ಗೊತ್ತಿರುವುದು ನನಗೆ ಪಂಚೆಯ ಶ್ರೀರಾಮ ಹುಟ್ಟಿರುವುದು ಈಗ ಚೆಡ್ಡಿಯ ಶ್ರೀರಾಮ || ರಾಮ ಹುಟ್ಟಿದ ಅಂದು ತಾಯಿಯ ಗರ್‍ಭದಲಿ ಅವನೆ ಹುಟ್ಟಿದ ಇಂದು ಮಸೀದಿ ಮೂಲೆಯಲಿ ಅಂದು ರಾಮನ ಜನನ ಹಗಲು ಹೊತ್ತಿನಲ್ಲಿ ಇಂದು ಅವನ ಜನನ ತೂತು ಕತ್ತಲಲ್ಲಿ ಅಂದು ಬಿಲ್ಲ...

ಇದು ಎಲ್ಲರಿಗೂ ಸಾಧ್ಯ ವಿಲ್ಲ ಬಿಡಿ, ಹೀಗೆ ಸುಮ್ಮನೆ ನೋಡಿ ನೋಡಿ ಹೋಗುವುದು ಆದರೂ ಮೋಡಿ ಹಾಕುವುದು ಏನೂ ಸಿಗುವುದಿಲ್ಲವೆಂದು ತಿಳಿದೂ ಇಂಥವರಿಗೆ ಅಂಜಿ ಬಾಳುವು ದಿದೆಯಲ್ಲಾ ಅದರಲ್ಲೊಂಥರಾ ರೋಮಾಂಚನ, ಒಂಥರಾ ಧಿಗಿಲು ಆದರೂ ಬಾಳಲ್ಲಿ ಇಂಥವರ ಸ್ಥಾನ ...

ತಂಗಿ… ಷೇರುಪೇಟೆ ಕುಸಿಯುತಿದೆ ಮಾರುಕಟ್ಟೆ ನಡುಗುತಿದೆ… ಕರಡಿಯೊಂದು ಕುಣಿಯುತ್ತಿದೆ ಗೂಳಿಯೊಂದು ತಿವಿಯುತ್ತಿದೆ ಗುಳ್ಳೆಯೊಂದು ಒಡೆಯುತಿದೆ ಕೊಳ್ಳೆಯೊಂದು ಕರಗುತ್ತಿದೆ… ಅಕ್ಕ… ಷೇರುಪೇಟೆಯೇ? ಗೊತ್ತಿಲ್ಲ ಕಣೆ! ಇಲ್ಲ...

ಯಾವ ಜನುಮದ ಪುಣ್ಯವೋ ಎನ್ನ ಮನದುಂಬಿ ಬಾಳ ಸಂಗಾತಿಯಾಗಿ ನೀ ಬಂದಾಗಿನ ಸಂತಸದ ಕ್ಷಣದ ಹಾಡು ಹಾಡಲೇ ನಿನ್ನ ಕಣ್ಣಿನ ಕುಡಿಮಿಂಚು ಕೋಲ್ಮಿಂಚು ಎನ್ನೆದೆಯ ನಾಟಿ ಮೀಟಿ ಪ್ರೀತಿ ಬೀಜವ ಬಿತ್ತಿ ಹೃದಯದಲಿ ಮೊಳಕೆಯೊಡೆದ ಹಾಡು ಹಾಡಲೇ ಮೋಹಕ ನಗೆಯ ಹಾಲು ಹೊಳೆ...

ಕಲಿಯಲಿಲ್ಲ ನಾವು ಕೃಷ್ಣ, ಕ್ರೈಸ್ತ, ಪೈಗಂಬರ, ಬುದ್ಧ, ಮಹಾವೀರ, ಸಂತರೆಲ್ ಬೋಧಿಸಿರುವ ಶಾಂತಿ ಮಂತ್ರ, ಕಲಿಯಲಿಲ್ಲ ನಾವು ಗೀತೆ ಬೈಬಲ್ ಕುರಾನಿನಿಂದ ಒಬ್ಬರನ್ನೊಬ್ಬರು ಪ್ರೀತಿಸುವ ಹೃದಯವಂತಿಕೆ, ವಿಶ್ವಶಾಂತಿಯ ಕಾಯ್ವ, ಧೀಮಂತಿಕೆ! ಮಾರಿಕೊಂಡೆವು ...

ಅಂತರಂಗದ ನರಕ ಕುದಿಸಿ ಭಟ್ಟಿಯ ಇಳಿಸಿ ಕೊಟ್ಟ ಮೋಹಿನಿಯ ಕಂಬನಿಯ ಅದೆಷ್ಟು ಕುಡಿದೆ! ಭರವಸೆಗೆ ಶಂಕೆಯ ಶಂಕೆಗಾಸೆಯ ಬೆರಸಿ, ಗೆದ್ದೆ ಇನ್ನೇನೆಂಬ ಗಳಿಗೆಯಲ್ಲೇ ಬಿದ್ದೆ. ಕೊಳಕು ತಪ್ಪುಗಳಲ್ಲಿ ಬಳಸಿಯೂ ನಾನೆಂಥ ಅದೃಷ್ಟವಂತ ಎನ್ನುವ ಹಿಗ್ಗಿನಲ್ಲಿದ್ದೆ...

ಮೋಡದೊಳಗೆ ದೇವದೇವಯಾನಿಯರ ಮೆಲ್ಲನುಸಿರೋ ಝಲ್ಲೆನ್ನುವ ಮಾತೋ ಸುತ್ತಾಟ ಜಗ್ಗಾಟ ಕೊಸರಾಟ ದಿಕ್ಕು ದಿಕ್ಕಿನೆದೆಯಾಳದೊಳಗೆ ದಾಹ ಇದು ಮದೋನ್ಮತ್ತ ದೇವಸ್ಪರ್ಷ. ಸಳಸಳನೆ ಮಳೆಬೀಜ ಸುರಿಸಿ ಬೆವರೊಡೆಯುವ ಘಳಿಗೆ ನಾಭಿಯುಸಿರು ನಾಸಿಕದೆಡೆಗೆ ಸೆಳೆತ ಜೀವಕುಡ...

ಬೆಳಿಗ್ಗೆಯಿಂದ ಕತ್ತಲೆಯವರೆಗೂ ಬಸ್ ಸ್ಟಾಂಡಿನಲ್ಲಿ ಬಸ್ಸುಗಳಿಗೆ ಹತ್ತಿ ಇಳಿದುಕೊಂಡು ಎಷ್ಟು ಗೋಗರೆದು ಬಿಕ್ಷೆ ಬೇಡಿದರೂ ಆ ಹುಡುಗನಿಗೆ ಮಧ್ಯಾಹ್ನದ ಊಟ ಮಾಡುವಷ್ಟು ಹಣ ಸಂಗ್ರಹವಾಗುತ್ತಿರಲಿಲ್ಲ. ಮಧ್ಯಾಹ್ನ ಬಿಸ್ಕಿಟು ಮತ್ತು ನಲ್ಲಿ ನೀರು ಕುಡಿದು ಹಸಿವು ತಣಿಸಿದರೂ ರಾತ್ರಿಯ ಊಟಕ್ಕ...

ಮಧುಮಾಸದ ಮೊದಲ ದಿನಗಳು. ಎಲ್ಲಿ ನೋಡಿದರೂ ತಾಯಿಯ ವಿವಿಧ ವಿಲಾಸ……. ಪುಷ್ಪಶೃಂಗಾರ!! ವರ್‍ಣವೈಖರಿ!! ಮಧುಪಾನದಿಂದ ಮೈಮರೆತು ಮೊರೆಯುತಿಹೆ ಉನ್ಮತ್ತ ಭೃಂಗ ಸಂಕುಲದ ಎಣೆಯಿಲ್ಲದ ಪ್ರಣಯ ಕೇಳಿ! ಸಹಸ್ರಸಹಸ್ರ ಖಗಕಂಠಗಳಿಂದೆ ದಿಕ್ಕುದಿಕ್ಕಿಗೆ ಪಸರಿಸುತಿಹ ಸುಮಧುರ ಗಾನ ತರಂಗ...

ಈ ಮಾಹಾತ್ಮ್ಯೆ ಯಾವ ಪುರಾಣದಲ್ಲಿದೆ? ಎಲ್ಲಿ ಯಾರು ಹೇಳಿದ್ದು? ಯಾರು ಕೇಳಿದ್ದು? ಯಾವ ಇಷ್ಟಾರ್ಥಸಿದ್ದಿಗಾಗಿ? ಎಂದೆಲ್ಲ ಪ್ರಶ್ನೆಗಳನ್ನು ನೀವು ಕೇಳಬಹುದು. ಉತ್ತರ ಹೇಳುತ್ತಾ ಹೋದರೆ ಪೀಠಿಕಾ ಪ್ರಕರಣವೇ ಉದ್ದ ಬೆಳೆದು ಮಹಾತ್ಮ್ಯೆಯನ್ನು ಕೇಳುವಷ್ಟರಲ್ಲಿ ನಿಮಗೆ ಹಾಕಳಿಗೆ ತೊಡಗಿ ತೂಕಡ...

(ಒಂದು ಐತಿಹಾಸಿಕ ಕತೆ) ಹ್ಹಃ ಹ್ಹಃ ಹ್ಹಃ! ಅಹ್ಹಃ ಅಹ್ಹಃ ಅಹ್ಹಃ!! ಗಝುನಿ ಮಹಮೂದನಿಗೆ ಹಿಡಿಸಲಾರದ ನಗೆ. ನಕ್ಕು ನಕ್ಕು ಅವನ ಹೊಟ್ಟೆ ನೋಯುತ್ತಿದ್ದಿತು. ಆದರೂ ಅವನ ಆ ತಿರಸ್ಕಾರದ ನಗೆ ತಡೆಯಲಾರದಾಯಿತು. ಅದೊಂದು ಸುಪ್ರಸಿದ್ದವಾದ ಸೋಮನಾಥ ದೇವಾಲಯ. ಭಾರತದ ವೈಭವವನ್ನು ವಿಶ್ವಕ್ಕೆ ತೋ...

ಸರಲಾಕ್ಷ ಹುಲಿಮೀಸೆಯು ಮನೆಯಲ್ಲಿ ಬಂದಿರಲಾರಂಭಿಸಿದಂದಿನಿಂದ ತಾನು ತೊಂದರೆಗೊಂಡು ಬೇಸತ್ತು ಹೋಗಿರುವೆನೆಂದು ವಸತಿಗೃಹದ ಸ್ವಾಮಿನಿಯಾದ ಲೀಲಾಬಾಯಿಯು ದೂರಿಕೊಳ್ಳುತ್ತಿದ್ದಳು. “ಕೆಟ್ಟ ಮೋರೆಯವರೂ ಅಸಭ್ಯರೂ ಸುಟ್ಟಮನೆಯವರೂ ಸುಡದ ಮನೆಯವರೂ ತೆರವಿಲ್ಲದೆ ನನ್ನ ಮನೆಗೆ ಬರುತ್ತಿರುವ...

ಅವಳು ಅಡುಗೆ ಮನೆಯ ಕಪ್ಪಾದ ಡಬ್ಬಿಗಳನ್ನು, ಉಳಿದ ಸಾಮಾನುಗಳನ್ನು ತೆಗೆದು ತೊಳೆಯಲು ಆ ಮಣ್ಣಿನ ಮಾಡು ಹಂಚಿನ ಮನೆಯ ಮುಂದಿನ ತೆಂಗಿನಕಟ್ಟೆಯಲ್ಲಿ ಹಾಕಿದ ಅಗಲ ಹಾಸುಗಲ್ಲ ಮೇಲೆ ಕೈಲಿ ಹಿಡಿದಷ್ಟು ತಂದು ತಂದು ಇಡುತ್ತಿದ್ದಳು. ಏಳರ ಬಾಲೆ ಮಗಳು ಕೂಡ ತನ್ನ ಕೈಗೆ ಎತ್ತುವಂತಹ ಡಬ್ಬಿಗಳನ್ನು...