ಹೊಸ ವರ್ಷ

ಕಳೆಯಿತು ಕಳೆಯಿತು
ಮಗದೊಂದು ವರ್ಷ
ಬರುತಿದೆ ನಮಗಾಗಿ
ಹೊಸದೊಂದು ವರ್ಷ
ತರಲಿದಯೇ ನಮ್ಮೆಲ್ಲರ
ಬಾಳಿಗೆ ಸದಾ ಹರ್ಷ?
ಸಂತೋಷದಿಂದ ಬಾಳೋಣ
ನಾವೆಲ್ಲ ನೂರಾರು ವರುಷ!

ಗತ ವರ್ಷದ ನೋವು ನಲಿವುಗಳ
ಮೆಲುಕು ಹಾಕುತ
ನಲಿವಿನ ಆ ಸರೆಯಲಿ ಹಳೆಯ
ನೋವುಗಳ ಮರೆಯುತ
ಭರವಸೆಯ ಬೆಳಕನ್ನು ಹೊತ್ತು
ದಿಟ್ಟ ಹೆಜ್ಜೆಯನ್ನಿಡುತ
ಸ್ನೇಹದ ಕಡಲಲ್ಲಿ ತೇಲುತ್ತಾ
ಮಾನವತೆ ತುಂಬುತ

ಕಳೆದ ಜೀವನದ ನೋವಿನಲ್ಲಿ
ತಪ್ಪನ್ನು ಹುಡುಕುತ
ಮಾಡಿದ ತಪ್ಪಿನಾ ಆತ್ಮಾವಲೋಕನ
ಮಾಡಿಕೊಳ್ಳುತ
ಮುಂದಿನ ಗುರಿಯ ಹೆಜ್ಜೆಯನ್ನು
ಜಾಣ್ಮೆಯಲ್ಲಿಡುತ
ಕಾತರದಿ ಸಂಭ್ರಮದಿ ಸ್ವಾಗತಿಸೋಣ
ನವ ಯುಗವ ನವ ಯುಗವ
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಇತ್ಯಾದಿ ಏನಿಲ್ಲ… ಪ್ರೀತಿಯಷ್ಟೆ! – ೫೫
Next post ಭ್ರಮಣ – ೯

ಸಣ್ಣ ಕತೆ

  • ಇಬ್ಬರು ಹುಚ್ಚರು

    ಸದಾಶಿವನಿಗೆ ಹೀಗೆ ಹುಚ್ಚನಾಗಿ ಅಲೆಯುವ ಅಗತ್ಯ ಖಂಡಿತಕ್ಕೂ ಇರಲಿಲ್ಲ. ಅವನಿಗೊಂದು ಹಿತ್ತಿಲು ಮನೆಯೂ, ಹಿತ್ತಿಲಲ್ಲಿ ಸಾಕಷ್ಟು ಫಲ ಕೊಡುವ ಗೇರು ಮರಗಳೂ ಇದ್ದವು. ದಿನಕ್ಕೆ ಸಾವಿರ ಬೀಡಿ… Read more…

  • ಒಂದು ಹಿಡಿ ಪ್ರೀತಿ

    ತೆಂಗಿನ ತೋಟದಲ್ಲಿ ಬಾಗಿಕೊಂಡು ಹಣ್ಣಾಗಿ ಉದುರಿದ ಅಡಕೆಗಳನ್ನು ಒಂದೊಂದಾಗಿ ಹೆಕ್ಕಿ, ಸನಿಹದಲ್ಲಿದ್ದ ಪ್ಲಾಸ್ಟಿಕ್ ಚೀಲಕ್ಕೆ ತುಂಬಿಸುತ್ತಿದ್ದಂತೆ ಪಕ್ಕದಲ್ಲಿ ಸರಕ್ಕನೆ ಹರಿದು ಹೋದ ಕೇರೆ ಹಾವಿನಿಂದಾಗಿ ಒಮ್ಮೆ ವಿಚಲಿತರಾದರು… Read more…

  • ನೆಮ್ಮದಿ

    ಅವನಿಗೆ ನೆಮ್ಮದಿ ಬೇಕಿತ್ತು. ಆ ಜನನಿಬಿಡ ರಸ್ತೆಯ ಪಕ್ಕದಲ್ಲಿರುವ ನ್ಯೂಸ್ ಪೇಪರ್ ಸ್ಟಾಲಿಗೆ ತಾಗಿ ನಿಂತು ಅವನು ರಸ್ತೆಯನ್ನು ವೀಕ್ಷಿಸುತ್ತಿದ್ದ. ಸೂರ್‍ಯೋದಯವಾಗಿ ಕೆಲವೇ ಗಂಟೆಗಳಾಗಿರಬಹುದು. ಜಾತ್ರೆಗೆ ಸೇರಿದಂತೆ… Read more…

  • ವಿಷಚಕ್ರ

    "ಚಂದ್ರು, ಒಳಗೆ ಬಾಮ್ಮ. ಮಳೆ ಬರುತ್ತೆ." ತಾಯಿ ಕೂಗಿದುದನ್ನು ಕೇಳಿ ಚಂದ್ರು ನಕ್ಕ. ಒಳಕ್ಕೆ ಬರುವುದಿರಲಿ, ಪಕ್ಕದ ಮನೆಯ ಹುಡುಗಿ ವೇದಳೊಂದಿಗೆ ಆಡುತ್ತಿದ್ದುದನ್ನು ನಿಲ್ಲಿಸಲೂ ಇಲ್ಲ. "ನೋಡೇ-ನಾನು… Read more…

  • ಕಳಕೊಂಡವನು

    ಸುಮಾರು ಒಂದು ಗಂಟೆಯ ಪಯಣದಿಂದ ಸುಸ್ತಾದ ಅವನು ಬಸ್ಸಿನಿಂದ ಇಳಿದು ರಸ್ತೆಯ ಬದಿಗೆ ಬಂದು ನಿಂತು ತನ್ನ ಕೈಗಡಿಯಾರ ದೃಷ್ಟಿಸಿದ. ಮಧ್ಯಾಹ್ನ ಒಂದು ಗಂಟೆ. ಒಮ್ಮೆ ಮುಖ… Read more…