ಸಾಕು ತಾಯಿ, ಹಾಲು
ನಿನ್ನ ಎದೆಯ ಹಾಲು
ಬೇಡ ಇನ್ನು ರಕ್ತ
ನಿನ್ನ ಒಡಲ ರಕ್ತ
ನನ್ನ ತಪ್ಪು ನೂರು
ನಿನ್ನ ಕೋಪಕಶಕ್ತ
ಬಗೆದೆ ನಿನ್ನ ಒಡಲ
ಗಣಿಯ ಹೆಸರಿನಲ್ಲಿ
ಜೊತೆಗೆ ಕುಡಿದೆ ರಕ್ತ
ತೈಲ ರೂಪದಲ್ಲಿ
ನಿನ್ನ ಕರುಳ ಸವರಿ
ಮಾಡಿದೆ ನಾ ಹೆದ್ದಾರಿ
ಇಂಥ ಪಾಪ ನೂರು
ಮಾಡಿದೆ ಮನೆಗೆ ಮಾರಿ- ನನ್ನ
ಮಾಡಿದೆ ಮನೆಗೆ ಮಾರಿ
ಕೊಟ್ಟೆ ನೀನು ಆಮ್ಲ
ಕಡಿದೆನಾಗ ನಿನ್ನ
ಜೊತೆಗೆ ಕೊಟ್ಟೆ ಚಿನ್ನ
ಅದಕೆ ನಾನು ಕನ್ನ
ಆದರು ಆಸೆಗೆಣೆಯೇ
ಓಝೋನ್ ಪದರ ಬೇಡ
ಸ್ವರ್‍ಗ ಅಥವ ನರಕ
ಗೋರಿಯಂತು ಇಲ್ಲೆ- ನನ್ನ
ಗೋರಿಯಂತು ಇಲ್ಲೆ
*****