
ಗಗನವು ಯಾರದೊ ಕುಸುಮವು ಯಾರದೊ ಬಯಸುತಿರುವ ಹೃದಯಕೆ ರಂಗವು ಯಾರದೊ ಗೀತವು ಯಾರದೊ ಕುಣಿಯುತಿರುವ ಪಾದಕೆ ಹಲಗೆ ಯಾರದೊ ಬಳಪವು ಯಾರದೊ ಬರೆಯುತಿರುವ ಹಸ್ತಕೆ ತಂಬುರ ಯಾರದೊ ತಾಳವು ಯಾರದೊ ಹಾಡುತಿರುವ ಕಂಠಕೆ ಹೂವು ಯಾರದೊ ದಾರವು ಯಾರದೊ ಕೋಯುತ್ತಿರುವ...
ಏನ ಮಾಡಲಿರುವೆ ನೀನಿದುವರೆಗೆ ಯಾರು ಮಾಡದ ಏನ ಕಲ್ಪಿಸಲಿರುವೆ ಯಾರಿದುವರೆಗೆ ಕಲ್ಪಿಸದ ಬಲೆಯ ನೇಯುವೆಯ ಜೇಡ ಆಗಲೇ ನೇಯ್ದಿದೆ ಕಲೆಯ ಬರೆಯುವೆಯ ಆ- ಕಾಶ ಆಗಲೇ ರೂಪಿಸಿದೆ ಮುತ್ತ ಪೋಣಿಸುವೆಯ ಇಬ್ಬನಿ ಆಗಲೇ ಪೋಣಿಸಿದೆ ಪರಿಮಳವ ಹರಡುವೆಯ ತೋಟ ಆಗಲೇ ಹರ...
ಯಾಕೆ ನಿಂತಿ ಬೆರ್‍ಚಪ್ಪ ಹೊಲದ ಮಧ್ಯೆ ಇಂತು ನೀನು ಯಾರು ಬೆದರುತಾರೆ ನಿನಗೆ ಬೆದರಲ್ಲ ನಾವಂತು ತಲೆಗೆ ಒಡಕು ಮಡಕೆ ಕಟ್ಟಿ ಕಣ್ಣಿಗೆ ಸುಣ್ಣದ ಬೊಟ್ಟನಿಟ್ಟಿ ಕಿವಿ ಬಾಯಿ ತೂತು ಕೈ ಮಾತ್ರ ದಾಯ ಬಾಯ ಮೂಗು ಮಂಗಮಾಯ ಯಾರದೀ ಹರಕಂಗಿ ಯಾರದೀ ದೊಗಲೆ ಚಡ್ಡ...
ಸಾವಿರಾರು ನದಿಗಳು ಸೇರುವಂತೆ ಸಾಗರ ಸೇರಬೇಕು ಕನ್ನಡ ಸಾವಿರಾರು ಮನಗಳ ಸಾವಿರಾರು ಕನ್ನಡ ಊರು ಕೇರಿ ಹಿತ್ತಿಲು ಆಗುವಂತೆ ಜನಪದ ಆಗಬೇಕು ಕನ್ನಡ ಸಾವಿರಾರು ಮನಗಳ ಸಾವಿರಾರು ಕನ್ನಡ ಪಚ್ಚೆ ಪೈರು ನೆಲ ಮನೆ ತುಂಬುವಂತೆ ಹರುಷ ತುಂಬಬೇಕು ಕನ್ನಡ ಸಾವಿರ...
ರಾಮನೇನು ಗೊತ್ತು ನಮಗೆ ತ್ಯಾಗರಾಜರಿಲ್ಲದೆ ಕೃಷ್ಣನೇನು ಗೊತ್ತು ಪುರಂದರ ದಾಸರಿಲ್ಲದೆ ಶಿವನೇನು ಗೊತ್ತು ನಮಗೆ ಅಲ್ಲಮರಿಲ್ಲದೆ ದಿವವೇನು ಗೊತ್ತು ನಮಗೆ ಸೂರ್‍ಯಚಂದ್ರರಿಲ್ಲದೆ ಭಕ್ತಿಯೇನು ಗೊತ್ತು ಆ- ನಂದವೇನು ಗೊತ್ತು ಅನುಭವವೇನು ಗೊತ್ತು ಅನು- ...
ಒಬ್ಬನೆಂದರೊಬ್ಬನೇ ಒಬ್ಬನೊಳಗೆ ಇಬ್ಬನೇ ಇಬ್ಬನೇ ಮೂವನೇ ಒಬ್ಬನೊಳಗೆ ಎಷ್ಟನೇ ಒಂದು ಒಡಲ ನೋಡಿ ನಾವು ಒಬ್ಬನೆನುವೆವು ಒಂದು ಒಡಲಿಗೊಬ್ಬನೇ ಎಂದುಕೊಳುವೆವು ಒಬ್ಬನಲ್ಲ ಇಬ್ಬನಲ್ಲ ಒಳಗಿರುವವನಿಗೆ ಲೆಕ್ಕವಿಲ್ಲ ಬಂದು ಹೋಗಿ ಮಾಡುತಾರೆ ಒಕ್ಕಲಿಗರೆ ಎಲ್ಲ...
ನೀರಿಲ್ಲದೂರಿನಲಿ ಮುಗಿಲ ಹುಡುಕಿದರು ಮುಗಿಲಿಲ್ಲದೂರಿನಲಿ ನೀರ ಹುಡುಕಿದರು ಹೊಲವಿಲ್ಲದೂರಿನಲಿ ಹಸುವ ಹುಡುಕಿದರು ಹಸುವಿಲ್ಲದೂರಿನಲಿ ಹೊಲವ ಹುಡುಕಿದರು ಹೂವಿಲ್ಲದೂರಿನಲಿ ತುಂಬಿಯ ಹುಡುಕಿದರು ತುಂಬಿಯಿಲ್ಲದೂರಿನಲಿ ಹೂವ ಹುಡುಕಿದರು ಮರವಿಲ್ಲದೂರಿನ...
ನನ್ನೊಳಗೊಬ್ಬ ಸೈತಾನ ಯಾವಾಗಲೂ ಇರುತಾನ ನಾನೆಚ್ಚರಿರಲಿ ನಿದ್ರಿಸುತಿರಲಿ ತನ್ನಿಚ್ಛೆಯಂತೆ ಕುಣಿಸುತಾನ ಕುಣಿಸುತಾನ ದಣಿಸುತಾನ ಮನಸೋಇಚ್ಛೆ ಮಣಿಸುತಲು ಇರುತಾನ ಎಲ್ಲರನು ಬಯ್ಯುತಾನ ಬಡಿಯಲು ಕೈಯೆತ್ತುತಾನ ಕೊಂದು ಕೂಗುತಾನ ಯಾವಾಗಲೂ ಏನೊ ಒಂದು ಸಂಚ...














