ಅಲಾವಿಗೆ ಐಸೂರ‍್ಯಾತಕೋ         ||ಪ||

ಐಸುರ ಯಾಕಾತಕೋ ಹೇಸಿ ಮೋರುಮ ಸಾಕು
ವಾಸುಮತಿಗೆ ಹೆಸರಾದ ಅಲಾವಿಗೆ    ||೧ ||

ಕಾಲ ಕೆಸರಿನೊಳು ತುಳಿದು ತುಳಿದು ಜನ
ಸಾಲಬಳ್ಳಿ ಹಿಡಿದಾಡು ಅಲಾವಿಗೆ     ||೨||

ಬಣ್ಣದ ಲಾಡಿಯ ಹಾಕಿ ಮೆರೆಯುವ ಜನ
ಪುಣ್ಯ ಪಾಪ ಎರಡಿಲ್ಲದಲಾವಿಗೆ    ||೩||

ಮುಲ್ಲಾ ಮಸೀದ್ಯಾಗ ಬೆಲ್ಲ ಓದಕಿಮಾಡಿ
ಸಲ್ಲು ಸಲ್ಲಿಗೆ ಧೀನೆಂಬ ಅಲಾವಿಗೆ  ||೪ ||

ಕಡಿದು ಕರ್ಬಲ ಕತ್ತಲ ಶಹಾದತ್ತು
ಒಡಿಯ ಶಿಶುನಾಳಧೀಶನಲಾವಿಗೆ || ೫ ||

*****