ಗುಂಡ ಕಂಪನಿಯೊಂದರ ಎಂ.ಡಿ.ಯಾಗಿದ್ದ. ದಿನಾಲೂ ಆಫೀಸಿನ ತನ್ನ ಛೇಂಬರಿನಲ್ಲಿ ಸಹದ್ಯೋಗಿಗಳ ಜೊತೆ ಮೀಟಿಂಗ್ ಮಾಡುತ್ತಿರುವಾಗಲೇ ಪ್ಯೂನ್ ಟೀ ತರುತ್ತಿದ್ದನು. ಆಗ ಅನಿವಾರ್ಯವಾಗಿ ಅವರಿಗೆಲ್ಲಾ ಟೀ ತರಿಸಬೇಕಾಗಿತ್ತು.

ಹೀಗಾಗಿ ಪ್ಯೂನ್‌ಗೆ ಹೇಳಿದ “ಇನ್ನು ಮುಂದೆ ಟೀ ತಂದಾಗ ಪಕ್ಕದ ರೂಮಿನಲ್ಲಿಟ್ಟು ಫೋನ್ ಬಂದಿದೆಯೆಂದು ಹೇಳು. ನಾನೊಬ್ಬನೇ ಟೀ ಕುಡಿದು ಹೋಗುತ್ತೇನೆ” ಎಂದನು.

ಇದೇ ಉಪಾಯ ಸಾಗುತಿತ್ತು. ಒಮ್ಮೆ ಗುಂಡ ಸಹದ್ಯೋಗಿಗಳ ಜೊತೆಗೆ ಗಹನವಾದ ಚರ್ಚೆಯಲ್ಲಿ ಮುಳುಗಿದ. ಪ್ಯೂನ್ ಎಂದಿನಂತೆ ಬಂದು ಹೇಳಿದ “ಸಾರ್ ಫೋನ್ ಬಂದಿದೆ.” ನಾಲ್ಕಾರು ಸಾರಿ ಕರೆದರು ಗುಂಡ ಕದಲದೆ ಕುಳಿತಿದ್ದ. ಕೊನೆಗೆ ಪ್ಯೂನ್ ಹೇಳಿದ.

“ಸಾರ್ ಬೇಗ ಬರದಿದ್ರೆ ಫೋನು ತಣ್ಣಗಾಗುತ್ತೆ.”
*****

Latest posts by ತೈರೊಳ್ಳಿ ಮಂಜುನಾಥ ಉಡುಪ (see all)