೧ ಮಣ್ಣ ಕಣ್ಣು ಮಣ್ಣ ನೋಡಿ ಬಣ್ಣದೊಡಲ ಬಾನ ಬೇಡಿ ಬೆಣ್ಣೆ ಬಾಳ ಕಲ್ಲು ಮಾಡಿ ಕಂಡು ಕಾಣದಂತೆ ಇಹುದು! ೨ ಜಗವೆ ಮಣ್ಣು ಮಣ್ಣೆ ಜಗವು ಸೊಗಕೆ ದುಃಖವೆಂಬ ನೊಗವು ಬಗೆಗೆ ಬಹಳ ದೂರ ದರಿವು ನಿಜ ನಿಜವೆಂದೆನ್ನುತಿಹುದು ೩ ತಿಳಿವು ಬಾಳಿಗಿರುವ ಕಣ್ಣು ಕಳೆದ...

ಕಂದ ಬಿದ್ದೆಯ ಎಂದು ಮುದ್ದಿಸಿ ನನಗೆ ಮರುಗುವರಿದ್ದರು; ಅಂದಿನೋದಿನ ಸುಖದ ದಿನದಲಿ ಜತೆಗೆ ಕುಣಿಯುವರಿದ್ದರು. ಎಲ್ಲ, ಎಲ್ಲಾ ಮಾಯವಾದುವು ಹಳೆಯ ಪಳಕೆಯ ಮುಖಗಳು. ಪರಿಸೆನೋಟವೊ, ಹೊಳೆಯಲೂಟವೊ, ಬಯಲಿನಾಟವೊ, ಪಾಟವೋ, ಇರುಳು ಮುಸುಕಿಯು ಮನೆಯ ನೆನೆಯದ ...

ನೆನೆದೆ ನೆನೆಯುವೆ ನೆನೆದೆ ನೆನೆಯುವೆ ಒಂದು ದಿನ ನೀನೆನ್ನನು- ನಿನ್ನೆದೆಯ ಕದ ತಟ್ಟಿ ಪ್ರೇಮದ ಭಿಕ್ಷೆ ಬೇಡಿದ ನನ್ನನು! || ಪಲ್ಲವಿ || ಇಂದು, ದಿಟ, ನೀನೆನ್ನನಳಲಿನ ಕಮರಿಯಾಳಕೆ ತಳ್ಳುತ ಗಟ್ಟಿ ನೆಲದೊಳೆ ನಿಂದೆನೆನ್ನುತ ಭಾವಿಸಿಹೆ ಮುದಗೊಳ್ಳುತ!...

ನೆಲವ ಪಸರಿಸಿ ಒಳಿತು ಹಬ್ಬಿದೆ ತಾಯತಬ್ಬಿದ ಮಗುವೊಲು ಬಲವು ನೆಲವನ್ನಾಳಹೊರಟಿದೆ ತುಳಿದು ಒಳಿತಿನ ತಲೆಯನು ಮೂಕ ತಾಯಿಗೆ ಮೂಕ ಮಗಳು ಸತಿಯ ಮೌನವ ಮೀರಿದೆ ಲೋಕದೊಳಗಿನ ಪತಿಗಳಂದದಿ ಬಲವು ಸತ್ತ್ವವ ಹೀರಿದೆ ಕರುಳಕೊರಗನು ಕರುಳೆ ಬಲ್ಲುದು ಎಂಬ ವ್ಯಾಖ್ಯ...

ವಸಂತ ಚಂದನ ನಂದನಗಂಧವ ನಿಂದಿಸುತಿದ ಆ- ನಂದದೊಳಂಜಲಿಯೊಳು ಕೊಳುವೆಲರಿನ- ಅಲರಲರಿನ ಪೆರಿಮಳಗಳೆ ಮೇಳದಿ ಮನಮನಗಳ ಹೊಗುತಲ್ಲಿ ಸುಮಾನದಿ ದಿನದ ದಿನದ ಜಂಜಡಮೊಳು ಮೈಗರೆ- ದಿಹ ಸಮ್ಮುದಗಳನೆಚ್ಚರಗೊಳಿಸುವ ವಸಂತ ಚಂದನ ಬಂಡೆಗಳೆದೆಬಿರಿಸುತ ಬೆಳೆದೊತ್ತಿನ ...

೧ ಹೆಜ್ಜೆ ಹೆಜ್ಜೆಗೆ ರಾಮ ಗರ್ಜಿಸುವೆ ಶ್ರೀರಾಮ ಮಜ್ಜೀವನದ ಪ್ರೇಮ- ಕಜ್ಜಾಯವಿದು ರಾಮ ಗರ್ಜಿಸುವೆ ಶ್ರೀರಾಮ ! ** ಜಗವಾಗ ಹಗೆಯಾಗೆ ಇಗೊ ನಿನ್ನ ಗೆಳೆಯನೆಂ- ದುಗುವ ಆ ನಗೆಯೊಡನೆ ಹೊಳೆಯಲಾ ಮಗುವು ಹೊಳೆಯಲಾ ಮಗುವು ಆ ಮಗುವು ನೀನೆಂದು ರಾಮಚಂದಿರನೆಂ...

ನಾಕಕ್ಕೆರಡಾದರೆ, ಎರಡ ಆಗುವದೋ ಒಂದು ಅಣ್ಣಾ, ಗುರುಗಳು ಕಲಿಸಿದರೆಮಗೆ ತ್ರೈರಾಶಿಕ ಇಂದು ದನಗಳಿಗೆಲ್ಲಾ ಕೋಡುಗಳೆರಡು ಕಾಲುಗಳಿವೆ ನಾಕು ಎರಡೇ ಕಾಲುಗಳಿರುವೀ ನಮಗೆ ಕೋಡೊಂದಿರಬೇಕು! ಆದರೆ ನಮಗೆ ಕೋಡೇ ಇಲ್ಲ ಅಣ್ಣಾ, ಸಾಲೆಯ ಗುರುಗಳು ನಮಗೆ ಕಲಿಸಿದರ...

ಬಿಚ್ಚುಗನ್ನಡದಿ ಬರೆವ ಕವಿತೆಗಳ ಕಂಡು ಕಟ್ಟಳೆಗೆಟ್ಟ ಕುಲಗೇಡಿಯೆಂಬಭಿಧಾನವಿತ್ತು ಮನಸಾರೆ ನಗುವಿಯೇತಕೆ ಅಣ್ಣ? ನೀ ನಗುವಿಯೆಂಬುದ ಮರೆತು ನಾ ಕವಿತ ಕಟಿಲ್ಲ. ನೀ ‘ಕವಿತೆ’ಯೆನಲೆಂದು ಕವಿತೆ ಬರೆದಿಲ್ಲ. ಕವಿಕಂಠೀರವರ ಕೀರ್ತಿಯನೆ ಬಯಸಿ...

ಶಾರದ ಚಂದ್ರನು ಬಾನಿನ ನೀಲಿಗೆ ಬೆಳ್ನಗು ಹೂವನು ಮುಡಿಸಿಹನು ದಧಿ ಧವಲಾಚ್ಛ ಜ್ಯೋತ್ಸ್ನಾ ಲಹರಿಯು ಭೂಮಿಗೆ ಬರಿಸಿತು ಪುಲಕವನು ಮಲಯ ಸಮೀರನು ಯಮುನಾ ಜಲದೊಡ- ನಾಡುತ ತೀಡುತ ಬರುತಿಹನು ವೃಂದಾವನದಲಿ ಧ್ಯಾನಾವಸ್ಥಿತ ವೃಕ್ಷಗಳೊಳಿಯನೆಬ್ಬಿಪನು ಸಂಧ್ಯಾ ...

1...910111213...933

ಪೆಟ್ರೋಲ್ ವಾಸ್ತೆ ಮೂಗಿಗೆ “ಗಫ್” ಅಂತಾ ಬಡೀತು! ಐದಾರು ಕ್ಯಾನ್‌ಗಟ್ಟಲೆ ಮನೆ ಸುತ್ತಮುತ್ತ ಉಗ್ಗಿ ಬಾಗಿಲು ಕಿಟಕಿ ಸಂಧಿನಿಂದ ಧುಭುಧುಭು – ಪೆಟ್ರೋಲ್ ಸುರಿವಿದ ತೀರಿಗೆ ಅದು ಹಳ್ಳ ಕೊಳ್ಳವಾಗಿ ಮನೆಯೊಳಕ್ಕೆ ಜಗ್ಗಿ ಹರಿದು ಬಂತು! ಮಲಗಿದ್ದ ಹಾಸಿಗೆ, ದಿಂಬು, ಹೊ...

ಭಾಗ ೧ ಒಂದು ಯುನಿವರ್ಸಿಟೀನಲ್ಲಿ ಆಧ್ಯಾಪಕನಾಗಿರುವ ನಾನು ಕ್ಯಾಂಪಸ್ ಆವರಣದೊಳಗೇ ಇರುವ ಫ್ಲಾಟೊಂದರಲ್ಲಿ ಹೆಂಡತಿ ಮಕ್ಕಳ ಜತೆ ಮನೆ ಮಾಡಿಕೊಂಡಿದ್ದೇನೆ. ಮನೆ ಮತ್ತು ಆಫೀಸಿಗೆ ಹೆಚ್ಚೇನೂ ದೂರವಿಲ್ಲದ ಕಾರಣ ವಾಹನಗಳಿಗೆ ವೃಥಾ ಕಾಸು ಖರ್ಚು ಮಾಡಬೇಕಾದುದಿಲ್ಲ. ಮಧ್ಯಾಹ್ನ ಲಂಚಿಗೆ ಕೂಡ ಮನ...

ಬಣಸಾಲೆ ಮುಂದಿನಿಂದ ಹೆಜ್ಜೆ ಹಾಕುವಾಗ ಹೊತ್ತು ಕಂತಿದ್ದು ಲಕ್ಷ್ಯಕ್ಕೆ ಬಂದಿರಲಿಲ್ಲ. ಆಚೀಚಿನ ಹನೆಮರದೆತ್ತರದ ತೇಗ-ಮಾವುಗಳ ಟಿಸಿಲುಗಳಲ್ಲಿ ಹಕ್ಕಿಗಳ ಗರಿ ಒದರುವ ಸರಪರ. ತಾರಕ ಸ್ವರದ ಮಕ್ಕಳಾಟ ವೀಕ್ಷಿಸುತ್ತಾ ರಸ್ತೇಲಿ ಬಿದ್ದಿದ್ದ ಸಣ್ಣ ಸಣ್ಣ ಕಲ್ಲುಗಳನ್ನು ಕಾಲಿನಿಂದ ಚಿಮ್ಮುತ್ತಾ...

ಬೆಳಕಿನಿಂದ ಜಗಜಗಿಸುವ ಸಂಜೆ ರಾವು ಬಡಿದಂತೆ ಮಬ್ಬಾಗಿತ್ತು. ಈ ಮಬ್ಬು ಹಿಂದೆಂದೂ ಇದಿಲ್ಲ. ದೇಶದ ಹದಿನೇಳು ವರ್ಷದ ಸ್ವಾತಂತ್ರದಲ್ಲಿ, ಮಧ್ಯಮ ತರಗತಿಯ ಜೀವನ ಕೈ ಬಾಯಿಯಾಗಿದ್ದರೂ ದೂರದ ಆಶಯ ಹೊಂಗಿರಣವೊಂದು ಸದಾ ಹೊಳೆದು ಭಾವೀ ಪೀಳಿಗೆಯ ಮನೋಲ್ಲಾಸ ಮಾಡುತ್ತಿತ್ತು. ಆದರೆ ಈ ಮಬ್ಬುಗತ್ತ...

ಅವಳು ಯಾವ ಹುಡುಗರ ಜೊತ ನಿಂತು ಮಾತನಾಡಿದರೂ ಶ್ರೀಕಾಂತನಪಾಲಿಗೆ ಆ ಹುಡುಗರು ವಿಲನ್‌ಗಳಂತೆಯೇ ಭಾಸವಾಗುತ್ತಿದ್ದರು. ಅವಳು ತನ್ನ ಕಾಲೇಜಿನ ಲೆಕ್ಚರರ್‌ಗಳು ಪಾಠ ಮಾಡುವ ವೈಖರಿ ಸ್ಟೈಲು ಹೈಲುಗಳ ಕುರಿತು ಬಣ್ಣಿಸುವಾಗಲೂ ಕೇಳಲಾಗದೆ ಶ್ರೀಯ ಹೊಟ್ಟೆಯಲೆಲ್ಲಾ ತಳಮಳ. ಅಷ್ಟೇಕೆ ಅವಳು ತನ್ನ ತ...

ಬೆಳಿಗ್ಗೆ ಏಳರ ಸಮಯ ಮೈಸೂರಿನ ರೋಹಿಣಿ ಲಾಡ್ಜ್‌ನ ಕೊಠಡಿ ಸಂಖ್ಯೆ ೧೦೩. ಪೋಲೀಸರು, ಪತ್ರಕರ್ತರು, ಫೊಟೋ ಗ್ರಾಫರ್‌ಗಳಿಂದ ತುಂಬಿಹೋಗಿದೆ. ಬೆಳ್ಳಂ ಬೆಳಿಗ್ಗೆಯೇ ಯುವತಿಯೊಬ್ಬಳ ಕೊಲೆ ನಡೆದುಹೋಗಿದೆ. ಲಾಡ್ಜ್‌ನ ಹೊರಗೆ ಜನರು ಕುತೂಹಲಭರಿತರಾಗಿ ಸೇರಿದ್ದಾರೆ. ಸೇರಿದ್ದ ಜನರನ್ನು ನಿಯಂತ್ರ...