Home / Poem

Browsing Tag: Poem

ಅವನು ರಾಮನು ಗುಣ ಸಂಪನ್ನನು ನೀತಿ ನೇಮಕ್ಕೆ ತಲೆಬಾಗುವನು ಗುರುಹಿರಿಯರಿಗೆ ಪ್ರೀತಿಪಾತ್ರನು ಯಾರನ್ನೂ ನೋಯಿಸನು. ಅನು ರಹೀಮನು ಅವನೂ ಗುಣ ಸಂಪನ್ನನು ಕೊಂಚ ಸಂಕೋಚದ ಸ್ವಭಾವ ಸದಾ ಧ್ಯಾನಸ್ಥನು ಏಕಾಂತ ಪ್ರಿಯನು. ಹೀಗೊಮ್ಮೆ ರಾಮನೂ ರಹೀಮನೂ ಭೆಟ್ಟಿಯ...

ತೂತುಗಳನ್ನೆ ಹೊದ್ದ ಗಾರೆಗಲ್ಲಿನ ಬಂಧಿಖಾನೆಗೂ ಕಳೆಕಟ್ಟಿದೆ. ಮೃದು ಮಧುರ ಹಸ್ತವೊಂದರ ಇರುವು ನಿರ್ಜೀವ ವಸ್ತುವೊಂದನ್ನು ಜೋಪಾನ ಮಾಡಿದ ಆನಂದ ಕಟಕಟೆಯ ಗೋಡೆಗೆ. ನಿರ್ಜೀವತೆಗೂ ಜೀವ ಭಾವವ ಬೆಸೆದ ಹುರುಪು ಹಸ್ತಕ್ಕೆ. ಕಲ್ಪನೆಯ ವ್ಯಾಪ್ತಿ ಸೀಮಾತೀತ....

ಹೊತ್ತು ಮೀರಿತ್ತು ಮನಸ್ಸು ದಣಿದಿತ್ತು ತನಗೆ ತಾನೇ ವಿರೋಧಿಸುತಿತ್ತು ಆಗ ಟಣ್ಣನೆ ಸಿಡಿದೆ ನೀನು ನಕ್ಷತ್ರಪಥದಿಂದ ಬಿದ್ದ ಶಾಖೆ ರೂಪಿಸುವಂತೆ ತನ್ನ ದಾರಿಯ ರೇಖೆ ತಡೆಯಲೆಳಸಿದ್ದೆ ಕೈಚಾಚಬಯಸಿದ್ದೆ ಕಾದು ಕೆಂಪಾದ ಕಬ್ಬಿಣದ ತುಂಡು ಬಡಿವ ಕಮ್ಮಾರನದರ...

ನೀರು ಹರಿದು ಸವೆದ ಉರುಟು ಕಲ್ಲುಗಳ ಕವಚ ತೊಟ್ಟುಕೊಂಡೆ. ನನ್ನ ಹಿಂದೆ ಯಾರಾದರೂ ಬಂದರೆ ಕಾಣಲೆಂದು, ಬೆನ್ನಿಗೆ ಕನ್ನಡಿ ಹುಷಾರಾಗಿ ಕಟ್ಟಿಕೊಂಡೆ. ಕೈಗೆ ಗ್ಲೌಸು, ಕಾಲಿಗೆ ಬೂಟು, ಆಲೋಚನೆಗಳಿಗೂ ಒಂದು ದಿರುಸು. ನನ್ನ ಮೈ ಮನಸ್ಸನ್ನು ಅನ್ಯರು ಮುಟ್ಟ...

ಹಬ್ಬ ಬಂತೈ ಹರನು ಥೈಥೈ ಜಗದ ಪೈಜಣ ಜೈಜಣಾ|| ಯುಗದ ಸಂಗಮ ಜಗದ ಜಂಗಮ ಆತ್ಮ ಆತ್ಮದ ಅನುಪಮಾ ಇರುಳು ಅರಳಿದ ಪುಷ್ಪ ಕಾಂಚನ ಕೂಡು ಕೂಡಲ ಸಂಗಮಾ ಬಿದ್ದ ನೊಗಗಳು ಹೊದ್ದ ಯುಗಗಳು ಎದ್ದು ಬಂದವು ಸುದ್ದಿಗೆ ಗಡಿಯ ಗದ್ದುಗೆ ನುಡಿಯ ಹದ್ದುಗೆ ಬಿದ್ದು ಎದ್ದವ...

ಕತ್ತೆತ್ತಿ ನೋಡಿದಲ್ಲದೆ ಕಾಣರೆಂಬಷ್ಟು ಎತ್ತರಕೆ ಬೆಳೆದಂಥ ಸತ್ಯಕಾಮರು ನೀವು. ನೀವೆತ್ತಿದರೆ ನಿಮ್ಮ ಬುದ್ಧಿಭುಜದಲಿ ನಿಂತು ಹೆದ್ದಲೆಯ ನೆಮ್ಮಿ ಏನೆಲ್ಲ ನೋಡಿದೆವು! ಹಳೆಮಾತಿನೊಡಲಲ್ಲಿ ಕುದಿವ ಜೀವನರಸದ ಕಡಲ ಚಿತ್ರವನು ಕಣ್ಣಾಗಿ ಈಜಿದೆವು. ಪ್ರಕ್...

ಹೊಸ ವರ್‍ಷವು ಬರಲಿ ದಿನ ದಿನವೂ ಪ್ರತಿ ಕ್ಷಣವೂ ಹೊಸತನವು ಬಾಳಿಗೆ ಹೊಸ ಚೈತನ್ಯವ ತರಲಿ|| ಹರುಷದಾ ಮೊಗ ಚೆಲ್ಲಿ ವರುಷದ ಕಳೆ ಚಿಗುರಿ ಮುಂಗಾರಂಚಿನ ಇಬ್ಬನಿ ಹನಿ ಪುಟಿದೇಳುವ ಕಾಮನೆ ಹೂವಾಗಲಿ|| ಚಂದ್ರಿಕೆಯಾ ಸಖಿ ಹಸೆಮಣೆಯ ಕಾಂತೆಯರು ಮುತ್ತಿನಾರತಿ...

1...7374757677...449

ಬಣಸಾಲೆ ಮುಂದಿನಿಂದ ಹೆಜ್ಜೆ ಹಾಕುವಾಗ ಹೊತ್ತು ಕಂತಿದ್ದು ಲಕ್ಷ್ಯಕ್ಕೆ ಬಂದಿರಲಿಲ್ಲ. ಆಚೀಚಿನ ಹನೆಮರದೆತ್ತರದ ತೇಗ-ಮಾವುಗಳ ಟಿಸಿಲುಗಳಲ್ಲಿ ಹಕ್ಕಿಗಳ ಗರಿ ಒದರುವ ಸರಪರ. ತಾರಕ ಸ್ವರದ ಮಕ್ಕಳಾಟ ವೀಕ್ಷಿಸುತ್ತಾ ರಸ್ತೇಲಿ ಬಿದ್ದಿದ್ದ ಸಣ್ಣ ಸಣ್ಣ ಕಲ್ಲುಗಳನ್ನು ಕಾಲಿನಿಂದ ಚಿಮ್ಮುತ್ತಾ...

ಬೆಳಕಿನಿಂದ ಜಗಜಗಿಸುವ ಸಂಜೆ ರಾವು ಬಡಿದಂತೆ ಮಬ್ಬಾಗಿತ್ತು. ಈ ಮಬ್ಬು ಹಿಂದೆಂದೂ ಇದಿಲ್ಲ. ದೇಶದ ಹದಿನೇಳು ವರ್ಷದ ಸ್ವಾತಂತ್ರದಲ್ಲಿ, ಮಧ್ಯಮ ತರಗತಿಯ ಜೀವನ ಕೈ ಬಾಯಿಯಾಗಿದ್ದರೂ ದೂರದ ಆಶಯ ಹೊಂಗಿರಣವೊಂದು ಸದಾ ಹೊಳೆದು ಭಾವೀ ಪೀಳಿಗೆಯ ಮನೋಲ್ಲಾಸ ಮಾಡುತ್ತಿತ್ತು. ಆದರೆ ಈ ಮಬ್ಬುಗತ್ತ...

ಅವಳು ಯಾವ ಹುಡುಗರ ಜೊತ ನಿಂತು ಮಾತನಾಡಿದರೂ ಶ್ರೀಕಾಂತನಪಾಲಿಗೆ ಆ ಹುಡುಗರು ವಿಲನ್‌ಗಳಂತೆಯೇ ಭಾಸವಾಗುತ್ತಿದ್ದರು. ಅವಳು ತನ್ನ ಕಾಲೇಜಿನ ಲೆಕ್ಚರರ್‌ಗಳು ಪಾಠ ಮಾಡುವ ವೈಖರಿ ಸ್ಟೈಲು ಹೈಲುಗಳ ಕುರಿತು ಬಣ್ಣಿಸುವಾಗಲೂ ಕೇಳಲಾಗದೆ ಶ್ರೀಯ ಹೊಟ್ಟೆಯಲೆಲ್ಲಾ ತಳಮಳ. ಅಷ್ಟೇಕೆ ಅವಳು ತನ್ನ ತ...

ಬೆಳಿಗ್ಗೆ ಏಳರ ಸಮಯ ಮೈಸೂರಿನ ರೋಹಿಣಿ ಲಾಡ್ಜ್‌ನ ಕೊಠಡಿ ಸಂಖ್ಯೆ ೧೦೩. ಪೋಲೀಸರು, ಪತ್ರಕರ್ತರು, ಫೊಟೋ ಗ್ರಾಫರ್‌ಗಳಿಂದ ತುಂಬಿಹೋಗಿದೆ. ಬೆಳ್ಳಂ ಬೆಳಿಗ್ಗೆಯೇ ಯುವತಿಯೊಬ್ಬಳ ಕೊಲೆ ನಡೆದುಹೋಗಿದೆ. ಲಾಡ್ಜ್‌ನ ಹೊರಗೆ ಜನರು ಕುತೂಹಲಭರಿತರಾಗಿ ಸೇರಿದ್ದಾರೆ. ಸೇರಿದ್ದ ಜನರನ್ನು ನಿಯಂತ್ರ...

೧ ಗೌರಿಯ ಹಬ್ಬವು ಕಳೆದು ಕೆಲವು ದಿನಗಳಾಗಿದ್ದುವು. ಭಾಗೀರಥಮ್ಮನೂ ಅವಳ ಜೊತೆಯ ಹುಡುಗಿಯರೂ ಒಂದೊಂದು ದಿನವನ್ನು ಕಳೆಯುವುದೂ ಒಂದೊಂದು ಯುಗವನ್ನು ಕಳೆದಂತೆ ಕಷ್ಟವಾಗಿದ್ದಿತು. ಅವರು ಎಷ್ಟು ಕುತೂಹಲದಿಂದ ಬಯಸಿದರೂ ದಿನಗಳು ಬೇಗ ಬೇಗ ಉರುಳಲೊಲ್ಲವು. ಒಂದು ದಿನ ಅವರೆಲ್ಲರೂ ಸೇರಿ ಕವಡೆಯ...

ಸಂಜೆ ನಾಲ್ಕು ಗಂಟೆಯಾದರೆ ಸಾಕು. ಅವರೆಲ್ಲರೂ ಒಬ್ಬೊಬ್ಬರಾಗಿ ಬಂದು ಸೇರುತ್ತಾರೆ. ಅದೊಂದು ಪಂಚಾಯಿತಿ ಕಟ್ಟೆ ಇದ್ದಂತೆ. ಮಧ್ಯದಲ್ಲೊಂದು ಸಿಮೆಂಟ್ ಬೆಂಚು, ಅದರ ಎಡ, ಬಲ ಎರಡೂ ಕಡೆ ಇವರೇ ಒಂದಷ್ಟು ಕಲ್ಲು ಚಪ್ಪಡಿಗಳನ್ನು ಎಳೆದು ತಂದು ಕೊಡುವುದಕ್ಕೆ ಪೀಠಗಳನ್ನು ಮಾಡಿಕೊಂಡಿದ್ದಾರೆ. ಸ...