ಅಮ್ಮನ ಮಡಿಲನೇರಿ
ಕಂದ ಕಿಲಕಿಲನೆ ನಕ್ಕ
ಅವಳ ಮಮತೆಯ
ಕಾವಿಗೆ ಬೆಳೆದ ಶ್ರೀಮಂತ ||

ನೂರಾರು ಜನ್ಮದ ಪುಣ್ಯದ
ಫಲವು ಅವಳ ಹಸಿರ
ಸೆರಗ ಬಸಿರ ಕಂದ ||

ಅಳುವ ಕಂದನ ನಾದವ
ಕೇಳಿ ನೋವ ಮರೆತು
ತೊಟ್ಟಿಲ ತೂಗುವ ಆನಂದ ||

ರಾಮನ ಕಂಡು ಅಮ್ಮನು
ಕೃಷ್ಣನ ಲೀಲೆಗೆ ಸೋತು
ಜೀವಧಾರೆ ಎರೆದ ಬಂಧನವು
ಅವಳ ಮಡಿಲು
ಸ್ವರ್ಗ ಸೋಪಾನ ||
*****