Home / ಕವನ / ನೀಳ್ಗವಿತೆ / ಕೋಳಿ ಜನ್ಮ

ಕೋಳಿ ಜನ್ಮ

(ಪ್ರತಿ ಸಾಲಿನ ಕೂನಗೆ “ಲೇಗಿಣಿ ಲೇಗಿಣಿಯೇ” ಎನ್ನಬೇಕು)

ವಂದಲ್ಲ ವಂದೂ ರಾಜ್ಯದಲ್ಲೀ ಲೇಗಿಣಿ ಲೇಗಿಣಿಯೇ
ವಂದೂ ಲಜ್ಜವ್ವಿಲಿದ್ದೀತೂ ಸಿವನೇ ಲೇಗಿಣಿ ಲೇಗಿಣಿಯೇ
ಅದ್ಕು ಅಂದೂ ಬಂದುವೂಯೆಲ್ಲಾ ಲೇಗಿಣಿ ಲೇಗಿಣಿಯೇ
“ಕಣ್ಣು ಕೈಕಾಲೂ ಇರುವಾಗೇ ಲೇಗಿಣಿ ಲೇಗಿಣಿಯೇ ||೧||

ಸಾರ್‍ವಾರಮನಿಯಾ ಪಡ್ಗಿಯಳ್ದು ತಿಂಬೇ ಲೇಗಿಣಿ ಲೇಗಿಣಿಯೇ
ಕಣ್ಣು ಕೈಕಾಲೂ ಮುರುದಿ ಬಿದ್ದಾಗೇ ಲೇಗಿಣಿ ಲೇಗಿಣಿಯೇ
ನನ್ನಲೂ ದಿವ್ಸಾ ಹ್ಯಾಂಗ ಸಾಗೂದೂ?” ಲೇಗಿಣಿ ಲೇಗಿಣಿಯೇ
ಅಜ್ಜವ್ವಿಗಾದ್ರೂ ಲಾಲೋಚ್ನಿ ಆಯ್ತು ಲೇಗಿಣಿ ಲೇಗಿಣಿಯೇ ||೨||

ವಂದಲ್ಲಾ ವಂದೂ ದಿನದಲ್ಲೀ ನೋಡೀ ಲೇಗಿಣಿ ಲೇಗಿಣಿಯೇ
ಬೆಳ್ಳೂವ ಮೂಡೀ ಬಿಳುಗಲಾಗೀತೂ ಲೇಗಿಣಿ ಲೇಗಿಣಿಯೇ
ಹಾರಾರಾ ಮನಿಯಾ ಪಡಿಯಳುಕೆ ಹೋಯ್ತೂ ಲೇಗಿಣಿ ಲೇಗಿಣಿಯೇ
ವಂದಲ್ಲಾ ವಂದೂ ರಾಜ್ಯದಾಗಿದ್ದೀ ಲೇಗಿಣಿ ಲೇಗಿಣಿಯೇ ||೩||

ವಂದುವ ಹುಡುಗಾ ಕೋಳೀಲು ಮರಿಯೂ ಲೇಗಿಣಿ ಲೇಗಿಣಿಯೇ
ತಕ್ಕಂಡಾದಾರೀ ಅಡ್ವೀಲಿ ಬರುತಾ ಲೇಗಿಣಿ ಲೇಗಿಣಿಯೇ
ಅಜ್ಜೆ ಆದ್ರೂ ಲೀನಾ ಮಾಡೀತೂ? ಲೇಗಿಣಿ ಲೇಗಿಣಿಯೇ
ಹುಡುಗನ ಕಂಡೀ ನಿತ್ತೇ ಬಿಟ್ಟಿತ್ತೂ ಲೇಗಿಣಿ ಲೇಗಿಣಿಯೇ ||೪||

“ಯಲ್ಲೀಗ್‌ ಹುಡುಗಾ ಹೋಗುತೆ ನೀನು?” ಲೇಗಿಣಿ ಲೇಗಿಣಿಯೇ
“ವಂದ್‌ ಕೋಳೀಯ ಮರಿಯಾ ಮಾರಾಟ್ಕೆ ಬಂದೇ ನಾ” ಲೇಗಿಣಿ ಲೇಗಿಣಿಯೇ
“ನಾಕಾಣೆ ದುಡ್ದೂ ಅದಿಯೋ ಮೊಮ್ಮಗನೇ ಲೇಗಿಣಿ ಲೇಗಿಣಿಯೇ
ಕೋಳೀ ಮರಿಯಾದ್ರೂ ಕೂಡುತೀಯೇನೋ?” ಲೇಗಿಣಿ ಲೇಗಿಣಿಯೇ ||೫||

ಅಟ್ಟ ಮಾತೀಗೇ ಕೊಟ್ಟೀದಾ ಹುಡುಗಾ ಲೇಗಿಣಿ ಲೇಗಿಣಿಯೇ
ಅಜ್ಜಿವಿ ಆದ್ರೂ ತಕ್ಕಂಡೇ ಬಂತೂ ಲೇಗಿಣಿ ಲೇಗಿಣಿಯೇ
ದಾರಾನಾದರೂ ಮಾಡೀತಜ್ಜವ್ವೀ ಲೇಗಿಣ ಲೇಗಿಣಯೇ
ಗುಟ್ಟಾನೆ ಹುಗುದೀ ಕಟ್ಟೀಲ್ಹಾಕದಿಯೇ ಲೇಗಿಣಿ ಲೇಗಿಣಿಯೇ ||೬||

ಬೀಡ್ದಕ್ಕಿ ಆದ್ರೆ ತೊಳುವಕೆ ಹೋಗದಿಯೇ ಲೇಗಿಣಿ ಲೇಗಿಣಿಯೇ
ತೊಳ್ಕಂಡ ಬರ್‌ವಾಗೇವಂದ ಮುಟ್ಟಿ ಹಾಕ್ತೂ ಲೇಗಿಣಿ ಲೇಗಿಣಿಯೇ
ಅದ್ರ ಬೀಯ್ಸಕಂಡೆ ಉಂಬಾಗೇ ವಂದೇ ಮುಟ್ಟಿ ಹಾಕ್ತೂ ಲೇಗಿಣಿ ಲೇಗಿಣಿಯೇ
ಊಟನೇ ಮಾಡೀ ಮನಗೀತಜ್ಜವ್ವೀ ಲೇಗಿಣಿ ಲೇಗಿಣಿಯೇ ||೭||

ಬಿಳ್ಳೂವ ಮೂಡೀ ಬಿಳುಗೇಲಾಗದಿಯೇ ಲೇಗಿಣಿ ಲೇಗಿಣಿಯೇ
“ನಮ್ಮಜ್ಜಿಗಾದ್ರೆ ಹತ್ತೀಯ ಹಾಸ್ಗೀ” ಲೇಗಿಣಿ ಲೇಗಿಣಿಯೇ
ಮತ್ತೊಂದ ಸರವಾ ಯೇನಂದಿ ಹೂಡಿತೂ? ಲೇಗಿಣಿ ಲೇಗಿಣಿಯೇ
“ನಮ್ಮಜ್ಜಗಾದ್ರೆ ಬಂಗಾರ್‌ದ ಕಡಗಾ” ಲೇಗಿಣಿ ಲೇಗಿಣಿಯೇ ||೮||

ಅಂದ ಹೇಳಿ, ಕೋಳಿ ಸರವನೆ ಹೊಡಿತೂ ಲೇಗಿಣಿ ಲೇಗಿಣಿಯೇ
ಅಜ್ಜವ್ವಿಗಾದ್ರೆ ಎಚ್ರಲಾಗೀತೂ ಲೇಗಿಣಿ ಲೇಗಿಣಿಯೇ
“ಕೇಳಲ್‌ ಕೇಳಾಲೀ ಕೋಳೀಯ ಹುಂಜಾ, ಲೇಗಿಣಿ ಲೇಗಿಣಿಯೇ
ನನ್‌ ಬೀಡ್ದಕ್ಕಿ ಕೂಳೂ ಕೋಗೆಟ್ತೆ ನಿನಗೆ?” ಲೇಗಿಣಿ ಲೇಗಿಣಿಯೇ ||೯||

“ನನ್ಗೆ ಹತ್ತಿಹಾಸುಗೀ ಮಾಡೀಸಿ ತಂದ್ರೇ ಲೇಗಿಣಿ ಲೇಗಿಣಿಯೇ
ಬಂಗಾರುದ ಕಡುಗಾ ಅಜ್ಜವ್ವೀಗಂದೇ” ಲೇಗಿಣಿ ಲೇಗಿಣಿಯೇ
“ಮಾತಾಡು ಕೋಳೀ ಯಾವ ಜಾತಿ ಕೋಳೀ? ಲೇಗಿಣಿ ಲೇಗಿಣಿಯೇ
ಅಚೀಚ್ಯೊರೆಲ್ಲಾ ಕರವನೇ ಕೋಳೀ” ಲೇಗಿಣಿ ಲೇಗಿಣಿಯೇ ||೧೦||

ಅವ್ರಲ್ಲಾ ಇನ್ನೇ ವೋಡೋಡಿ ಬಂದ್ರೂ ಲೇಗಿಣಿ ಲೇಗಿಣಿಯೇ
“ಹೊಡುವಾದಾರ್‌ ನೀವೂ ಹೊಡಲಕ್ಕಿ…” ಲಂತೂ ಲೇಗಿಣಿ ಲೇಗಿಣಿಯೇ
“ನನ ಮುಂದೇ ಅನ್ನೇ ಬಂದೇ ನೋಡೀ” ಲೇಗಿಣಿ ಲೇಗಿಣಿಯೇ
ಅವ್ರಲ್ಲಾ ಇನ್ನೇ ಹೆದರಿಕಿಲಾಗೀ ಲೇಗಿಣಿ ಲೇಗಿಣಿಯೇ ||೧೧||

ಅವ್ರೆಲ್ಲಾ ಇನ್ನೇ ಓಡೋಡಿ ಹೋದ್ರೂ ಲೇಗಿಣಿ ಲೇಗಿಣಿಯೇ
“ಬಿಂಗ್ಳುರ ರಾಜಾನಾ ಮಗ್ಳ ಮದಿಯಾಗೂಕ ಹೋತೇ” ಲೇಗಿಣಿ ಲೇಗಿಣಿಯೇ
ಅಂದ ಹೇಳೀ, ಸರವಾ ಹೊಡುದೀತು ಕೋಳೀ ಲೇಗಿಣಿ ಲೇಗಿಣಿಯೇ
ಅಚೀಚ್ಯೊರೆಲ್ಲಾ ದೂರೇ ನಿತ್ಕಂಡೀ ಲೇಗಿಣಿ ಲೇಗಿಣಿಯೇ ||೧೨||

“ಕೇಳಲ್‌ ಕೇಳಾಲೀ ಲಜ್ಜವ್ವಾ, ನೀನೂ ಲೇಗಿಣಿ ಲೇಗಿಣಯೇ
ಮಾತಾಡೂ ಕೋಳೀ ಯಾಕೆ ತಂದಿದಿಯೇ? ಲೇಗಿಣಿ ಲೇಗಿಣಿಯೇ
ಊರಾಗ ಯೆಲದೀವ್‌ ಕೋಳಿ ತಂದಿದಿಯೇ?” ಲೇಗಿಣಿ ಲೇಗಿಣಿಯೇ
“ಅಜ್ಜವ್ವೀಗಾದ್ರೆ ಹತ್ತೀ ಹಾಸ್ಗೆಯಂತು” ಲೇಗಿಣಿ ಲೇಗಿಣಿಯೇ ||೧೩||

ಅಂದ ಹೇಳೀ ಸರವಾ ಹೊಡುದೀತು ಕೋಳೀ ಲೇಗಿಣಿ ಲೇಗಿಣಿಯೇ
“ನಾ ಬಿಂಗ್ಳೂರ ರಾಜ್ನ ಮಗಳಾ ನಗ್ನಾಗೂಕ್‌ ಹೋತೇ” ಲೇಗಿಣಿ ಲೇಗಿಣಿಯೇ
ಅಂದ್ಹೇಳಿ ಸರವಾ ಹೊಡುದೀತೂ ಕೋಳೀ ಲೇಗಿಣಿ ಲೇಗಿಣಿಯೇ
ಅಜ್ಜವಿಗೆ ಮೂರು ಗುದ್ದಾ ಹೊಡದೀತು ಕೋಳೀ ಲೇಗಿಣಿ ಲೇಗಿಣಿಯೇ ||೧೪||

ಹೆರಗಾದ್ರ ಲಿನ್ನೇ ಬಿದ್ದೀತು ಕೋಳೀ ಲೇಗಿಣಿ ಲೇಗಿಣಿಯೇ
ಹೆರಗಾದ್ರ ಲಿನ್ನೇ ಬಿದ್ದೀತು ಕೋಳೀ ಲೇಗಿಣಿ ಲೇಗಿಣಿಯೇ
ಹದ್ನಾರ ಮೆಟ್ಟೀನಾ ನರೀಯಣ್ಣಾ ಲೇಗಿಣಿ ಲೇಗಿಣಿಯೇ
ಜೀವಾ ತಿರಕಂತೇ ಬರ್‌ವಾಗೇ ಲೀಗೇ ಲೇಗಿಣಿ ಲೇಗಿಣಿಯೇ ||೧೫||

“ತಿಂಬಾದಾರ ನೀನೂ ತಿನಲಾಕ” ಹೇಳ್ತೂ ಲೇಗಿಣಿ ಲೇಗಿಣಿಯೇ
“ಹೆದುರದೇ ನೀನೂ ಮುಂದಾರೂ ಬಾರೇ” ಲೇಗಿಣಿ ಲೇಗಿಣಿಯೇ
ಬುಡ್‌ ಬುಡ್ಡ್ಕ್ ಲಿನ್ನೇ ಬರ್‍ವಲ್ಲಿ ತನಕೇ ಲೇಗಿಣಿ ಲೇಗಿಣಿಯೇ
ನಿಂಬಿಹಣ್‌ ವರಣಾ ಅಗೀತು ಲಿನ್ನೇ ಲೇಗಿಣಿ ಲೇಗಿಣಿಯೇ ||೧೬||

ಅದ್ರನ ಹಿಡದೀ ಮಕದಾಗೆ ಲಿಟ್ಟೂ ಲೇಗಿಣಿ ಲೇಗಿಣಿಯೇ
ಮತ್ತೊಂದ ಸರನಾ ಯೇನಂದಿ ಹೊಡಿತು? ಲೇಗಿಣಿ ಲೇಗಿಣಿಯೇ
“ನಾ ಬಿಂಗ್ಳೂರ ರಾಜಾನಾ ಮಗಳ ಮದಿಯಾಗ ಬರ್‍ತೇ” ಲೇಗಿಣಿ ಲೇಗಿಣಿಯೇ
ಅಂದ ಹೇಳಿ ಲಿನ್ನೇ ಸರವನ ಹೊಡಿತೂ ಲೇಗಿಣಿ ಲೇಗಿಣಿಯೇ ||೧೭||

ಯೆಪ್ಪತ್ತೇಳ್‌ ಹೆಡಿಯ ಮಾಸೇಸಲಿನ್ನೇ ಲೇಗಿಣಿ ಲೇಗಿಣಿಯೇ
ಓಡೋಡೆ ಲಿನ್ನೇ ಬರುತಾದೇ ನೋಡೀ ಲೇಗಿಣಿ ಲೇಗಿಣಿಯೇ
“ನನ್‌ ತಿಂಬದಾರ್‌ ನೀನೂ ತಿನಲಕ್ಕ” ಲಂತೂ ಲೇಗಿಣಿ ಲೇಗಿಣಿಯೇ
ಬುಡಬುಡ್ಕೇ ಲಿನ್ನೇ ಬರವಾಗೆ ನೋಡೀ ಲೇಗಿಣಿ ಲೇಗಿಣಿಯೇ ||೧೮||

ವಂದ ಹಣ್ಣಡ್ಕಿ ವರಣಾ ಲಾಗೀತು ಲಿನ್ನೇ ಲೇಗಿಣಿ ಲೇಗಿಣಿಯೇ
ಅದ್ರನಾದಾರೇ ಜುಟ್ಟಾಗ್‌ ಲಿಟ್ತೂ ಲೇಗಿಣಿ ಲೇಗಿಣಿಯೇ
ಅದಕಿಂದೂ ಮುಂದೆ ನಡದೀತೂ ಕೋಳೀ ಲೇಗಿಣಿ ಲೇಗೆಣಿಯೇ
“ನಾ ಬಿಂಗ್ಳೂರ ರಾಜನಾ ಮಗ್ಳ ಮದಿಯಾಗಿ ಬತ್ತೇ” ಲೇಗಿಣಿ ಲೇಗಿಣಿಯೇ ||೧೯||

ಅಂದೇಳ ಲಿನ್ನೇ ಸರವನ ಹೊಡಿತೂ ಲೇಗಿಣಿ ಲೇಗಿಣಿಯೇ
ಹದ್ನಾರ ಮೆಟ್ಟೀನಾ ಹುಲಿಯಣ್ಣಾ ಲಿನ್ನೇ ಲೇಗಿಣಿ ಲೇಗಿಣಿಯೇ
ವೋಡೋಡಿ ಲಿನ್ನೇ ಕೋಳಿಹಿಡೂಕ ಬಂತೂ ಲೇಗಿಣಿ ಲೇಗಿಣಿಯೇ
“ತಿಂಬದಾರ್‌ ನೀನೂ ತಿನಲಕ್ಕ…” ಲಂತೂ ಲೇಗಿಣಿ ಲೇಗಿಣಿಯೇ ||೨೦||

“ಹೆದರದೇ ನನ್ನಾ ಬುಡ್ಕಲೂ ಬಾರೇ ಲೇಗಿಣಿ ಲೇಗಿಣಿಯೇ
ಹದ್ನಾರಮೆಟ್ನ ಹುಲಿ ವಂದ್‌ ಮೆಟ್ಟೂ ಲಾಯ್ತು ಲೇಗಿಣಿ ಲೇಗಿಣಿಯೇ
ಅದ್ರಾನ ಹಿಡುದೀ ರಟ್ಟೀಲಿಟ್ಟು ಲೇಗಿಣಿ ಲೇಗಿಣಿಯೇ
ಅದಕಿಂದೂ ಮುಂದೇ ನಡದೀತು ಕೋಳೀ ಲೇಗಿಣಿ ಲೇಗಿಣಿಯೇ ||೨೧||

ಮತ್ತೊಂದ ಸರವಾ ಲೇನಂದಿ ಹೊಡಿತು? ಲೇಗಿಣಿ ಲೇಗಿಣಿಯೇ
“ಬಿಂಗ್ಳೂರ ರಾಜಾನಾ ಮಗ್ಳ ಮದಿಯಾಗಿ ಬತ್ತೇ” ಲೇಗಿಣಿ ಲೇಗಿಣಿಯೇ
“ಕೇಳಲ್‌ ಹೇಳಲ್ಲೋ ಬಿಂಗ್ಳೂರ ರಾಜಾ, ಲೇಗಿಣಿ ಲೇಗಿಣಿಯೇ
ನಿನ್ನಲು ಹುಡಗೀ ನಗ್ನಾಗುಕೆ ಬಂದೇ ಲೇಗಿಣಿ ಲೇಗಿಣಿಯೇ ||೨೨||

ಚಿನ್ನದಾ ಕವಚಾ ತೆಗದೀ ಬೀಳಲೀ” ಲೇಗಿಣಿ ಲೇಗಿಣಿಯೇ
ಅಂದಹೇಳಿ ಕೋಳೀ ಸರವಾನ ಹೊಡಿತೂ ಲೇಗಿಣಿ ಲೇಗಿಣಿಯೇ
ಬಿಂಗ್ಳೂರ ರಾಜಾಗೇ ಯಚ್ರ ಲಾಗೀತೂ ಲೇಗಿಣಿ ಲೇಗಿಣಿಯೇ
ಚಿನ್ನಾದಾ ಕವಚಾ ತೆಗ್ದೀ ಬಿದ್ದೀತೂ ಲೇಗಿಣಿ ಲೇಗಿಣಿಯೇ ||೨೩||

ಮಂಚಾದಾ ಮೇನೇ ಹೋಗಿ ಕುಂತೀತೂ; ಲೇಗಿಣಿ ಲೇಗಿಣಿಯೇ
ತೆಪ್ಪನೆ ಯೆದ್ದೀ ಕುಂತೀದ ನೋಡೀ ಲೇಗಿಣಿ ಲೇಗಿಣಿಯೇ
ಬಿಂಗ್ಳೂರ ರಾಜಾ ಕಯ್ಯನ ಮುಗದಾ ಲೇಗಿಣಿ ಲೇಗಿಣಿಯೇ
“ಇದು ಯಾವಾ ಸಂಗ್ತೀ? ಯೇನಯಾ ತಳ್ಯ?” ಲೇಗಿಣಿ ಲೇಗಿಣಿಯೇ ||೨೪||

“ಯೇನೂ ಅಲಚ್ನೀ ಮಾಡುಬೀಡಾ ರಾಜಾ ಲೇಗಿಣಿ ಲೇಗಿಣಿಯೇ
ಬಿಂಗ್ಳೂರ ರಾಜನ ಮಗಳಾ ನಗ್ನಾಗೂಕ ಬಂದೇ ಲೇಗಿಣಿ ಲೇಗಿಣಿಯೇ
ಮುತ್ತಿನ ಮಂಟಪವಾ ಮಾಡಲು ಬೇಕೂ” ಲೇಗಿಣಿ ಲೇಗಿಣಿಯೇ
ರಾಜಾನಾದಾರೇ ನಗ್ನಾ ತಯ್ಯಾರ್‍ಸಿದಾ ಲೇಗಿಣಿ ಲೇಗಿಣಿಯೇ ||೨೫||

ರಟ್ಟೀಲಾದಾರೇ ಕುಡ್ಗೀತೂ ಕೋಳೀ ಲೇಗಿಣಿ ಲೇಗಿಣಿಯೇ
ಜುಟ್ಟಾಗಾದಾರೇ ಶಡದೀತೂ ಕೋಳೀ ಲೇಗಿಣಿ ಲೇಗಿಣಿಯೇ
ಪುಕ್ಕಾನಾದಾರೇ ನಗದೀತು ಕೋಳೀ ಲೇಗಿಣಿ ಲೇಗಿಣಿಯೇ
ಪುಕ್ಕಾನಾದಾರೇ ನಗದೀತು ಕೋಳೀ ಲೇಗಿಣಿ ಲೇಗಿಣಿಯೇ ||೨೬||

ಅದ್ರು ಹೆರ್‍ಗಲಾದಾರೇ ಹೋಗ್ವಾಗೆ ಲಿನ್ನೇ ಲೇಗಿಣಿ ಲೇಗಿಣಿಯೇ
ಬಿಂಗ್ಳೂರ್‌ ರಾಜಾ ವಳಗಿದ ಲಿನ್ನೇ ಹೆರ್‍ಗ್‌ ಬರುವಾನೇ ಲೇಗಿಣಿ ಲೇಗಿಣಿಯೇ
ಅವ್ನ ಕಣ್ಣೀಗೇ ನದರೀಗೆ ಬಿತ್ತೂ ಲೇಗಿಣಿ ಲೇಗಿಣಿಯೇ
“ಇದು ಯೇನೂ ಸ್ವಾಮೀ ವಿಚಿತ್ರವಾಯ್ತು” ಲೇಗಿಣಿ ಲೇಗಿಣಿಯೇ ||೨೭||

ಅಂದ ಹೇಳಿಲಿನ್ನೇ ಕಲ್ಲಾಗೀನಿತ್ತಾ ಲೇಗಿಣಿ ಲೇಗಿಣಿಯೇ
ಬಿಂಗ್ಳೂರ ರಾಜ್ನಾ ಹಿಡದೇ ನಿಲ್ಲೇಸ್ದಾ ಲೇಗಿಣಿ ಲೇಗಿಣಿಯೇ
ಅದ್ರ ಕಂಡ್ಕಂಡೀ “ಹೆದ್ರವದೂ ಬೇಡಾ ಲೇಗಿಣಿ ಲೇಗಿಣಿಯೇ
ನಾನು ನಗ್ನಾಗೂಕ್‌ ಬಂದಾಗ ತಿಂಬೂಕ್‌ ಬಂದಿತೂ ಲೇಗಿಣಿ ಲೇಗಿಣಿಯೇ ||೨೮||

ನಿಮ್ಗ ತೋರ್‌ಸಬೇಕ ಅಂದೇ ಹಿಡ್ಕಂಡೀ ಬಂದೇ” ಲೇಗಿಣಿ ಲೇಗಿಣಿಯೇ
ಅದ್‌ ಮೂರು ಪರಾಣಿನೂ ಕಿವಿಯಲ್ಲಿ ಬಂದೀತು ಲೇಗಿಣಿ ಲೇಗಿಣಿಯೇ
ಅದ್ರ ಹಣ್ನಡ್ಕಿ ವರನಾ ಮಾಡ್ಕಂಡಿ ಲೇಗಿಣಿ ಲೇಗಿಣಿಯೇ
ಏಡ್ಕಂಡೀ ಲದರಾ ತಕ್ಕಂಡೆ ಲಿನ್ನೇ ಲೇಗಿಣಿ ಲೇಗಿಣಿಯೇ ||೨೯||

ಹಿಡ್ಕಂಡಿ ಲದರಾ ತಕ್ಕಂಡ್‌ ಬಂದೀದೇ ಲೇಗಿಣಿ ಲೇಗಿಣಿಯೇ
ನಿಂಬೀ ಹಣ್‌ ವರಣಾ ಮಾಡ್ಕಂಡೆ ಬಂದೇ ಲೇಗಿಣಿ ಲೇಗಿಣಿಯೇ
ಮಗಳಾ ನಾದಾರೇ ನಗ್ನನು ಮಾಡಿ” ಲೇಗಿಣಿ ಲೇಗಿಣಿಯೇ
ಅಟ್ಟಲು ಇನ್ನೇ ಕೇಳೀದ ಲರಸೂ ಲೇಗಿಣಿ ಲೇಗಿಣಿಯೇ ||೩೦||

ಮಾಳೂಗಿ ವಳುಗೇ ನೆಡದೀದ ರಾಜಾ ಲೇಗಿಣಿ ಲೇಗಿಣಿಯೇ
ವಳುಗಿದ್ದಾ ಮಡದೀ ಕರುದಿದ್ದ ರಾಜಾ ಲೇಗಿಣಿ ಲೇಗಿಣಿಯೇ
ಅದು ಕೋಳೀನೂ ಅಲ್ಲಾ, ಚಿನ್ನದಾ ವರಣಾ ಲೇಗಿಣಿ ಲೇಗಿಣಿಯೇ
ಅವಗೇಲಾದಾರೇ ಲಗ್ನಾ ಮಾಡ್ಬೇಕೂ ಲೇಗಿಣಿ ಲೇಗಿಣಿಯೇ ||೩೧||

ವಳುಗಿದ್ದಾ ತಾಯೀ ಕಣ್ಣೀರಾ ಸುರಿಸ್ತ್, ಲೇಗಿಣಿ ಲೇಗಿಣಿಯೇ
ಮಗಳಾನಾದಾರೇ ಕರಕ್ಂಡೇ ಬಂದೂ ಲೇಗಿಣಿ ಲೇಗಿಣಿಯೇ
ಮುತ್ತಿನ ಮಂಟಪಕೇ ತಂದಿಲಿಟ್ಟವ್ರೇ ಲೇಗೆಣಿ ಲೇಗಿಣಯೇ
ಸೂಲಿದೇವರಿಗೇ ಕಯ್ಯಾನೇ ಮುಗಿತೂ ಲೇಗಿಣಿ ಲೇಗಿಣಿಯೇ ||೩೨||

“ನನ್ನ ಮಗಳಾ ಹಣಯಲ್ಲೀ ಯೇನಬರ್‌ದಿದೆಯೋ” ಲೇಗಿಣಿ ಲೇಗಿಣಿಯೇ
“ಯೇನೇನಾಲಚ್ನೀ ಮಾಡುಬೀಡ ಲಮ್ಮಾ ಲೇಗಿಣಿ ಲೇಗಿಣಿಯೇ
ನಿಮ ದತ್‌ ಮಗನೂ ಲಾಗೀ ಮನೀಲೀ ಇರುತೇ” ಲೇಗಿಣಿ ಲೇಗಿಣಿಯೇ
ಲಗ್ನ ಲಾಕಂಡೀ ಅಲ್ಲೀ ಉಳುದಾ ಲೇಗಿಣಿ ಲೇಗೆಣಿಯೇ ||೩೩||
*****

ಕೆಲವು ಪದಗಳ ವಿವರಣೆ:

ಹಾರಾರ = ಬ್ರಾಹ್ಮಣರ
ಸರವಾ = ಸ್ವರ, ಕೋಳಿಯ ಕೂಗು
ಬೀಡ್ದಕ್ಕಿ = ಬೇಡಿಕೊಂಡು ಬಂದ ಅಕ್ಕಿ
ತೊಪ್ಪನೆ = ದಬಕ್ಕನೆ (ತಕ್ಷಣ)
ತಳ್ಯ = ವಿಷಯ

ಹೇಳಿದವರು: ದೇವಿ ಗಣಪತಿ ನಾಯ್ಕ, ಊರಕೇರಿ, ೬೦ ವರ್ಷ

ಈ ಬರಹವು ಕ್ರಿಯೇಟಿವ್ ಕಾಮನ್ಸ್ ಹಕ್ಕುಪದ್ಧತಿಯ ೪.೦ ಅಂತಾರಾಷ್ಟ್ರೀಯ ಪರವಾನಗಿಯನ್ನು ಹೊಂದಿದ್ದು ವಾಣಿಜ್ಯೇತರ ಉದ್ದೇಶಕ್ಕಾಗಿ ಬಳಸಿಕೊಳ್ಳಲಾಗಿದೆ.

Tagged:

Leave a Reply

Your email address will not be published. Required fields are marked *

ಅವಳು ಅಡುಗೆ ಮನೆಯ ಕಪ್ಪಾದ ಡಬ್ಬಿಗಳನ್ನು, ಉಳಿದ ಸಾಮಾನುಗಳನ್ನು ತೆಗೆದು ತೊಳೆಯಲು ಆ ಮಣ್ಣಿನ ಮಾಡು ಹಂಚಿನ ಮನೆಯ ಮುಂದಿನ ತೆಂಗಿನಕಟ್ಟೆಯಲ್ಲಿ ಹಾಕಿದ ಅಗಲ ಹಾಸುಗಲ್ಲ ಮೇಲೆ ಕೈಲಿ ಹಿಡಿದಷ್ಟು ತಂದು ತಂದು ಇಡುತ್ತಿದ್ದಳು. ಏಳರ ಬಾಲೆ ಮಗಳು ಕೂಡ ತನ್ನ ಕೈಗೆ ಎತ್ತುವಂತಹ ಡಬ್ಬಿಗಳನ್ನು...

ಆಹಾ! ಏನು ಕಡಲು! ಅ೦ತವಿಲ್ಲದ ಕಡಲು!! ಅಪಾರವಾಗಿಹ ಕಡಲು! ದಿಟ್ಟಿ ತಾಗದ ಕಡಲು!! ಆ ಕಡಲ ಒಡಲಲ್ಲಿ ಏನು ತೆರೆ! ಏನು ನೊರೆ!! ಏನು ಅಂದ! ಎನಿತು ಚಂದ! ಬಿಚ್ಚಿ ಮುಚ್ಚುವ ಅದರ ನಯವಾದ ತುಟಿಗಳು ಹೊನ್ನರವಿ ಎಸೆದಿರುವ ಚಿನ್ನದಲುಗಳೇಸು! ಬಣ್ಣ ಬಣ್ಣಗಳುಗುವ ಅಚ್ಚು ಪಡಿಯಚ್ಚುಗಳ ಹೊಳಪಿನ ಏನ...

ಸರ್, ಗುಡ್ ಮಾರ್ನಿಂಗ್, ಮೇ ಐ ಕಮೀನ್ ಸರ್ – ನಿತ್ಯ ಆಫೀಸಿನ ಅವಧಿ ಪ್ರಾರಂಭವಾಗುತ್ತಲೇ ಹಿಂದಿನ ದಿನ ರೆಡಿ ಮಾಡಿದ ಹತ್ತಾರು ಕಾಗದ ಪತ್ರಗಳಿಗೆ ಸಹಿ ಪಡೆಯಲು, ಇಲ್ಲವೇ ಹಿಂದಿನ ದಿನದ ಎಲ್ಲ ಫೈಲುಗಳ ಚೆಕ್ ಮಾಡಿಸಲು, ಕೈಯಲ್ಲಿ ಫೈಲುಗಳ ಕಟ್ಟು ಹಿಡಿದು ಬಾಗಿಲ ಮರೆಯಲ್ಲಿ ನಿಂತು ...

ಕೋತಿಯಿಂದ ನಿಮಗಿನ್ನೆಂಥಾ ಭಾಗ್ಯ! ನೀವು ಹೇಳುವ ಮಾತು ಸರಿ! ಬಿಡಿ! ತುಂಗಮ್ಮನವರೆ. ಇದೇನೆಂತ ಹೇಳುವಿರಿ! ಯಾರಾದರೂ ನಂಬುವ ಮಾತೇನರೀ! ಕೊತೀಂತೀರಿ. ಬಹುಲಕ್ಷಣವಾಗಿತ್ತಿರಿ ಎಂತೀರಿ? ಅದು ಹೇಗೋ ಎನೋ, ನಾನಂತೂ ನಂಬಲಾರನರೀ!” “ಹೀಗೆಂತ ನೆರ ಮನೆ ಪುಟ್ಟಮ್ಮನವರು ಹೇಳಿದರು....

ಹೊರ ಕೋಣೆಯಲ್ಲಿ ಕಾಲೂರಿ ಕೂತು ಬೀಡಿ ಕಟ್ಟುತ್ತಿದ್ದ ಸುಮಯ್ಯಾಗೆ ಕಣ್ಣು ಮತ್ತು ಕಿವಿಯ ಸುತ್ತಲೇ ಆಗಾಗ ಗುಂಯ್.. ಎನ್ನುತ್ತಾ ನೊಣವೊಂದು ಸರಿಸುಮಾರು ಹದಿನೈದು ನಿಮಿಷಗಳಿಂದ ಹಾರಾಡುತ್ತಾ ಕಿರಿಕಿರಿ ಮಾಡುತ್ತಿತ್ತು. ಹಿಡಿದು ಹೊಸಕಿ ಹಾಕಬೇಕೆಂದರೆ ಕೈಗೆ ಸಿಗದೆ ಮೈ ಪರಚಿಕೊಳ್ಳಬೇಕೆನ್ನ...

ಮೂಲ: ಗಾಯ್ ಡಿ ಮೊಪಾಸಾ ಗಗನಚುಂಬಿತವಾದ ಬೀಚ್‌ ವೃಕ್ಷಗಳೊಳಗಿಂದ ತಪ್ಪಿಸಿಕೊಂಡು ಸೂರ್ಯ ಕಿರಣಗಳು ಹೊಲಗಳ ಮೇಲೆ ಬೆಳಕನ್ನು ಕೆಡುವುವುದು ಬಲು ಅಪರೂಪ. ಬೆಳೆದ ಹುಲ್ಲನ್ನು ಕೊಯ್ದುದರಿಂದಲೂ, ದನಗಳೂ ಕಚ್ಚಿ ಕಚ್ಚಿ ತಿಂದುದರಿಂದಲೂ ನೆಲವು ಅಲ್ಲಲ್ಲಿ ತಗ್ಗು ದಿನ್ನೆಯಾಗಿ ಒಡೆದು ಕಾಣುತ್ತಿ...