ಪ್ರಗತಿ ಅಥವಾ ದಾಸ್ಯವಿಮೋಚನೆ – ೬ನೆಯ ಖಂಡ – ಸಮಯಸಾಫಲ್ಯ

ಪ್ರಗತಿ ಅಥವಾ ದಾಸ್ಯವಿಮೋಚನೆ – ೬ನೆಯ ಖಂಡ – ಸಮಯಸಾಫಲ್ಯ

ಬೇಬಂದಶಾಹಿಯ ನಿಜಾಮರಾಜ್ಯದಲ್ಲಿ ಹಿಂದಕ್ಕೊಮ್ಮೆ ಬಾದಶಹನ ಮೆಹರಬಾನಿಗೆಯಿಂದ ‘ಗೋಮಾಜಿ ಕಾಪಸೆ’ ಎಂಬಾತನಿಗೆ ಮೂರು ಮುಕ್ಕಾಲುಗಳಿಗೆಯವರೆಗೆ ಬಾದಶಾಹಿ ಪದವಿಯು ದೊರಕಿತ್ತಂತೆ! ಆ ಸಮಯಾನುವರ್‍ತಿಯು ಮೂರು ಮುಕ್ಕಾಲುಗಳಿಗೆಯಲ್ಲಿ ಲಕ್ಷಾಂತರ ಜನರಿಗೆ ಇನಾಮುಗಳ ಸನದುಗಳನ್ನು ಮಾಡಿಕೊಟ್ಟನೆಂದೂ, ಅವನು ಹಾಕಿಕೊಟ್ಟ ಇನಾಮುಗಳೇ ಈಗ್ಯೂ ಕರ್ನಾಟಕ ದೊಳಗಿನ ಜನರಿಗೆ ವಿಶೇಷವಾಗಿ ಬಾಹ್ಮಣರಿಗೆ ನಡೆಯುತ್ತವೆಯಂದೂ ಕೇಳಿಕೆಯಲ್ಲಿದೆ. ಗೋಮಾಜಿ ಕಾಪಸೆಯು ಯಾರೇ ಇರಲಿ, ಎಂಥ ವಿಚಾರದವನೇ ಇರಲಿ ಅವನ ಸಮಯಸಾಫಲ್ಯವು ಹೊಗಳತಕ್ಕದ್ದೇಸರಿ!

ಎಷ್ಟೋತಲೆಗಟ್ಟಲೆ ಬಾದಶಾಹಿಯನ್ನು ಅನುಭವಿಸಿದ ನಿಜಾಮನು ಮಾಡದ ಕೆಲಸವನ್ನು ಕೇವಲ ಮೂರು ಮುಕ್ಕಾಲುಗಳಿಗೆ ಪಟ್ಟವೇರಿದ ಗೋಮಾಜಿಕಾಪಸೆಯು ಹ್ಯಾಗೆ ಸಾಧಿಸಿದನು ನೋಡಿರಿ! ಮನುಷ್ಯನಲ್ಲಿ ಸ್ಟಾತಂತ್ರ್ಯಪ್ರೀತಿ, ದೃಢನಿಶ್ಚಯ, ಮಹತ್ವಾಕಾಂಕ್ಷೆ, ಅಲೌಕಿಕತೆ, ಸದಸದ್ವಿವೇಕ ಬುದ್ಧಿಗಳು ಜಾಗ್ರತವಿದ್ದವೆಂದರೆ ಆ ಮನುಷ್ಯನು ತಕ್ಕ ಸಮಯವನ್ನು ನಿರರ್‍ಥಕವಾಗಿ ವ್ಯಯಮಾಡುವದಿಲ್ಲ. ಸರ್ ಎಂ. ವಿಶ್ವೇಶ್ವರಯ್ಯನವರು ಮೈಸೂರ ದಿವಾಣ ಗಿರಿಯನ್ನು ೫-೬ ವರ್ಷಮಾಡಿದರು. ಈ ಅವಧಿಯಲ್ಲಿ ಮೈಸೂರೆಸಂಸಂಸ್ಥಾನದಲ್ಲಿ ಆದ ಸುಧಾರಣೆಗಳು ಅವೂರ್ವವಾಗಿರುವವು. ಗ್ರಾಮಾಭಿವೃದ್ಧಿ ಖಾತೆ, ರೈಲ್ವೆಖಾತೆ ಮೊದಲಾದ ಹೊಸಖಾತೆಗಳು ಉದಯಕ್ಕೆ ಬಂದು ಪ್ರಜೆಗಳಿಗೆ ಆರೋಗ್ಯ ಹಾಗು ಪ್ರಯಾಣಸೌಕರ್‍ಯವನ್ನುಂಟು ಮಾಡಹತ್ತಿವೆ.
ಅರ್ಥಸಾಧಕದ ವಿಚಾರಗಳ ಚರ್‍ವಣವಾಗಹತ್ತಿ ಜನರ ಆರ್‍ಥಿಕ ದೃಷ್ಟಿಯು ವಿಸ್ತೃತವಾಗಹತ್ತಿದೆ. ಕನ್ನಂಬಾಡಿಯ ‘ಕೃಷ್ಟ್ಯರಾಜಸಾಗರ’ದಂಥ ವಿಸ್ತೀರ್ಣ ಕೆರೆಯು ಕಟ್ಟಲು ಪ್ರಾರಂಭವಾದ್ದರಿಂದ ರೈತರು ವಿಶ್ವೇಶ್ವರಯ್ಯನವರ ವಿಷಯಕ್ಕೆ ಅದರವುಳ್ಳವರಾಗಿದ್ದಾರೆ. ಪ್ರಜಾಪ್ರತಿನಿಧಿಸಭೆಯಿಂದ ರಾಜ-ಪ್ರಜೆಗಳಲ್ಲಿ ಪ್ರೇಮವು ವೃದ್ಧಿಂಗತವಾಗಹತ್ತಿದೆ. ಆದರೆ ಇದು ಯಾತರ ಫಲವು? ಸರ ವಿಶ್ವೇಶ್ವರಯ್ಯನವರ ಸಮಯೆಸಾಫಲ್ಯವೆಂದು ನಿಸ್ಸಂಶಯವಾಗಿ ಮೂರು ಮೂರು ಸಾರೆ ಹೇಳಬಹುದು. ಯಾಕಂದರೆ, ವಿಶ್ವೇಶ್ವರಯ್ಯನವರಿಗಿಂತ ಮೈಸೂರ ರಾಜ್ಯಕ್ಕೆ ಪೂರ್ವದಲ್ಲಿ ದಿವಾಣರಿದ್ದಿಲ್ಲವೆಂತಲ್ಲ: ಇಲ್ಲವೆ ಆಗ ಅನಾನುಕೂಲತೆಗಳು ಇದ್ದವೆಂದು ಹೇಳಲಿಕ್ಕೂ ಬರುವಹಾಗಿಲ್ಲ ಆಗ ಈಗಿನಕ್ಕಿಂತ ಹೆಚ್ಚು ಅನುಕೂಲತೆಗಳು ಇದ್ದವು. ಪ್ರಸ್ತುತದ ಮಹಾಯುದ್ಧದಂಥ ಸಾಧನಾಭಾವದ ಪ್ರಸಂಗದಲ್ಲಿ ಕೂಡ ಮೈಸೂರರಾಜ್ಯದ ಸುಧಾರಣೆಯು ಒಂದೇಸವನೆ ಆಗುವದನ್ನು ನೋಡಿದರೆ ಸಮಯಸಾಫಲ್ಯ ಮಾಡಿಕೊಳ್ಳುವ ಶಕ್ತಿ ವಿಶೇಷದಿಂದ ವಿಶ್ವೇಶ್ವರಯ್ಯನವರು ಶೀರ್ತಿಶಾಲಿಗಳಾಗುತ್ತಲಿರುವರು; ಅವರ ದೃಢನಿಶ್ಚಯ, ಸ್ವಾತಂತ್ರ್ಯಪ್ರೀತಿ, ಸುಧಾರಣಾಕಾಂಕ್ಷೆ, ದೇಶಹಿತದಕ್ಷತೆ ಮೊದಲಾದ ಗುಣಗಳು ಅವರ್ಣನೀಯವಾಗಿವೆ. ಇವರು “ಕ್ಷಣಶಃ ಕಣಶಃ ಚೈವ ವಿದ್ಯಾಮರ್‍ಧಂಚ ಸಾಧಯೇತ್” ಎಂಬಂತೆ ತಮ್ಮ ಪ್ರತಿಕ್ಷಣವನ್ನು ದೇಶಹಿತದಲ್ಲಿ ವೆಚ್ಚ ಮಾಡುತ್ತಿರುವದರಿಂದ ಇವರ ಪ್ರಸಿದ್ಧಿಯಾಗಹತ್ತಿದ್ದರಲ್ಲಿ ಆಶ್ಚರ್ಯವಿಲ್ಲ.

ಕೈ. ಪ್ರೋ. ದೇಸಾಯಿ ಎಂಬ ಗಣಿತಜ್ಞರು ಒಂದು ಮಿನಿಟನ್ನು ಸಹ ವ್ಯರ್ಥವಾಗಿ ಕಳೆಯುತ್ತಿದ್ದಿಲ್ಲವಂತೆ; “ಹೊತ್ತುಹೋದರೆ ಮತ್ತೆಬಾರದು, ಮುತ್ತುಹೋದರೆ ಮತ್ತೆ ಬಪ್ಪದು” ಸಾವಿರಾರು ರೂಪಾಯಿಗಳಿಗಿಂತ ಒಂದು ತಾಸಿನ ಬೆಲೆಯು ಎಷ್ಟೋ ಹೆಚ್ಚಿರುವುದೆಂದು ಅವರು ಭಾವಿಸಿದ್ದರು. ಅವರ ನಡಿಗೆಯ ಗತಿಯು ಕೇವಲ ಯಾಂತ್ರಿಕಪದ್ದತಿಯದಾಗಿತ್ತು; ಮನೆಯಿಂದ ಸಾಲೆಗೆ ಬರಲಿಕ್ಕೆಂದು ನಿಯೆಮಿಸಿದ ಮಿನೀಟುಗಳಲ್ಲಿ ಅವರು ತಪ್ಪದೆ ಬರುತ್ತಿದ್ದರು. ಪ್ರಿನ್ಸಿಪಾಲರಿದ್ದಾಗ ರಾತ್ರಿ ಹುಡುಗರ ಕೋಣೆಯನ್ನು ತಪಾಸಿಸುವಾಗ ಪ್ರತಿನಿತ್ಯ ಇಂಥವನ ಕೋಣೆಗೆ ಇಷ್ಟುಹೊಡೆದು ಇಷ್ಟುಮಿನೀಟಿಗೆ ತಪ್ಪದೆ ಹೋಗುತ್ತಿದ್ದರು. ಆ ಕಾಲವನ್ನು ಅವರು ಎಂದೂ ತಪಿಸಲಿಲ್ಲ. ಆ ವೇಳೆತಪ್ಪಿಸಬೇಕೆಂಬ ವಿಚಾರಮಾಡಲಿಕ್ಕೆ ಕೂಡ ಅವರಿಗೆ ಸಮಯದೊರೆಯುತ್ತಿದ್ದಿಲ್ಲವಂತೆ!

ಆದರೆ ದೇಸಾಯಿಯೆವರ ಅನುಕರಣಮಾಡಿ ಸಮಯಸಾಫಲ್ಯ ಮಾಡಿಕೊಳ್ಳುವದರಲ್ಲಿ ಅವರ ಶಿಷ್ಯರಲ್ಲಿ ಎಷ್ಟುಜನ ವಿದ್ಯಾರ್ಥಿಗಳು ನಮ್ಮ ಕಣ್ಣಿಗೆ ಬೀಳುತ್ತಾರೆ. ಒಬ್ಬನೂ ಇಲ್ಲವೆಂದು ಹೇಳಬಹುದು. ಸರ್‍ವ ಸಾಧಾರಣವಾದ ನಿಷ್ಕಾಳಜಿತನವೂ, ವೇಳೆಯ ಅಮೂಲ್ಯತೆಯ ಅಜ್ಞಾನವೂ ಇವೇ ಆಯುಷ್ಯವನ್ನು ಶೋಕಪರ್ಯ ವಸಾಯಿಯಾಗಿ ಮಾಡುವ ಕಡುವೈರಿಗಳಾಗಿವೆ. ಬಹುಜನರು ತಮ್ಮ ಆಯುಷ್ಯದೊಳಗಿನ ಎಷ್ಟೋ ತಾಸುಗಳನ್ನೂ ದಿವಸಗಳನ್ನೂ ತಿಂಗಳುಗಳನ್ನೂ ನಿರರ್‍ಥಕವಾದ ಕಾರ್ಯಗಳಲ್ಲಿ ಕಳೆಯುತ್ತಾರೆ. ಆಲಸ್ಯದಲ್ಲಿಯಾಗಲಿ, ಖುಷಿಮೋಜಿನಲ್ಲಾಗಲಿ ವ್ಯಯಮಾಡುವ ವೇಳೆಯ ಶತಾಂಶದಷ್ಟು ಹಣವನ್ನು ಕೂಡ ಅತ್ಯಂತ ದೀವಾಳಿಖೋರನು ಸಹ ಹಾಳುಮಾಡಿಕೊಳ್ಳುವದಿಲ್ಲ.

ಲೋ. ಟಿಳಕರ ವಿಷಯಕ್ಕೆ ಆದರವಹಿಸುವ, ಅವರ ಯಶಸ್ಸನ್ನು ಕುರಿತು ಚಕಿತರಾಗುವ, ಅವರನ್ನು ಹಿಂದುಮಾತೆಯ ಭಾಗ್ಯವಾನ್ ಪುತ್ರರೆಂದು ಭಾವಿಸುವ ಜನರು, ಟಿಳಕರವರು ಹೊಂದಿರುವ ಪ್ರಗತಿಯು ಅವರ ಸಮಯಸಾಫಲ್ಯದ ಫಲವೇ ಆಗಿದೆಯೆಂದು ತಿಳಿಯ ಬೇಲ್ಲವೇ? ಟಿಳಕರವರು ಪ್ರತಿಯೊಂದು ಸಾರೆಯ ಜೀಲಿನೊಳಗಿನ ಆಯುಷ್ಯವನ್ನು ಕೂಡ ಸಾಫಲ್ಯಮಾಡಿಕೊಂಡಿರುವರಾದ್ದರಿಂದ, ಅವರಂಥ ಬೇರೆ ಉದಾಹರಣೆಯೇ ಇಲ್ಲದಾಗಿದೆ. ಸಮಯ ಸಾಫಲ್ಯವೇ ನಿಜವಾದ ಜೇವನ ಸಾಫಲ್ಯವು. ನಿರರ್‍ಥಕವಾಗಿ ವೇಳೆ ಕಳೆದು ಯಾರು ಪ್ರಸಿದ್ಧಿಗೆ ಬಂದಿರುವರು? ಮರಣವು ಅನಿಶ್ಚಿತವಾದ್ದರಿಂದ ಪ್ರತಿಕ್ಷಣದಲ್ಲಿ ಪ್ರಗತಿಪರ ಕಾರ್ಯಮಾಡಲಿಕ್ಕೆ ಹಿಂದು ಮುಂದು ನೋಡಬಾರದು.

“ಬೇಕಾದರೆ ದುಡ್ಡು ಹಾಳುಮಾಡಿರಿ, ಮನೆಮಾರು ಹಾಳು ಮಾಡಿಕೊಳ್ಳಿರಿ; ಅದರೆ ವೇಳೆಯನ್ನು ಮಾತ್ರ ಹಾಳುಮಾಡಿಕೊಳ್ಳ ಬೇಡಿರಿ” ಎಂದು ಒಬ್ಬ ಆಂಗ್ಲ ಗ್ರಂಥಕಾರನು ಸಮಯದ ಮಹತ್ವವನ್ನು ಒಂದುಕಡೆಗೆ ಹೇಳಿರುವನು. ಬೆಲೆಬಾಳುವ ಯಾವ ವಸ್ತುಗಳೂ ವೇಳೆಯೆನ್ನು ಸರಿಗಟ್ಟಲಾರವು. ವೇಳೆಯು ಆಮೂಲ್ಯವಾಗಿದೆ. ವೇಳೆಯ ಅಪವ್ಯಯದಿಂದ ಅಗಬಹುದಾದ ಹಾನಿಯು ಯಾತರಿಂದಲೂ ತುಂಬಿಬರಲಾರದು. “ಬಾಣಬಿಟ್ಟರೆ ಹೋಯಿತು, ಮುತ್ತು ಒಡೆದರೆ ಹೋಯಿತು” ಎಂಬಂತೆ ಸಂದ ವೇಳೆಯು ತಿರುಗಿ ಎಂದೂ ಬರಲಾರದು. ನಿರರ್ಥಕವಾಗಿ ದುಡ್ಡನ್ನು ಹಾಳುಮಾಡುವ ಮನುಷ್ಯನನ್ನು ಜನರು ನಿಂದಿಸುವಂತೆ, ವ್ಯರ್ಥವೇಳೆಯನ್ನು ಕಳೆಯುವ ಮನುಷ್ಯನನ್ನು ಜನರು ಹಳಿಯುವದಿಲ್ಲ. ಈ ಆಲಸ್ಯಗಾರರು ಪ್ರಗತಿ ಪಥವನ್ನು ಹಿಡಿಯಲು ತಮಗೆ ಯೋಗ್ಯ ಸಮಯವೇ ಸಿಗುವದಿಲ್ಲೆಂತಲೂ, ಸಾಧನಗಳು ಸರಿಯಾಗಿರುವದಿಲ್ಲೆಂತಲೂ ಹಿಡಿದ ಕಾರ್‍ಯದಲ್ಲಿ ಯಶವು ಬರುವದಿಲ್ಲೆಂತಲೂ ಗುಣಗುಟ್ಟುವರು. ಆದರೆ ಇವರು ತಮ್ಮ ವೇಳೆಯನ್ನು ಸರಿಯಾಗಿ ಉಪಯೋಗಿಸಲಾರದವರಾದ್ದರಿಂದ ಇವರ ಪ್ರಗತಿಯು ಎಂದೂ ಆಗಲಿಕ್ಕಿಲ್ಲಂಬದು ಸಿದ್ಧಾಂತವು.

ಎಂಜಿನವು ಎಷ್ಟು ಕಾಳಜಿಯಿಂದ ತಯಾರಿಸಲ್ಪಟ್ಟಿದ್ದರೂ ಅದಕ್ಕೆ ಉಗಿಯಶಕ್ತಿಯು ದೂರತಹೊರತು ಆದು ಒಂದು ತುಸು ಕೂಡ ಸರಿದಾಡಲಾರದು. ಅದರಂತ ಸಾಮರ್‍ಥ್ಯವು ಎಷ್ಟ್ಟಿದ್ದರೇನು? ಆದರ ಉಪಯೋಗ ಮಾಡಿಕೂಂಡರ ಮಾತ್ರ ಪ್ರಯೋಜನವಾಗುವ ಸಂಭವವಿರುವದು. ಕರ್ತವ್ಯಬುದ್ಧಿಯನ್ನು ಜಾಗೃತಗೊಳಿಸದ್ದರಿಂದಲೇ ನಮ್ಮಲ್ಲಿಯ ಎಷ್ಟೋ ಜನರ ಆಯುಷ್ಯವು ವ್ಯರ್ಥವಾಗಿ ಕ್ಷೀಣಿಸಹತ್ತಿದೆ. ಅವರು ಕೈಲಾಗದವರೆಂತಲ್ಲ. ಬಹು ಜನರು ಸಮಯ ಸಾಫಲ್ಯದ ಮಹತ್ವವನ್ನರಿಯದೆ ಗಾಢನಿದ್ರೆ ಹತ್ತಿದವರಂತೆ ಸುಖರೂಪದಿಂದಿರುವರು. ನಾವೆಲ್ಲರೂ ಬರೇ ಹೊಟ್ಟೆ ಹೊರಕೊಳ್ಳುವುದೊಂದೇ ಧ್ಯೇಯವನ್ನು ಮುಂದಿಟ್ಟು ಕೊಂಡಿರುವದರಿಂದ, ನಮಗೆ ವೇಳೆಯ ಮಹತ್ವವು ತಿಳಿಯದಾಗಿದೆ. ಪೃಥ್ವಿಯೊಳಗಿನ ದೊಡ್ಡ ದೊಡ್ಡ ಗುಡ್ಡ, ವಿಶಾಲವಾದ ಸರೋವರ, ವಿಸ್ತೀರ್ಣಗಳಾದ ಸಾಗರ ಮೊದಲಾದವುಗಳನ್ನು ನೋಡಿ, ಇವುಗಳಿಂದ ವಿಶೇಷ ಪ್ರಯೋಜನವೇನೆಂದು ಕೇಳುವ ಮೂಢನು, ತನ್ನ ಎಷ್ಟು ವೇಳೆಯನ್ನು ನಿರರ್ಥಕವಾಗಿ ವ್ಯಯಮಾಡುತ್ತೇನೆಂಬದನ್ನು ತಿಳೆಯದವನಾಗಿರುತ್ತಾನೆ. ಅವನವನ ಮಟ್ಟಿಗೆ ಪ್ರಗತಿಹೊಂದುವ ಸಾಮರ್ಥ್ಯವನ್ನು ದೇವರು ಎಲ್ಲರಿಗೂ ಕೊಟ್ಟಿರುತ್ತಾನೆ. ಆದರೆ. ಯಾವದಾದರೊಂದು ತರಡ ವ್ಯಂಗದಿಂದಲೂ, ನಿಷ್ಕಾಳಜಿತನದಿಂದಲೂ ಹುರುಪಿನ ಅಭಾವದಿಂದಲೂ ಆವನ ಸಾಮರ್ಥ್ಯವು ಸಫಲವಾಗುವದಿಲ್ಲ. ಸಾಧನಗಳು ಸಜ್ಜಾಗಿದ್ದರೂ ಅವನ್ನು ಉಪಯೊಗಿಸಿ ಪ್ರಗತಿಹೊಂದಲು ಅವನು ಶಕ್ತನಾಗುವದಿಲ್ಲ.

ಮುಂಜಾಗ್ರತಿ ಇದ್ದವನು ಸಮಯಸಾಫಲ್ಯಮಾಡಿಕೊಳ್ಳಲು ಅರ್‍ಹನಿರುತ್ತಾನೆ; ಯಾಕಂದರೆ ಪೂರ್ವಜನ್ಮ ಸಂಸ್ಕಾರಧರ್ಮದಂತೆ ಹಿಂದಿನ ಜನ್ಮದ ಪಾಪ-ಪುಣ್ಯಗಳ ಫಲಗಳನ್ನು ಈ ಜನ್ಮದಲ್ಲಿ ಅನುಭೋಗಿಸುವಂತೆ, ಈ ಜನ್ಮದಲ್ಲಿ ಮಾಡುವ ದುಷ್ಕೃತಿ-ಸುಕೃತಿಗಳ ಫಲಗಳನ್ನು ಭವಿಷ್ಯತ್ಕಾಲದಲ್ಲಿ ಅನುಭೋಗಿಸಲೇ ಬೇಕಾಗಿರುವದು “ಒಂದು ಕೈಯಿಂದ ಮಾಡಿದ ಅಡಿಗೆಯನ್ನು ಮತ್ತೊಂದು ಕೈಯಿಂದ ಉಣ್ಣುವದು” ನಿಜವಿರುವದರಿಂದ, ತಾನು ಭವಿಷ್ಯಕಾಲದಲ್ಲಿ ಸುಖಿಯಾಗಬಯಸುವ ಮನುಜನು ವರ್ತಮಾನಕಾಲದಲ್ಲಿ ಪ್ರಯತ್ನಪೂರ್‍ವಕವಾಗಿ ಸುಖಿಯಾಗಿರಲಿಕ್ಕೆ ಯತ್ನಿಸತಕ್ಕದ್ದು. ಆಸಾರವಾದ ಸಂಸಾರವನ್ನು ಸಾರಭೂತವಾಗಿ ಮಾಡುವ ಸಾಧನವು, ನಮ್ಮ ಕಿರುಕ ವೇಳೆಯ ಸಾಫಲ್ಯವನ್ನು ಮಾಡಿಕೊಳ್ಳುವದರಿಂದಲೇ ಲಭಿಸುವದು ಕೆಲಸವಿರಲಿ-ಇಲ್ಲದಿರಲಿ, ಇಚ್ಛೆಯು ಇರಲಿ-ಇಲ್ಲದಿರಲಿ, ಕಿರುಕ ವೇಳೆಯನ್ನು ಯೋಗ್ಯವಾಗಿ ವ್ಯಯಮಾಡಹತ್ತಿದರೆ, ಬಡವನು, ಶ್ರೀಮಂತನೂ, ಅಶಿಕ್ಷಿತನು ಸುಶಿಕ್ತಿತನೂ ನಿಶ್ಚಯವಾಗಿ ಆಗುವನು. ನೌಕರಿಯನ್ನು ಮಾಡಿ ಉಳಿದ ಕಿರುಕಳ ವೇಳೆಯಲ್ಲಿ ಕೆಲಸಮಾಡ ಹತ್ತಿ ಪ್ರೋ. ಧೋಂಡೋಪಂತ ಕರ್‍ವೆಯವರು ಸ್ತ್ರೀಶಿಕ್ಷಣದ ಹಲವು ಸಂಸ್ಥೆ, ಆನಾಥಬಾಲಿಕಾಶ್ರಮ, ವನಿತಾನಿದ್ಯಾಲಯ, ನಿಷಾಮಕರ್‍ಮಮರ, ಸ್ತ್ರೀಯರ ಸ್ವತಂತ್ರ ಯುನಿವರ್‍ಸಿಟಿಗಳನ್ನು ಸ್ಥಾಪಿಸಿದರು. ಕೈ. ನಾ. ರಾನಡೆಸುವರು ತಮ್ಮ ಕಿರುಕಳ ವೇಳೆಯನ್ನು ದೇಶಹಿತದ ಕಾರ್‍ಯದಲ್ಲಿ ಉಪಯೋಗಿಸಿ, ಪ್ರಸಿದ್ಧ ದೇಶಹಿತಚಿಂತಕರಾದರು.

ಪ್ರಸ್ತುತದಲ್ಲಿ ಈ ಕಿರುಕಳ ವೇಳೆಯಲ್ಲಿ ಶಿಕ್ಷಣಕೊಡುವ ಹಲವು ಸಂಸ್ಥೆಗಳು ರಾಜಾಶ್ರಯ-ಲೋಕಾಶ್ರಯಗಳಿಂದ ನಡೆದಿರುವವು. ಅವುಗಳಿಂದ ಜನರಿಗೆ ಬಹಳ ಉಪಯೋಗವಾಗುತ್ತಲಿದೆ. ಇದ್ದ‌ಊರಲ್ಲಿ ಇದ್ದು ಪಟ್ಟಣಗಳಲ್ಲಿ ನಡೆಯುವ ಶಿಕ್ಷಣವನ್ನು ಕಲಿಸುವ “ಅಕೌಂಟನ್ಸಿ ಕೋರ್‍ಸ”ದಂಥ ಉಪಯುಕ್ತ ಪತ್ರವ್ಯವಹಾರದ ಸಂಸ್ಥೆಗಳೂ, ರಾತ್ರಿಯಸಾಲೆ, ಸೂಟಿಯದಿವಸದಸಾಲೆ, ಕೂಲಿ ಕಾರರ ಸಾಲೆಗಳೂ ಇದಕ್ಕೆ ಉದಾಹರಣಗಳಾಗಿವೆ. ಈ ಸಂಸ್ಥೆಗಳ ದ್ವಾರಾ ತಮ್ಮ ತಮ್ಮ ಕಿರುಕಳ ವೇಳೆಯಲ್ಲಿ ಪ್ರಗತಿಯನ್ನು ಹೊಂದಲಿಕ್ಕೆ ಅತ್ಯಂತ ಸಹಾಯವಾಗಿದೆ. ಮುಖ್ಯವಾದ ಮಾತು ಏನಂದರೆ, ತಮ್ಮ ಇಡಿ ಆಯುಷ್ಯವು ತಮ್ಮ ಪ್ರಗತಿಯ ಸಲುವಾಗಿಯೇ ಇರುತ್ತದೆ. ಹಲವು ತರದ ವಸ್ತುಗಳು, ಪ್ರಸಂಗಗಳು, ಪ್ರಾಣಿಗಳು ಇವು ನಮ್ಮ ಪ್ರಗತಿಗೆ ಕಾರಣೀಭೂತಗಳಾಗಿರುತ್ತವೆ. ಕಣ್ಣು ಹಾಗು ಕಿವಿಗಳನ್ನು ತೆರೆದಿಟ್ಟು ಆಯುಷ್ಯದ ಪ್ರತಿಕ್ಷಣವನ್ನು ಜ್ಞಾನಾರ್‍ಜನ-ಪ್ರಗತಿಯಲ್ಲಿ ಕಳೆಯಬೇಕು. “ಕೆಲವಂಬಲ್ಲವರಿಂದ ಕಲ್ತುಕೆಲವಂ ಸುಜ್ಞಾನದಿಂನೋಡುತ” ಇತ್ಯಾದಿ ವಿಚಾರಗಳ ಸೋಮೇಶ್ವರಕವಿಯ ಉಕ್ತಿಯಂತೆ ನಾವು ದಿನಾಲು ಕೇಳುವ ಸಂಭಾಷಣಗಳಿಂದಲೂ, ಕೇಳುವ ಸುದ್ದಿಗಳಿಂದಲೂ, ಓದುವ ಪುಸ್ತಕಗಳಿಂದಲೂ ಪ್ರಗತಿಮಾರ್ಗಕ್ಕೆ ಅವಶ್ಯವಿರುವ ಸಂಗತಿಗಳನ್ನು ಗ್ರಹಿಸುತ್ತಿರಬೇಕು. ಹೀಗೆ ಮಾಡದೆ ವಾಚ್ಯಾವಾಚ್ಯ ಸಂಭಾಸಣ ಮಾಡುತ್ತ ನಿಷ್ಪ್ರಯೋಜಕಗಳಾದ ಸುದ್ದಿಗಳ ಚರ್ವಿತ-ಚರ್‍ವಣ ಮಾಡುತ್ತ, ಬುದ್ಧಿಗೆ ಮಾಂದ್ಯತ್ವವನ್ನುಂಟುಮಾಡುವ ಪುಸ್ತಕಗಳನ್ನು ಓದುತ್ತ ನಮ್ಮ ಕಾಲವನ್ನು ಆಯುಷವನ್ನು ಕಳೆಯೆತೊಡಗಿದರೆ ನಮಗೆ ಅದರಿಂದ ಸ್ವಲ್ಪವೂ ಪ್ರಯೋಜನವಾಗಲಿಕ್ಕಿಲ್ಲ.

ಗತ ಆಯುಷ್ಯವನ್ನು ಅಶಿಕ್ಷಿತತನದಲ್ಲಿ ಕಳೆದು ಈಗ ಪ್ರೌಢ ದೆಸೆಯಲ್ಲಿ ಶಿಕ್ಷಣಹೊಂದುವ ಪ್ರಸಂಗೆ ಬಂದದರಿಂದಲೂ, ದುಷ್ಟವ್ಯವಹಾರಗಳನ್ನು ಬಿಡುವ ಮನಸ್ಸಾಗಿದ್ದರೂ ಅವನ್ನು ಬಿಡುವದಾದೀತೋ ಇಲ್ಲವೋ ಎಂಬ ಸಂಶಯದಿಂದಲೂ ಪೀಡಿತರಾಗಿ ಎಷ್ಟೇ ಜನರು ತಮ್ಮ ಮುಂದಣ ಆಯುಷ್ಯದ ಸಾಫಲ್ಯವು ಹ್ಯಾಗಾದೀತೆಂದು ಚಿಂತಿಸುತ್ತಾರೆ. ಇಂಥವರು ಇಷ್ಟಫಲವನ್ನು ಬೇಗನೆ ನಿಸ್ಸಂಶಯವಾಗಿ ಹೊಂದುವರು. ಯಾಕಂದರೆ-ಪಶ್ಚಾತ್ತಾಪದಿಂದ ಮನುಷ್ಯನಲ್ಲಿ ಒಂದು ತರದ್ ತೀಕ್ಷ್ಣವಾದ ಕರ್ತವ್ಯಬಾಗ್ರತಿಯು ಉಂಟಾಗಿ ಅದು ಹಿಡಿದ ಕೆಲಸದಲ್ಲಿ ತಪ್ಪದೆ ಯಶಃಪ್ರಾಪ್ತಿಗೊಳಿಸುವದು. ಆದರಲ್ಲಿ ಪ್ರೌಢವಯಸ್ಸಿನಲ್ಲಿ ಪಶ್ಚಾತ್ತಾಪಪಡುವ ಮನುಷ್ಯನಿಗೆ ಯೋಗ್ಯಮಾರ್‍ಗವು ಕೂಡಲೆ ಕಾಣಹತ್ತುವದು: ಅಕ್ಷರಶತ್ರುವಾದ ಪ್ರೌಢಪಶ್ಚಾತ್ತಾಪಿಯಿಂದ ಅಕ್ಷರಗಳದ್ವಾರಾ ಶಿಕ್ಷಣಹೊಂದುವದು ಅಸಾಧ್ಯವಾದರೂ ಅವನು ಶಿಲ್ಪ, ನೇಕಾರಿಕೆ, ಬಡಿಗತನ ಮೊದಲಾದ ಇತರ ಕಲೆಗಳ ಶಿಕ್ಷಣವನ್ನು ಬಹು ಬೇಗ ಸಂಪಾದಿಸಿ ಪ್ರಗತಿಹೊಂದ ಬಹುದು, ಮದ್ಯಪಾನದಂಥ ದುಶ್ಚಟದಿಂದ ನಿವೃತ್ತರಾಗಬಯಸಿದ ಎಷ್ಟೋ ಪ್ರೌಢಪಶ್ಚಾತ್ತಾಪಿಗಳು ಸ್ವಲ್ಪ ದಿವಸಗಳಲ್ಲಿಯೇ ಮದ್ಯ ಪೀಯದ್ವೇಸಿಕರೂ, ಸಮಂಜಸವರ್‍ತಿಗಳೂ ಆದ ಉದಾಹರಣೆಗಳನ್ನು ಬಹುಜನರು ನೋಡಿರಬಹುದು. ಆದರೆ ಪಶ್ಚ್ಯಾತ್ತಾಪವು ಮಾತ್ರ ನಿಜವಾಗಿ ಆಗಿರಬೇಕು. ಅಂದರೆ ಅವನಿಗೆ ಸಮಯಸಾಫಲ್ಯಮಾಡಿಕೊಳ್ಳುವ ಯೋಗವು ದೊರೆಕುವದು.

ಪ್ರಗತಿಯ ಮುಖ್ಯಾ ರಹಸ್ಯವು ಸಮಯಸಾಫಲ್ಯದಲ್ಲಿಯೇ ಅಡಕವಾಗಿರುವದು. ವ್ಯರ್ಥವಾಗಿ ವೇಳೆಯನ್ನು ಕಳೆಯುವದರಿಂದ ನಮ್ಮಪುರುಷಾರ್ಥದನಾಶವೂ, ಸಾಮರ್ಥದನಾಶವೂ ಆಗಿ ನಾವು ಪ್ರಗತಿ ಹೀನರಾಗಬೇಕಾಗುವದು. ವ್ಯರ್‍ಥ ವೇಳೆಕಳೆಯುವದರಿಂದ ಉಡಾಳ ಹಾಗು ದುರ್‍ವ್ಯಸನಿ ಮನುಷ್ಯರ ಸಂಗಮಾಡುವದರಿಂದ ಹೆಚ್ಚು ಅನರ್ಥವಾಗುವದು, ಅಥವಾ ಪ್ರಗತಿಮಾರ್‍ಗದ ಪ್ರಧಾನ ಸಾಧನವನ್ನು ಕಳಕೊಂಡಂತಾಗುವದು. ಯಾರು ಸಮಯವನ್ನು ಸಾಫಲ್ಯ ಮಾಡಿಕೊಳ್ಳುವರೋ, ಅವರ ಜೇವಿತವು ಸಫಲವೇ ಸರಿ. ಯಾರು ಜೀವಿತವನ್ನು ಸಫಲಮಾಡಿಕೊಳ್ಳುವರೋ, ಅವರೇ ಮೋಕ್ಷಕ್ಕೆ ಅರ್ಹರಾಗುವರು.
*****

ಮುಂದುವರೆಯುವುದು

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಬಿಸಿಲು ಬೆಳದಿಂಗಳು
Next post ಮುಗಿದ ಕತೆಗೆ

ಸಣ್ಣ ಕತೆ

 • ಮತ್ತೆ ಬಂದ ವಸಂತ

  ಚಿತ್ರ: ಆಮಿ ಮೊದಲ ರಾತ್ರಿಯ ಉನ್ಮಾದದಲ್ಲಿದ್ದ ಮಧುವಿನ ಕಿವಿ ಹಿಂಡಿ ಅವಳಂದಳು. ‘ಮಧು, ಇಂದಿನಿಂದ ನಾವು ಗಂಡ - ಹೆಂಡತಿಯಾಗಿರುವುದು ಬೇಡ. ಬದುಕಿನ ಕೊನೆ ತನಕವೂ ಗೆಳೆಯ… Read more…

 • ರಾಮಿ

  ‘ಸಲಾಮ್ರಿ’ ರೈಲಿನ ಹೊತ್ತಾಗಿದೆ. ವೆಂಕಟೇಶನು ಒಂದೇಸವನೆ ತನ್ನ ಕೈಯಲ್ಲಿಯ ಗಡಿಯಾರವನ್ನು ನೋಡುತ್ತಿದ್ದಾನೆ. ‘ಸಲಾಮ್ರೀಽ ಏಕ ಪೈಸಾ.’ ಆಗ ಮತ್ತೆ ಒದರಿದಳು. ಟಾಂಗಾದ ತುದಿ ಹಿಡಿದು ಕೊಂಡು ಓಡ… Read more…

 • ಮೌನರಾಗ

  ಇಪ್ಪತ್ತೊಂಬತ್ತು ದಾಟಿ ಮೂವತ್ತಕ್ಕೆ ಕಾಲಿರಿಸುತ್ತಿದ್ದ ಸುಧೀರ್ ಮದುವೆಯ ಬಗ್ಗೆ ತಾಯಿ ಸೀತಮ್ಮ, ತಂದೆ ರಂಗರಾವ್ ಅವರಿಗೆ ಬಹಳ ಕಾತುರವಿತ್ತು. ಹೆಣ್ಣುಗಳನ್ನು ಸಂದರ್ಶಿಸಲು ಒಪ್ಪದೇ ಇದ್ದ ಸುಧೀರನ ಮನೋ… Read more…

 • ಬ್ರಿಟನ್ ದಂಪತಿಗಳ ಪ್ರೇಮ ದಾಖಲೆ

  ಫ್ರಾಂಕ್ ಆಗ ಇನ್ನು ಹದಿನಾಲ್ಕು ವರ್ಷದ ಹುಡುಗ ತೆಳ್ಳಗೆ ಬೆಳ್ಳಗೆ ಇದ್ದು, ಕರಿಯ ಬಣ್ಣದ ದಟ್ಟ ಕೂದಲಿನ ಬ್ರಿಟಿಷ್ ಬಾಲಕ. ಹೈಸ್ಕೂಲಿನಲ್ಲಿ ಓದುತ್ತಿದ್ದ ಫ್ರಾಂಕ್‌ಗೆ ಕಾಲ್ಚೆಂಡು ಆಟ… Read more…

 • ಅಹಮ್ ಬ್ರಹ್ಮಾಸ್ಮಿ

  ಬಹುಶಃ ಮೊದಲ ಬಾರಿ ನಾನು ಅವನನ್ನು ನೋಡುತ್ತಿರಬೇಕು. ಅವನು ಅಕಸ್ಮತ್ತಾಗಿ ನನ್ನ ಕಣ್ಣಿಗೆ ಬಿದ್ದನೋ, ಅಲ್ಲಾ ಅವನೇ ನಾನು ಕಾಣುವ ಹಾಗೆ ಎದುರಿಗೆ ಬಂದನೋ ಎಂಬ ವಿಷಯದಲ್ಲಿ… Read more…