Home / Poem

Browsing Tag: Poem

ಕಣ್ಣು ಕಣ್ಣು ಕೂಡಿದಾಗ ಸರ್ಪಕಂಡ ಗರುಡ ಹಾಕಿದ ಹೊಂಚು ಸೆಣೆಸಿ ಸೆಳಕೊಳ್ಳುವ ಸಂಚು ಮಿನುಗುವ ಕಣ್ಣಮಿಂಚು ಕುಣಿಕೆ ಕಣ್ಣಿಯ ಸುತ್ತಿ ಎಣಿಕೆಯ ಹೆಣಿಕೆ ಹಾಕುತ್ತದೆ ತಿನಿಸು ಕಂಡ ನಾಲಗೆ ಚಾಚಿ ಸಿಕ್ಕರೆ ಸಾಕು ಸಂದು ಗಬಕ್ಕನೆ ತಿಂದು ಹಸಿವಿಂಗಿಸಲು ಕಾಯ...

ಕಾಡೋಳಾಯ್ತು ಅಲಾವಿಯಾಡಿದರಾರೋ ನಾಡೊಳಗ ಐಸುರ ನೋಡಿದರಾರೋ         ||ಪ|| ಪಂಜ ತಾಬೂತ ಪೂಜೆಮಾಡಿದರಾರೋ ಹುಂಜನ ಕೊಯ್ದು ತಿಂದವರ‍್ಹೆಸರ‍್ಹೇಳಿ ಸಾರೋ    ||೧|| ಒಂದ ಕುಡಕಿಯೊಳು ಹಣಹಾಕಿದರಾರೋ ನಜರಿಟ್ಟು ದಾಳಿಂಬರಗೊನಿ ಊರಿದರ‍್ಯಾರೋ     ||೨||...

ಮಡೊನ್ನ, ಜೆನ್ನಿಫರ್ ಮತ್ತು ಮರಿಯಕ್ಯಾರೆ ಎಂಬ ಪಾಶ್ಚಾತ್ಯ ನೀರೆಯರ ಹಾಡುಗಳು ಅವರಿಬ್ಬರ ಮೈ ಮೇಲಿನ ಹಳದಿಬಟ್ಟೆಯನ್ನು ಬಿಚ್ಚಿಸುತ್ತಲಿದೆ. ಪ್ರಳಯದಂತೆ ಉಕ್ಕಿ ಬರುವ ಆ ಸಂಗೀತ ಗುಚ್ಛವೋ, ಗಾಳಿಯಲ್ಲಿ ತೇಲಾಡತೊಡಗಿದ ಆ ಬೀದಿಬದಿಯ ಚಿಂದಿಬಟ್ಟೆಗಳನ್ನ...

ತೇಲುವ ಬೆಂಡು ನೀರುಂಡು ಮೀನು ಮೊಸಳೆಗಳ ಬಾಯಿ ಹಲ್ಲುಗಳ ಕಂಡು ಅದು ಹೇಗೋ ಉಳಕೊಂಡು ಇಳಿಯಿತು ಇಳಿದೂ ಇಳಿದೂ ಗಟ್ಟಿಗೊಂಡು ಕಲ್ಲಾಗಿ ಒರಟು ಕರಟಾಗಿ ತಳ ಕಂಡಿತು ಆಗೊಂದು ಕಮಲನಾಳ ಕಳಕಳಿಸಿ ನಳನಳಿಸಿ ಕಲಕುತ್ತ ಇಳಿದು ಬಂತು ಕಲ್ಲು ಕದಲಿತು ಹೂವು ಕಳಿಸ...

ಅಲಾವಿಗೆ ಐಸೂರ‍್ಯಾತಕೋ         ||ಪ|| ಐಸುರ ಯಾಕಾತಕೋ ಹೇಸಿ ಮೋರುಮ ಸಾಕು ವಾಸುಮತಿಗೆ ಹೆಸರಾದ ಅಲಾವಿಗೆ    ||೧ || ಕಾಲ ಕೆಸರಿನೊಳು ತುಳಿದು ತುಳಿದು ಜನ ಸಾಲಬಳ್ಳಿ ಹಿಡಿದಾಡು ಅಲಾವಿಗೆ     ||೨|| ಬಣ್ಣದ ಲಾಡಿಯ ಹಾಕಿ ಮೆರೆಯುವ ಜನ ಪುಣ್ಯ ಪ...

ನಮ್ಮೂರಿನ ಲ್ಯೆನ್‍ಮನ್ ತಿಮ್ಮಯ್ಯನದು ಯುವಕ ಮಂಡಲದ ವಾರ್ಷಿಕ ನಾಟಕದಲ್ಲೊಂದು ಪುಟ್ಟ ಪಾತ್ರ ಕೈಯಲ್ಲಿ ಪತ್ರಗಳನ್ನು ಹಿಡಿದು ನಾಟಕದ ಒಂದು ಸನ್ನಿವೇಶದಲ್ಲಿ ಪೋಸ್ಟ್ ಅಂತ ಕೂಗಿ ಪತ್ರ ಕೊಟ್ಟು ಹೋಗುವುದು ಇಷ್ಟೇ ಮೊಮ್ಮಗನ ಪಾತ್ರ ನೋಡಲು ಅವನ ಅಜ್ಜಿ ...

ಎದೆಯೆಂಬ ಹೊಲವನ್ನ ಹದವಾಗಿ ಹರಗೀನಿ ಬೆದೆ ಮಳೆ ಬಂದಂಗೆ ಮಿದು ಮಾಡು ಬಾರೆ ಮಿದುವಾದ ಹೊಲದಾಗ ಬೀಜಾನ ಬಿತ್ತೀನಿ ಬೇರಿಗೆ ಕಸುವಾಗೊ ಸತುವನ್ನು ತಾರೆ  ||೧|| ಎದೆಯೆಂಬ ಮರುಭೂಮಿ ಬರಬಾರಾ ಒಣಗಿದೆ ಹನಿಹನಿ ಸುರಿಸುತ್ತ ಹಸರಿಸು ಬಾರೆ ಬಾಯೊಣಗಿ ಬೋರ್ಯಾ...

ಈ ಮಾಹಾತ್ಮ್ಯೆ ಯಾವ ಪುರಾಣದಲ್ಲಿದೆ? ಎಲ್ಲಿ ಯಾರು ಹೇಳಿದ್ದು? ಯಾರು ಕೇಳಿದ್ದು? ಯಾವ ಇಷ್ಟಾರ್ಥಸಿದ್ದಿಗಾಗಿ? ಎಂದೆಲ್ಲ ಪ್ರಶ್ನೆಗಳನ್ನು ನೀವು ಕೇಳಬಹುದು. ಉತ್ತರ ಹೇಳುತ್ತಾ ಹೋದರೆ ಪೀಠಿಕಾ ಪ್ರಕರಣವೇ ಉದ್ದ ಬೆಳೆದು ಮಹಾತ್ಮ್ಯೆಯನ್ನು ಕೇಳುವಷ್ಟರಲ್ಲಿ ನಿಮಗೆ ಹಾಕಳಿಗೆ ತೊಡಗಿ ತೂಕಡ...

(ಒಂದು ಐತಿಹಾಸಿಕ ಕತೆ) ಹ್ಹಃ ಹ್ಹಃ ಹ್ಹಃ! ಅಹ್ಹಃ ಅಹ್ಹಃ ಅಹ್ಹಃ!! ಗಝುನಿ ಮಹಮೂದನಿಗೆ ಹಿಡಿಸಲಾರದ ನಗೆ. ನಕ್ಕು ನಕ್ಕು ಅವನ ಹೊಟ್ಟೆ ನೋಯುತ್ತಿದ್ದಿತು. ಆದರೂ ಅವನ ಆ ತಿರಸ್ಕಾರದ ನಗೆ ತಡೆಯಲಾರದಾಯಿತು. ಅದೊಂದು ಸುಪ್ರಸಿದ್ದವಾದ ಸೋಮನಾಥ ದೇವಾಲಯ. ಭಾರತದ ವೈಭವವನ್ನು ವಿಶ್ವಕ್ಕೆ ತೋ...

ಸರಲಾಕ್ಷ ಹುಲಿಮೀಸೆಯು ಮನೆಯಲ್ಲಿ ಬಂದಿರಲಾರಂಭಿಸಿದಂದಿನಿಂದ ತಾನು ತೊಂದರೆಗೊಂಡು ಬೇಸತ್ತು ಹೋಗಿರುವೆನೆಂದು ವಸತಿಗೃಹದ ಸ್ವಾಮಿನಿಯಾದ ಲೀಲಾಬಾಯಿಯು ದೂರಿಕೊಳ್ಳುತ್ತಿದ್ದಳು. “ಕೆಟ್ಟ ಮೋರೆಯವರೂ ಅಸಭ್ಯರೂ ಸುಟ್ಟಮನೆಯವರೂ ಸುಡದ ಮನೆಯವರೂ ತೆರವಿಲ್ಲದೆ ನನ್ನ ಮನೆಗೆ ಬರುತ್ತಿರುವ...

ಅವಳು ಅಡುಗೆ ಮನೆಯ ಕಪ್ಪಾದ ಡಬ್ಬಿಗಳನ್ನು, ಉಳಿದ ಸಾಮಾನುಗಳನ್ನು ತೆಗೆದು ತೊಳೆಯಲು ಆ ಮಣ್ಣಿನ ಮಾಡು ಹಂಚಿನ ಮನೆಯ ಮುಂದಿನ ತೆಂಗಿನಕಟ್ಟೆಯಲ್ಲಿ ಹಾಕಿದ ಅಗಲ ಹಾಸುಗಲ್ಲ ಮೇಲೆ ಕೈಲಿ ಹಿಡಿದಷ್ಟು ತಂದು ತಂದು ಇಡುತ್ತಿದ್ದಳು. ಏಳರ ಬಾಲೆ ಮಗಳು ಕೂಡ ತನ್ನ ಕೈಗೆ ಎತ್ತುವಂತಹ ಡಬ್ಬಿಗಳನ್ನು...

ಆಹಾ! ಏನು ಕಡಲು! ಅ೦ತವಿಲ್ಲದ ಕಡಲು!! ಅಪಾರವಾಗಿಹ ಕಡಲು! ದಿಟ್ಟಿ ತಾಗದ ಕಡಲು!! ಆ ಕಡಲ ಒಡಲಲ್ಲಿ ಏನು ತೆರೆ! ಏನು ನೊರೆ!! ಏನು ಅಂದ! ಎನಿತು ಚಂದ! ಬಿಚ್ಚಿ ಮುಚ್ಚುವ ಅದರ ನಯವಾದ ತುಟಿಗಳು ಹೊನ್ನರವಿ ಎಸೆದಿರುವ ಚಿನ್ನದಲುಗಳೇಸು! ಬಣ್ಣ ಬಣ್ಣಗಳುಗುವ ಅಚ್ಚು ಪಡಿಯಚ್ಚುಗಳ ಹೊಳಪಿನ ಏನ...

ಸರ್, ಗುಡ್ ಮಾರ್ನಿಂಗ್, ಮೇ ಐ ಕಮೀನ್ ಸರ್ – ನಿತ್ಯ ಆಫೀಸಿನ ಅವಧಿ ಪ್ರಾರಂಭವಾಗುತ್ತಲೇ ಹಿಂದಿನ ದಿನ ರೆಡಿ ಮಾಡಿದ ಹತ್ತಾರು ಕಾಗದ ಪತ್ರಗಳಿಗೆ ಸಹಿ ಪಡೆಯಲು, ಇಲ್ಲವೇ ಹಿಂದಿನ ದಿನದ ಎಲ್ಲ ಫೈಲುಗಳ ಚೆಕ್ ಮಾಡಿಸಲು, ಕೈಯಲ್ಲಿ ಫೈಲುಗಳ ಕಟ್ಟು ಹಿಡಿದು ಬಾಗಿಲ ಮರೆಯಲ್ಲಿ ನಿಂತು ...