ಈ ನಿರಂಕುಶ ಕ್ರೂರ ಕಾಲನನು ಇದಕಿಂತ
ಧೀರನೆಲೆಯಲಿ ನೀನು ಕಾದದಿರುವುದು ಏಕೆ ?
ನನ್ನ ಈ ಬರಡು ಪದ್ಯಕ್ಕೂ ಮಿಗಿಲಾದಂಥ
ಸಾಧನದ ರಕ್ಷಣೆಯ ಪಡೆಯದಿರುವುದು ಏಕೆ ?
ಜೀವನದ ಸುಖಕ್ಷಣದ ಶಿಖರದಲಿ ನಿಂತಿರುವೆ,
ಮದುವೆಯಾಗದ ಎಷ್ಟೊ ಕನ್ನೆಯುದ್ಯಾನಗಳು
ನಿನ್ನ ಚಿತ್ರಕ್ಕಿಂತ ಘನವಾದ ಜೀವಂತ
ಕುಸುಮಗಳೆ ನಿನಗೆ ತಳೆಯಲು ಕಾಯುತಿರುವುವು.
ನಿನ್ನ ಹೊರ ಚೆಲುವು, ನಿನ್ನಂತರಂಗದ ಕಿರಣ
ನಿನ್ನ ಚಿತ್ರದಲಿ, ಪಳಗದ ನನ್ನ ಪೆನ್ನಲ್ಲಿ
ಬಣ್ಣಿಸಬರದ ಹಾಗೆ ಜೀವದೆಳೆಗಳು ನಿನ್ನ
ಜೀವಂತ ನಿಲಿಸುವುವು ಜನರ ಕಣ್ಣುಗಳಲ್ಲಿ.
ಕೊಡುವ ಕ್ರಿಯೆಯಿಂದಲೇ ನಿನ್ನ ನೀ ಪಡೆಯುವುದು
ನೀ ಬರೆವ ಕುಶಲ ಚಿತ್ತದೊಳೆ ನೀನುಳಿಯುವುದು.
*****
ಮೂಲ: ವಿಲಿಯಂ ಷೇಕ್ಸ್ಪಿಯರ್
Sonnet 16
But wherefore do not you a mightier way
Related Post
ಸಣ್ಣ ಕತೆ
-
ವಿರೇಚನೆ
ರವಿವಾರ ರಜವೆಂದು ರಾಮರಾವು ಶನಿವಾರ ರಾತ್ರಿಯೇ ಭೇದಿಗೆ ಔಷಧಿ ತೆಗೆದುಕೊಂಡ, ಕೆಲವು ತಿಂಗಳುಗಳಿಂದ ಊಟಕ್ಕೆ ರುಚಿಯಿಲ್ಲ. ತಿಂದದ್ದು ಜೀರ್ಣವಾಗುವುದಿಲ್ಲ. ರಾತ್ರಿ ನಿದ್ರೆ ಬರುವುದಿಲ್ಲ, ಹೊಟ್ಟೆ ಉಬ್ಬುತ್ತಿದೆ, ದೃಷ್ಟಿ… Read more…
-
ಗುಲ್ಬಾಯಿ
ನಮ್ಮ ಪರಮಮಿತ್ರರಾದ ಗುಂಡೇರಾವ ಇವರ ನೇತ್ರರೋಗದ ಚಿಕಿತ್ಸೆ ಗಾಗಿ ನಾವು ಮೂವರು ಮಿರ್ಜಿಯಲ್ಲಿರುವ ಡಾಕ್ಟರ ವಾಲ್ನೆಸ್ ಇವರ ಔಷಧಾಲಯಕ್ಕೆ ಬಂದಿದ್ದೆವು. ಗುಂಡೇರಾಯರು ಹಗಲಿರುಳು ಔಷಧಾಲಯದಲ್ಲಿಯೇ ಇರಬೇಕಾಗಿರುವದರಿಂದ ಆ… Read more…
-
ಇಬ್ಬರು ಹುಚ್ಚರು
ಸದಾಶಿವನಿಗೆ ಹೀಗೆ ಹುಚ್ಚನಾಗಿ ಅಲೆಯುವ ಅಗತ್ಯ ಖಂಡಿತಕ್ಕೂ ಇರಲಿಲ್ಲ. ಅವನಿಗೊಂದು ಹಿತ್ತಿಲು ಮನೆಯೂ, ಹಿತ್ತಿಲಲ್ಲಿ ಸಾಕಷ್ಟು ಫಲ ಕೊಡುವ ಗೇರು ಮರಗಳೂ ಇದ್ದವು. ದಿನಕ್ಕೆ ಸಾವಿರ ಬೀಡಿ… Read more…
-
ಕನಸು ದಿಟವಾಯಿತು
ಪ್ರಕರಣ ೨ ಸೂರ್ಯೋದಯವಾಯಿತು. ನಿತ್ಯ ಕರ್ಮಗಳನ್ನು ಮುಗಿಸಿಕೊಂಡು ಕಾಫಿ ಸೇವನೆಯನ್ನು ಮಾಡುತ್ತಾ ರಂಗಣ್ಣನು ಹೆಂಡತಿಗೆ ಕನಸಿನ ಸಮಾಚಾರವನ್ನು ತಿಳಿಸಿದನು. ಆಕೆ- ಸರಿ, ಇನ್ನು ಈ ಹುಚ್ಚೊಂದು ನಿಮಗೆ… Read more…
-
ಮಿಂಚಿನ ದೀಪ
ಸಂಜೆ ಮೊಗ್ಗೂಡೆದಿತ್ತು. ಆಕಾಶದ ತುಂಬೆಲ್ಲಾ ಬಣ್ಣದ ಬಾಟಲಿ ಉರುಳಿಸಿದ ಹಾಗೆ ಕೆಂಪು, ನೀಲಿ ಬಣ್ಣ ಚೆಲ್ಲಿ, ಚಳಿಗಾಲದ ಸಂಜೆಯ ಮಬ್ಬಿನ ತೆಳುಪರದೆಯ ‘ಓಡಿನಿ’ ಎಲ್ಲವನ್ನೂ ಸುತ್ತುವಂತೆ ಪಸರಿಸಿಕೊಂಡಿತ್ತು.… Read more…