ತಿದ್ದಲಾರದ ನಿನ್ನೆ ಕಾಣಲಾರದ ನಾಳೆ ಇದ್ದರೂ ಇರದಂಥ ವರ್‍ತಮಾನ ನಿಲ್ಲಲಾರದ ಕಾಲ ಕಾಲ ಕ್ರಮದಲ್ಲಿ ಮರಳದಿದ್ದರು ಮರಳಿದಂಥ ಅನುಮಾನ ಬೇಡವೆಂದರು ಬೆನ್ನು ಬಿಡದಂಥ ನೆನಪುಗಳು ಬೇಕೆಂದು ಬೇಡಿದರು ತಡೆವ ವಿಸ್ಮೃತಿಗಳು ಕ್ಷಣ ಕೂಡ ನಿಂತಲ್ಲಿ...
ಇದು ಎಂಥ ಶಾಪ ಈ ಯಕ್ಷನಿಗೆ ಪಾಪ ತನ್ನ ನಲ್ಲೆಯ ಬಳಿಯಿಂದ ದೂರವಿರಬೇಕಾದ ವಿರಹ ತಾಪ ಈ ಇಂಥ ಆಷಾಢ ದಿನಗಳಲ್ಲೇ ಹಾತೊರೆಯುವನು ಕಾತರಿಸುವನು ಒಂದು ಮೋಡವ ಕರೆದು ಕೋರುವನು ಮೋಡವೇ ಆಕಾಶದ ಪವಾಡವೇ...
ಹತ್ತವತಾರಗಳು ಆಗಿಹೋದರೂ ಅವತಾರಗಳಿನ್ನೂ ಕೊನೆಗೊಂಡಿಲ್ಲ ಶತಕೋಟಿ ದೇವರುಗಳು ಬಂದು ಹೋದರೂ ದೇವರುಗಳಿನ್ನೂ ಮುಗಿದಿಲ್ಲ ಅವತಾರದವತಾರ ಇಲ್ಲಿ ಪ್ರತಿಯೊಬ್ಬನೂ ಯಾವ ಯಾವುದೋ ವರಾತ ಆರಂಭಿಸಿದ ಸ್ವಯಂಚಾಲಿತ ಲೀಲೆಯ ನಿಲ್ಲಿಸಲು ತಾನೆ ಮರೆತ ಯುಗದ ಗಾಲಿಗಳ ಮೇಲೆ...
ಓಡುತಿರುವ ಗಾಡಿಯೊಳಗೆ ಇರುಳು ಹೆಪ್ಪುಗಟ್ಟುತಿದೆ ಒಳದೀಪಗಳನುರಿಸಿದರೆ ಹೊರಜಗವೇ ಮಾಯ ಕಿಟಕಿಗಾಜುಗಳ ಗೋಡೆಯಾಗಿ ಎಲ್ಲಿ ನೋಡಿದರೂ ಅಲ್ಲಿ ನೋಡಿದವನ ಮುಖವೆ ತೋರುವುದು ಲೋಕ ಮುಚ್ಚಿಕೊಳ್ಳುವುದು ಅಲ್ಲಿ ಹೊರಗೆ ಮಿನುಗುವ ಸಣ್ಣ ಮಿಂಚು ಹುಳಗಳೋ ಅಲ್ಲಿ ಮೇಲೆ...
ಅರ್‍ಧಕೆ ನಿಂತ ಹಾಡುಗಳೆ ಹಾಗೇ ನೀವಿರುವರೆ ಶಬ್ದ ಮರೆತವೊ ಅರ್ಥ ಸಿಗದಾದುವೊ ಹಾಗೇ ನೀವಿರುವರೆ ಅರ್‍ಧಕೆ ನಿಂತ ಇಮಾರತುಗಳೇ ಹಾಗೇ ನೀವಿರುವರೆ ಯಾರು ಕಲ್ಪಿಸಿದ್ದರೋ ಯಾರು ಬಯಸಿದ್ದರೋ ಹಾಗೇ ನೀವಿರುವರೆ ಅರ್‍ಧಕೆ ನಿಂತ ಪತ್ರಗಳೆ...
ಮಾತುಮಾತಿಗೆ ಸಿಟ್ಟುಮಾಡಿದಿರಿ ಪಾತ್ರೆ ಪಗಡೆಗಳ ಒಡೆದುಹಾಕಿದಿರಿ ಕಂಡಕಂಡವರಿಗೆ ಕೆಂಡವಾದಿರಿ ಸಿಟ್ಟು ನಾಶಕೆ ಮೂಲವೆಂದ ನಮ್ಮ ಬುದ್ಧನ ಕೇಳಿದಿರ ಅದು ಬೇಕು ಇದು ಬೇಕು ಎಲ್ಲ ಬೇಕೆಂದಿರಿ ಎಷ್ಟು ದೊರಕಿದರು ಇನ್ನಷ್ಟು ಬೇಕೆಂದಿರಿ ಸಾಕೆಂಬ ಪದವನ್ನೆ...