ಯಾಕೆ ನಿಂತಿ ಬೆರ್‍ಚಪ್ಪ ಹೊಲದ ಮಧ್ಯೆ ಇಂತು ನೀನು ಯಾರು ಬೆದರುತಾರೆ ನಿನಗೆ ಬೆದರಲ್ಲ ನಾವಂತು ತಲೆಗೆ ಒಡಕು ಮಡಕೆ ಕಟ್ಟಿ ಕಣ್ಣಿಗೆ ಸುಣ್ಣದ ಬೊಟ್ಟನಿಟ್ಟಿ ಕಿವಿ ಬಾಯಿ ತೂತು ಕೈ ಮಾತ್ರ ದಾಯ ಬಾಯ ಮೂಗು ಮಂಗಮಾಯ ಯಾರದೀ ಹರಕಂಗಿ ಯಾರದೀ ದೊಗಲೆ ಚಡ್ಡ...

ಚಿಕುಹೂ ಚಿಕುಹೂ ಚಿಕುಹೂ- ಸನ್ನೆಯವೊಲು ಮುಹುರ್ಮುುಹು ಆರೆಚ್ಚರಕೀ ತುತ್ತುರಿ ಬಾನೊಳು ಮೊಳಗುತ್ತಿದೆ? ಎನ್ನ ಕಿವಿಯೊಳೀ ಸವಿ ದನಿ ಸಿಂಪಿಸುತಿದೆ ಸೊದೆಸೀರ್ಪನಿ ವಿಸ್ಮೃತಿಗೈದಿರುವಾತ್ಮವ- ನುಜ್ಜೀವಿಪ ತೆರದೆ. ದಿವಮರೆತಪ್ಸರೆ ಎಚ್ಚರೆ ಅಗಲುವಳೆಂದಿಳ...

ಸೂರ್ಯನಿಗೆ ಛತ್ರಿ ಅಡ್ಡಿ ಹಿಡಿದರೇನಂತೆ? ಸೂರ್ಯ ಹುಟ್ಟಲೇ ಇಲ್ಲವೆ? ಎದೆಯಲ್ಲಿ ಮಾನವ ಕಾವ್ಯ ಕೈಯಲ್ಲಿ ಖಡ್ಗ ಹಿಡಿದರೇನು ಮಾನವೀಯತೆ ಮೊಳಗಲಾರದೆ? ನಾಝಿಗಳ ಜೈಲಿನಲ್ಲಿ ಸರಳು ಬಂದಿಖಾನೆಯಲಿ ಎದೆ ಝಲ್ಲೆನಿಸುವ ವಾಸ್ತವಗಳು ಅನುಭವ ಉಲಿಯುತ್ತಿದ್ದಾರೆ...

ಯಾವಳೊಬ್ಬ ಹಾಲುಗಿತ್ತಿ ಹಾಲ ಕೊಡವ ತಲೆಯೊಳೆತ್ತಿ ಹೊಳೆಯಾಚೆಗೆ ಕಡೆಯಲೊತ್ತಿ ಕಡಕೆ ಬಂದಳು ೪ ತಡವಿನಿಸಿರೆ ಕಡವ ತೆರೆಯೆ, ಕೊಡವನಿಳಿಸಿ ನೀರನೆರೆಯೆ, ಹಾಲಿನರಕೆ ನೆರೆದು ನೊರೆಯೆ ತುಂಬಿತಾ ಕೊಡಂ ೮ ಅವಸರದಿಂ ದೋಣಿ ಹತ್ತಿ ಕುಳಿತಳಾಕೆ ೧ಬಾಣಿಗೊತ್ತಿ;...

ಕನ್ನಡ ನಾಡು ಚಿನ್ನದ ಬೀಡು ಪಾವನವೀ ನಾಡು | ಎಲ್ಲು ಚೆಲುವಿನ ಸಿರಿ ನೋಡು ಕನ್ನಡ ನಾಡು ಕಿನ್ನರ ಬೀಡು ರೂಪಸಿಯರ ನಾಡು | ಸಿಂಹ ವಾಣಿಗಳಾ ನೋಡು ಕನ್ನಡ ನಾಡು ಹಸಿರಿನ ಬೀಡು ಗಿರಿ ಕಾನನ ನಾಡು | ಇಲ್ಲಿ ಸಹ್ಯಾದ್ರಿಯ ನೋಡು ಕನ್ನಡ ನಾಡು ಶಾರದೆ ಬೀಡು...

ಊಳಿಡುತ್ತಿದೆ ಮತ್ತೆ ಬಿರುಗಾಳಿ. ನನ್ನ ಮಗು ತೊಟ್ಟಿಲಿನ ಕಟಕಟೆ, ಹೊದಿಕೆಗಳ ಮರೆಗಡಗಿ ನಿದ್ದೆ ಮಾಡುತ್ತಿದೆ. ಅಟ್ಲಾಂಟಿಕಕ್ಕೆ ಹುಟ್ಟಿ ಅಟ್ಟಿ ಹಾಯುವ ಗಾಳಿ ಹುಲ್ಲು ಛಾವಣಿ ಮೆದೆಯ ಎತ್ತಿ ಹಾರಿಸದಂತೆ ತಡೆವ ಅಡ್ಡಿಯೆ ಇಲ್ಲ – ಒಂದು ಬೆತ್ತಲ...

ಜ್ಯೋತಿಗಳ ಸಾಸಿರವನೊಳಕೊಂಡ ನಭದಲ್ಲಿ ನೂರು ಸೂರ್‍ಯರ ನಡುವೆ ನಿಂತು ಮಿನುಗುವ ತಾರೆ! ನಿನ್ನ ಕಿರುವೆಳಕ ದೊರೆವೆತ್ತಿಹೆನು, ಮೈದೋರೆ ನಿನ್ನ ಸುಂದರ ದೀಪ್ತಿ ನನ್ನ ಜೀವಿತದಲ್ಲಿ ನಿಸ್ಸೀಮ ನಿರವೇದ್ಯವನ್ನರಿವರಿಹರೆಲ್ಲಿ ಭೂತಲದಿ? ನನಗಿಲ್ಲ ಎಣ್ದೆಸೆಗ...

ಯೋಗ ಉಸಿರು ಉಸಿರಿಗೆ ಶಿವನ ನೆನಹು ನಿಂದಿರಲಣ್ಣ ಸಹಜಯೋಗವೆ ಯೋಗ ರಾಜಯೋಗ ಮಾಡೂವ ಕೈ ಕೆಲಸ ನೆನಪಿನಾಟವ ಮಾಡು ಕರ್‍ಮಯೋಗವೆ ಯೋಗ ಮುದ್ದುಕಂದ ಸಂಸಾರ ಸಂಸಾರವೆಂಬುವದು ಕೊಳಚೆ ಕಿಲ್ಪಿಷವಲ್ಲ ಸಂಸಾರ ಸುಂದರದ ದ್ರಾಕ್ಷಿತೋಟ ಹೂವು ಹಣ್ಣಿನ ತೋಟ ಮಾವು ಗಿ...

ಯೆಚ್ಗೆ ಯೆಂಡ ಕೇಳ್ತಾನಿದ್ರೆ ಮಚ್ನೆ ಎತ್ತಿ ಕೊಚ್ತೀನ್ ಅಂತ ಯೋಳ್ತೀಯಲ್ಲ ಮುನಿಯಣ್ಣ- ಕೊಲ್ಲೋ ಕೆಲಸ ಬದಕ್ಸೊ ಕೆಲಸ ಎಲ್ಲಾ ನಿಂಗೆ ಕೊಟ್ಟೋರಾರು? ಸಲ್ಲದ್ ಮಾತು ಕಾಣಣ್ಣ! ೧ ಮಾತ್ಗೆ ಮಾತು! ಯೇಟ್ಗೆ ಯೇಟು! ಯಾತ್ಕೆ ಯೋಳ್ತಿ ಕೊಲ್ತೀನ್ ಅಂತ? ಗ್ರಾಸ...

ಬೆಳಿಗ್ಗೆಯಿಂದ ಕತ್ತಲೆಯವರೆಗೂ ಬಸ್ ಸ್ಟಾಂಡಿನಲ್ಲಿ ಬಸ್ಸುಗಳಿಗೆ ಹತ್ತಿ ಇಳಿದುಕೊಂಡು ಎಷ್ಟು ಗೋಗರೆದು ಬಿಕ್ಷೆ ಬೇಡಿದರೂ ಆ ಹುಡುಗನಿಗೆ ಮಧ್ಯಾಹ್ನದ ಊಟ ಮಾಡುವಷ್ಟು ಹಣ ಸಂಗ್ರಹವಾಗುತ್ತಿರಲಿಲ್ಲ. ಮಧ್ಯಾಹ್ನ ಬಿಸ್ಕಿಟು ಮತ್ತು ನಲ್ಲಿ ನೀರು ಕುಡಿದು ಹಸಿವು ತಣಿಸಿದರೂ ರಾತ್ರಿಯ ಊಟಕ್ಕ...

ಮಧುಮಾಸದ ಮೊದಲ ದಿನಗಳು. ಎಲ್ಲಿ ನೋಡಿದರೂ ತಾಯಿಯ ವಿವಿಧ ವಿಲಾಸ……. ಪುಷ್ಪಶೃಂಗಾರ!! ವರ್‍ಣವೈಖರಿ!! ಮಧುಪಾನದಿಂದ ಮೈಮರೆತು ಮೊರೆಯುತಿಹೆ ಉನ್ಮತ್ತ ಭೃಂಗ ಸಂಕುಲದ ಎಣೆಯಿಲ್ಲದ ಪ್ರಣಯ ಕೇಳಿ! ಸಹಸ್ರಸಹಸ್ರ ಖಗಕಂಠಗಳಿಂದೆ ದಿಕ್ಕುದಿಕ್ಕಿಗೆ ಪಸರಿಸುತಿಹ ಸುಮಧುರ ಗಾನ ತರಂಗ...

ಈ ಮಾಹಾತ್ಮ್ಯೆ ಯಾವ ಪುರಾಣದಲ್ಲಿದೆ? ಎಲ್ಲಿ ಯಾರು ಹೇಳಿದ್ದು? ಯಾರು ಕೇಳಿದ್ದು? ಯಾವ ಇಷ್ಟಾರ್ಥಸಿದ್ದಿಗಾಗಿ? ಎಂದೆಲ್ಲ ಪ್ರಶ್ನೆಗಳನ್ನು ನೀವು ಕೇಳಬಹುದು. ಉತ್ತರ ಹೇಳುತ್ತಾ ಹೋದರೆ ಪೀಠಿಕಾ ಪ್ರಕರಣವೇ ಉದ್ದ ಬೆಳೆದು ಮಹಾತ್ಮ್ಯೆಯನ್ನು ಕೇಳುವಷ್ಟರಲ್ಲಿ ನಿಮಗೆ ಹಾಕಳಿಗೆ ತೊಡಗಿ ತೂಕಡ...

(ಒಂದು ಐತಿಹಾಸಿಕ ಕತೆ) ಹ್ಹಃ ಹ್ಹಃ ಹ್ಹಃ! ಅಹ್ಹಃ ಅಹ್ಹಃ ಅಹ್ಹಃ!! ಗಝುನಿ ಮಹಮೂದನಿಗೆ ಹಿಡಿಸಲಾರದ ನಗೆ. ನಕ್ಕು ನಕ್ಕು ಅವನ ಹೊಟ್ಟೆ ನೋಯುತ್ತಿದ್ದಿತು. ಆದರೂ ಅವನ ಆ ತಿರಸ್ಕಾರದ ನಗೆ ತಡೆಯಲಾರದಾಯಿತು. ಅದೊಂದು ಸುಪ್ರಸಿದ್ದವಾದ ಸೋಮನಾಥ ದೇವಾಲಯ. ಭಾರತದ ವೈಭವವನ್ನು ವಿಶ್ವಕ್ಕೆ ತೋ...

ಸರಲಾಕ್ಷ ಹುಲಿಮೀಸೆಯು ಮನೆಯಲ್ಲಿ ಬಂದಿರಲಾರಂಭಿಸಿದಂದಿನಿಂದ ತಾನು ತೊಂದರೆಗೊಂಡು ಬೇಸತ್ತು ಹೋಗಿರುವೆನೆಂದು ವಸತಿಗೃಹದ ಸ್ವಾಮಿನಿಯಾದ ಲೀಲಾಬಾಯಿಯು ದೂರಿಕೊಳ್ಳುತ್ತಿದ್ದಳು. “ಕೆಟ್ಟ ಮೋರೆಯವರೂ ಅಸಭ್ಯರೂ ಸುಟ್ಟಮನೆಯವರೂ ಸುಡದ ಮನೆಯವರೂ ತೆರವಿಲ್ಲದೆ ನನ್ನ ಮನೆಗೆ ಬರುತ್ತಿರುವ...