ಕುರಿತಾಲೋಚಿಸಿದರರಿಯುವುದು ಹಣ್ಣಿನಾ ಹಿರಿಮೆಯದನುಣ್ಣಲಿಕೆ ಬೇಕಿಲ್ಲ ಸಾರು ಸಾಂ ಬಾರು, ಅಕ್ಕಿಯನ್ನವನೆಂದಾದೊಡಂ ಉಣಲುಂಟೆ ಬರಿದು? ಸಂತೆಯಿಂದೇನನುಂ ತರದೇ ಸುಖಿಸಿ ದರದುವೆ ಫಲವಂತ ಜೀವನವು – ವಿಜ್ಞಾನೇಶ್ವರಾ *****...

ಮತಿಯ ಪಾಲಿಸು ಯಮಗೆ ಶ್ರೀಗಣರಾಯಾ ರುತಿ ಮಾಡ್ ಉಣಿಸು ಯಮಗೇ || ೧ || ಉದ್ದಿನ ವನದಲ್ಲಿ ಉದ್ದಿನ ಉಂಡೇ ಎಳದಿಟ್ಟ ಬೆನುಮಯ್ಯ ಯೆಡಿ ಮಾಡ್ ಉಣಿಸು ಯಮಗೇ || ೨ || ಕಡಲೆಯ ವನದಲ್ಲಿ ಕಡಲೆಯ ಉಂಡೇ ಕಡದಿಟ್ಟ ಬೆನುಮಯ್ಯಾ ಯಡಿಮಾಡಿ ಉಣಿಸು ಯಮಗೇ || ೩ || ...

ರಾಮ ನಿನ್ನ ನೆನೆದು ನೆನೆದು ನಾನು ತಣ್ಣನೆ ನೆಂದಿರುವೆ ನಿನ್ನ ಕೃಪಾ ಬಿಸಿ ತಾಟುವುದೆಂದು ನಿನ್ನ ಅಡಿದಾವರೆಯಲಿ ಬಂದಿರುವೆ ರಾಮ ನಿನ್ನ ಭಜಿಸಿ ಭಜಿಸಿ ನಾನು ಆಸ್ತಿ ನಾಸ್ತಿಗಳಲಿ ಭಾಜಿಸಿರುವೆ ನಿನ್ನ ಸಾಕ್ಷಾತ್ಕಾರದ ಬೆಳದಿಂಗಳಿಗಾಗಿ ನಿತ್ಯ ನಾನು ...

ವರ್‍ಷದ ನಿಶಿಯೊಳು ಮುಗಿಲಿನ ಮರೆಯೊಳು ಇಣಿಕುವ ಚಂದ್ರನ ಜೊನ್ನದೊಲು, ಹರ್‍ಷವು ಮೂಡಿತು ಚಿಂತೆಯ ಸದನದಿ ಹೊಳೆಯಲು ಆಂಡಾಳಿನ ನಗೆಯು. ಜಾಜಿಯ ಮುಗುಳನು ಮುತ್ತಿಡೆ ನುಸುಳಿದ ಕಿರಣದ ಚೆಲುವಿನ ಹೊಸ ನಗೆಯು, ವ್ಯಾಜವೆ ಇಲ್ಲದೆ ಸೋಜಿಗಪಡುವಾ ಬಲು ಬಲು ಸೊ...

ಸರಕ್ಕ ಸರಿತಲ್ಲ ಬೀಗರ ಸುರಪ್ಪ ತಿಳಿತಲ್ಲ ||ಪ|| ಆನೀ ಬರತಾವಂತ ಆರಽ ಭಣವೀ ಕೊಂಡ| ಆನೆಲ್ಲಿ ನಿನ್ಮು ದಳವೆಲ್ಲಿ | ಸರಕ್ಕ ||೧|| ಆನೆಲ್ಲಿ ನಿಮ್ಮ ದಳವೆಲ್ಲಿ ಬೀಗಾ| ಬೋಳ್ಹೋರಿ ಮ್ಯಾಲ ಬರತಾರ | ಸರಕ್ಕ ||೨|| ಒಂಟೀ ಬರತಾವಂತ ಎಂಟಽ ಭಣವೀ ಕೊಂಡ| ಒ...

‘ಎಲವೊ ದುರುಳ ನಿಷಾದ, ಕೊಂಚೆಯೆಣೆಯಿಂದಂ ಕಾಮಮೋಹಿತನಿನೆಯನನ್ನೆಸೆದೆ ಎಂದು, ನೀಂ ಪ್ರತಿಷ್ಠೆಯನೊಂದದಿರು ಧರೆಯೊಳೆಂದುಂ!೧ ಕನಿಕರಂ ಕನಲಲಿಂತಾದಿಕವಿ ಎಂದಂ.   ೪ ಗದ್ಗದಿಸಿತೊಡನೆ ವಾಣಿಯ ವೀಣೆ, ಮುಂತೇ ಲಿತು ಬಾಷ್ಪಗಾನ! ವಲಮದರ ಮಧುರಿಮೆಯಿಂ ನಿಮ್ಮ...

ಸಾಕು ತಾಯಿ, ಹಾಲು ನಿನ್ನ ಎದೆಯ ಹಾಲು ಬೇಡ ಇನ್ನು ರಕ್ತ ನಿನ್ನ ಒಡಲ ರಕ್ತ ನನ್ನ ತಪ್ಪು ನೂರು ನಿನ್ನ ಕೋಪಕಶಕ್ತ ಬಗೆದೆ ನಿನ್ನ ಒಡಲ ಗಣಿಯ ಹೆಸರಿನಲ್ಲಿ ಜೊತೆಗೆ ಕುಡಿದೆ ರಕ್ತ ತೈಲ ರೂಪದಲ್ಲಿ ನಿನ್ನ ಕರುಳ ಸವರಿ ಮಾಡಿದೆ ನಾ ಹೆದ್ದಾರಿ ಇಂಥ ಪಾಪ ...

ಉತ್ತರಿಸಲೇಬೇಕು ನಮ್ಮ ಪ್ರಶ್ನೆಯ ಬೇರೆ ಯವರು; ನೀ ಮಾತ್ರವೆ ಸ್ವತಂತ್ರ, ನಾವೋ ಬಿಡದೆ ತಿರುತಿರುಗಿ ಕೇಳುವೆವು – ನೀ ಬರಿದೆ ನಗುತಿರುವೆ, ಮೌನದಲೆ ಮೀರಿ ಜ್ಞಾನದ ಶಿಖರಗಳ ಮೇರೆ. ಕಡಲಲ್ಲಿ ಅಡಿಯೂರಿ ಸ್ವರ್‍ಗವನೆ ಮನೆ ಸಾರಿ, ಚಿಕ್ಕೆಗಳಿಗಷ್...

ಬೆಳಿಗ್ಗೆಯಿಂದ ಕತ್ತಲೆಯವರೆಗೂ ಬಸ್ ಸ್ಟಾಂಡಿನಲ್ಲಿ ಬಸ್ಸುಗಳಿಗೆ ಹತ್ತಿ ಇಳಿದುಕೊಂಡು ಎಷ್ಟು ಗೋಗರೆದು ಬಿಕ್ಷೆ ಬೇಡಿದರೂ ಆ ಹುಡುಗನಿಗೆ ಮಧ್ಯಾಹ್ನದ ಊಟ ಮಾಡುವಷ್ಟು ಹಣ ಸಂಗ್ರಹವಾಗುತ್ತಿರಲಿಲ್ಲ. ಮಧ್ಯಾಹ್ನ ಬಿಸ್ಕಿಟು ಮತ್ತು ನಲ್ಲಿ ನೀರು ಕುಡಿದು ಹಸಿವು ತಣಿಸಿದರೂ ರಾತ್ರಿಯ ಊಟಕ್ಕ...

ಮಧುಮಾಸದ ಮೊದಲ ದಿನಗಳು. ಎಲ್ಲಿ ನೋಡಿದರೂ ತಾಯಿಯ ವಿವಿಧ ವಿಲಾಸ……. ಪುಷ್ಪಶೃಂಗಾರ!! ವರ್‍ಣವೈಖರಿ!! ಮಧುಪಾನದಿಂದ ಮೈಮರೆತು ಮೊರೆಯುತಿಹೆ ಉನ್ಮತ್ತ ಭೃಂಗ ಸಂಕುಲದ ಎಣೆಯಿಲ್ಲದ ಪ್ರಣಯ ಕೇಳಿ! ಸಹಸ್ರಸಹಸ್ರ ಖಗಕಂಠಗಳಿಂದೆ ದಿಕ್ಕುದಿಕ್ಕಿಗೆ ಪಸರಿಸುತಿಹ ಸುಮಧುರ ಗಾನ ತರಂಗ...

ಈ ಮಾಹಾತ್ಮ್ಯೆ ಯಾವ ಪುರಾಣದಲ್ಲಿದೆ? ಎಲ್ಲಿ ಯಾರು ಹೇಳಿದ್ದು? ಯಾರು ಕೇಳಿದ್ದು? ಯಾವ ಇಷ್ಟಾರ್ಥಸಿದ್ದಿಗಾಗಿ? ಎಂದೆಲ್ಲ ಪ್ರಶ್ನೆಗಳನ್ನು ನೀವು ಕೇಳಬಹುದು. ಉತ್ತರ ಹೇಳುತ್ತಾ ಹೋದರೆ ಪೀಠಿಕಾ ಪ್ರಕರಣವೇ ಉದ್ದ ಬೆಳೆದು ಮಹಾತ್ಮ್ಯೆಯನ್ನು ಕೇಳುವಷ್ಟರಲ್ಲಿ ನಿಮಗೆ ಹಾಕಳಿಗೆ ತೊಡಗಿ ತೂಕಡ...

(ಒಂದು ಐತಿಹಾಸಿಕ ಕತೆ) ಹ್ಹಃ ಹ್ಹಃ ಹ್ಹಃ! ಅಹ್ಹಃ ಅಹ್ಹಃ ಅಹ್ಹಃ!! ಗಝುನಿ ಮಹಮೂದನಿಗೆ ಹಿಡಿಸಲಾರದ ನಗೆ. ನಕ್ಕು ನಕ್ಕು ಅವನ ಹೊಟ್ಟೆ ನೋಯುತ್ತಿದ್ದಿತು. ಆದರೂ ಅವನ ಆ ತಿರಸ್ಕಾರದ ನಗೆ ತಡೆಯಲಾರದಾಯಿತು. ಅದೊಂದು ಸುಪ್ರಸಿದ್ದವಾದ ಸೋಮನಾಥ ದೇವಾಲಯ. ಭಾರತದ ವೈಭವವನ್ನು ವಿಶ್ವಕ್ಕೆ ತೋ...

ಸರಲಾಕ್ಷ ಹುಲಿಮೀಸೆಯು ಮನೆಯಲ್ಲಿ ಬಂದಿರಲಾರಂಭಿಸಿದಂದಿನಿಂದ ತಾನು ತೊಂದರೆಗೊಂಡು ಬೇಸತ್ತು ಹೋಗಿರುವೆನೆಂದು ವಸತಿಗೃಹದ ಸ್ವಾಮಿನಿಯಾದ ಲೀಲಾಬಾಯಿಯು ದೂರಿಕೊಳ್ಳುತ್ತಿದ್ದಳು. “ಕೆಟ್ಟ ಮೋರೆಯವರೂ ಅಸಭ್ಯರೂ ಸುಟ್ಟಮನೆಯವರೂ ಸುಡದ ಮನೆಯವರೂ ತೆರವಿಲ್ಲದೆ ನನ್ನ ಮನೆಗೆ ಬರುತ್ತಿರುವ...

ಅವಳು ಅಡುಗೆ ಮನೆಯ ಕಪ್ಪಾದ ಡಬ್ಬಿಗಳನ್ನು, ಉಳಿದ ಸಾಮಾನುಗಳನ್ನು ತೆಗೆದು ತೊಳೆಯಲು ಆ ಮಣ್ಣಿನ ಮಾಡು ಹಂಚಿನ ಮನೆಯ ಮುಂದಿನ ತೆಂಗಿನಕಟ್ಟೆಯಲ್ಲಿ ಹಾಕಿದ ಅಗಲ ಹಾಸುಗಲ್ಲ ಮೇಲೆ ಕೈಲಿ ಹಿಡಿದಷ್ಟು ತಂದು ತಂದು ಇಡುತ್ತಿದ್ದಳು. ಏಳರ ಬಾಲೆ ಮಗಳು ಕೂಡ ತನ್ನ ಕೈಗೆ ಎತ್ತುವಂತಹ ಡಬ್ಬಿಗಳನ್ನು...