ನೊಬೆಲ್ ಪ್ರಶಸ್ತಿ ಪಡೆದ ವಿಜ್ಞಾನಿ ಡಾ|| ಪೌಲಿಂಗ್ ಅವರು ವಿಟ್ಟಾಮಿನ್ ‘ಸಿ’ ಯ ಮೇಲೆ ಸಂಶೋಧನೆ ನಡೆಯಿಸಿ ಟೊಮ್ಯಾಟೋ ಬಳಸುವುದರಿಂದ ಶೀತದಿಂದ ಬರುವ ಕ್ಯಾನ್ಸರ್ ಅನ್ನು ತಡೆಗಟ್ಟಿಬಹುದೆಂದು ದೃಢಪಡಿಸಿದ್ದಾರೆ. ಇದು ಸಾಮಾನ್ಯವಾಗಿ ಎಲ್ಲರ ಮನೆಯಲ್ಲಿಯೂ ಬಳಸುವ ಪೌಷ್ಠಿಕವಾದ ತರಕಾರಿ, ಆದರೂ ಇದರ ಅಂತರಂಗದಲ್ಲಿ ಅಡಗಿದ ದ್ರವ್ಯಗಳು ಇರುವಿಕೆ ಗೊತ್ತಾವುದೇ ಇಲ್ಲ.

ಮೊದಲನೆಯದ್ದಾಗಿ ವಿಟಾಮಿನ್ ‘ಸಿ’ ಟೊಮ್ಯಾಟೋದಲ್ಲಿ ಅಧಿಕವಾಗಿದೆ. ವಿಟಮಿನ್ ‘ಎ’ ಸಹ ವಿಪುಲವಾಗಿದೆ. ಇದೂ ಅಲ್ಲದೇ ‘ಪೊಲಿಕ್ ಆಸಿಪ್’ ಎಂಬ ಇನ್ನೂಂದು ವಿಟಮಿನ್ ಸಹ ಇದರಲ್ಲಿ ಇವೆ. ಇದಕ್ಕೆ ಕೆಂಪು ವರ್ಣ ಬರುವಂತೆ ಮಾಡಲು ‘ಲೈಕೋಪಿನ್’ ಘಟಕವಿದೆ. ಮಹತ್ವದ ಸಂಗತಿ ಎಂದರೆ ಈ ಘಟಕವು ಕ್ಯಾನ್ಸರ್, ಪುಪ್ಟಸಕ್ಯಾನ್ಸರ್ ಹಾಗೂ ಜಠರಕ್ಯಾನ್ಸರ್‍ಗಳನ್ನು ಪ್ರತಿಬಂಧಿಸುವ ಶಕ್ತಿ ಈ ಟೊಮ್ಯಾಟೋಕ್ಕೆ ಇದೆ. ಇದನ್ನು ತಾಜಾರೂಪದಲ್ಲಾದರೂ ಆಗಲಿ, ಅಡುಗೆಯಲ್ಲಿ ಬಳಸಿಯಾಗಲಿ, ಉಪಯೋಗಿಸುವುದು ಶ್ರೇಷ್ಠವಾದುದು.

‘ಎ’ ವಿಟ್ಯಾಮಿನ್ ಕಡಿಮೆಯಾಗಿ ಲಕ್ಷಗಟ್ಟಲೇ ಮಕ್ಕಳು ಕುರುಡರಾಗಿರುತ್ತಿರುವ ವಿಷಯ ಗೊತ್ತಿರುವ ಸಂಗತಿಯೇ ಆಗಿದೆ. ಪೊಲಿಕ್ ಆಸಿಪ್ ವಿಟಮಿನ್ ದೊರೆಯದೇ ಲಕ್ಷಗಟ್ಟಲೇ ಜನರು ರಕ್ತ ಹೀನತೆಯಿಂದ ಬಿಳಲುತ್ತಿರುವುದು ತಿಳಿದ ವಿಷಯ. ವಿಶೇಷವಾಗಿ ಗರ್ಭಿಣಿಯರಲ್ಲಿ ಈ ಕೊರತೆ ಕಂಡು ಅವರು ರಕ್ತ ಹೀನತೆಯಿಂದ ಬಳಲುವರಲ್ಲದೇ ಅವರ ಗರ್ಭದಲ್ಲಿರುವ ಶಿಶುವು ಸಹ ರಕ್ತ ಹೀನತೆಯಿಂದ ಬಳಲಿ ಊನಾಗುವ ಸಾಧ್ಯತೆಗಳಿವೆ. ವಿಟ್ಯಾಮಿನ್ ‘ಸಿ’ ಯಿಂದ ಶೀತದ ಕ್ಯಾನ್ಸರ್ ರೋಗ ತಡೆಯುವ ಶಕ್ತಿಯನ್ನು ಹೊಂದಿದೆ.
*****