ದೇವಿ ಶಾರದೇ ಮಾತೆ | ಸಕಲ ಭುವನ ಜವ್ಮದಾತೆ || ಪ ||

ಅಂದುಕೊಂಡೆ ಏನೋ ನೀನು | ಆಯಿತೆಲ್ಲ ಜೀವ ರಾಶಿ
ನಿನ್ನ ಪಿಸುನುಡಿಯಲಿ ಹೊಮ್ಮಿ| ವ್ಯಾಪಿಸಿಹುದು ಜಗವಿದೆಲ್ಲ || ೧ ||

ನಾದವೇ ಅನಾದವೇನೊ | ಆದಿಯೇ ಆನಾದಿಯೇನೊ
ವೇದಗಳೇ ಗೆಜ್ಜೆಯಾಗಿ | ಪಾದದಲ್ಲಿ ಉಲಿದವೇನೊ || ೨ ||

ಬ್ರಹ್ಠನೇ ನಿನ್ನೊಳಗಿರುವನೊ | ಬ್ರಹ್ಶನೊಳಗೆ ನೀನು ಇಹೆಯೊ
ಅಮ್ಮ ಗಾಯತ್ರಿ ದೇವಿ | ಅಜ ಹರಿಹರರಾದಿ ಮಾತೆ || ೩ ||

ಮನದ ಸರಸಿಯಲ್ಲಿ ಧ್ಯಾನ | ಕಮಲದಲ್ಲಿ ಕುಳಿತೆ ನೀನು
ಮುನಿ ಕವಿ ಜನ ಕಂಡು ನಿನ್ನ| ಧನ್ಯರಾದರಲ್ಲವೇನು || ೪ ||
*****