ಎದೆ ತುಂಬ ದಿಗಿಲು ತುಂಬಿಕೊಂಡ ರಾತ್ರಿ ಬೆಳದಿಂಗಳೆದುರು ಬೆತ್ತಲಾಗಿ ಹಗುರಾಗಿದೆ *****...
ಇತ್ತೀಚಿನ ಎರಡು ಪತ್ರಿಕಾ ವರದಿಗಳು ಹೀಗಿವೆ: ೧. ಧಾರಾಕಾರವಾಗಿ ಸುರಿಯುತ್ತಿದ್ದ ರಕ್ತ ನಿಲ್ಲಿಸಲಾಗದೆ ಹೊಟ್ಟೆಯನ್ನು ಒತ್ತಿ ಹಿಡಿದು ಆಪದ್ಭಾಂಧವರಿಗಾಗಿ ಹಾದಿ ಕಾಯುತ್ತಿದ್ದ ಅಮಾಯಕ; ಮೂಗಿನ ಬಳಿ ಗಾಯವಾಗಿ ಕರವಸ್ತ್ರದಿಂದ ಒತ್ತಿ ಹಿಡಿದ ಇನ್ನೊಬ್...
ಅವಳಿಗೆ ಯವಾಗಲೂ ಚಿಂತೆ : ‘ನಾನು… ನಾನು…’ ‘ಯಾರು ನೀನು ಮರಿಯಾ?’ ‘ನಾನು ರಾಣಿ | ನಾನು ರಾಣಿ | ನಮಸ್ಕಾರ ಮಾಡಿ | ಹ್ಞೂ, ಮೊಳಕಾಲೂರಿ!’ ಅವಳಿಗೆ ಯಾವಾಗಲೂ ಅಳು : ‘ನಾನು … ನಾನು…’ ‘ನೀನ ಯಾರು ಮರಿಯಾ?’ ‘ಅಪ್ಪ ಗೊತ...
ಇಲ್ಲಿ ದೂರದ ಪಶ್ಚಿಮಾರ್ಧದಲ್ಲಿ ಅಮೆರಿಕದ ಪಲ್ಲಂಗದಲ್ಲಿ ನಟ್ಟಿರುಳಲ್ಲಿ ಬಿಟ್ಟು ಬಂದದ್ದರ ಕನವರಿಕೆ, ಭಾರತದ ಬೆಳಕಲ್ಲಿ ಹೊಳೆದ ಬಾಲ್ಯದ ಬೆರಗು ಮಧುರ ಮರುಕಳಿಕೆ; “ಅನುಭವವು ಸವಿಯಲ್ಲ ಅದರ ನೆನಪೇ ಸವಿಯು ಅದ ಕದ್ದು ಮೇಯದೇ ಮನವು ?”...
ಬಾಯಾರಿತ್ತು ಬಿಸಿಲು ಏರಿ; ತಂದು ಕುಡಿದೆ ಬಿಸಲೇರಿ! *****...
ಕೋಳಿ ಕೂಗುವ ಮುನ್ನ ಯಾರು ಕರೆದರು ನನ್ನ ಹೇಳು ಮನಸೇ ಹೇಳು ಕತೆಯ ನಿನ್ನ ಗುರುತು ಪರಿಚಯವಿರದ ದೇಶದಲಿ ನಾನಿರಲು ಯಾರು ಬಯಸಿದರಿಂದು ನನ್ನ ಕಾಣಲೆಂದು ಯಾರೆಂದು ನೋಡಿದರೆ ಬಾಗಿಲಲಿ ಯಾರಿಲ್ಲ ಎಲ್ಲಿ ಹೋದರು ಅವರು ನನ್ನ ಕರೆದವರು ಬೆಳಕಿನ್ನು ಹರಿದಿಲ...
(ಮನೆಯ ಯಜಮಾನರಿಗೆ ದೇವರಲ್ಲಿ ತುಂಬಾ ಶ್ರದ್ಧೆ. ಸ್ವತಃ ಪೂಜೆ ಮಾಡಿ ನೈವೇದ್ಯ ತೋರಿಸದಿದ್ದರೆ ಮನಸ್ಸಿಗೆ ಹೇಗೊ ಹೇಗೊ ಎನಿಸುವದೆಂದು ಯಾವಾಗಲೂ ಅವರು ಹೇಳುವರು. ಇಂದು ಸ್ನಾನಮಾಡಿ ದಿನದಂತೆಯೇ ಯಜಮಾನರು ದೇವರ ಕಟ್ಟೆಯ ಮೇಲೆ ಪೂಜೆಗೆ ಕುಳಿತಿರುವರು. ...
ಗುಂಡ ದೋಣಿಯಲ್ಲಿ ಹೋಗುತ್ತಿದ್ದ. ನದಿಯ ಮಧ್ಯದಲ್ಲಿ ದೋಣಿ ತೂತಾಗಿ ನೀರು ಒಳ ಬರಲಾರಂಭಿಸಿತು, ಗುಂಡ ಕೂಡಲೇ ಮತ್ತೊಂದು ತೂತು ಮಾಡಿದ. ತಿಮ್ಮ ಕೇಳಿದ “ಯಾಕೆ ಹೀಗೆ ಮಾಡುತ್ತಿರುವೆ?” ಆಗ ಗಂಡ ಹೇಳಿದ “ಒಂದರಲ್ಲಿ ಬಂದ ನೀರು ಮತ್...
ಸಾಕ್ಮಾಡೊ ಗಂಡಾ ಸಾಕ್ಮಾಡೋ ||ಪಲ್ಲ|| ಬೆಳಗಾತು ಹಳುವಾಗ ಬಿಸಿಲಾತು ಹಳದಾಗ ಮಸರಾತು ಮೈಯಲ್ಲ ಸಾಕ್ಮಾಡೊ ಕೆಸರಾತು ಕುಬಸೆಲ್ಲ ಹೆಸರಾತು ಹಾಸ್ಗೆಲ್ಲ ತಗಣೀಗಿ ತಂಪಾತು ಸಾಕ್ಮಾಡೊ ||೧|| ಡೋಮಾರಿ ಛೀಮಾರಿ ಗಲ್ಲಾವ ಕಚ್ಯಾವ ತಲಿಯಾಗ ಪಡಿಹೇನು ಮೇದಾವ ಕಟ...
“ಏನೇ ಗೌರಿ ಯಾವಾಗ ಬಂದೆ ಗಂಡನ ಮನ್ಯಾಗೆಲ್ಲಾ ಘನಾಗಿದ್ದಾರೇನೆ?” ಎಂದು ಕಂಕುಳಲ್ಲೊಂದು, ಕೈಯಲ್ಲೊಂದು ಮಕ್ಕಳನ್ನು ಹಿಡ್ಕೊಂಡು ವಾರಗಿತ್ತಿಯರು ಕೇಳುವವರೇ. “ವೂ ಕಣೇ, ವೂ ಕಣಕ್ಕ, ನೀವೆಲ್ಲಾ ಘನಾಗಿದೀರೇ” ಎಂದು ಹೇಳಿ ಉತ್ತರಕ್ಕೂ ಕಾಯದೆ ಮನೆ ಸೇರಿದಳು. ಗ...
ನಮ್ಮ ಹಳ್ಳಿ ಬಹಳ ಚಿಕ್ಕದು. ಇರುವುದೆಲ್ಲಾ ನೂರು ಮನೆಗಳು. ಸುಮಾರು ಆರುನೂರು ಪ್ರಜಾಸಂಖ್ಯೆ. ಒಟ್ಟಿನಲ್ಲಿ ನೆಮ್ಮದಿ ಗ್ರಾಮವೆಂದೇ ಹೇಳಬೇಕು. ನಮ್ಮ ಪಟೇಲ ಒಳ್ಳೆಯವನೆಂದೇ ಹೆಸರು ಪಡೆದಿದ್ದಾನೆ. ಅವನು ತನ್ನ ಕೈಲಾದಷ್ಟು ಗ್ರಾಮಸ್ಥರಿಗೆ ಉಪಕಾರ ಮಾಡಿದ್ದಾನೆ. ಒಂದು ದೇವಸ್ಥಾನ, ಒಂದು ಅ...
ಒಂದೇ ರೂಮಿನಲ್ಲಿದ್ದರೂ ಅವನನ್ನು ನನ್ನ ಸ್ನೇಹಿತ ಎಂದು ಮನಸ್ಸು ಒಪ್ಪಿಕೊಂಡಿರಲಿಲ್ಲ. ರಾತ್ರಿ ನಿದ್ದೆಗಾಗಿ ಮಾತ್ರ ಅವನಿಗದೊಂದು ರೂಮು. ಊಟತಿಂಡಿ ಎಲ್ಲಾ ಹೋಟೆಲ್ಲು. ನಾನು ಸಂಜೆ ಏಳಕ್ಕೆ ರೂಮಿಗೆ ಬಂದರೆ ಅವನು ಹತ್ತಕ್ಕೆ ಬರುತ್ತಿದ್ದ. ಬೆಳಿಗ್ಗೆ ಅವನು ಹತ್ತಕ್ಕೆ ಹೊರಟರೆ ನಾನು ಒಂದ...
ಚಾಮುಂಡಿ, ದುರ್ಗಿ, ಕಾಳಿ, ಶಂಕರಿ, ಮಾರಿ ಮೊದಲಾದ ದೇವಿಗಳಿಗೂ : ಆಂಜನೇಯ, ವಲ್ಲಭರಾಯ, ನರಸಿಂಹ ಮೊದಲಾದ ದೇವರುಗಳಿಗೂ ನಮ್ಮೂರಲ್ಲಿ ಏನೂ ಕೊರತೆಯಿಲ್ಲ. ಇಲ್ಲೊಂದು ಶಂಕರಿ ದೇವಾಲಯ ಬಹುಕಾಲದಿಂದಲೂ ಇದೆ. ಅದನ್ನು ಕಟ್ಟಿಸಿದವರು ಯಾರೆಂಬುದೇ ಗೊತ್ತಿಲ್ಲ. ಪ್ರತಿ ಶನಿವಾರ ಅಭಿಷೇಕ, ಶುಕ್ರ...
ರಾಜ ನಿಮಗೆ ಗೊತ್ತೆ? ಇಲ್ಲ? ಆತ ನನ್ನ ಸ್ನೇಹಿತ, ಆಪ್ತ ಸ್ನೇಹಿತ. ಅವನಿಗೂ ಕತೆ ಬರೆಯುವ ಹುಚ್ಚಿದೆ. ಆದರೆ ಬರೆದು ಸಂಪಾದಿಸಿ ಬದುಕುವ ಹಟವಿಲ್ಲ. ಹಾಗೆಂದೇ, ತಕ್ಕಮಟ್ಟಿಗೆ ಸಂಪಾದನೆ ಇರುವ ಬೇರೆ ಉದ್ಯೋಗದಲ್ಲಿದ್ದಾನೆ! ರಾಜ ಬರೆದಿರುವ ಒಂದು ಕಥೆ ನನ್ನಲ್ಲಿದೆ. ಓದಿ ನೋಡುತ್ತೀರಾ? ನಿಮ...
ಅಂದು ನಾನು, ನಮ್ಮ ತಾತ, ನನ್ನ ತಂಗಿ ಎಲ್ಲರೂ ಕಣದಲ್ಲಿ ಕುಳಿತುಕೊಂಡು ಹರಟೆ ಹೊಡೆಯುತ್ತಿದ್ದೆವು. ಸುಗ್ಗಿಯ ಕಾಲವಾದ್ದರಿಂದ ರೈತರು ಮತ್ತು ಆಳುಗಳು ಕಣದಲ್ಲಿ ಕೆಲಸ ಮಾಡುತ್ತಿದ್ದರು. ನಮ್ಮ ತಾತನು ಆ ಮಾತು ಈ ಮಾತು ಆಡುತ್ತಿದ್ದರೂ, ಆತನ ಒಂದು ಕಣ್ಣು ಮಾತ್ರ ಕೆಲಸಗಾರರ ಮೇಲೆಯೇ ಇರುತ್...







