ಜನ್ಮವ ನೀಡಿಹೆ ಏಕಮ್ಮ? ನಿನ್ನೀ ಕರುಳಿನ ಕುಡಿಗಳಿಗೆ ಮೊಲೆಯನು ಉಂಡು ಮೊಲೆಯನೆ ಕಚ್ಚಿ ವಿಷವನು ಉಗುಳುವ ದುರುಳರಿಗೆ ಅರೆ ಬೆತ್ತಲೆ ನೀನಾಗಿ ಕಂಡರೂ ಪರ ಹೆಣ್ಣಿನ ಮೈ ಮುಚ್ಚುತಿಹ ಹಸಿವಿಂದಲಿ ನೀ ರೋಧಿಸುತಿದ್ದರೂ ಅನ್ಯರ ಬಾಯಿಗೆ ಉಣಿಸುತಿಹ ಹೀನರನೇಕ...

ಮೂಲ: ಸುತಪಾ ಸೇನ್‌ಗುಪ್ತ ಮೂವಿ ಮುಗಿದಿದೆ; ಚಿಕ್ಕ ಓಣಿಗಳ ದಾಟಿ ಬಂದಿದ್ದೀಯೆ ಈಗ ಮುಖ್ಯರಸ್ತೆಗೆ ನೀನು ನಟ್ಟ ನಡುರಾತ್ರಿ; ಹೊರಟಿದ್ದೀಯೆ ಮತ್ತೆ ಮನೆಕಡೆಗೆ – ಬಲು ದೂರ. ರೈಲ್ವೆ ಹಳಿಬದಿಯಲ್ಲಿ ನಡೆಯಬೇಕಿದೆ ನೀನು ಮಂದ ಬೆಳಕಿನ ಕಂದೀಲನ್ನ...

ಅರಿಯದಲೆ ಧಾವಿಸಿದೆ. ಹಸುಳನನು ಕ್ಷಮಿಸುವದು. ನಿನ್ನ ತಣ್ಣೆಲರೊಲವು ಬಂದು ಬೀಸಿತು ನನ್ನ ಆತುಮನ ನಂದನದಿ. ಉತ್ತಿ ಬಿತ್ತಿದ ಬೀಜ ವ್ಯಕ್ತವಾಯಿತು ಇಂದು. ನಿನ್ನ ಗೆಳತಿಯರಿವರು ಅಪ್ಸರಿಯರೆಲ್ಲ ನೀರೆರೆದ ಕೂದಲಿನಿಂದ ತಂದೀಂಟಿಸಿದರೆನಗೆ ದಿವ್ಯ ಜೀವಾಮ...

ಬಾಳೆಹೊನ್ನೂರಿನಲಿ ತಾಯಿ ಪ್ರೀತಿಯ ಕಂಡೆ ಮಾವು ಮಲ್ಲಿಗಿ ಜಾಜಿ ಬಕುಲ ಕಂಡ ಬೆಟ್ಟ ಬೆಟ್ಟದ ಮ್ಯಾಲ ಮುಗಿಲ ಅಟ್ಟವ ಕಂಡೆ ಪಂಚಪೀಠದ ಚಲುವ ತೇರು ಕಂಡೆ ವೇದಶಾಸ್ತ್ರದ ಮಣಿಯ ಸಕಲ ಆಗಮ ಗಣಿಯ ಪಂಚ ಪಂಚಾಕ್ಷರಿಯ ಗಿಣಿಯ ಕಂಡೆ ಚಿ೦ತೆ ಹೋಯಿತು ಇಲ್ಲಿ ಚಿತೆಯ...

ಮುಚ್ಚು ಮುಚ್ಚು ಬಾಗಿಲ ಜೀವವಾಯ್ತು ವ್ಯಾಕುಲ. ಹೊರಗೆ ಬರಿಯ ಬಿಸಿಲು ಧೂಳಿ ದೇಹ ಮನವನೆಲ್ಲ ಹೂಳಿ ಮೇಲೆ ಕುಣಿವಳವಳು ಕಾಳಿ ನೋವು ನರನ ಕೊರಳ ತಾಳಿ! ಮುಚ್ಚು ಮುಚ್ಚು ಬಾಗಿಲ ಜೀವವಾಯ್ತು ವ್ಯಾಕುಲ. ಎಲ್ಲ ಕಡೆಗೆ ವಿಷದ ಗಾಳಿ ತಡೆಯಲಾರೆ ಅದರ ದಾಳಿ ನನ...

ಮಕ್ಕಳಿಲ್ಲದಿದ್ದರೆ ಒಂದು ಚಿಂತೆಯಂತೆ, ಇದ್ದರೆ ನೂರೊಂದು ಚಿಂತೆಯಂತೆ; ಅನ್ನುವವರೇನು ಬಲ್ಲರು? ನನ್ನ ಚಿಂತಾಪಹಾರಕ ಚಿಂತಾಮಣಿ! ಚಿಂತೆಯ ಪಂಚಾಗ್ನಿಯಲ್ಲಿ ತಪಮಾಡಿಸಿ ತಪಸ್ವಿನಿಯ ಮಾಡಿಸಿದೆ; ಮಕ್ಕಳೆಂದರೆ ನೊಣದ ಪಾಯಸವೆಂತೆ, ಕೊರಳಿಗುರುಲೆಂತೆ; ಅನ...

ಬಲು ಕಾಳಜಿಯೆಮ್ಮ ವಿದ್ವತ್ ಜಗದೊಳಗೆ ಲ್ಲೆಲ್ಲೂ ಕುಡಿನೀರ ಶೋಧಿಸಲುಪಕರಣಗಳು ಬಲು ಬಗೆಯೊಳಿರುತಿರಲು ಬಲು ಬಗೆಯೊ ಳಾಲೋಚಿಸಿದೊಡರಿಯುವುದೀ ಮಾಲಿನ್ಯ ಕೆಲ್ಲ ಮಾಹಿತಿಗಳನಂತೆ ಹೀರ್‍ವಜ್ಞಾನ ಕಾರಣವು – ವಿಜ್ಞಾನೇಶ್ವರಾ *****...

(ಪ್ರತಿ ಸಾಲಿನ ಕೂನಗೆ “ಲೇಗಿಣಿ ಲೇಗಿಣಿಯೇ” ಎನ್ನಬೇಕು) ವಂದಲ್ಲ ವಂದೂ ರಾಜ್ಯದಲ್ಲೀ ಲೇಗಿಣಿ ಲೇಗಿಣಿಯೇ ವಂದೂ ಲಜ್ಜವ್ವಿಲಿದ್ದೀತೂ ಸಿವನೇ ಲೇಗಿಣಿ ಲೇಗಿಣಿಯೇ ಅದ್ಕು ಅಂದೂ ಬಂದುವೂಯೆಲ್ಲಾ ಲೇಗಿಣಿ ಲೇಗಿಣಿಯೇ “ಕಣ್ಣು ಕೈಕಾಲ...

ದೇವಾ ನಿನ್ನ ಮಹಿಮೆ ಕೊಂಡಾಡಲೆ ನಿನ್ನ ಭಾವಗಳಲಿ ಕರಗಲೆ ನಿನ್ನ ಗುಣಗಳ ಆಳವಡಿಸಿಕೊಳ್ಳಲೆ ದೇವಾ ನಿನ್ನ ತೊರೆದು ಹೇಗೆ ಬಾಳಲಿ ದೇವಾ ನಿನ್ನ ಸ್ಮರಣೆ ನಿತ್ಯ ಮಾಡಲೆ ನಿನ್ನ ಸಾಮಿಪ್ಯ ನಿತ್ಯಬೇಡುವೆ ನಿನ್ನ ರಾಜ್ಯದಲಿ ನಾ ಮುಳಗಲೆ ದೇವಾ ನಿನ್ನ ತೊರೆದು...

1...3637383940...886

ಸಿಗರೆಟ್‌ನ್ನು ಕೊನೆಯ ಸಲ ಎಳೆದು ಬದಿಗಿದ್ದ ಅಶ್‌ಟ್ರೆಯಲ್ಲಿ ಹಾಕಿದ. ಮೂರು ದಿನಗಳಿಂದ ಹೇಳಲಾಗದಂತಹ ಯಾತನೆ ಅವನನ್ನು ಹಿಂತಿಸುತ್ತಿದೆ. ಇದ್ದಿದ್ದು ಮಿತ್ರನ ಮಾತುಗಳು ಬಂದು ಕಿವಿಗೆ ಅಪ್ಪಳಿಸಿ ಎತ್ತ ನೋಡಿದರೂ ಅವನದೆ ಮುಖ ಕಾಣುತ್ತಿದೆ. “ನಾ ಹೇಳುವದನ್ನು ಅರ್‍ಥಮಾಡಿ ಕೊಳ್ಳು...

ಬೆಳಿಗ್ಗೆಯಿಂದ ಕತ್ತಲೆಯವರೆಗೂ ಬಸ್ ಸ್ಟಾಂಡಿನಲ್ಲಿ ಬಸ್ಸುಗಳಿಗೆ ಹತ್ತಿ ಇಳಿದುಕೊಂಡು ಎಷ್ಟು ಗೋಗರೆದು ಬಿಕ್ಷೆ ಬೇಡಿದರೂ ಆ ಹುಡುಗನಿಗೆ ಮಧ್ಯಾಹ್ನದ ಊಟ ಮಾಡುವಷ್ಟು ಹಣ ಸಂಗ್ರಹವಾಗುತ್ತಿರಲಿಲ್ಲ. ಮಧ್ಯಾಹ್ನ ಬಿಸ್ಕಿಟು ಮತ್ತು ನಲ್ಲಿ ನೀರು ಕುಡಿದು ಹಸಿವು ತಣಿಸಿದರೂ ರಾತ್ರಿಯ ಊಟಕ್ಕ...

ಮಧುಮಾಸದ ಮೊದಲ ದಿನಗಳು. ಎಲ್ಲಿ ನೋಡಿದರೂ ತಾಯಿಯ ವಿವಿಧ ವಿಲಾಸ……. ಪುಷ್ಪಶೃಂಗಾರ!! ವರ್‍ಣವೈಖರಿ!! ಮಧುಪಾನದಿಂದ ಮೈಮರೆತು ಮೊರೆಯುತಿಹೆ ಉನ್ಮತ್ತ ಭೃಂಗ ಸಂಕುಲದ ಎಣೆಯಿಲ್ಲದ ಪ್ರಣಯ ಕೇಳಿ! ಸಹಸ್ರಸಹಸ್ರ ಖಗಕಂಠಗಳಿಂದೆ ದಿಕ್ಕುದಿಕ್ಕಿಗೆ ಪಸರಿಸುತಿಹ ಸುಮಧುರ ಗಾನ ತರಂಗ...

ಈ ಮಾಹಾತ್ಮ್ಯೆ ಯಾವ ಪುರಾಣದಲ್ಲಿದೆ? ಎಲ್ಲಿ ಯಾರು ಹೇಳಿದ್ದು? ಯಾರು ಕೇಳಿದ್ದು? ಯಾವ ಇಷ್ಟಾರ್ಥಸಿದ್ದಿಗಾಗಿ? ಎಂದೆಲ್ಲ ಪ್ರಶ್ನೆಗಳನ್ನು ನೀವು ಕೇಳಬಹುದು. ಉತ್ತರ ಹೇಳುತ್ತಾ ಹೋದರೆ ಪೀಠಿಕಾ ಪ್ರಕರಣವೇ ಉದ್ದ ಬೆಳೆದು ಮಹಾತ್ಮ್ಯೆಯನ್ನು ಕೇಳುವಷ್ಟರಲ್ಲಿ ನಿಮಗೆ ಹಾಕಳಿಗೆ ತೊಡಗಿ ತೂಕಡ...

(ಒಂದು ಐತಿಹಾಸಿಕ ಕತೆ) ಹ್ಹಃ ಹ್ಹಃ ಹ್ಹಃ! ಅಹ್ಹಃ ಅಹ್ಹಃ ಅಹ್ಹಃ!! ಗಝುನಿ ಮಹಮೂದನಿಗೆ ಹಿಡಿಸಲಾರದ ನಗೆ. ನಕ್ಕು ನಕ್ಕು ಅವನ ಹೊಟ್ಟೆ ನೋಯುತ್ತಿದ್ದಿತು. ಆದರೂ ಅವನ ಆ ತಿರಸ್ಕಾರದ ನಗೆ ತಡೆಯಲಾರದಾಯಿತು. ಅದೊಂದು ಸುಪ್ರಸಿದ್ದವಾದ ಸೋಮನಾಥ ದೇವಾಲಯ. ಭಾರತದ ವೈಭವವನ್ನು ವಿಶ್ವಕ್ಕೆ ತೋ...