ಗುರುಗಳೇ! ”ನನ್ನ ಮನವನ್ನು ಮೋಡದೊಡನೆ ತೇಲಿಬಿಟ್ಟಿರುವೆ” ಎಂದ ಶಿಷ್ಯ. “ಮೋಡವು ಇನ್ನು ಕೆಲವೇ ಕ್ಷಣಗಳಲ್ಲಿ ತನ್ನ ಮನದ ಆರ್ದತೆಯನ್ನೆಲ್ಲಾ ಮಳೆಯಾಗಿ ಚೆಲ್ಲಿ ಬರಿ ಕೊಡವಾಗಿ ಶೂನ್ಯ ತುಂಬಿಕೊಳ್ಳುತ್ತದೆ. ಆಗ ನೀನು ತೇಲಿಬಿಟ್ಟಿರುವ ನಿನ್ನ ಮನ ಸಾಗುವುದು ಎಲ್ಲಿಗೆ?” ಎಂದರು ಗುರುಗಳು. “ಮೋಡ ಕೈ ಬಿಟ್ಟಾಗ ಮನದ ಆಸರೆಗೆ ಆಕಾಶವಿದ್ದೇ ಇದೆ, ಗುರುಗಳೇ!” ಎಂದ ಶಿಷ್ಯ.
ಗುರುಗಳು ತಲೆ ತೂಗಿದರು.
*****


















