ಸಂತಸದ ಸಾಗರದಿ ಶರಶೂರೆ ಸರಸಾಟ ನೆಲಕಿಷ್ಟು ಸಿರಿಯು ವಾಸಂತದಲ್ಲಿ ಅಂತವಿಲ್ಲದ ಇಂಥ ಶುಭದ ಸಂತೆಯು ಕೂಡ ಹರಿಯುವದು ಕೊನೆಗೆ ಮಳೆಗಾಲದಲ್ಲಿ ದೊರೆಯ ಭಯ ಅಲ್ಲಿಲ್ಲ ಹಿರಿಯರಂಜಿಕೆಯಿಲ್ಲ ಋತುರಾಜ ವಾಸಂತ ಕಾಲದಲ್ಲಿ ಕೊರತೆಯಿಲ್ಲದ ಸುಖವ ಬಡವಬಲ್ಲಿದರೆಲ್ಲ...

ಹೆಗಲಿಲ್ಲದೆ ಹೊರತ್ತಿದೆ ಆಕಾಶ ಗ್ರಹ ನಕ್ಷತ್ರಗಳನ್ನು ಕೊಡಗಳಿಲ್ಲದೆ ಹೊತ್ತು ತರುತ್ತಿದೆ ಮುಗಿಲು ನೀರನ್ನು ಕಣ್ಣಿಗೆ ಕಾಣದೆ ಪಾಶದ ಕುಣಿಕೆ ಕದ್ದು ಹೋಗುತ್ತಿದೆ ತುಡಿವ ಪ್ರಾಣಗಳನ್ನು *****...

ಮದುವೆಗೆ ಮುಂಚೆ ಉರಿಮೀಸೆ ಉದ್ಯೋಗದಲ್ಲಿ ಅಡ್ಡಮೀಸೆ ಅರ್ಥಾತ್ ಒಂಭತ್ತು ಕಾಲು ಮೀಸೆ ಮದುವೆಯಾದ ಮೇಲೆ ಯಾಕೊ ಇಳಿಮೀಸೆ ಮಕ್ಕಳಾದ ಮೇಲೆ ಯಾಕೊ ಅದೂ ಕೂಡ ಇಲ್ಲ ಜೊತೆಗೆ ತಲೆ ಕೂಡ ಬೋಳು ಬಾಯ್ಬಿಟ್ಟರೆ ಅಲ್ಲಿ ಗೋಳು ಅಂತೂ ಬಾಳು ಹಾಳು – ಇದು ಯಾವ...

ಮಧುಮಾಸದೊಂದು ಹಗಲಿಗೆ ನಿನ್ನ ಹೋಲಿಸಲೆ ? ನಿನ್ನ ಸೌಮ್ಯತೆ ಚೆಲುವು ಅದಕಿಂತಲೂ ಹಿರಿದು. ನಡುಗುವುವು ಸವಿಮೊಗ್ಗುಗಳು ಒಡ್ಡುಗಾಳಿಗೆ, ಬೇಸಿಗೆಯ ಗೇಣಿ ಬಲು ಬೇಗನೇ ಮುಗಿಯುವುದು; ಆಗಸದ ಕಣ್ಣು ಕೆಲವೊಮ್ಮೆ ಧಗೆ ಕಾರುವುದು, ಎಷ್ಟೊ ಸಲ ಅದರ ಹೊಂಬಣ್ಣ ...

ನಿತ್ಯ ಸಾಗುತಲಿಹುದು ಜೀವನ ಭರದಿ ಬೇಕು ಬೇಡಗಳ ತೆಗೆದು ಹಾಕುತಲಿ ಏರಿಳಿತಗಳ ಮೆಲ್ಲನೆ ದಾಟುತಲಿ ನಿತ್ಯವೂ ಉರುಳುತಿಹುದು ಬಾಳ ಬಂಡಿ ನಿಲ್ಲುವುದೆಲ್ಲೋ? ಎಂದೋ ಸಾಗುವ ಬಂಡಿ! ಎಡೆಬಿಡದೆ ಹಿಡಿದ ಕೆಲಸ ಕಾರ್ಯಗಳು ಆದರೂ ತೀರದಾ ನಾನಾ ಬಯಕೆಗಳು ಬದುಕು ...

ನಮ್ಮ ಹುಡುಗಿಗೆ ಬೇಕು ವರ ಇಂಜಿನಿಯರಿಂಗ್, ಮೆಡಿಕಲ್ ಓದಿರುವ ಶ್ರೀಮಂತ ಕುವರ. ಇವರು ಬಿಟ್ಟು ಬೇರೆಯ ವರ ನಮ್ಮ ಪಾಲಿಗೆ ಇಲ್ಲದವನು ನರ. ರೂಪ-ಗುಣ ನೋಡುವುದಿಲ್ಲ ಚರಿತ್ರೆ-ಭೂಗೋಳ ಬೇಕೇ ಇಲ್ಲ ಕೆಲಸವಿದ್ದರೇನು, ಇಲ್ಲದಿದ್ದರೇನು? ಇವನಿಗಿದೆಯಲ್ಲ ವಿ...

ಈ ಮಾಹಾತ್ಮ್ಯೆ ಯಾವ ಪುರಾಣದಲ್ಲಿದೆ? ಎಲ್ಲಿ ಯಾರು ಹೇಳಿದ್ದು? ಯಾರು ಕೇಳಿದ್ದು? ಯಾವ ಇಷ್ಟಾರ್ಥಸಿದ್ದಿಗಾಗಿ? ಎಂದೆಲ್ಲ ಪ್ರಶ್ನೆಗಳನ್ನು ನೀವು ಕೇಳಬಹುದು. ಉತ್ತರ ಹೇಳುತ್ತಾ ಹೋದರೆ ಪೀಠಿಕಾ ಪ್ರಕರಣವೇ ಉದ್ದ ಬೆಳೆದು ಮಹಾತ್ಮ್ಯೆಯನ್ನು ಕೇಳುವಷ್ಟರಲ್ಲಿ ನಿಮಗೆ ಹಾಕಳಿಗೆ ತೊಡಗಿ ತೂಕಡ...

(ಒಂದು ಐತಿಹಾಸಿಕ ಕತೆ) ಹ್ಹಃ ಹ್ಹಃ ಹ್ಹಃ! ಅಹ್ಹಃ ಅಹ್ಹಃ ಅಹ್ಹಃ!! ಗಝುನಿ ಮಹಮೂದನಿಗೆ ಹಿಡಿಸಲಾರದ ನಗೆ. ನಕ್ಕು ನಕ್ಕು ಅವನ ಹೊಟ್ಟೆ ನೋಯುತ್ತಿದ್ದಿತು. ಆದರೂ ಅವನ ಆ ತಿರಸ್ಕಾರದ ನಗೆ ತಡೆಯಲಾರದಾಯಿತು. ಅದೊಂದು ಸುಪ್ರಸಿದ್ದವಾದ ಸೋಮನಾಥ ದೇವಾಲಯ. ಭಾರತದ ವೈಭವವನ್ನು ವಿಶ್ವಕ್ಕೆ ತೋ...

ಸರಲಾಕ್ಷ ಹುಲಿಮೀಸೆಯು ಮನೆಯಲ್ಲಿ ಬಂದಿರಲಾರಂಭಿಸಿದಂದಿನಿಂದ ತಾನು ತೊಂದರೆಗೊಂಡು ಬೇಸತ್ತು ಹೋಗಿರುವೆನೆಂದು ವಸತಿಗೃಹದ ಸ್ವಾಮಿನಿಯಾದ ಲೀಲಾಬಾಯಿಯು ದೂರಿಕೊಳ್ಳುತ್ತಿದ್ದಳು. “ಕೆಟ್ಟ ಮೋರೆಯವರೂ ಅಸಭ್ಯರೂ ಸುಟ್ಟಮನೆಯವರೂ ಸುಡದ ಮನೆಯವರೂ ತೆರವಿಲ್ಲದೆ ನನ್ನ ಮನೆಗೆ ಬರುತ್ತಿರುವ...

ಅವಳು ಅಡುಗೆ ಮನೆಯ ಕಪ್ಪಾದ ಡಬ್ಬಿಗಳನ್ನು, ಉಳಿದ ಸಾಮಾನುಗಳನ್ನು ತೆಗೆದು ತೊಳೆಯಲು ಆ ಮಣ್ಣಿನ ಮಾಡು ಹಂಚಿನ ಮನೆಯ ಮುಂದಿನ ತೆಂಗಿನಕಟ್ಟೆಯಲ್ಲಿ ಹಾಕಿದ ಅಗಲ ಹಾಸುಗಲ್ಲ ಮೇಲೆ ಕೈಲಿ ಹಿಡಿದಷ್ಟು ತಂದು ತಂದು ಇಡುತ್ತಿದ್ದಳು. ಏಳರ ಬಾಲೆ ಮಗಳು ಕೂಡ ತನ್ನ ಕೈಗೆ ಎತ್ತುವಂತಹ ಡಬ್ಬಿಗಳನ್ನು...

ಆಹಾ! ಏನು ಕಡಲು! ಅ೦ತವಿಲ್ಲದ ಕಡಲು!! ಅಪಾರವಾಗಿಹ ಕಡಲು! ದಿಟ್ಟಿ ತಾಗದ ಕಡಲು!! ಆ ಕಡಲ ಒಡಲಲ್ಲಿ ಏನು ತೆರೆ! ಏನು ನೊರೆ!! ಏನು ಅಂದ! ಎನಿತು ಚಂದ! ಬಿಚ್ಚಿ ಮುಚ್ಚುವ ಅದರ ನಯವಾದ ತುಟಿಗಳು ಹೊನ್ನರವಿ ಎಸೆದಿರುವ ಚಿನ್ನದಲುಗಳೇಸು! ಬಣ್ಣ ಬಣ್ಣಗಳುಗುವ ಅಚ್ಚು ಪಡಿಯಚ್ಚುಗಳ ಹೊಳಪಿನ ಏನ...

ಸರ್, ಗುಡ್ ಮಾರ್ನಿಂಗ್, ಮೇ ಐ ಕಮೀನ್ ಸರ್ – ನಿತ್ಯ ಆಫೀಸಿನ ಅವಧಿ ಪ್ರಾರಂಭವಾಗುತ್ತಲೇ ಹಿಂದಿನ ದಿನ ರೆಡಿ ಮಾಡಿದ ಹತ್ತಾರು ಕಾಗದ ಪತ್ರಗಳಿಗೆ ಸಹಿ ಪಡೆಯಲು, ಇಲ್ಲವೇ ಹಿಂದಿನ ದಿನದ ಎಲ್ಲ ಫೈಲುಗಳ ಚೆಕ್ ಮಾಡಿಸಲು, ಕೈಯಲ್ಲಿ ಫೈಲುಗಳ ಕಟ್ಟು ಹಿಡಿದು ಬಾಗಿಲ ಮರೆಯಲ್ಲಿ ನಿಂತು ...