ಮಕ್ಕಳಿಲ್ಲದಿದ್ದರೆ ಒಂದು ಚಿಂತೆಯಂತೆ,
ಇದ್ದರೆ ನೂರೊಂದು ಚಿಂತೆಯಂತೆ;
ಅನ್ನುವವರೇನು ಬಲ್ಲರು?
ನನ್ನ ಚಿಂತಾಪಹಾರಕ ಚಿಂತಾಮಣಿ!
ಚಿಂತೆಯ ಪಂಚಾಗ್ನಿಯಲ್ಲಿ ತಪಮಾಡಿಸಿ
ತಪಸ್ವಿನಿಯ ಮಾಡಿಸಿದೆ;
ಮಕ್ಕಳೆಂದರೆ ನೊಣದ ಪಾಯಸವೆಂತೆ,
ಕೊರಳಿಗುರುಲೆಂತೆ;
ಅನ್ನುವವರೇನು ಬಲ್ಲರು?
ನನ್ನ ಅಮೃತದ ಝರಿಯೇ!
ನಿನ್ನ ವಿಷವುಂಡು ನೀಲಕಂಠಾಭರಣಳಾದೆ,
ಸುಖದುಃಖ ಸಮನೆಂಬ ಯೋಗಿಯ ಮಾಡಿದೆ.
*****


















