
ಬೆಳೆದೊಂದು ಹಣಕೆಂದು, ಮನೆಗೆಂದು ನೂರೊಂದು ಬಳಿಯಂಗಡಿಯೊಳೆ ತಂದು, ನಾ ಸಾವಯವವೆಂದು ಪೇಳಿದೊಡದು ಕುಂದು, ಹಿಂದು ಮುಂದಾಗಬೇಕಿಂದು ಕಳೆ ಬೆಳೆಗಳೊಂದಾಗಿ ಮನೆಯಡುಗೆ ಸರಕಾಗಿ ತಳುಕಿನಂಗಡಿ ದಾರಿ ತಪ್ಪಿದರದುವೆ ಸಾವಯವ – ವಿಜ್ಞಾನೇಶ್ವರಾ *****...
ನಾನು ಯಾರೆಂದಿರಾ? ನಾನು ಬುದ್ಧಿವಂತ ಬುದ್ಧನ ಜಾತಿಯಲಿ ಹುಟ್ಟಿ ಸಾರಸ್ವತ ಲೋಕವನು ಕೈಯಿಂದ ತಟ್ಟಿ ಜ್ಞಾನ ಭಂಡಾರವನು ಗಂಟಾಗಿ ಕಟ್ಟಿ ಅಜ್ಞಾನ ಅಂಧಕಾರವನು ಹೆಮ್ಮೆಯಿಂದ ಮೆಟ್ಟಿ ಪಡೆದ ಬುದ್ಧಿ ಸ್ವಂತ ನಾನು ಬುದ್ಧಿವಂತ. ಶಿಕ್ಷಕರ ಶಿಕ್ಷಿಸ ಬಲ್ಲೆ ...
ಅಮ್ಮನ ಮಡಿಲನೇರಿ ಕಂದ ಕಿಲಕಿಲನೆ ನಕ್ಕ ಅವಳ ಮಮತೆಯ ಕಾವಿಗೆ ಬೆಳೆದ ಶ್ರೀಮಂತ || ನೂರಾರು ಜನ್ಮದ ಪುಣ್ಯದ ಫಲವು ಅವಳ ಹಸಿರ ಸೆರಗ ಬಸಿರ ಕಂದ || ಅಳುವ ಕಂದನ ನಾದವ ಕೇಳಿ ನೋವ ಮರೆತು ತೊಟ್ಟಿಲ ತೂಗುವ ಆನಂದ || ರಾಮನ ಕಂಡು ಅಮ್ಮನು ಕೃಷ್ಣನ ಲೀಲೆಗೆ...
ಬದುಕು ಇದು ಸ್ಥಿರವಲ್ಲ ಓ ಮನುಜ ನೀರ ಮೇಲಿನ ಗುಳ್ಳೆ ಇದು ಸಹಜ ನೀರು ಹರಿಯುವಾಗ ಗುಳ್ಳೆ ಅರಳುವುದು ನೀರು ಬತ್ತಿದರೆ ತಾನು ಸತ್ತು ಹೊಗುವುದು ದೇಹ ಸುಖಕ್ಕೆ ಅವಕಾಶವಾದಿಯಾಗದಿರು ಕಾಲದಲಿ ಕರಗುವ ಮುನ್ನ ಎಚ್ಚರವಾಗಿರು ಸತ್ಯಗಳ ಒಳಹೊರಗು ನೀನು ಆಚರಿ...
ಕೋಳಿ ಕೂಗಿದರೇನೇ ಬೆಳಗಾವುದೆಂಬ ಕಾಲವೊಂದಿತ್ತು| ನನ್ನ ಮನೆ ಬೆಂಕಿಯಿಂದಲೇ ಊರ ಜನರ ಬೇಳೆ ಬೇಯ್ಯುವುದೆಂಬ ಅಜ್ಞಾನದ ಕಾಲವೊಂದಿತ್ತು|| ಎಲ್ಲರೂ ಸರ್ವ ಸ್ವತಂತ್ರರು ಯಾರ ಹಿಡಿತದಲಿ ಯಾರಿಲ್ಲ| ಅಜ್ಞಾನಿಗಳು ಅಜ್ಞಾನದಿಂದ ಮುಗ್ಧರ ಆಳಬಯಸುವರು| ಸತ್ಯವ...
ಋಷಿಗಳ ಮನದಾಗೆ ಓಂಕಾರ ಹರದಂಗೆ ಬೆಸಲಾಗಿ ನಡೆದಾವೆ ತುಂತುಂಬಿ ಮೋಡ ನಿಂತಂಗೆ ನಿಂತಲ್ಲಿ ಕುಂತಂಗೆ ಕುಂತಲ್ಲೆ ಚಿಂತ್ಯಾಗೆ ಮೈಮರೆತ ಹಸಿರಿನ ಕಾಡ || ೧ || ಧ್ಯಾನದಾಗ ಸ್ವರ್ಗಾನ ಕಂಡಾಗ ತುಟಿಯಾಗೆ ಎಳೆನಗೆ ಚಿಗತಂಗ ನಗತಾದ ಹುಲ್ಲು ಹಗಲೆಲ್ಲ ಗಾಳೆಪ್ಪ...













