ಪರಿಸರ ಪ್ರೇಮಿಯಾದ ಆತ ಮನೆಯ ಮುಂದಿನ ಜಾಗದಲ್ಲಿ ಹೊಂಗೆ ಸಸಿ ನೆಟ್ಟು, ಅದನ್ನು ಕಾಪಾಡಲು ಇಟ್ಟಿಗೆ ಗೂಡು ಕಟ್ಟಿಸಿ ನೀರೆರೆಯುತ್ತಾನೆ. ಅದು ಹೆಮ್ಮರವಾಗಿ ಅದರ ತಂಪು ನೆರಳಿನ ಕನಸನ್ನು ಕಾಣುತ್ತಾನೆ. ಧಿಡೀರನೆ ಹದನೈದು ದಿನ ಊರ ಬಿಟ್ಟು ಹಳ್ಳಿಗೆ ಹೋಗ ಬೇಕಾದಾಗ ಮನಸ್ಸಿಲ್ಲದೆ ಹೋಗುತ್ತಾನೆ. ಹಿಂತಿರುಗಿ ಬರುವ ಹೊತ್ತಿಗೆ ಹೊಂಗೆ ಸಸಿಯನ್ನು ಕಿತ್ತೆಸದು, ಅದರಲ್ಲಿ ಕಸ ಕಡ್ಡಿ, ಕುಪ್ಪೆ ಸುರಿದು ರಸ್ತೆಯ ಜನರು ಹೊಂಗೆ ಸಸಿಯ ಗೂಡನ್ನು ಗೋರಿ ಮಾಡಿರುತ್ತಾರೆ. ಇದನ್ನು ನೋಡಿ ಪರಿಸರ ಪ್ರೇಮಿಯ ಕನಸು ಒಡೆದು ಚೂರು ಚೂರಾಗುತ್ತದೆ.
*****