ನಿನ್ನ ದಮ್ಮಯ್ಯ ತಪ್ಪು ತಿಳಿಕೋಬೇಡ ನನ್ನ ತಿಂದದ್ದೆ ತಿಂದು ಜಗಿದದ್ದೆ ಜಗಿದು ಬರುತಿದೆ ನನಗೆ ವಾಕರಿಕೆ ಅಷ್ಟೆ ತಿಳಿಸಾರು, ಹುಳಿ ಸಾಂಬಾರು, ಹುರಿದ ಮೀನು ಅನ್ನ ಮೊಸರು – ನಾ ಹುಟ್ಟಿದಂದಿನಿಂದ ಮುಕ್ಕಿದ್ದು. ಬದುಕಬೇಕಲ್ಲ ಎಂದು ನುಂಗುತಿದ...
ಮೈದಾನದೊಳಗೆಲ್ಲ ಕುದುರೆ, ಆಮೆ, ಒಂಟೆ ಎತ್ತು, ಆನೆ, ಮೊಲ ಇವುಗಳಿಗೆಲ್ಲಾ ರೇಸಂತೆ ಯಾರು ಯಾರನು ಸೋಲಿಸಿ ಮುಂದೆ ಹೋಗುವರೋ ಮುಂದ್ಹೋದವರ ತಳ್ಳಿ ಕಾಲೆಳೆದು ಬೀಳಿಸಿ ಮುಂದ್ಹೋಗುವರೋ ಅವರೆ ಅಂತೆ, ಗೆದ್ದವರು ಇಲ್ಲಿ ಗೆಲ್ಲುವವರಾರು ಕಾಲಿಡಿದು ಎಳೆಯುವ...
ಹೇ ತಾಯಿ, ನೀ ಬರಿಯ ನೀರಲ್ಲ ನೀರೆಂಬ ಮಾಯೆ! ಹನಿಹನಿಯ ಬೊಗಸೆ ಬೊಗಸೆ ಹೀರಿದರೂ ಹಿಂಗಿತೇ ದಾಹ? ಮತ್ತೆ ಮತ್ತೆ ಬೇಕೆನಿಸುವ ತೀರದಾ ಮೋಹ! ಬರಿಯ ನೀರೆಂದು ಬೋಗುಣಿಯಲಿ ತುಂಬಿಸಿಡುವಾಗ ಥಟ್ಟನೆ ಘನೀಬವಿಸಿ ಮಂಜುಗಡ್ಡಯಾಗಿಬಿಡುವ ಮಾಯೆಯ ಚಮತ್ಕಾರ! ವಿವಿ...
ಪೇಪರ್ ಓದಿದವನೇ ಬೇನಾಮಿಗಳ ನಾಯಕ ನಮ್ಮ ಕೇರಿಯ ಸುಬ್ಬ ರಸ್ತೆಗಿಳಿದೇ ಬಿಟ್ಟ ಹಿಡಿದು ಕೈಯಲ್ಲೊಂದು ಸುನಾಮಿ ಡಬ್ಬ ಊರೆಲ್ಲ ದಿನವಿಡೀ ಮೆರವಣಿಗೆ ಹೋದ ಧರಿಸಿ ಬಿಳೀ ಖಾದಿ ಪೈಜಾಮ ಜುಬ್ಬ ರಾತ್ರಿ ಅವನ ಪಟಾಲಂ ಜತೆ ಬಾರ್ ಅಂಡ್ ರೆಸ್ಟೋರೆಂಟಿನಲ್ಲಿ ಬ...
ಎಷ್ಟು ದಿನಾದರು ಇಷ್ಟಿಷ್ಟೆ ಆಶೆಗಳು ನಷ್ಟವಾಗುತಾವೆ ಮನದಾಗೆ ತೇಲುವ ಕನಸೆಲ್ಲ ಆವ್ಯಾಗಿ ಹೋಗ್ತಾವೆ ಇಳಿವಲ್ದು ಮಳೆಯಾಗಿ ನೆಲದಾಗೆ ಕಾಲಕಾಲಕು ನಿನ್ನ ಕರಿತಾನೆ ಬದುಕೀನಿ ಕರೆಯೋದು ಒಂದೇ ಕೊನೆಯಾಸೆ ಏನೆಲ್ಲ ಇದ್ರೂನು ಏನೆಲ್ಲ ಬಂದ್ರೂನು ಕೊರಗೋದು ತ...
ಕಾಲು ತೊಳೆಸಿಕೊಂಡ ಅಳಿಯನಿಗೆ ಅರಿಯದು ನಾಳೆ ತಾನು ತೊಳೆಯಲೇಬೇಕು ತನ್ನ ಅಳಿಯನ ಕಾಲನ್ನು ಎಂದು! *****...
ಯಾರೋ ಬೇಡುವ ಯಾರೋ ಹಾಡುವ ಬೆರೆಯದ ವಾಣಿಗಳು, ಯಾರೋ ಮುಗಿಲಲಿ ಯಾರೊ ಕಣಿವೆಯಲಿ ಹೊಂದದ ಚಿತ್ರಗಳು! ತಿನ್ನಲಾರದೆ ಅನ್ನವ ಮೋರಿಗೆ ತೂರುವ ಹಸ್ತಗಳು, ಮಣ್ಣಿನ ಜೊತೆ ಬೆರತನ್ನವೆ ಎಷ್ಟೋ ಒಡಲಿಗೆ ವಸ್ತುಗಳು, ಚಿನ್ನದ ಭಾರಕೆ ತಾರಾಡುವ ಮೈ ಸರಿಯುವ ಠೀವಿ...
ಜೀವದ ಕತ್ತನ್ನು ಕತ್ತರಿಸಲು ಕಾಲನ ಕತ್ತರಿ ಮಸೆಯುತ್ತಿರುತ್ತದೆ. *****...
ಕಣ್ಣು ಸುತ್ತಲಿನ ಕಪ್ಪುಛಾಯೆಗೆ ಅದೆಷ್ಟು ಮೇಕಪ್ ಗಲ್ಲಕೆ ಅತಿಯಾದ ಬ್ಲಶ್ ಅದವಳಿಗೆ ಹೊಂದುವದೇ ಇಲ್ಲ ನಗು ಎಲ್ಲಿಯೋ ಕಾಲು ಕಿತ್ತಂತೆ ಮಾತುಗಳಿಲ್ಲ ಗುಮ್ಮಿ ಅಂತರಾಷ್ಟ್ರೀಯ ಗಗನಸಖಿ ಇವಳೆ?– ಯಾಕೋ ಅವಳನ್ನು ಮತ್ತೆ ಮತ್ತೆ ನೋಡಬೇಕೆನಿಸಿ ಏನೇ...
ನಿನ್ನದೀ ಲೋಕದಲಿ ನಿನ್ನಣತಿಯಂತೆ ಎನ್ನ ಬದುಕಿರುತಿರಲು ನನಗಿಲ್ಲ ಚಿಂತೆ ||ಪ|| ನಿನ್ನ ಕರುಣ ಬೆಳಕಿನ ಲೀಲೆ, ಮನದಿ ತಾ ತುಂಬಿರಲು ಎನ್ನ ಕಾಡುವುದೆಂತು ತಮಸ ತಾಪದಾಽಚಿತೆ, ||ಅ.ಪ.|| ಕರಿ ಕಾರಿರುಳುಗಳು ಬಣ್ಣದೊಳಥಳಕುಗಳು ಇಡಿಕಿರಿದರೇನಂತೆ ನನ್ನ ...
(ದುಡ್ಡೇ ಧರ್ಮ, ದುಡ್ಡೇ ನೀತಿ, ದುಡ್ಡೇ ನ್ಯಾಯ, ದುಡ್ಡೇ ದೊಡ್ಡಪ್ಪ. ದುಡ್ಡಿಗಾಗಿ ಯಾವ ಹೇಸಿಕೆಲಕಕ್ಕೂ ಹಿಂಜರಿಯದ ಕೆಲವು ಸ್ವಾರ್ಥಿಗಳು ಇರುತ್ತಾರೆ. ಸ್ವಾರ್ಥ ಸಾಧನೆಗಾಗಿ, ದುರಾಶೆಯನ್ನು ಈಡೇರಿಸಿಕೊಳ್ಳುವದಕ್ಕಾಗಿ, ಹೊತ್ತು ಸಾಧಿಸಿ ಕತ್ತೆಯ ಕಾಲನ್ನು ಕೂಡ ಹಿಡಿದು ಕೊಳ್ಳಲು ಅವರು...
ಅವನ ಈಗಿನ ಸ್ಥಿತಿಗೆ ಭಗವದ್ಗೀತಾ, ಉಪನಿಷತ್ತುಗಳು, ಪುರಾಣ, ವೇದಗಳು, ಕುರಾನ್, ಬೈಬಲ್‌ಗಳೇ ಬಹು ಮಟ್ಟಿಗೆ ಕಾರಣವೆಂದು ಹೇಳಬಹುದು. ಅವನ್ಯಾವ ಗ್ರಂಥಗಳನ್ನೂ ಓದಿದವನಲ್ಲ. ಯಾವ ಧರ್ಮಕ್ಕೂ ಗಟ್ಟಿಯಾಗಿ ಅಂಟಿಕೊಂಡು ಬದುಕುವವನಲ್ಲ. ದೇವರಿದ್ದಾನೋ ಇಲ್ಲವೋ ಎಂಬುವುದವನಿಗೆ ಗೊತ್ತಿಲ್ಲ. ಹು...
ಮಧ್ಯಾಹ್ನ ಸೂರ್ಯನು ಆಕಾಶವೃಕ್ಷವನ್ನು ಏರಿದ್ದನು. ಅವನ ಉಷ್ಣವಾದ ಕಿರಣಗಳು ದೇವಗಿರಿಯ ರಾಜಮಾರ್ಗಗಳನ್ನು ತಪ್ತಮಾಡುತ್ತಲಿದ್ದುವು. ಅತ್ತಿತ್ತ ಮೇಯುತ್ತಿದ್ದ ಗೋವುಗಳು ವೃಕ್ಷಛಾಯೆಯನ್ನು ಆಶ್ರಯಿಸಿ, ವಿಶ್ರಾಂತಿಯಿಂದ ಮೆಲುಕಾಡುತ್ತಿದ್ದುವು; ಆಗಾಗ ಬಾಲಗಳನ್ನು ಬೀಸುತ್ತ, ಬೆನ್ನಮೇಲಿನ ...





