ಭಯೋತ್ಪಾದಕರು

ಯಾರಿವರು ಭಯೋತ್ಪಾದಕರು
ಎಲ್ಲಿಂದ ಬಂದವರು?
ಯಾರ ಹೊಟ್ಟೆಯಲ್ಲಿ ಬಿತ್ತಿದ ವಿಷದ ಬೀಜಗಳು?
ಕ್ಲೋನಿಂಗ್‌ನಿಂದ ಹುಟ್ಟಿರ ಬಹುದೇ?
ಇಲ್ಲವಾದರೆ ಹೇಗವರು ಒಂದೇ ರೀತಿ?
ಹೃದಯ ಮನಸ್ಸು ಇಲ್ಲದವರು
ಮತಾಂಧರಾಗಿ ಮಾನವೀಯತೆಯ ಮರೆತವರು.
ಭಯೋತ್ಪಾದಕರು!
ಎಲ್ಲೆಲ್ಲೂ ಭಯೋತ್ಪಾದಕರು
ಬೀದಿ ಬೀದಿಗಳಲ್ಲಿ, ನಗರನಗರಗಳಲ್ಲಿ
ಬಸ್ಸಲ್ಲಿ, ರೈಲಲ್ಲಿ, ವಿಮಾನದಲ್ಲಿ
ಎಲ್ಲೆಂದರಲ್ಲಿ ರಕ್ತಪಿಪಾಸುಗಳು,
ಆತ್ಮಾಹುತಿಗೆ ಸಿದ್ಧರಾದವರು.
ಕಾಶ್ಮೀರದಲ್ಲಿ ಮಾರಣಹೋಮ ನಡೆದಾಗ,
ಮುಂಬಯಿಯಲ್ಲಿ ಸರಣಿ ಬಾಂಬುಗಳು ಸಿಡಿದಾಗ
ನೇಪಾಲದಲ್ಲಿ ವಿಮಾನ ಅಪಹರಣವಾದಾಗ
ತಾಲಿಬಾನ್ ನೆಲದಲ್ಲಿ ಪ್ರಯಾಣಿಕರ ಪಣಕ್ಕೊಡ್ಡಿದಾಗ,
ಜೈಲಲ್ಲಿದ್ದ ಭಯೋತ್ಪಾದಕರ ಬಿಡಬೇಕಾದಾಗ
ಯಾರನ್ನೂ ಧೃತಿಗೆಡಿಸಲಿಲ್ಲ, ಅವರ ಇರವು.
ಜಗತ್ತು ಕಣ್ಣು ಮುಚ್ಚಿತ್ತು.
ಕಂಬಿಯ ಹಿಂದಿದ್ದ ಭಯೋತ್ಪಾದಕರು ಲೀನವಾದರು
ವಿಶ್ವ ಜನಸ್ತೋಮದಲಿ ಜಯಭೇರಿ ಹೊಡೆಯುತ-
ವಿದ್ವಂಸಕ ಕೃತ್ಯಗಳ ಮೆರೆಯಿಸುತ!
ಮುಂದೆಯೊಂದು ದಿನ
ಬೆಳೆಸಿದವರದ್ದೇ ಕೈಕಚ್ಚಿ ಅವರದೆಗೇ ಗುಂಡಿಟ್ಟಾಗ
ಉರುಳಿದವು ಗಗನ ಚುಂಬಿಗಳು
ಚೆಲ್ಲಾಡಿದವು ಜೀವ ರಾಶಿಗಳು.
ಪ್ರತಿಭಾವಂತರನೇಕರು ಆದರಲ್ಲಿ ಜೀವಂತ ಸಮಾಧಿ!
ಯಾರ ತಪ್ಪಿಗೆ ಯಾರಿಗೆ ಶಿಕ್ಷೆ?
ಏನಾಗಿದೆ ಮನುಷ್ಯರಾಗಿ ಹುಟ್ಟಿದವರಿಗೆ
ಮಾನವೀಯತೆಯ ಮರೆತು ರಾಕ್ಷಸರಾಗಿ
ಬದಲಾದರು ಹೇಗೆ?
ಹುಟ್ಟುವಾಗ ಜಾತಿ ಇಲ್ಲ ಮತ ಇಲ್ಲ
ಬೆಳೆದಂತೆ ಮತಾಂಧತೆ
ಒಬ್ಬರನ್ನೊಬ್ಬರು ಕೊಚ್ಚಿಹಾಕುವಷ್ಟು,
ಸುಟ್ಟುಬಿಡುವಷ್ಟು,
ಪುಡಿಪುಡಿಮಾಡಿ ಬಿಸಾಕುವಷ್ಟು ಕೆಟ್ಟ ದ್ವೇಷ.
ಇದಕ್ಕೆಲ್ಲಿದೆ ಕೊನೆ?
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ವಯಸ್ಸಾಗದು ನಿನಗೆ ಎಂದಿಗೂ ಪ್ರಿಯಗೆಳೆಯ
Next post ಗಂಟು

ಸಣ್ಣ ಕತೆ

 • ಆ ರಾತ್ರಿ

  ಆ ದಿನ ಮಧ್ಯಾಹ್ನ ವಸಂತನ ಮನೆಯಲ್ಲಿ ಬಹಳ ಗಡಿಬಿಡಿ! ವಸಂತ ತಾನು ಕೂಡುವ ಕೋಣೆಯನ್ನು ಅತ್ಯಂತ ಶಿಸ್ತಿನಿಂದ ಇಡುವ ಕಾರ್ಯದಲ್ಲಿ ಮಗ್ನನಾಗಿದ್ದನು. ಗಡಿಯಾರದ ಮುಳ್ಳುಗಳು ಎರಡು ಗಂಟೆಯಾದುದನ್ನು… Read more…

 • ನಿಂಗನ ನಂಬಿಗೆ

  ಹೊಸಳ್ಳಿ ನೋಡುವದಕ್ಕೆ ಸಣ್ಣದಾದರೂ ಕಣ್ಣಿಗೆ ಅಂದವಾಗಿದೆ. ಬೆಳವಲ ನಾಡಿನಲ್ಲಿ ಬರಿ ಬಯಲೆಂದು ಟೀಕೆ ಮಾಡುವವರಿಗೆ ಹೊಸಳ್ಳಿ ಕೂಗಿ ಹೇಳುತ್ತಿದೆ - ತಾನು ಮಲೆನಾಡ ಮಗಳೆಂದು ! ಊರ… Read more…

 • ಅಪರೂಪದ ಬಾಂಧವ್ಯ

  ಹೆತ್ತ ತಾಯಿ ಬಿಟ್ಟುಹೋದ ಎರಡು ಮುಂಗಸಿ ಮರಿಗಳು ಅನಾಥವಾಗಿ ಚೀರಾಡುತ್ತಿದ್ದುದು, ಮನೆಯ ಮಕ್ಕಳ ಕಣ್ಣಿಗೆ ಬಿದ್ದಿತು. "ಅಪ್ಪಾ ಇಲ್ಲಿ ನೋಡು, ಮುಂಗುಸಿ ಮರಿ ಅಳುತ್ತಾ ಇವೆ. ಅದಕ್ಕೆ… Read more…

 • ಇರುವುದೆಲ್ಲವ ಬಿಟ್ಟು

  ನಿಂತ ರೈಲು ಬೋಗಿಯೊಳಗಿಂದ ನನ್ನ ದೃಷ್ಟಿ ಹೊರಗಿನ ನಿಲ್ದಾಣವನ್ನು ವೀಕ್ಷಿಸುತ್ತಿತ್ತೇ ಹೊರತು ನನ್ನ ಮನಸ್ಸು ಮಾತ್ರ ನಾಗಾಲೋಟದಿಂದ ಓಡುತ್ತಿತ್ತು. ಒಂದು ರೀತಿಯಲ್ಲಿ ಆಲೋಚನೆಗಳು ನನ್ನ ಗೆಳೆಯ ಎಂದೇ… Read more…

 • ದೇವರು

  ನನ್ನ ದೇವರಿಗೆ, ಬಹಳ ದಿನಗಳ ನಂತರ ನಿಮಗೆ ಕಾಗದ ಬರೆಯುತ್ತಿದ್ದೇನೆ. ಏಕೆಂದರೆ ನೀವು ಬರೆದ ಕಾಗದಕ್ಕೆ ಉತ್ತರ ಕೇಳಿದ್ದೀರಿ. ನಾನೀಗ ಉತ್ತರ ಬರೆಯಲೇಬೇಕು ಬರೆಯುತ್ತಿದ್ದೇನೆ. "ಪತಿಯೇ ದೇವರು"… Read more…