ಸೀಮಾಂತ ಪ್ರದೇಶದಲಿ ಕರಗುವ ಶಿಲ್ಪವ ಕಂಡೆ ನಾನು ಸರ್ವದೂರದಲಿ ಹಿಮ ಪ್ರತಿಮೆ ಯಾತನಾಮಯ ಹಿಮಗಂಧ ಸಂಗೀತ ಅಗಾಧ ಹಿಮ ಮಾಯಾ ಮಹಿಮೆ. ಉದುರುವ ಕಲೆ ಶಿಲ್ಪಕೆ ಸಿದ್ಧಿಸಿತೆಂತು ಶುಭ್ರವಿಭೋರ ಕಣ ಸ್ಪಂದನ ರೆಪ್ಪೆ ತೆರವಾದಾಗ ಹರಡಿದ ವಿಹಗಗಣ ಇನ್ನೂ ನನಗೆ ಹ...

ಹಸಿರು ಪೈರು ನಗುವ ನೆಲದಲಿ ನೇಗಿಲ ಹೊತ್ತ ರೈತನಂತೆ ಕಚ್ಚೆ ಕಟ್ಟಿ ತಿಲಕವಿಟ್ಟು ಧೀರ ನೀನಾಗಬೇಕು ಕನ್ನಡಿಗ || ಕಳೆಯ ತೆಗೆದು ಸ್ವಚ್ಛವಾದ ಹೊಲದ ಪರಿಯು ನಿನ್ನ ಮನಸು ತಾಯ ಸೇವೆ ಮಾಡಲೆಂದು ಹೂವಾಗಿ ಅಣಿಯಗೊಳಿಸು ಕನ್ನಡಿಗ || ನಾಡ ಮಣ್ಣ ಬಸಿರಿನಲ್ಲ...

ನಾವು ಯಾರೆಂಬುದು ನಿಗೂಢ ಆದರೆ ನಮ್ಮ ಸಂಬಂಧಗಳ ಘಾಡ ಮತ್ತೆ ನರಕದತ್ತ ಸರಿಯುವುದು ಬೇಡ ನಿತ್ಯ ಗುನಿಗುನಿಸಬೇಕು ದೇವರ ಹಾಡ ನಾಕ ನರಕಗಳೂ ಇಲ್ಲಿಯೆ ಇವೆ ಅವುಗಳ ಅನುಭವದಿಂದ ಸವೆ ಪುಣ್ಯ ಕಾರ್ಯಗಳಿಗೆ ಚರಿತ್ಯ ದಿವ್ಯ ಪಾಪಕಾರ್ಯಗಳಿಗೆ ರೋಗದಿ ನವೆ ನರ್...

ಕನ್ನಡವಾಗಲಿ ನಿತ್ಯ ಕನ್ನಡವಾಗಲಿ ಸತ್ಯ| ಕನ್ನಡ ಕಂಪಿನ ಹೂಮಳೆ ಸುರಿದು ಸಮೃದ್ಧಿಯಾಗಲಿ ಕರುನಾಡು| ಭವ್ಯ ಪರಂಪರೆಯ ಈ ನಾಡು|| ಕರುಣೆಯ ಕಡಲು ಈ ಕರುನಾಡು ಶಾಂತಿಗೆ ಹೆಸರು ಈ ಕನ್ನಡನಾಡು ಪ್ರೀತಿಗೆ ಮನೆಮಾತು ಈ ಕರುನಾಡು ತ್ಯಾಗಕೆ ಎತ್ತಿದಕೈ ಈ ಕನ್...

ಜೀವ ಚಿಮ್ಮಿರುವ ಹೂವೇ ಹಾಡು ಹೊಮ್ಮಿರುವ ಹಗಲೇ ಮಾತಾಡುವಾಸೆ ನನಗೆ ನಿಮ್ಮೊಂದಿಗೆ ಮಿನುಗು ಹೆಜ್ಜೆಯ ತಾರೆಯೇ ಚಂದ್ರ ಚುಂಬಿತ ರಾತ್ರಿಯೇ ಬೆರೆಯುವಾಸೆ ನನಗೆ ನಿಮ್ಮೊಂದಿಗೆ. ಬಿಸಿಲ ಬಂಧನ ಮುರಿದು ಹಸಿರ ಹಾದಿಗೆ ಜಿಗಿದು ನಲಿಯುವಾಸೆ ನನಗೆ ನಿಮ್ಮೊಂದ...

(ಸಾವಿರ ವರ್ಷದ ಹಬ್ಬದಲ್ಲಿ) ಪದಿನೂರು ನೆರೆಯೆ, ಪಿರಿದೊಸಗೆ ಮೆರೆಯೆ, ಪುಲಿಗೆರೆಯ ತಿರುಳ ಕನ್ನಡದ ಪುರುಳ ರಸರಸದ ಬಾವಿ ಮನೆಮನೆಗೆ ತೀವಿ ತನ್ನೆರಡು ಪಾಟ್ಟು ಮೆಸೆಯೆ, ನೆಲನೊಸೆಯೆ, ತನ್ನ ಸೆರಪೇ ಸೆರಪು, ತನ್ನ ತೇಜಮೆ ತೇಜಮ್ ಎನೆ ಬೆಳಪ ಪಂಪನ್ ಎಮ್...

ಆಡಿಸು ನನ್ನ ಜಾಡಿಸು ನನ್ನ ಒದ್ದಾಡಿಸು ನೀ ನನ್ನ ಜಾಲಾಡಿಸು ಕೊಳಕನ್ನ ಓ ಜಲಗಾರ ಬೇಯಿಸು ನನ್ನ ಕಾಯಿಸು ನನ್ನ ಕುದಿಯಿಸು ನೀ ನನ್ನ ಬೇರಾಗಿಸು ಎಲ್ಲಾ ಕಶ್ಮಲವನ್ನ ಓ ಮಡಿವಾಳ ಒಣಗಿಸು ನನ್ನ ಒಡೆಯಿಸು ನನ್ನ ಉರಿಯಿಸು ನೀ ನನ್ನ ತೆಗೆ ನನ್ನಿಂದಲು ತುಸ...

ಚಿನ್ನವೆಂಬ ಹೆಣ್ಣು ಕಬ್ಬಿಣವೆಂಬ ಗಂಡು ತಾಮ್ರವೆಂಬ ಶ್ರೀಮಂತ ಹಿತ್ತಾಳೆಯೆಂಬ ಬಡವಿ ಬೇಧವಿಲ್ಲದೆ ಬೆರೆತು ಒಂದಾಗುವುದು ಕರಗಿ ಕುಲುಮೆಯ ಕುದಿವಂತ ಮೂಸೆಯೊಳಗೆ ದ್ರವವಲ್ಲದ ಖನಿಜವಲ್ಲದ ಕೂಡಿ ಬಾಳಲೂ ತಿಳಿಯದ ಪಾದರಸ ಮಧ್ಯೆ ಬಂದರೆ ವಿರಸ ವಿಚ್ಛೇದನವಾ...

ನಗು, ನಗುತ್ತ ಬಂದರು ನರರೂಪ ರಾಕ್ಷಸರು ಕೇಡಾಡಿ ಸುಟ್ಟು ಹಾಕಿದರು. ಹೈನದ ಹಸು ಮಾಡಿ ಹಲ್ಲಲ್ಲಿ ಹೀಜುತ್ತ ಹೋದರು ಕಡೆಗೊಮ್ಮೆ, ಕೆಚ್ಚಲು ಖಾಲಿಯಾಗೆ, ಕೆಟ್ಟ ಕೃಷೆಯಲ್ಲಿ ಕುರುಡಾದರು- ನಿರಾಶಯನು ಹಿಂಸೆಯಲಿ ತಣಿಸಿಕೊಳ್ಳತೊಡಗಿದರು. ಹೆಣ್ಣು- ಧರಿತ್...

ಒಳಿತಾಗಲಿ ಗುರು ಎಲ್ಲರಿಗೆ ಒಳಿತಾಗಲಿ ಪ್ರಭು ಎಲ್ಲರಿಗೆ //ಪ// ತಿಥಿಯೂಟಕೆ ಹಾತೊರೆಯುವ ಮಂದಿಗೆ ಚಿತೆಯಲಿ ಬೀಡಿ ಹಚ್ಚುವ ಮಂದಿಗೆ ಕಂಡವರ ಮನೆ ಜಂತೆಯ ಕಿತ್ತು ಬಿಸಿ ಕಾಯಿಸಿಕೊಳ್ಳುವ ಈ ಮಂದಿಗೆ ಏರುವವರ ಕಾಲೆಳೆಯುವ ಮಂದಿಗೆ ನಡೆವವರಿಗೆ ತೊಡರ್‍ಗಾ...

ಬೆಳಗ್ಗಿನ ಜಾವ, ಬೆಟ್ಟದ ಮೇಲಿನ ತನ್ನ ಕುಟೀರದ ವರಾಂಡದಲ್ಲಿ ಮಲಗಿದ್ದ ಮುದುಕನಿಗೆ ಎಚ್ಚರವಾಯಿತು. ಸುಮಾರು ಆರು ಅಂಗುಲ ಉದ್ದದ, ಅಲ್ಲಲ್ಲಿ ಹಳದಿ ಬಣ್ಣಕ್ಕೆ ತಿರುಗಿದ ತನ್ನ ಬಿಳಿ ದಾಡಿಯ ರಾಶಿಯ ಮಧ್ಯೆ ತನ್ನ ಎಡಕೈಯ ಬೆರಳುಗಳನ್ನು ತೂರಿಸಿಕೊಂಡು, ಸಿಕ್ಕು ಬಿಡಿಸುತ್ತಾ ಸೂರನ್ನು ದಿಟ್...

ಭರತಖಂಡ ಪುರಣೇತಿಹಾಸಗಳಲ್ಲಿ ಕ್ಷಾತ್ರಧರ್ಮಾನುವರ್ತಿಗಳಾದ, ವೀರತ್ವದಿಂದ ಕೀರ್ತಿವಂತೆಯರಾದ ಮಹಿಳೆಯರು ಅನೇಕರಿರುವರು. ತೇಜಸ್ವಿನಿಯಾದ ಕೈಕಾ ದೇವಿಯು ರಾಕ್ಷಸರ ಸಮರಭೂಮಿಯಲ್ಲಿ ನಿಸ್ಸಹಾಯಕನಾದ ದಶರಥನ ಕಳಚಿ ಹೋದ ರಥಚಕ್ರದಲ್ಲಿ ತನ್ನ ಕೋಮಲ ಹಸ್ತಾಂಗುಳಿಯನ್ನು ಸಿಲುಕಿಸಿ, ತನ್ನ ವೀರಪತಿ...

ಪೆಟ್ರೋಲ್ ವಾಸ್ನೆ ಮೂಗಿಗೆ “ಗಫ್” ಅಂತಾ ಬಡೀತು! ಐದಾರು ಕ್ಯಾನ್‌ಗಟ್ಟಲೆ ಮನೆ ಸುತ್ತಮುತ್ತ ಉಗ್ಗಿ ಬಾಗಿಲು ಕಿಟಕಿ ಸಂಧಿನಿಂದ ಧುಭುಧುಭು – ಪೆಟ್ರೋಲ್ ಸುರಿವಿದ ತೀರಿಗೆ ಅದು ಹಳ್ಳ ಕೊಳ್ಳವಾಗಿ ಮನೆಯೊಳಕ್ಕೆ ಜಗ್ಗಿ ಹರಿದು ಬಂತು! ಮಲಗಿದ್ದ ಹಾಸಿಗೆ, ದಿಂಬು, ಹೊ...

ಭಾಗ ೧ ಒಂದು ಯುನಿವರ್ಸಿಟೀನಲ್ಲಿ ಆಧ್ಯಾಪಕನಾಗಿರುವ ನಾನು ಕ್ಯಾಂಪಸ್ ಆವರಣದೊಳಗೇ ಇರುವ ಫ್ಲಾಟೊಂದರಲ್ಲಿ ಹೆಂಡತಿ ಮಕ್ಕಳ ಜತೆ ಮನೆ ಮಾಡಿಕೊಂಡಿದ್ದೇನೆ. ಮನೆ ಮತ್ತು ಆಫೀಸಿಗೆ ಹೆಚ್ಚೇನೂ ದೂರವಿಲ್ಲದ ಕಾರಣ ವಾಹನಗಳಿಗೆ ವೃಥಾ ಕಾಸು ಖರ್ಚು ಮಾಡಬೇಕಾದುದಿಲ್ಲ. ಮಧ್ಯಾಹ್ನ ಲಂಚಿಗೆ ಕೂಡ ಮನ...

ಬಣಸಾಲೆ ಮುಂದಿನಿಂದ ಹೆಜ್ಜೆ ಹಾಕುವಾಗ ಹೊತ್ತು ಕಂತಿದ್ದು ಲಕ್ಷ್ಯಕ್ಕೆ ಬಂದಿರಲಿಲ್ಲ. ಆಚೀಚಿನ ಹನೆಮರದೆತ್ತರದ ತೇಗ-ಮಾವುಗಳ ಟಿಸಿಲುಗಳಲ್ಲಿ ಹಕ್ಕಿಗಳ ಗರಿ ಒದರುವ ಸರಪರ. ತಾರಕ ಸ್ವರದ ಮಕ್ಕಳಾಟ ವೀಕ್ಷಿಸುತ್ತಾ ರಸ್ತೇಲಿ ಬಿದ್ದಿದ್ದ ಸಣ್ಣ ಸಣ್ಣ ಕಲ್ಲುಗಳನ್ನು ಕಾಲಿನಿಂದ ಚಿಮ್ಮುತ್ತಾ...

ಬೆಳಕಿನಿಂದ ಜಗಜಗಿಸುವ ಸಂಜೆ ರಾವು ಬಡಿದಂತೆ ಮಬ್ಬಾಗಿತ್ತು. ಈ ಮಬ್ಬು ಹಿಂದೆಂದೂ ಇದಿಲ್ಲ. ದೇಶದ ಹದಿನೇಳು ವರ್ಷದ ಸ್ವಾತಂತ್ರದಲ್ಲಿ, ಮಧ್ಯಮ ತರಗತಿಯ ಜೀವನ ಕೈ ಬಾಯಿಯಾಗಿದ್ದರೂ ದೂರದ ಆಶಯ ಹೊಂಗಿರಣವೊಂದು ಸದಾ ಹೊಳೆದು ಭಾವೀ ಪೀಳಿಗೆಯ ಮನೋಲ್ಲಾಸ ಮಾಡುತ್ತಿತ್ತು. ಆದರೆ ಈ ಮಬ್ಬುಗತ್ತ...