ದೇವಾ ನಿನ್ನ ಮಹಿಮೆ ಕೊಂಡಾಡಲೆ
ನಿನ್ನ ಭಾವಗಳಲಿ ಕರಗಲೆ
ನಿನ್ನ ಗುಣಗಳ ಆಳವಡಿಸಿಕೊಳ್ಳಲೆ
ದೇವಾ ನಿನ್ನ ತೊರೆದು ಹೇಗೆ ಬಾಳಲಿ
ದೇವಾ ನಿನ್ನ ಸ್ಮರಣೆ ನಿತ್ಯ ಮಾಡಲೆ
ನಿನ್ನ ಸಾಮಿಪ್ಯ ನಿತ್ಯಬೇಡುವೆ
ನಿನ್ನ ರಾಜ್ಯದಲಿ ನಾ ಮುಳಗಲೆ
ದೇವಾ ನಿನ್ನ ತೊರೆದು ಹೇಗೆ ಬಾಳಲಿ
ದೇವಾ ನಿನ್ನ ಧ್ಯಾನ ನಿತ್ಯ ಗೈಯಲೆ
ನಿನ್ನ ದರುಶನಕೆ ನಿನ್ನ ಕಾಡಲೆ
ನಿನ್ನ ಕೃಪೆಗೆ ನಿತ್ಯ ಹಂಬಲಿಸಲೆ
ದೇವಾ ನಿನ್ನ ತೊರೆದು ಹೇಗೆ ಬಾಳಲಿ
ಎತ್ತತ್ತ ನೋಡಲು ನೀನು ಮರೆಯಾಗಿ
ಮತ್ತೆ ನಡೆಸುತ್ತಿರುವೆ ನಿತ್ಯವೂ ನನ್ನ
ಎತ್ತೆತ್ತ ನಿನ್ನ ಮಾಯೆಯ ಪಸರಿಸಿದೆ
ದೇವಾ ನಿನ್ನ ತೊರೆದು ಹೇಗೆ ಬಾಳಲಿ
ದೇವಾ ಎನ್ನ ಬದಕು ಬಂಜರವಾಗದಿರಲಿ
ಜೀವಕ್ಕೆ ನೆಮ್ಮದಿ ಬಂದಿರಲಿ
ಮಾಣಿಕ್ಯ ವಿಠಲನೆ ಎನ್ನ ದೈವ
ದೇವಾ ನಿನ್ನ ತೊರೆದು ಹೇಗೆ ಬಾಳಲಿ
*****
















