ಇವುಗಳ ಪಾಲಿಸು

ಬದುಕು ಇದು ಸ್ಥಿರವಲ್ಲ ಓ ಮನುಜ
ನೀರ ಮೇಲಿನ ಗುಳ್ಳೆ ಇದು ಸಹಜ
ನೀರು ಹರಿಯುವಾಗ ಗುಳ್ಳೆ ಅರಳುವುದು
ನೀರು ಬತ್ತಿದರೆ ತಾನು ಸತ್ತು ಹೊಗುವುದು

ದೇಹ ಸುಖಕ್ಕೆ ಅವಕಾಶವಾದಿಯಾಗದಿರು
ಕಾಲದಲಿ ಕರಗುವ ಮುನ್ನ ಎಚ್ಚರವಾಗಿರು
ಸತ್ಯಗಳ ಒಳಹೊರಗು ನೀನು ಆಚರಿಸು
ತನ ಮನ ದನಿಯಲಿ ಅಹಿಂಸೆಯ ಪಾಲಿಸು

ಇನ್ನೊಬ್ಬರ ಹೆಣ್ಣು ಹೊನ್ನಿಗೆ ಕನ್ನ ಹಾಕದಿರು
ಅಬ್ಬರ ಆಡಂಬರದಿ ಸಿರಿ ಸಂಪದಿಸದಿರು
ದೇವರು ನೀಡಿದನ್ನು ಪಡೆದು ಶಾಂತಿಯಿಂದಿರು
ಬ್ರಹ್ಮಚರ್ಯವುತನು ಮನ ದನಿಯಲಿ ರಕ್ಷಿಸು

ದಿನವಿಡೀ ಪರಮಾತ್ಮನ ಸ್ವಾದ್ಯಾಯ ಮಾಡು
ರಾತ್ರಿಯಲಿ ದೇವರ ಧ್ಯಾನವ ಮಾಡು
ಬಾಳಿನಲ್ಲಿಯೇ ದೇವರ ದರ್ಶನ ಪಡೆ
ಮಾಣಿಕ್ಯ ವಿಠಲನಾಗಿ ಸಾವಿನೆಡೆಗೆ ನಡೆ
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಕೋಳಿ ಕೂಗಿದರೇನೇ
Next post ಸಾರ್ಥಕ ಜೀವನ

ಸಣ್ಣ ಕತೆ

  • ಸಾವು

    ಈ ಗೊಂಡಾರಣ್ಯದಲ್ಲಿ ನಾನು ಬಂದುದಾದರೂ ಹೇಗೆ? ಅಗೋ ಅಲ್ಲಿ ಲಾಸ್ಯವಾಗಿ ಬಳುಕುತ್ತಾ ನಲಿಯುತ್ತಾ ತುಂತುರು ತುಂತುರಾಗಿ ಮುತ್ತಿನ ಹನಿಗಳನ್ನು ಪ್ರೋಕ್ಷಿಸುತ್ತಿರುವ ಝರಿಯ ರಮಣೀಯತೆಯನ್ನೂ ಮೀರುವಂತಹ ಭಯಾನಕತೆ ವ್ಯಾಪಿಸಿದೆಯಲ್ಲಾ… Read more…

  • ದೋಂಟಿ ತ್ಯಾಂಪಣ್ಣನ ಯಾತ್ರಾ ಪುರಾಣವು

    ಸುಮಾರು ಆರೂವರೆ ಅಡಿಗಿಂತಲೂ ಎತ್ತರಕ್ಕೆ ಗಳದ ಹಾಗೆ ಬೆಳೆದಿರುವ ದೋಂಟಿ ತ್ಯಾಂಪಣ್ಣನು ತನ್ನ ದಣಿ ಕಪಿಲಳ್ಳಿ ಕೃಷ್ಣ ಮದ್ಲೆಗಾರರ ಮನೆ ಜಗಲಿಯಲ್ಲಿ ಮೂಡು ಸಂಪೂರ್ಣ ಆಫಾಗಿ ಕೂತಿದ್ದನು.… Read more…

  • ಆಮಿಷ

    ರಮಾ ಕುರ್ಚಿಯನ್ನೊರಗಿ ಕುಳಿತಿದ್ದಳು. ದುಃಖವೇ ಮೂರ್ತಿವೆತ್ತಂತೆ ಕುಳಿತಿದ್ದ ಅವಳ ಹೃದಯದಲ್ಲಿ ಭೀಕರ ಕೋಲಾಹಲ ನಡೆದಿತ್ತು. ಕಣ್ಣುಗಳು ಆಳಕ್ಕಿಳಿದಿದ್ದವು. ದೇಹದ ಅಣು ಅಣುವೂ ನೋವಿನಿಂದ ಮಿಡಿಯುತ್ತಿತ್ತು. "ತಾನೇಕೆ ದುಡುಕಿಬಿಟ್ಟೆ?… Read more…

  • ದಾರಿ ಯಾವುದಯ್ಯಾ?

    ಮೂವತೈದು ವರ್‍ಷಗಳ ನಂತರ ಅಮಲ ನಿನ್ನೂರಿಗೆ ಬರುತ್ತಿದ್ದೇನೆ ಅಂತ ಫೋನ ಮಾಡಿದಾಗ ಮೃಣಾಲಿನಿಗೆ ಆಶ್ಚರ್‍ಯ ಮತ್ತು ಆತಂಕ ಕಾಡಿದವು. ಬರೋಬ್ಬರಿ ಮೂವತ್ತೈದು ವರ್ಷಗಳ ಹಿಂದೆ ವಿಶ್ವವಿದ್ಯಾಲಯದ ಕ್ಯಾಂಪಸ್… Read more…

  • ತನ್ನೊಳಗಣ ಕಿಚ್ಚು

    ಶಕೀಲಾ ಇನ್ನೂ ಮನೆಗೆ ಬಂದಿಲ್ಲ ಮೈಮೇಲೆ ಮುಳ್ಳುಗಳು ಎದ್ದಂಗಾಗದೆ. ಅಸಲು ಜೀವಂತ ಅದಾಳೋ? ಉಳಿದಾಳೆ ಜಿಂದಾ ಅಂಬೋದಾದ್ರೆ ಎಲ್ಲಿ? ಕತ್ಲೆ ಕವ್ಕತಾ ಅದೆ. ಈಗಷ್ಟೇ ಒಂದು ಗಂಟೆ… Read more…