Home / ಕಥೆ / ಕಿರು ಕಥೆ / ಸಂವಾದ

ಸಂವಾದ

ಒಮ್ಮೆ ಹಲ್ಲುಗಳಿಗೂ ನಾಲಿಗೆಗೂ ಸಂವಾದ ನಡೆಯಿತು.

“ನಾಲಿಗೆ! ನಿನಗೆ ಎಚ್ಚರಿಕೆ ಇರಲಿ. ನೀನು ಹಲ್ಲುಗಳ ಕೋಟೆಯಲ್ಲಿದ್ದೀಯ.” ಎಂದು ಹಲ್ಲುಗಳು ಹಲ್ಲು ಕಡೆದು ಹೇಳಿದವು.

“ಏ! ಹಲ್ಲುಗಳೇ! ಹಲ್ಲು ಕಡೆದು ಪುಡಿಯಾಗದಿರಿ. ನಿಮ್ಮ ಕೆಲಸ ನೋಡಿಕೊಳ್ಳಿ ನನ್ನ ನಾಲಿಗೆ ಚಾವಟಿ ಏಟು ತಿನ್ನಲು ಬಯಸಬೇಡಿ” ಎಂದಿತು ನಾಲಿಗೆ.

“ನಾಲಿಗೆ! ಮಾತಿನಲಿ ಮಾಧುರ್ಯವಿರಲಿ, ಶುದ್ದಿ ಇರಲಿ. ನೀನು ಮೌನವಾಗಿದ್ದರೆ ನಿನಗೆ ಶೋಭೆ. ಇಲ್ಲಿ ನೀ ನಾಲಿಗೆ ಚಾಚಿದರೆ ನಾವು ಕಡಿದು ಹಾಕಿ ಬಿಡುತ್ತೇವೆ” ಎಂದವು
ಹಲ್ಲುಗಳು.

ನಾಲಿಗೆಗೆ ಅಸಾಧ್ಯ ಕೋಪ ಬಂತು. “ನೀವು ಹುಟ್ಟು ಸಾವಿನ ಚಕ್ರದಲ್ಲಿ ಸಿಕ್ಕಿದ್ದೀರಿ. ಹಾಲು ಕುಡಿದು ಹುಟ್ಟುತ್ತೀರಿ ಮತ್ತೆ ಕೆಲವು ವರ್ಷಗಳಲ್ಲಿ ಬಿದ್ದು ಹುಟ್ಟುತ್ತೀರಿ. ಮತ್ತೆ ಮುದಿತನದಲ್ಲಿ ನಿಮಗೆ ಅಸ್ತಿತ್ವವಿಲ್ಲ. ನೋಡಿದರೆ ಜೋರು ಹೆಚ್ಚು ನಿಮಗೆ” ಎಂದಿತು ನಾಲಿಗೆ.

“ನಿನ್ನ ನಾಲಿಗೆಗೆ ಕಡಿವಾಣ ಇರಲಿ, ನಾಲಿಗೆಯಿಂದ ನಿನ್ನ ವ್ಯಕ್ತಿತ್ವ. ನಿನ್ನ ನಾಲಿಗೆ ಹೊಲಸಾದರೆ ನಿನ್ನ ಗೌರವಿಸುವವರೇ ಇಲ್ಲ” ಎಂದಿತು ಹಲ್ಲುಗಳು.

“ನಿಮಗೆ ಸಿಹಿ ತಿಂದರೆ ಆಗದು, ತಣ್ಣಗೆ ತಿಂದರಾಗದು, ಸ್ವಲ್ಪ ಹೆಚ್ಚು ಸಿಹಿ ತಿಂದರೆ “ನಿಮ್ಮನ್ನು ಹುಳು ತಿಂದು ನೀವು ಸಾಯುತ್ತಿರಿ. ಏಕೆ, ಇಷ್ಟು ನಿಮಗೆ ಜಂಭ?” ಎಂದು ನಾಲಿಗೆ ಮೂದಲಿಸಿತು.

“ನಾಲಿಗೆ! ನೀನು ಏನೇ ಹೇಳು ನಮ್ಮಂತೆ ನೀನು ನಗ ಬಲ್ಲೆಯಾ? ನಮ್ಮ ನಗುಮೊಗದಲ್ಲಿ ಸೂರ್ಯನ ಬೆಳಕಿರುತ್ತದೆ. ಎಲ್ಲರನ್ನೂ ನಮ್ಮ ನಗುವಿನಿಂದ ಸೆರೆ ಹಿಡಿಯುತ್ತೇವೆ. ನಿನ್ನಿಂದ ಏನು ಸಾಧ್ಯ?” ಎಂದು ಸವಾಲು ಹಾಕಿತು.

“ನಾಲಿಗೆ ಎಂದರೆ ರುಚಿ, ರುಚಿಯಿಂದ ರಸ ರಸದಿಂದ ಸಮರಸ, ಬಾಳಿನಲ್ಲಿ ಆರೋಗ್ಯ ತುಂಬುತ್ತೇನೆ, ನನ್ನಿಂದ ಹೊಟ್ಟೆ ತುಂಬುತ್ತದೆ. ಚೈತನ್ಯ ತುಂಬಿ ಹರಿಯುತ್ತದೆ. ನನಗೆ ನೀವು ಸಮಾನರೇ ಹೇಳಿ?” ಎಂದಿತು ನಾಲಿಗೆ.

“ನಾವು ಅಗೆಯದಿದ್ದರೆ ಆಹಾರ ಅಜೀರ್ಣವಾಗುತ್ತೆ. ಸಾಕು ಬಾಯಿ ಮುಚ್ಚು” ಅಂತ ನಾಲಿಗೆಯನ್ನು ನೋಡಿ ಗಹಗಹಿಸಿ ನಗುವಾಗ ಕಾಲು ಎಡವಿ ಬಿದ್ದು, ಹಲ್ಲು ಮುರಿದು ಹೋಯಿತು. ಮುರಿದ ಹೋದ ಹಲ್ಲನ್ನು ನೋಡಿ ನಾಲಗೆ ಮನದಲ್ಲಿ ಸಂತಸಗೊಂಡಿತು. ಇದನ್ನು ಗಮನಿಸುತ್ತಿದ್ದ ಬುದ್ದಿ, ಇದು ಅತಿಯಾಯಿತು ಅಂದುಕೊಂಡಿತು. ನಿಮ್ಮ ಸಂವಾದದಲ್ಲಿ ಯಾವ ಹುರುಳೂ ಇಲ್ಲ. ಬುದ್ದಿ ನಿಮ್ಮನ್ನು ಆಳುವಾಗ ನಿಮ್ಮ ಪ್ರತಾಪ ಕೊಚ್ಚಿಕೊಳ್ಳುವುದು ಸರಿಯೇ?” ಎಂದಿತು.

ಹಲ್ಲು ನಾಲಿಗೆ ಮುಚ್ಚಿದ ಬಾಯಿ ಒಳಗೆ ಸುಮ್ಮನಾದವು, ಧ್ಯಾನ ಭಂಗವಾಗಿ, ಶಿಷ್ಯನ ಮನದಲ್ಲಿ ಆಗುತ್ತಿದ್ದ ಹಲ್ಲುನಾಲಿಗೆ ಸಂವಾದ ಅಲ್ಲಿಗೆ ಮುಕ್ತಾಯವಾಯಿತು.
*****

Tagged:

Leave a Reply

Your email address will not be published. Required fields are marked *

ಲಲಿತೆ ಬಾಲವಿದವೆ. ಮದುವೆಯಾದ ಮೂರು ತಿಂಗಳಿಗೆ ಗಂಡ ಸಿಡುಬಿನಲ್ಲಿ ಸತ್ತ. ಲಲಿತೆ ಕುಂಕುಮವಳಿಸಿದಳು. ಒಂದೆರಡು ತಿಂಗಳ ನಂತರ ಕಣ್ಣೀರನ್ನೊರೆಸಿ ಮುಖ ತೊಳೆದುಕೊಂಡು ತನ್ನ ವಿದ್ಯಾಭ್ಯಾಸವನ್ನು ಮುಂದುವರಿಸಿದಳು. ಅವಳು ಆಗ ತಾನೇ ಇಂಟಿರ್‌ ಮೀಡಿಯಟ್‌ ಪಾಸುಮಾಡಿದ್ದಳು. ಎಂ. ಬಿ. ಬಿ. ಎಸ್...

ತೆಂಕಣದಿ ಹದಿನಾರು ಮೈಲಿಗಳಾಚಿ ಬಾಂದಳಕೆ ಭುಜಗೊಟ್ಟು ನಿಂತಿರುವ ಸಿಂಹಗಡವೇ-ಇದೋ ನಿನಗೆ ತಲೆಬಾಗುವೆನು. ಶತಮಾನಗಳ ಹಿಂದೆ, ನರಜಾತಿಯಲಿ ಹರಿಯಂತೆ ಮೆರೆದ ವೀರಲೀಲಾಲೋಲ ಶಿವಪ್ರಭುವನು ಶಿರದಲಿ ಹೊತ್ತು ಮೆರೆಯಿಸಿದ ಸಿಂಹಗಡವೇ ಇದೋ-ನಿನಗೆ ವಂದಿಸುವೆನು. ಅಂದು ನಮ್ಮ ನಾಡಿನ ಧರ್‍ಮ-ನಮ್ಮ ಹ...

(ದುಡ್ಡೇ ಧರ್ಮ, ದುಡ್ಡೇ ನೀತಿ, ದುಡ್ಡೇ ನ್ಯಾಯ, ದುಡ್ಡೇ ದೊಡ್ಡಪ್ಪ. ದುಡ್ಡಿಗಾಗಿ ಯಾವ ಹೇಸಿಕೆಲಕಕ್ಕೂ ಹಿಂಜರಿಯದ ಕೆಲವು ಸ್ವಾರ್ಥಿಗಳು ಇರುತ್ತಾರೆ. ಸ್ವಾರ್ಥ ಸಾಧನೆಗಾಗಿ, ದುರಾಶೆಯನ್ನು ಈಡೇರಿಸಿಕೊಳ್ಳುವದಕ್ಕಾಗಿ, ಹೊತ್ತು ಸಾಧಿಸಿ ಕತ್ತೆಯ ಕಾಲನ್ನು ಕೂಡ ಹಿಡಿದು ಕೊಳ್ಳಲು ಅವರು...

ಕತ್ತಲ್ಗಡಲ ತಳದಲಿತ್ತು ಲೋಕ. ಕೋಟಿ ತಾರೆಗಳಿಂದ ಕಿಕ್ಕಿರಿದ ಗಗನತಲ, ನಿಶಾಸುಂದರಿಯ ವಜ್ರಖಚಿತ ನೀಲಾಂಬರದ, ಹರಡಿದ ಸೆರಗಿನಂತೆ ಶೋಭಿಸಿತ್ತು. ನೀರವ! ನಿಶ್ಚಲ! ಅನಿಲನು ಕೂಡ ದಿನವೆಲ್ಲ ಅಲೆದಲೆದು, ಸೊಕ್ಕಿ ಮೆರೆದು ಸೊರಗಿ ಸೋತು ಸುಮ್ಮನಿದ್ದ. ಒಂದು ಮನೆ. ಅದರ ಹೆಸರು “ಮಾಯಾಲಯ...

ಅವನ ಈಗಿನ ಸ್ಥಿತಿಗೆ ಭಗವದ್ಗೀತಾ, ಉಪನಿಷತ್ತುಗಳು, ಪುರಾಣ, ವೇದಗಳು, ಕುರಾನ್, ಬೈಬಲ್‌ಗಳೇ ಬಹು ಮಟ್ಟಿಗೆ ಕಾರಣವೆಂದು ಹೇಳಬಹುದು. ಅವನ್ಯಾವ ಗ್ರಂಥಗಳನ್ನೂ ಓದಿದವನಲ್ಲ. ಯಾವ ಧರ್ಮಕ್ಕೂ ಗಟ್ಟಿಯಾಗಿ ಅಂಟಿಕೊಂಡು ಬದುಕುವವನಲ್ಲ. ದೇವರಿದ್ದಾನೋ ಇಲ್ಲವೋ ಎಂಬುವುದವನಿಗೆ ಗೊತ್ತಿಲ್ಲ. ಹು...

ಮಧ್ಯಾಹ್ನ ಸೂರ್ಯನು ಆಕಾಶವೃಕ್ಷವನ್ನು ಏರಿದ್ದನು. ಅವನ ಉಷ್ಣವಾದ ಕಿರಣಗಳು ದೇವಗಿರಿಯ ರಾಜಮಾರ್ಗಗಳನ್ನು ತಪ್ತಮಾಡುತ್ತಲಿದ್ದುವು. ಅತ್ತಿತ್ತ ಮೇಯುತ್ತಿದ್ದ ಗೋವುಗಳು ವೃಕ್ಷಛಾಯೆಯನ್ನು ಆಶ್ರಯಿಸಿ, ವಿಶ್ರಾಂತಿಯಿಂದ ಮೆಲುಕಾಡುತ್ತಿದ್ದುವು; ಆಗಾಗ ಬಾಲಗಳನ್ನು ಬೀಸುತ್ತ, ಬೆನ್ನಮೇಲಿನ ...