ನೀರು ಹರಿದು ಸವೆದ ಉರುಟು ಕಲ್ಲುಗಳ ಕವಚ ತೊಟ್ಟುಕೊಂಡೆ.
ನನ್ನ ಹಿಂದೆ ಯಾರಾದರೂ ಬಂದರೆ ಕಾಣಲೆಂದು,
ಬೆನ್ನಿಗೆ ಕನ್ನಡಿ ಹುಷಾರಾಗಿ ಕಟ್ಟಿಕೊಂಡೆ.
ಕೈಗೆ ಗ್ಲೌಸು, ಕಾಲಿಗೆ ಬೂಟು,
ಆಲೋಚನೆಗಳಿಗೂ ಒಂದು ದಿರುಸು.
ನನ್ನ ಮೈ ಮನಸ್ಸನ್ನು ಅನ್ಯರು ಮುಟ್ಟದಿರಲೆಂದು,
ವಿಷ ಸ್ಪರ್ಶವಾಗದಿರಲೆಂದು
ಎಂಟು ಶತಮಾನ ಬದುಕಿದ್ದ
ಆಮೆಯ ಚಿಪ್ಪುತೆಗೆದು
ಎದೆಗೆ ಅಡ್ಡ ಹಿಡಿದು ಗುರಾಣಿ ಮಾಡಿಕೊಂಡೆ.
ಎಲ್ಲಾ ಹೀಗೆ ಹುಷಾರಾಗಿ ಸರಿಮಾಡಿಕೊಂಡು
ತುಂಬ ಮೃದುವಾಗಿ ಪಿಸುಗುಟ್ಟಿದೆ

ಐ ಲವ್ ಯು.
*****
ಮೂಲ: ಮಾರಿನ್ ಸೊರೆಸ್ಕ್

Latest posts by ನಾಗಭೂಷಣಸ್ವಾಮಿ ಓ ಎಲ್ (see all)