ಏನ ಮಾಡಲಿರುವೆ ನೀನು

ಏನ ಮಾಡಲಿರುವೆ ನೀನಿದುವರೆಗೆ
ಯಾರು ಮಾಡದ
ಏನ ಕಲ್ಪಿಸಲಿರುವೆ ಯಾರಿದುವರೆಗೆ ಕಲ್ಪಿಸದ

ಬಲೆಯ ನೇಯುವೆಯ ಜೇಡ
ಆಗಲೇ ನೇಯ್ದಿದೆ
ಕಲೆಯ ಬರೆಯುವೆಯ ಆ-
ಕಾಶ ಆಗಲೇ ರೂಪಿಸಿದೆ

ಮುತ್ತ ಪೋಣಿಸುವೆಯ ಇಬ್ಬನಿ
ಆಗಲೇ ಪೋಣಿಸಿದೆ
ಪರಿಮಳವ ಹರಡುವೆಯ ತೋಟ
ಆಗಲೇ ಹರಡಿದೆ

ಬೆಳಕು ಹರಿಸುವೆಯ ಬೆಳಗು
ಆಗಲೇ ಹರಿಸಿದೆ
ತಂಪು ಸುರಿಸುವೆಯ ತಿಂಗಳು
ಆಗಲೇ ಸುರಿಸಿದೆ

ಮಿಂಚುವೆಯ ಮಿಂಚು
ಆಗಲೇ ಮಿಂಚಿದೆ
ಧ್ವನಿಸುವೆಯ ಗುಡುಗು
ಆಗಲೇ ಧ್ವನಿಸಿದೆ.

ಕನಸು ಕಟ್ಟುವೆಯ ನಿದ್ದೆ
ಆಗಲೇ ಕಟ್ಟಿದೆ
ನೆನಸು ಕಾಣಿಸುವೆಯ ಕನ್ನಡಿ
ಆಗಲೇ ಕಾಣಿಸಿದೆ

ಕುದಿಯುವೆಯ ಬೆಂಕಿ
ಆಗಲೇ ಕುದಿಯುತಿದೆ
ಕರಗುವೆಯ ಮಂಜು
ಆಗಲೇ ಕರಗುತಿದೆ

ಚಲಿಸುವೆಯ ಲೋಕ
ಆಗಲೇ ಚಲಿಸಿದೆ
ಸುಮ್ಮನಿರುವೆಯ ದೈವ
ಯಾವತ್ತೂ ಸುಮ್ಮನಿದೆ
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ತಮೋಭೀತಿ
Next post ಉಮರನ ಒಸಗೆ – ೨೫

ಸಣ್ಣ ಕತೆ

  • ಕೂನನ ಮಗಳು ಕೆಂಚಿಯೂ….

    ಬೊಮ್ಮನಹಳ್ಳಿ ಸಂತೆಯಿಂದ ದಲ್ಲಾಳಿಗೆ ಸಂಚಾಗಾರ ಎಂದು ನೂರು ರೂಪಾಯಿ ಸೇರಿ ಒಂದು ಸಾವಿರದ ಒಂದುನೂರು ಕೊಟ್ಟು ತಂದ ’ಚೆನ್ನಿ’ಕರುಹಾಕಿ ಮೂರು ತಿಂಗಳಲ್ಲಿ ಕೊಟ್ಟಿಗೆಯೊಳಗೆ ಕಾಲು ಜಾರಿ ಬಿದ್ದದ್ದೆ… Read more…

  • ಬಿರುಕು

    ಚಂಪಾ ಹಾಲು ತುಂಬಿದ ಲೋಟ ಕೈಯಲ್ಲಿ ಹಿಡಿದು ಒಳಗೆ ಬಂದಳು. ಎಂದಿನಂತೆ ಮೇಜಿನ ಮೇಲಿಟ್ಟು ಮಾತಿಲ್ಲದೆ ಹೊರಟು ಹೋಗುತ್ತಿದ್ದ ಅವಳು ಹೊರಡುವ ಸೂಚನೆಯನ್ನೇ ತೋರದಿದ್ದಾಗ ಮೂರ್‍ತಿ ಬೆಚ್ಚಿ… Read more…

  • ಪ್ರೇಮನಗರಿಯಲ್ಲಿ ಮದುವೆ

    ಜಾರ್ಜ್, ಎಲೆನಾಳನ್ನು ಸಂಧಿಸಿದಾಗ ಅವಳ ಮನೋಸ್ಥಿತಿ ಬಹಳ ಹದಗೆಟ್ಟಿತ್ತು. ಪಾರ್ಕಿನ ಬೆಂಚಿನ ಮೇಲೆ ತಲೆ ಬಗ್ಗಿಸಿ ಕಣೀರನ್ನು ಒರೆಸಿಕೊಳ್ಳುತ್ತಿದ್ದ ಎಲೆನಾಳನ್ನು ಕಂಡು ಅವರ ಮನಸ್ಸು ಕರಗಿತು. "ಹಾಯ್,… Read more…

  • ರಾಧೆಯ ಸ್ವಗತ

    ಈಗ ಸೃಷ್ಟಿಕರ್ತನ್ನು ದೂಷಿಸುತ್ತಾ ಕಾಲ ಕಳೆಯುತ್ತಿದ್ದೇನೆ ಕೃಷ್ಣಾ. ಹೆಂಗಸರಿಗ್ಯಾಕೆ ಅವರ ಪ್ರಿಯಕರರಿಗಿಂತ ಹೆಚ್ಚು ಆಯುಸ್ಸನ್ನು ಅವನು ಕೊಡುತ್ತಾನೋ? ನೀನು ಹೇಳುತ್ತಿದ್ದುದು ಮತ್ತೆ ಮತ್ತೆ ನೆನಪಾಗುತ್ತಿದೆ: "ರಾಧೆ, ಈ… Read more…

  • ಒಲವೆ ನಮ್ಮ ಬದುಕು

    "The best of you is he who behaves best towards the members of his family" (The Holy Prophet) ವಾರದ ಸಂತೆ.… Read more…