ಯಾರಿವರು ಭಯೋತ್ಪಾದಕರು ಎಲ್ಲಿಂದ ಬಂದವರು? ಯಾರ ಹೊಟ್ಟೆಯಲ್ಲಿ ಬಿತ್ತಿದ ವಿಷದ ಬೀಜಗಳು? ಕ್ಲೋನಿಂಗ್‌ನಿಂದ ಹುಟ್ಟಿರ ಬಹುದೇ? ಇಲ್ಲವಾದರೆ ಹೇಗವರು ಒಂದೇ ರೀತಿ? ಹೃದಯ ಮನಸ್ಸು ಇಲ್ಲದವರು ಮತಾಂಧರಾಗಿ ಮಾನವೀಯತೆಯ ಮರೆತವರು. ಭಯೋತ್ಪಾದಕರು! ಎಲ್ಲೆಲ...

ವಯಸ್ಸಾಗದು ನಿನಗೆ ಎಂದಿಗೂ ಪ್ರಿಯಗೆಳೆಯ ಮೊದಲು ಕಂಡಷ್ಟೆ ಸವಿಯಾಗಿರುವೆ ಇಂದಿಗೂ. ಮೂರು ಚಳಿಗಾಲಗಳು ಮೂರು ಮಧುಮಾಸಗಳ ಹೆಮ್ಮೆ ಮುಂದಿವೆ ಸುರಿದು ಮರದೆಲ್ಲ ಎಲೆಗಳೂ; ಹಾಗೇ ಮೂರು ವಸಂತ ಹಳದಿ ಬಣ್ಣಕೆ ಬೆಳೆದು ಚೈತ್ರ ಪರಿಮಳವೆಲ್ಲ ಗ್ರೀಷ್ಮ ಧಗೆಯಲಿ...

ಕನ್ನಡದ ಸಿರಿದೇವಿ ಅನುಭಾವಿ ಮಾದೇವಿ ಕನ್ನಡದ ದುಸ್ಥಿತಿಯ ಕಂಡು ಕಳವಳಗೊಂಡು ಮೈಮರೆದು ಮಲಗಿರುವ ಮಹಿಳೆಯರ, ವಿಸ್ಮರಣ- ಸಾಗರದಿ ಮುಳುಮುಳುಗಿ ತೊಳಲುತಿಹ ಪುರುಷರನ್ನು ಎಚ್ಚರಿಸಿ ಮತ್ತೆ ಕನ್ನಡ ತಾಯ ಐಸಿರಿಯ ಪವಣಿಸಲು ಹೊಂದಿಸಲು ತಲೆಯೆತ್ತಿ ಮೆರೆಯಿ...

ಇದ್ದಕ್ಕಿದ್ದಂತೆ ರಾತ್ರಿಯೆಲ್ಲಾ ಧೋ ಎಂದು ಸುರಿದ ಮಳೆಗೆ ಬೆಳಗಿಗೇ ಅರಳಿ ನಿಂತಿದೆ ಈ ಮಳೆ ಲಿಲ್ಲಿ ಹೂವು! ಮೊಗ್ಗಿಲ್ಲ, ಮೊಗ್ಗಿನ ಸುಳಿವಿರಲಿಲ್ಲ ಗಿಡದ ಗರ್ಭದ ಯಾವ ಮೂಲೆಯಲ್ಲಡಗಿತ್ತು ಈ ಹೂವಿನ ಮಿಂಚು? ಮಳೆಗೂ, ಈ ಮಳೆ ಲಿಲ್ಲಿಗೂ ಯಾವ ಹೊಕ್ಕುಳು...

ಶಿವನೇ ನೆನೆಯೋ ಶಿವನೇ ನೆನೆಯೋ ಈ ಊರಾ ರಾಮದೇವರ ನೆನೆಯೋ ಈ ಊರ ಹಿತ ಕಾಯೋರ ನೆನೆಯೋ ಕಾಲಿಗೆ ಕಿರುಗೆಜ್ಜೆ ಕಟ್ಟಿ ಹೂವಿನಂತಾ ತೇರಕಟ್ಟಿ ತೇರೋ ತೇರೋ ಹೂವಿನ ತೇರೋ || ೧ || ಬಾಗಿಲಲೆ ಬಲಿಯಾರಿ ದಂಡು ಮೇನೆ ಗುರಗುಂಜೀ ಶೆಂಡೂ ನಾರೀ ಬಂದಾನೇ ನಲ್ಲಾ ಬ...

ಕೂಡಿ ಬಾಳಿದೊಡೆಲ್ಲ ತಲೆಮಾರೊಂದಾದೊಡದು ಕುಟುಂಬ ಕೂಡಿ ಬೆಳೆದೊಡೆಲ್ಲ ಗಿಡಮರಬಳ್ಳಿಗಳೆಡೆಗದುವೆ ಕೃಷಿಯು ಕೂಡಿ ಬಾಳಲು ಕೂಡಿ ಬೆಳೆಯಲು ಮಮತೆಯಂತರ್‍ಜಲ ಕುಡಿಯ ಬೇಕಲ್ಲದಿದೇನಂಗಡಿ ಸರಕಿನವಸರವು ಕಾಡಿನೊಳೆಲ್ಲ ಕೂಡಿ ಬಾಳ್ವಂತಿರದೆ ಅದೆತ್ತಣಂತರ್‍ಜಲವು...

ರಂಗು ರಂಗಿನ ನೂರು ಗಂಧದ ಆತ್ಮ ಹೂಗಳು ಅರಳಿವೆ ಚಂಗುಲಾಬಿಯು ದುಂಡುಮಲ್ಲಿಗೆ ಕೆಂಡಸಂಪಿಗೆ ನಗುತಿವೆ ಯುಗದ ಮೇಲೆ ಯುಗವು ಬಂದಿತು ಹೆಗಲು ಏರಿತು ಕಾಲವು ಕಲ್ಪ ಕಾಲಕೆ ಪುಷ್ಪತಲ್ಪವು ತೂಗುಮಂಚವ ತೂಗಿತು ಗಂಧ ಪರಿಮಳ ಪುಷ್ಪ ಅರಳಿವೆ ಗಂಧವಿಲ್ಲದ ಹೂ ಇವ...

ವರ್ಷಾ ಬಂತು ಹರುಷ ತಂತು ಎಲ್ಲರೆದೆಯಲಿ ಹಸಿರು ತುಂಬಿ ಉಸಿರು ಬಂತು ಭೂಮಿಯ ಮೊಗದಲಿ ಹನಿ ಹನಿ ಮುತ್ತಾಗಿ ಚೆಲ್ಲಿ ಧರೆಗಿಳಿದು ಹಾರವಾಗಿ ಕಡಲ ಕೊರಳ ಬಳಸಲೆಂದು ವಧುವಂತೆ ನಾಚುತ ಬಂತು ಹೊಳೆ ಹಳ್ಳ ಕೆರೆ ತುಂಬಿ ತುಳುಕಿ ಬೆಟ್ಟ ಬಯಲು ಜಲಪಾತ ಬಳುಕಿ ಬ...

ಬೆಳಿಗ್ಗೆಯಿಂದ ಕತ್ತಲೆಯವರೆಗೂ ಬಸ್ ಸ್ಟಾಂಡಿನಲ್ಲಿ ಬಸ್ಸುಗಳಿಗೆ ಹತ್ತಿ ಇಳಿದುಕೊಂಡು ಎಷ್ಟು ಗೋಗರೆದು ಬಿಕ್ಷೆ ಬೇಡಿದರೂ ಆ ಹುಡುಗನಿಗೆ ಮಧ್ಯಾಹ್ನದ ಊಟ ಮಾಡುವಷ್ಟು ಹಣ ಸಂಗ್ರಹವಾಗುತ್ತಿರಲಿಲ್ಲ. ಮಧ್ಯಾಹ್ನ ಬಿಸ್ಕಿಟು ಮತ್ತು ನಲ್ಲಿ ನೀರು ಕುಡಿದು ಹಸಿವು ತಣಿಸಿದರೂ ರಾತ್ರಿಯ ಊಟಕ್ಕ...

ಮಧುಮಾಸದ ಮೊದಲ ದಿನಗಳು. ಎಲ್ಲಿ ನೋಡಿದರೂ ತಾಯಿಯ ವಿವಿಧ ವಿಲಾಸ……. ಪುಷ್ಪಶೃಂಗಾರ!! ವರ್‍ಣವೈಖರಿ!! ಮಧುಪಾನದಿಂದ ಮೈಮರೆತು ಮೊರೆಯುತಿಹೆ ಉನ್ಮತ್ತ ಭೃಂಗ ಸಂಕುಲದ ಎಣೆಯಿಲ್ಲದ ಪ್ರಣಯ ಕೇಳಿ! ಸಹಸ್ರಸಹಸ್ರ ಖಗಕಂಠಗಳಿಂದೆ ದಿಕ್ಕುದಿಕ್ಕಿಗೆ ಪಸರಿಸುತಿಹ ಸುಮಧುರ ಗಾನ ತರಂಗ...

ಈ ಮಾಹಾತ್ಮ್ಯೆ ಯಾವ ಪುರಾಣದಲ್ಲಿದೆ? ಎಲ್ಲಿ ಯಾರು ಹೇಳಿದ್ದು? ಯಾರು ಕೇಳಿದ್ದು? ಯಾವ ಇಷ್ಟಾರ್ಥಸಿದ್ದಿಗಾಗಿ? ಎಂದೆಲ್ಲ ಪ್ರಶ್ನೆಗಳನ್ನು ನೀವು ಕೇಳಬಹುದು. ಉತ್ತರ ಹೇಳುತ್ತಾ ಹೋದರೆ ಪೀಠಿಕಾ ಪ್ರಕರಣವೇ ಉದ್ದ ಬೆಳೆದು ಮಹಾತ್ಮ್ಯೆಯನ್ನು ಕೇಳುವಷ್ಟರಲ್ಲಿ ನಿಮಗೆ ಹಾಕಳಿಗೆ ತೊಡಗಿ ತೂಕಡ...

(ಒಂದು ಐತಿಹಾಸಿಕ ಕತೆ) ಹ್ಹಃ ಹ್ಹಃ ಹ್ಹಃ! ಅಹ್ಹಃ ಅಹ್ಹಃ ಅಹ್ಹಃ!! ಗಝುನಿ ಮಹಮೂದನಿಗೆ ಹಿಡಿಸಲಾರದ ನಗೆ. ನಕ್ಕು ನಕ್ಕು ಅವನ ಹೊಟ್ಟೆ ನೋಯುತ್ತಿದ್ದಿತು. ಆದರೂ ಅವನ ಆ ತಿರಸ್ಕಾರದ ನಗೆ ತಡೆಯಲಾರದಾಯಿತು. ಅದೊಂದು ಸುಪ್ರಸಿದ್ದವಾದ ಸೋಮನಾಥ ದೇವಾಲಯ. ಭಾರತದ ವೈಭವವನ್ನು ವಿಶ್ವಕ್ಕೆ ತೋ...

ಸರಲಾಕ್ಷ ಹುಲಿಮೀಸೆಯು ಮನೆಯಲ್ಲಿ ಬಂದಿರಲಾರಂಭಿಸಿದಂದಿನಿಂದ ತಾನು ತೊಂದರೆಗೊಂಡು ಬೇಸತ್ತು ಹೋಗಿರುವೆನೆಂದು ವಸತಿಗೃಹದ ಸ್ವಾಮಿನಿಯಾದ ಲೀಲಾಬಾಯಿಯು ದೂರಿಕೊಳ್ಳುತ್ತಿದ್ದಳು. “ಕೆಟ್ಟ ಮೋರೆಯವರೂ ಅಸಭ್ಯರೂ ಸುಟ್ಟಮನೆಯವರೂ ಸುಡದ ಮನೆಯವರೂ ತೆರವಿಲ್ಲದೆ ನನ್ನ ಮನೆಗೆ ಬರುತ್ತಿರುವ...

ಅವಳು ಅಡುಗೆ ಮನೆಯ ಕಪ್ಪಾದ ಡಬ್ಬಿಗಳನ್ನು, ಉಳಿದ ಸಾಮಾನುಗಳನ್ನು ತೆಗೆದು ತೊಳೆಯಲು ಆ ಮಣ್ಣಿನ ಮಾಡು ಹಂಚಿನ ಮನೆಯ ಮುಂದಿನ ತೆಂಗಿನಕಟ್ಟೆಯಲ್ಲಿ ಹಾಕಿದ ಅಗಲ ಹಾಸುಗಲ್ಲ ಮೇಲೆ ಕೈಲಿ ಹಿಡಿದಷ್ಟು ತಂದು ತಂದು ಇಡುತ್ತಿದ್ದಳು. ಏಳರ ಬಾಲೆ ಮಗಳು ಕೂಡ ತನ್ನ ಕೈಗೆ ಎತ್ತುವಂತಹ ಡಬ್ಬಿಗಳನ್ನು...