ಕೋರ್‍ಟಿನಿಂದ ಬಂದ ಮೀರಾ ಬಳಲಿದವಳಂತೆ ಕುಸಿದು ಕುಳಿತಳು. ದೇಹ ಬಳಲಿದ್ದರೂ ಸಂತಾಪದಿಂದ ಎದೆ ಕುದಿಯುತ್ತಿತ್ತು. ಎದೆಯಲ್ಲಿ ಕುದಿತ, ಮುಖ ಕಣ್ಣುಗಳನ್ನು ಕೆಂಪು ಮಾಡಿ, ಇಡೀ ದೇಹ ಕೋಪದಿಂದ ಕಂಪಿಸುವಂತೆ ಮಾಡಿತ್ತು. ಕಾಲಲ್ಲಿದ್ದ ಚಪ್ಪಲಿಗಳನ್ನು ಕೂಡಾ ಕಳಚದೇ, ಕೈಯಲ್ಲಿದ್ದ ಪರ್ಸ್, ಪುಸ್ತಕವನ್ನು ಸೋಫಾದ ಮೇಲೆಸ...

ಮಗು ಚಿತ್ರ ಬರೆಯಿತು ಬೆರಳುಗಳ ಕೊರಳ ಆಲಿಸಿ ಗೆರೆಯನೆಳೆಯಿತು. ಪುಟ್ಟ ಮನೆಯೊಂದ ಕಟ್ಟಿ ಮನೆಯ ಮುಂದೊಂದು ಮರವ ನೆಟ್ಟು ರೆಂಬೆ ಕೊಂಬೆಗೆ ಎಲೆಯನಿಟ್ಟು ಎಲೆಯ ನಡುವೆ ಹೂವನರಳಿಸಿ ಹೂವಿನ ಜೊತೆಗೆ ಹಣ್ಣನಿರಿಸಿ ಹಿಗ್ಗಿ ನಲಿಯಿತು. ಮಗು ಚಿತ್ರ ಬರೆಯಿತು...

ವಿಜಯದಶಮಿ; ಲೋಕವೆಲ್ಲವೂ ಸಂತೋಷದಿಂದ ಕಲಿಯುವ ಶುಭ ದಿವಸ. ಬೆಳಗಾಯಿತು; ತಂಗಾಳಿಯು ಮನೋಹರವಾಗಿ ಬೀಸುತ್ತಿತ್ತು; ದಿಕ್ಕುಗಳು ಕಳೆಯೇರಿದುವು, ಪಕ್ಷಿಗಳು ಮಧುರವಾಗಿ ಗಾನವಾಡಲಾರಂಭಿಸಿದವು, ಪೂರ್ವದಿಕ್ಕಾಮಿನಿಯು ಹಣೆಯಲ್ಲಿಟ್ಟ ಕುಂಕುಮದ ಬೊಟ್ಟಿನಂತೆ...

ನನ್ನ ಕೊಟ್ಟಿದ್ದು ಉಪ್ಪುಗಂಜಿಗೂ ತತ್ವಾರ ತಟ್ಟಿ ತಬ್ಬಲಿಯ ಗೂಡು ಎಂದು ನಿಟ್ಟುಸಿರೇ ಉಸಿರಾಗಿತ್ತು. ಬೆಟ್ಟಕ್ಕೆ ಹೋಗಿ ಸೊಪ್ಪು ತರುವಾಗಿನ ಸಮಯವೆಲ್ಲಾ ಹನಿಹನಿಯ ಉದುರಿಸಿ ನಯನಗಳು ಕೊಳಗಳಾಗಿತ್ತು. ಸೆಗಣಿ ಸಾರಿಸಿ ತೆಗೆದು ಗಂಜಳ ಬಗೆದು ಬೆರಣಿ ತಟ...

ರಸ್ತೆ ಬದಿಯಲ್ಲಿ ಕುಳಿತಿದ್ದ ಆತ್ಮವೊಂದನ್ನು ಕೇಳಿದೆ-ಸತ್ತವರು ಉಳಿದವರಿಂದ ಬಯಸುವುದಾದರೂ ಏನನ್ನು? ಆತ್ಮ ನುಡಿಯಿತು-ತಿಳಿದವರ ಹಾಗೆ ಮಾತಾಡದಿರುವುದು ತಿಳಿಯದ ಸಂಗತಿಗಳ ಬಗ್ಗೆ ಮುಖ್ಯವಾಗಿ ನಮ್ಮ ಕುರಿತು ನಿಜಕ್ಕೂ ನಾವು ಉತ್ತರಿಸಲಾರದ ಸಂದೇಹಗಳನ...

ಪ್ರಿಯ ಸಖಿ, ಏಳೆಂಟು ವರ್ಷ ಹುಡುಗಿಯೊಬ್ಬಳು ಆಟಕ್ಕಾಗಿ ಇರುವೆಗಳನ್ನು ಕೊಂದು ಸಣ್ಣ ಡಬ್ಬಿಯೊಂದರಲ್ಲಿ ಸಂಗ್ರಹಿಸಿಡುತ್ತಿದ್ದಾಳೆ. ಇದನ್ನು ಕಂಡ ಅವಳ ತಂದೆಗೆ ಸಿಟ್ಟುಕ್ಕಿ ಬಂದು ಅವಳ ಕೈಗಳೆರಡನ್ನೂ ಕಿಟಕಿಗೆ ಕಟ್ಟಿ ದಿನವಿಡೀ ನಿಲ್ಲಿಸಿದ. ಕಟ್ಟು ...

ಕೂಡಲೇ ಏನಾದರೂ ಮಾಡಬೇಕು… ಇದಿಷ್ಟು ನಮಗೆ ಗೊತ್ತು. ಅದಕ್ಕಿನ್ನೂ ಕಾಲ ಬಂದಿಲ್ಲ. ಈಗ ತಡವಾಗಿದೆ. ನಮಗೆ ಗೊತ್ತು. ನಾವು ತಕ್ಕಮಟ್ಟಿಗೆ ಅನುಕೂಲಸ್ಥರು ಹೀಗೇ ಬದುಕುತ್ತೇವೆ ಇದರಿಂದೆಲ್ಲಾ ಏನೂ ಫಲವಿಲ್ಲಾ, ನಮಗೆ ಗೊತ್ತು. ನಮಗೆ ಗೊತ್ತು, ತಪ್...

ಕಟಗ ರೊಟ್ಟಿಗೆ ಗುಟುಗು ನೀರಿಗೆ ಕೋತಿ ಕಾಳಗ ನಡೆದಿದೆ ಹುಳಿತ ಹಿಂಡಿಗೆ ಕೊಳೆತ ಸಾರಿಗೆ ಹಾವು ಮುಂಗಲಿಯಾಗಿದೆ ಜಾರಿಬಿದ್ದಾ ಆತ್ಮ ರತುನಾ ಜಂಗು ರಾಡಿಯ ಅಡರಿತೊ ದೀಪವಾರಿತೊ ದೀಪ್ತಿ ತೀರಿತೊ ಬೆಳಗು ಇದ್ದಲಿಯಾಯಿತೊ ರಕ್ತ ರಾಗಾ ರುಂಡ ಮುಂಡಾ ಮದ್ದು ...

ಸುಕ್ಕುತೊಗಲಿನ ಮೇಲೆ ಬಿದ್ದ ಬರೆಗಳ ಗುರುತು ನೀರು ಬತ್ತಿದ ತೊರೆಯ ವಿಕಟಪಾತ್ರ, ಉಸಿರು ಬಿಗಿಹಿಡಿದು ಗಪಗಪ ತಿಂದ ಕಸಿಮಾವು ಕೊಟ್ಟ ಸುಖಬಾಧೆಗಳ ಚಿತ್ರಗಣಿತ. ಚಿನ್ನಿ ಬಾಲಕನಲ್ಲಿ ಸಣ್ಣಗೆ ಕಣ್ಣೊಡೆದ ಬಾಧೆ ತುರಿಕೆಹಿತ ಮುಖದಲ್ಲಿ ಮೊಳೆತ ಕಡಲೆ, ಅಂಗ...

ಬೆಳ್ಳಾನೆ ಬೆಳದಿಂಗಳು ಬೆಳ್ಳಿಯ ಕೋಲ್ ಮಿಂಚು ಬೆಳ್ಳಿ ಕುದುರೆ ಏರಿ ಬಂದಾನೆ ನನ್ನ ಸರದಾರ||ಽಽಽಽ ಮನಸು ಲಲ್ಲೆಯಾಡಕೊಂಡ್ಯಾವೆ ಅವನ ನೋಡಿ||ಽಽಽಽ ಅಂಬರದ ಹೊಂಬೆಳಕಲ್ಲಿ ಇಬ್ಬನಿಯ ತಂಪಲ್ಲಿ ಜೊತೆಗೂಡಿ ಆಡಿದ ಆಟದಾಗ ನಾಚಿ ಮೊಗ್ಗಾದೆನೆ||ಽಽಽಽ ಗಂಡು: ...

ಕೋರ್‍ಟಿನಿಂದ ಬಂದ ಮೀರಾ ಬಳಲಿದವಳಂತೆ ಕುಸಿದು ಕುಳಿತಳು. ದೇಹ ಬಳಲಿದ್ದರೂ ಸಂತಾಪದಿಂದ ಎದೆ ಕುದಿಯುತ್ತಿತ್ತು. ಎದೆಯಲ್ಲಿ ಕುದಿತ, ಮುಖ ಕಣ್ಣುಗಳನ್ನು ಕೆಂಪು ಮಾಡಿ, ಇಡೀ ದೇಹ ಕೋಪದಿಂದ ಕಂಪಿಸುವಂತೆ ಮಾಡಿತ್ತು. ಕಾಲಲ್ಲಿದ್ದ ಚಪ್ಪಲಿಗಳನ್ನು ಕೂಡಾ ಕಳಚದೇ, ಕೈಯಲ್ಲಿದ್ದ ಪರ್ಸ್, ಪುಸ...

ಮಳೆ ಎಂದರೆ ಅಂತಹ ಇಂತಹ ಮಳೆಯಲ್ಲ. ಕೈ ಹೊರುವುದನ್ನು ಮೈ ಹೊರಲಿ ಎಂದು ಎಲ್ಲಾ ಬಟ್ಟೆ ಬರೆಗಳನ್ನೂ ಮೈಯ ಮೇಲೆಯೇ ಹಾಕಿಕೊಂಡಿದ್ದೆ. ಹಿಡಿದುಕೊಂಡಿದ್ದ ಛತ್ರಿ, ಹೊದ್ದಿದ್ದ ಜಮಖಾನೆ, ಉಟ್ಟಿದ್ದ ಎರಡು ಗಾಂಧಿಪಂಚೆ, ತೊಟ್ಟಿದ್ದ ಕಾಕಿಚೆಡ್ಡಿ, ಇಷ್ಟೆಲ್ಲಾ ನೆನೆದುದಲ್ಲದೆ, ಕಟ್ಟಿದ್ದ ಕಾಚ ...

ಲಲಿತೆ ಬಾಲವಿದವೆ. ಮದುವೆಯಾದ ಮೂರು ತಿಂಗಳಿಗೆ ಗಂಡ ಸಿಡುಬಿನಲ್ಲಿ ಸತ್ತ. ಲಲಿತೆ ಕುಂಕುಮವಳಿಸಿದಳು. ಒಂದೆರಡು ತಿಂಗಳ ನಂತರ ಕಣ್ಣೀರನ್ನೊರೆಸಿ ಮುಖ ತೊಳೆದುಕೊಂಡು ತನ್ನ ವಿದ್ಯಾಭ್ಯಾಸವನ್ನು ಮುಂದುವರಿಸಿದಳು. ಅವಳು ಆಗ ತಾನೇ ಇಂಟಿರ್‌ ಮೀಡಿಯಟ್‌ ಪಾಸುಮಾಡಿದ್ದಳು. ಎಂ. ಬಿ. ಬಿ. ಎಸ್...

ತೆಂಕಣದಿ ಹದಿನಾರು ಮೈಲಿಗಳಾಚಿ ಬಾಂದಳಕೆ ಭುಜಗೊಟ್ಟು ನಿಂತಿರುವ ಸಿಂಹಗಡವೇ-ಇದೋ ನಿನಗೆ ತಲೆಬಾಗುವೆನು. ಶತಮಾನಗಳ ಹಿಂದೆ, ನರಜಾತಿಯಲಿ ಹರಿಯಂತೆ ಮೆರೆದ ವೀರಲೀಲಾಲೋಲ ಶಿವಪ್ರಭುವನು ಶಿರದಲಿ ಹೊತ್ತು ಮೆರೆಯಿಸಿದ ಸಿಂಹಗಡವೇ ಇದೋ-ನಿನಗೆ ವಂದಿಸುವೆನು. ಅಂದು ನಮ್ಮ ನಾಡಿನ ಧರ್‍ಮ-ನಮ್ಮ ಹ...

(ದುಡ್ಡೇ ಧರ್ಮ, ದುಡ್ಡೇ ನೀತಿ, ದುಡ್ಡೇ ನ್ಯಾಯ, ದುಡ್ಡೇ ದೊಡ್ಡಪ್ಪ. ದುಡ್ಡಿಗಾಗಿ ಯಾವ ಹೇಸಿಕೆಲಕಕ್ಕೂ ಹಿಂಜರಿಯದ ಕೆಲವು ಸ್ವಾರ್ಥಿಗಳು ಇರುತ್ತಾರೆ. ಸ್ವಾರ್ಥ ಸಾಧನೆಗಾಗಿ, ದುರಾಶೆಯನ್ನು ಈಡೇರಿಸಿಕೊಳ್ಳುವದಕ್ಕಾಗಿ, ಹೊತ್ತು ಸಾಧಿಸಿ ಕತ್ತೆಯ ಕಾಲನ್ನು ಕೂಡ ಹಿಡಿದು ಕೊಳ್ಳಲು ಅವರು...

ಕತ್ತಲ್ಗಡಲ ತಳದಲಿತ್ತು ಲೋಕ. ಕೋಟಿ ತಾರೆಗಳಿಂದ ಕಿಕ್ಕಿರಿದ ಗಗನತಲ, ನಿಶಾಸುಂದರಿಯ ವಜ್ರಖಚಿತ ನೀಲಾಂಬರದ, ಹರಡಿದ ಸೆರಗಿನಂತೆ ಶೋಭಿಸಿತ್ತು. ನೀರವ! ನಿಶ್ಚಲ! ಅನಿಲನು ಕೂಡ ದಿನವೆಲ್ಲ ಅಲೆದಲೆದು, ಸೊಕ್ಕಿ ಮೆರೆದು ಸೊರಗಿ ಸೋತು ಸುಮ್ಮನಿದ್ದ. ಒಂದು ಮನೆ. ಅದರ ಹೆಸರು “ಮಾಯಾಲಯ...