ಮನಕ್ಕ್ ಒಪ್ಪೊ ಮಾತು

ಯೆಚ್ಗೆ ಯೆಂಡ ಕೇಳ್ತಾನಿದ್ರೆ
ಮಚ್ನೆ ಎತ್ತಿ ಕೊಚ್ತೀನ್ ಅಂತ
ಯೋಳ್ತೀಯಲ್ಲ ಮುನಿಯಣ್ಣ-
ಕೊಲ್ಲೋ ಕೆಲಸ ಬದಕ್ಸೊ ಕೆಲಸ
ಎಲ್ಲಾ ನಿಂಗೆ ಕೊಟ್ಟೋರಾರು?
ಸಲ್ಲದ್ ಮಾತು ಕಾಣಣ್ಣ! ೧

ಮಾತ್ಗೆ ಮಾತು! ಯೇಟ್ಗೆ ಯೇಟು!
ಯಾತ್ಕೆ ಯೋಳ್ತಿ ಕೊಲ್ತೀನ್ ಅಂತ?
ಗ್ರಾಸ್ತ ಅಲ್ಲ ನಿನ್ ವಿದ್ದೆ!
ಕಚ್ ಗಿಚ್ ಕಾಸ್ನ ಈಸ್ಕೋವೊಲ್ಲೆ!
ಯೆಚ್ಗೆ ಕೇಳ್ದ್ರೆ ಕೋಪಾ ಬಲ್ಲೆ!
ಮಸ್ತಾಗೈತೆ ನಿನ್ ವಿದ್ದೆ! ೨

ಕೊಲ್ಲೋ ಕೆಲಸ ನಿಂದ್ ಅಲ್ಲಾಣ್ಣ!
ಕೊಲ್ಲೋಕ್ ಒಬ್ಬನ್ ಮಡಗೌನ್ ದೇವ್ರು!
ಈಸ್ವರನಂತ ಔನ್ ಎಸರು!
ಬ್ರಾಂಣ ಒಬ್ಬ ಅಬ್ಯಾಸಿಲ್ದೆ
ಓಮ ಮಾಡಿ ಸುಟ್‌ಕೊಂಡ್ನಂತೆ
ಮೀಸೆ ಜತೇಗ್ ಗಡ್ಡಾನ! ೩

ಇನ್ನಾ ಯೋಳ್ತೀನ್ ಕೇಳ್ ಮುನಿಯಣ್ಣ!
ಮೀನ್‌ಗಳ್ ಬಂದ್ರೆ ತಿನ್ನಾಕ್ ತನ್ನ
ಯೋಳ್ತದಂತೆ ಗಾಳ್ದುಳ:
‘ನನ್ ಇಡದ್ ನುಂಗೋಕ್ ಸುತ್ತೀ ಸುತ್ತೀ
ನೀನ್ ಇಲ್ ಬಂದ್ರೆ ಕುಂತೌನ್ ಅಲ್ಲಿ
ಮೇಲ್ ನಿನ್ ನುಂಗೋಕ್ ಬೆಸ್ತ್ರವ!’ ೪

ಯೆಂಡ ಮಾರೋದ್ ನಿಂದು ಕೆಲಸ!
ಬುಂಡೆ ಒಡೆಯಾದ್ ನಿಂಗ್ ಯಾಕಣ್ಣ!
ಕೋಪಿಸ್ಬೇಡ ಮುನಿಯಣ್ಣ!
ಮನಕೆ ಒಪ್ಪೋ ಮಾತೇಳ್ತೀನಿ-
ನಾನು ರತ್ನ ಯೇನೇಳ್ದೇಂತ
ನೆಪ್ನಾಗ್ ಇಟ್ಕೊ ಮುನಿಯಣ್ಣ! ೫
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಒಡನುಡಿ
Next post ವಲಸಿಗ ಕನ್ನಡಿಗರು ಮತ್ತು ಸಂಕರ ಸಂಸ್ಕೃತಿ

ಸಣ್ಣ ಕತೆ

  • ಅಜ್ಜಿಯ ಪ್ರೇಮ

    ಎರಡನೆಯ ಹೆರಿಗೆಯಲ್ಲಿ ಅಸು ನೀಗಿದ ಮಗಳು ಕಮಲಳನ್ನು ಕಳಕೊಂಡ ತೊಂಬತ್ತು ವರ್ಷದ ಜಯಮ್ಮನಿಗೆ ಸಹಿಸಲಾಗದ ಸಂಕಟವಾಗಿತ್ತು. ಹೆಣ್ಣು ಮಗುವಿಗೆ ಜನ್ಮವಿತ್ತು ತನ್ನ ಇಹದ ಯಾತ್ರೆಯನ್ನು ಮುಗಿಸಿ ಹೋದ… Read more…

  • ಬಲಿ

    ಅವಳು ಭಾಗಶಃ ಚಟ್ಟೆಯಾದ ಕಪ್ಪು ಬಣ್ಣಕ್ಕೆ ತಿರುಗಿದ ಅಲ್ಯೂಮೀನಿಯಂ ತಟ್ಟೆಯೊಳಗೆ ಸ್ವಲ್ಪ ಹಾಲು ಸುರಿದು ಅದಕ್ಕೆ ಸ್ವಲ್ಪ ನೀರನ್ನು ಬೆರೆಸಿ, ಒಲೆಯ ಮೇಲಿಟ್ಟು ಮುಚ್ಚಳ ಮುಚ್ಚಿದಳು. ಒಲೆಯ… Read more…

  • ಕಲ್ಪನಾ

    ಚಿತ್ರ: ಟಾಮ್ ಬಿ ಇದು ಇಪ್ಪತ್ತು ವರ್ಷಗಳ ಹಿಂದಿನ ಕಥೆ! ಮಾತನಾಡುವ ಸಿನಿಮಾ ಪ್ರಪಂಚ ಅದೇ ಆಗ ದಕ್ಷಿಣ ಭಾರತದಲ್ಲಿ ತಲೆಯೆತ್ತಿದ್ದಿತು! ಸಿನಿಮಾದಲ್ಲಿ ಪಾತ್ರವಹಿಸುವ ನಟಿನಟಿಯರನ್ನು ಅಚ್ಚರಿಯ… Read more…

  • ಉಪ್ಪು

    ಸಂಜೆ ಮೆಸ್ಸಿನಲ್ಲಿ ಚಹಾ ಕುಡಿಯುತ್ತಿದ್ದಾಗ ಎದುರು ಕುಳಿತ ಪ್ರೊಫ಼ೆಸರ್ ಬಾನಲಗಿಯವರು ಕೇಳಿದರು : "ಸ್ಟೈಲಿಸ್ಟಿಕ್ಸ್ ಬಗ್ಗೆ ನಿನ್ನ ಅಭಿಪ್ರಾಯ ಏನು?" ಅವರು ಬಿಸಿಯಾದ ಚಹಾದ ನೀರನ್ನು ಜಾಡಿಯಿಂದ… Read more…

  • ಹುಟ್ಟು

    ಶಾದಿ ಮಹಲ್‌ನ ಒಳ ಆವರಣದಲ್ಲಿ ದೊಡ್ಡ ಹಾಲ್‌ನಲ್ಲಿ ಹೆಂಗಸರೆಲ್ಲಾ ಸೇರಿದ್ದರು. ಹೊರಗಡೆ ಹಾಕಿದ್ದ ಶಾಮಿಯಾನದಲ್ಲಿ ಗಂಡಸರು ನೆರೆದಿದ್ದರು. ಒಂದು ಕಡೆಯ ಎತ್ತರವಾದ ವೇದಿಕೆಯ ಮೇಲೆ ಮದುವೆ ಗಂಡು,… Read more…