Home / ಲೇಖನ / ವಿಜ್ಞಾನ / ಮರಗಳ ಅಡಿಯಲ್ಲಿ(ಭೂಗರ್‍ಭದಲ್ಲಿ)ಇರುವ ಖಿನಿಜ ಸಂಪತ್ತು

ಮರಗಳ ಅಡಿಯಲ್ಲಿ(ಭೂಗರ್‍ಭದಲ್ಲಿ)ಇರುವ ಖಿನಿಜ ಸಂಪತ್ತು

ಇದು ಸೋಜಿಗದ ವಿಷಯ. ಹಾಗಾದರೆ ಕಾಡಿನಲ್ಲಿರುವ ಮರಗಳ ಅಡಿಯನ್ನು ಅಗೆದು ಖನಿಜ ಹುಡುಕಬಹುದಲ್ಲ.?! ಎನ್ನಬಹುದು. ಆದರೆ ಇದು ಹೀಗಾಗದೇ ಕೆಲವೇ ಜಾತಿಗಳ ಮರಗಳು ಬೇರೆಬೇರೆ ಜಾತಿಯ ಖನಿಜಗಳಿರುವ ಮಣ್ಣಿನ ಪದರಲ್ಲಿ ಬೇರುಬಿಟ್ಟು ಬೇರೆಬೇರೆ ಜಾತಿಯ ಮರಗಳು ಬೆಳೆಯುತ್ತವೆ, ಎಂಬ ಸತ್ಯ ಇತ್ತೀಚೆಗೆ ಕಂಡುಹಿಡಿಯಲಾಗಿದೆ. ಮೊಟ್ಟ ಮೊದಲ ಬಾರಿಗೆ, ಇದಕ್ಕೆ ಸಂಬಂಧಪಟ್ಟ ಸಂಶೋಧನೆ ಕೆನಡಾದಲ್ಲಿ ಬ್ರಿಟಿಷ್ ಕೋಲಂಬಿಯಾದಲ್ಲಿ ೫ ಪ್ರಮುಖ ಸಂಶೋಧನಾಲಯಗಳ ವಿಜ್ಞಾನಿಗಳ ತಂಡ ೬,೦೦೦ ಅಡಿಗಳೆತ್ತರದ ಪರ್ವತ ಪ್ರದೇಶದ ಮೇಲೆ ಕೆಲವು ಮರಗಳ ಬೇರು, ಕೊಂಬೆಗಳು, ಎಲೆಗಳು, ಹಾಗೂ ಬೀಜಗಳನ್ನು ಆಯ್ದು ತಂದು ಬೇರೆಬೇರೆ ಪೆಟ್ಟಿಗೆಗಳಲ್ಲಿ ತುಂಬಿ ಪ್ರತಿಯೊಂದನ್ನು ಗುರುತು ಮಾಡಿಟ್ಟುಕೊಂಡರು. ಈ ಮರಗಳ ಭಾಗಗಳನ್ನು ಬೂದಿಮಾಡಿ ವೈಜ್ಞಾನಿಕ ಪ್ರಯೋಗಾಲಯದಲ್ಲಿ ಅದಮ್ನ ಪರೀಕ್ಷಿಸಿ ಗುರುತು ಮಾಡಿಟ್ಟು ಕೊಳ್ಳಲಾಯಿತು. ಪ್ರತಿಯೊಂದು ಸಣ್ಣ ಕಣವನ್ನು ಪರೀಕ್ಷಿಸಿ ಅವುಗಳಲ್ಲಿ ಏನಾದರೂ ಖನಿಜಗಳಿವೆಯೆ? ಎಂಬುದನ್ನು ಪರೀಕ್ಷಿಸಿದರು. ಆಗ ಆ ಬೂದಿಗಳಲ್ಲಿ ಚಿನ್ನ, ತಾಮ್ರ, ಸತುವು, ಬೇರೆಬೇರೆ ಖನಿಜಗಳ ಅಂಶ ಬೆಳಕಿಗೆ ಬಂದಿತು. ಕೂಡಲೇ ಕಾರ್ಯ ಪ್ರವೃತ್ತವಾದ ತಂಡ ಆ ಮರಗಳ ಅಡಿಯಲ್ಲಿ ಆಳ ಆಳಕ್ಕೆ ಆಗಿಯಲಾರಂಭಿಸಿದರು ಆಗ ಹೆಚ್ಚು ಹೆಚ್ಚು ಖನಿಜಗಳು ದೊರೆಯಲಾರಂಭಿಸಿದವು. ಚಿನ್ನದ ಅದಿರುಗಳಿದ್ದ ಭೂ ಪ್ರದೇಶದ ಮೇಲೆ ೫ ಬೇರೆಬೇರೆ ಜಾತಿಯ ಫರ್ ಮರಗಳು ಬೆಳೆಯುತ್ತವೆ. ಪ್ರತಿಯೊಂದು ಮರವು ಒಂದೇ ಪ್ರಮಾಣದಲ್ಲಿ ಚಿನ್ನದ ಅದಿರನ್ನು ತನ್ನ ಅಡಿಯಲ್ಲಿಟ್ಟುಕೊಂಡಿತ್ತು. ಹೀಗಾಗಿ ಈ ತರಹದ ಮರಗಳು ಸುದ್ದಿ ನೀಡುವ ಮರಗಳಾದವು.

ಇನ್ನೂ ಕೆಲವು ಮರಗಳ ಬೇರಿನಾಳದಲ್ಲಿ ಯುರೇನಿಯಂ, ಹಾಗೂ ವೆನೀಡಿಯಮ್ ಲೋಹಗಳ ಅದಿರುಗಳು ಪತ್ತೆಯಾಗಿವೆ. ಇವು ವಿಶಿಷ್ಟ ಮರಗಳು. ವಿಜ್ಞಾನಿಗಳು ಈ ಮರಗಳ ಹೆಸರನ್ನು ಸೂಚಿಸಿಲ್ಲ. ಉತ್ತರ ಅಮೇರಿಕಾದ ಸಮೀಪದಲ್ಲಿ ಆರಿಜೋನಾದ ಸ್ಕಾಸ್‌ಮ್ಯಾನ್ಯುಯಲ್ ಭೂ ಪ್ರದೇಶ ತಾಮ್ರದ ಖನಿಜಗಳಿಂದ ತುಂಬಿದೆ ಎಂದು ಕೆಲವು ಮರಗಳು ಸುದ್ದಿಕೊಟ್ಟವು. ಜೈವಿಕ ಭೂ ಗರ್ಭಶಾಸ್ತ್ರಜ್ಞರು ಸು.೨೦ ಅಡಿಗಳಷ್ಟು ಎತ್ತರವಾಗಿ ಬೆಳೆಯುವ ಎರಡು ಜಾತಿಯ ಓಕ್ ಮರಗಳು ಬೆಳೆದ ಬುಡದಲ್ಲಿ ತಾಮ್ರದ ನಿಕ್ಷೇಪಗಳಿರುವುದನ್ನು ಪತ್ತೆಹಚ್ಚಿದರು. ಕಿತ್ತಳೆ ವರ್ಣದ ಹೂಗಳಿಂದ ಕೂಡಿದ್ದ ಸಾವಿರಾರು ಗಸೆಗಸೆ ಮರಗಳ ಅಡಿಯಲ್ಲಿಯೂ ತಾಮ್ರದ ಇರುವನ್ನೂ ಕಂಡು ಹಿಡಿಯಲಾಯಿತು. ಕುರುಚಲುಭೂರ್ಜ(ಒಂದು ಜಾತಿಯ ಕಾಡುಮರ) ಮತ್ತು ಹಲವು ಜಾತಿಯ ಪಾಚಿಗಳು ಬೆಳೆಯುವ ಭೂಪ್ರದೇಶದ ಗರ್ಭದಲ್ಲಿ ಸತು ಹಾಗೂ ತಾಮ್ರದ ಖನಿಜಗಳು ಅಡಗಿರುತ್ತವೆ. ಎಂದು ತಿಳಿದು ಬಂದಿದೆ. ಡೌಗ್ಲಾಸ್‌ಫರ್, ಎಂಬ ಮರಗಳು ಬೆಳೆಯುವ ಭೂಮಿಯು ಆರ್ಸೆನಿಕ್ ಬೆಳ್ಳಿ ಮತ್ತು ಚಿನ್ನಗಳ ತವರುಮನೆಯಾಗಿದೆ ಎಂದು ಸಂಶೋದಿಸಿದರು, ಸಾದರ ಪಡಿಸಿದರು. ನಿಂಬೆ ಹಾಗೂ ಭೂರ್ಜ ಸಸ್ಯಗಳು ಸೀಸ ಎಂಬ ಖನಿಜ ಇರುವ ಸೂಚನೆ ನೀಡುತ್ತವೆ.
*****

Tagged:

Leave a Reply

Your email address will not be published. Required fields are marked *

ನಾಡಿಗೆ ಸ್ವಾತಂತ್ರ ಬಂದಿದೆ. ಎಲ್ಲೆಲ್ಲೂ ಸ್ವೈರಾಚಾರ ಹೆಚ್ಚಿದೆ. ಸ್ವಾತಂತ್ರವೆಂದರೆ ಸ್ವೇಚ್ಛಾಚಾರ ಎನ್ನುವಂತೆ ನಾಡಿನ ಜನ ವರ್ತಿಸುತ್ತಿದೆ; ಬಹುದಿನದ ಸಾಧನೆಯಿಂದ ಪಡೆದ ಸಿದ್ದಿಯನ್ನು ಮಣ್ಣುಗೂಡಿಸುತ್ತಲಿದೆ. ಇದನ್ನು ತಡೆಯಲಿಕ್ಕೆ ಭಾರತದ “ಹಳ್ಳಿ-ಹಳ್ಳಿಗಳಲ್ಲಿಯೂ ಗ್ರಾಮ ಸುರಕ್ಷಕ...

“ವತ್ಸಲಾ……..!” ನಿಟ್ಟುಸುರಿನೊಂದಿಗೆ ಕುಮಾರನು ಆರಾಮ ಕುರ್‍ಚಿಯ ಮೇಲೆ ದೊಪ್ಪನೆ ಬಿದ್ದು ಕೊಂಡನು. ಚಿಕ್ಕಬಾಲಕನೊಬ್ಬನು ಕಿಡಿಕಿಯಲ್ಲಿ ಹಣಿಕಿ ಹಾಕಿ “ಕುಮಾರಣ್ಣ” ಎಂದು ಕೂಗಿದಂತಾಯಿತು. ಎದ್ದು ನೋಡುತ್ತಾನೆ; ಕೆಂಪು ಮಸಿಯಿಂದ ವಿಳಾಸ ಬರೆದ...

“ಭೀಮಾ ಮಾಸ್ತರರನ್ನು ಇಷ್ಟ ಮೋಟರ ಸ್ಟಾಂಡಿನ ತನಕ ಕಳಿಸಿ ಬಾರಪ್ಪಾ.” ಬಾಯಕ್ಕ ನೆರೆಮನೆಯವರ ಆಳಿಗೆ ವಿನಯದಿಂದ ಹೇಳಿ ನನ್ನ ಕಡೆಗೆ ಹೊರಳಿ ಅಂದಳು: “ಬಿಡಿರಿ, ನಿಮ್ಮ ಬ್ಯಾಗ ತಗೊಂಡ ಬರತಾನ ಭೀಮಾ” “ಯಾತಕ್ಕ? ನಾ ಕೈಯೊಳಗ ಸಹಜ ಒಯ್ಯತೇನೆ” ನಾನು ಹೀಗೆ ಹೇಳಿದೆನಾದರೂ ಭೀಮಪ್...

ಸಿಗರೆಟ್‌ನ್ನು ಕೊನೆಯ ಸಲ ಎಳೆದು ಬದಿಗಿದ್ದ ಅಶ್‌ಟ್ರೆಯಲ್ಲಿ ಹಾಕಿದ. ಮೂರು ದಿನಗಳಿಂದ ಹೇಳಲಾಗದಂತಹ ಯಾತನೆ ಅವನನ್ನು ಹಿಂತಿಸುತ್ತಿದೆ. ಇದ್ದಿದ್ದು ಮಿತ್ರನ ಮಾತುಗಳು ಬಂದು ಕಿವಿಗೆ ಅಪ್ಪಳಿಸಿ ಎತ್ತ ನೋಡಿದರೂ ಅವನದೆ ಮುಖ ಕಾಣುತ್ತಿದೆ. “ನಾ ಹೇಳುವದನ್ನು ಅರ್‍ಥಮಾಡಿ ಕೊಳ್ಳು...

ಬೆಳಿಗ್ಗೆಯಿಂದ ಕತ್ತಲೆಯವರೆಗೂ ಬಸ್ ಸ್ಟಾಂಡಿನಲ್ಲಿ ಬಸ್ಸುಗಳಿಗೆ ಹತ್ತಿ ಇಳಿದುಕೊಂಡು ಎಷ್ಟು ಗೋಗರೆದು ಬಿಕ್ಷೆ ಬೇಡಿದರೂ ಆ ಹುಡುಗನಿಗೆ ಮಧ್ಯಾಹ್ನದ ಊಟ ಮಾಡುವಷ್ಟು ಹಣ ಸಂಗ್ರಹವಾಗುತ್ತಿರಲಿಲ್ಲ. ಮಧ್ಯಾಹ್ನ ಬಿಸ್ಕಿಟು ಮತ್ತು ನಲ್ಲಿ ನೀರು ಕುಡಿದು ಹಸಿವು ತಣಿಸಿದರೂ ರಾತ್ರಿಯ ಊಟಕ್ಕ...