಅಚ್ಚು ಪಡಿಯಚ್ಚುಗಳ ಹೊಳಪಿನ ಏನ...

ಸರ್, ಗುಡ್ ಮಾರ್ನಿಂಗ್, ಮೇ ಐ ಕಮೀನ್ ಸರ್ – ನಿತ್ಯ ಆಫೀಸಿನ ಅವಧಿ ಪ್ರಾರಂಭವಾಗುತ್ತಲೇ ಹಿಂದಿನ ದಿನ ರೆಡಿ ಮಾಡಿದ ಹತ್ತಾರು ಕಾಗದ ಪತ್ರಗಳಿಗೆ ಸಹಿ ಪಡೆಯಲು, ಇಲ್ಲವೇ ಹಿಂದಿನ ದಿನದ ಎಲ್ಲ ಫೈಲುಗಳ ಚೆಕ್ ಮಾಡಿಸಲು, ಕೈಯಲ್ಲಿ ಫೈಲುಗಳ ಕಟ್ಟು ಹಿಡಿದು ಬಾಗಿಲ ಮರೆಯಲ್ಲಿ ನಿಂತು ...