ಷೇಕ್ಸ್‌ಪಿಯರ್

ಉತ್ತರಿಸಲೇಬೇಕು ನಮ್ಮ ಪ್ರಶ್ನೆಯ ಬೇರೆ
ಯವರು; ನೀ ಮಾತ್ರವೆ ಸ್ವತಂತ್ರ, ನಾವೋ ಬಿಡದೆ
ತಿರುತಿರುಗಿ ಕೇಳುವೆವು – ನೀ ಬರಿದೆ ನಗುತಿರುವೆ,
ಮೌನದಲೆ ಮೀರಿ ಜ್ಞಾನದ ಶಿಖರಗಳ ಮೇರೆ.
ಕಡಲಲ್ಲಿ ಅಡಿಯೂರಿ ಸ್ವರ್‍ಗವನೆ ಮನೆ ಸಾರಿ,
ಚಿಕ್ಕೆಗಳಿಗಷ್ಟೆ ಗೂಢವ ತೆರೆದ ಮೇರುಗಿರಿ
ಸಿಗದು ಮರ್‍ತ್ಯರ ವ್ಯರ್‍ಥ ಶೋಧಕ್ಕೆ, ಮೇಲೆ ಬರಿ
ಮುಗಿಲಂಚು ಕಟ್ಟಿರುವ ಬುಡ ಮಾತ್ರ ಕಾಣುವುದು.
ತನ್ನರಿವು ಎಣಿಕೆ, ಧೃತಿ, ಆತ್ಮಸಮ್ಮಾನಗಳ
ಬಲದಲ್ಲಿ ಚಿಕ್ಕೆ ರವಿಕಿರಣ ಹಿಡಿದವ. ನಾವು
ಎಣಿಸದೆಡೆ ನಡೆದೆ ಬುವಿಮೇಲೆ, ಬಿಡು ಒಳ್ಳೆಯದೆ.
ನಿತ್ಯಸತ್ವವು ಸಹಿಸಬೇಕು ವ್ಯಥೆ ಬಾಧೆಗಳ.

ನಮ್ಮ ಧೃತಿ ಮುರಿವ ದೌರ್‍ಬಲ್ಯ, ಮಣಿಸುವ ನೋವು
ನಿನ್ನ ಮುಖಭಾವದಲಿ ಮಾತ್ರ ದನಿ ಪಡೆದಿದೆ.

– ಮ್ಯಾಥ್ಯು ಆರ್‍ನಲ್ಡ್
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಕಾರುಗಳ್ಳೀ ವೀರಾಜಯ್ಯ
Next post ಇತ್ಯಾದಿ ಏನಿಲ್ಲ… ಪ್ರೀತಿಯಷ್ಟೆ! – ೧೩೮

ಸಣ್ಣ ಕತೆ

  • ವಾಮನ ಮಾಸ್ತರರ ಏಳು ಬೀಳು

    "ಏಳು!" ಅಂದರು ವಾಮನ ಮಾಸ್ತರರು. ರಾಜಪ್ಪ ಏಳಲಿಲ್ಲ. ಎಂದಿನಂತೆ ಕಿಟಿಕಿಯ ಹೊರಗೆ ಹೆದ್ದಾರಿಯಲ್ಲಿ ಹೋಗುತ್ತಿದ್ದ ವಾಹನಗಳನ್ನೂ ದಾರಿಹೋಕರನ್ನೂ ನೋಡುತ್ತ, ಡೆಸ್ಕಿನ ಮೇಲೆ ಬಲಗೈಯ ಸೊಂಟು ಊರಿ, ಕೈಯಮೇಲೆ… Read more…

  • ಬಿರುಕು

    ಚಂಪಾ ಹಾಲು ತುಂಬಿದ ಲೋಟ ಕೈಯಲ್ಲಿ ಹಿಡಿದು ಒಳಗೆ ಬಂದಳು. ಎಂದಿನಂತೆ ಮೇಜಿನ ಮೇಲಿಟ್ಟು ಮಾತಿಲ್ಲದೆ ಹೊರಟು ಹೋಗುತ್ತಿದ್ದ ಅವಳು ಹೊರಡುವ ಸೂಚನೆಯನ್ನೇ ತೋರದಿದ್ದಾಗ ಮೂರ್‍ತಿ ಬೆಚ್ಚಿ… Read more…

  • ದಾರಿ ಯಾವುದಯ್ಯಾ?

    ಮೂವತೈದು ವರ್‍ಷಗಳ ನಂತರ ಅಮಲ ನಿನ್ನೂರಿಗೆ ಬರುತ್ತಿದ್ದೇನೆ ಅಂತ ಫೋನ ಮಾಡಿದಾಗ ಮೃಣಾಲಿನಿಗೆ ಆಶ್ಚರ್‍ಯ ಮತ್ತು ಆತಂಕ ಕಾಡಿದವು. ಬರೋಬ್ಬರಿ ಮೂವತ್ತೈದು ವರ್ಷಗಳ ಹಿಂದೆ ವಿಶ್ವವಿದ್ಯಾಲಯದ ಕ್ಯಾಂಪಸ್… Read more…

  • ಗೃಹವ್ಯವಸ್ಥೆ

    ಬೆಳಗು ಮುಂಜಾನೆ ಎಂಟು ಗಂಟೆಗೆ ಹೊಗೆಬಂಡಿಯು XX ಸ್ಟೇಶನಕ್ಕೆ ಬಂದು ನಿಂತಿತು. ಸಂತ್ರಾಧಾರವಾಗಿ ಮಳೆ ಹೊಡೆಯುತ್ತಿರುವದರಿಂದ ಪ್ರಯಾಣಸ್ಥರು ಬೇಸತ್ತು ಗಾಡಿಯಿಂದ ಯಾವಾಗ ಇಳಿಯುವೆವೋ ಎಂದೆನ್ನುತ್ತಿದ್ದರು. ನಿರ್ಮಲಾಬಾಯಿಯು ಅವಳ… Read more…

  • ಗದ್ದೆ

    ಅದೊಂದು ಬೆಟ್ಟದ ಊರು. ಪುಟ್ಟ ಪುಟ್ಟ ಗುಡ್ಡಕ್ಕೆ ತಾಗಿಕೊಂಡು ಸಂದಿಯಲ್ಲಿ ಗೊಂದಿಯಲ್ಲಿ ಎದ್ದ ಗುಡಿಸಲುಗಳು ಅರ್ಥಾತ್ ಈ ಜೀವನ ಕಳೆಯೋ ಬಗೆಯಲಿ ಕಟ್ಟಿಕೊಂಡ ಪುಟ್ಟ ಮನೆಗಳು ಹೊತ್ತು… Read more…