ಪದೇ ಪದೇ ಕೇಳುತ್ತೀಯಲ್ಲ
ಮಗಳೆ,
ಸಮುದ್ರದಾಳ ಅಗಲ
ಬಣ್ಣ ವಾಸನೆ ರುಚಿ
ಅಲೆ, ನೊರೆ, ತೆರೆ
ತೇಲಾಡುವ ನೌಕೆ ಹಡಗು ಲಂಗರು
ಇವೆಲ್ಲ ಏನೆಂದು!
ಅದೆಲ್ಲ ನಾನು ನೀನು
ನಮ್ಮ ನಿರಂತರ ಮಹಾ ಮೊರೆತ.
*****

ಲತಾ ಗುತ್ತಿ
Latest posts by ಲತಾ ಗುತ್ತಿ (see all)