ಮುಗಿದ ಕತೆಗೆ

ಮುಗಿದ ಕತೆಗೆ ತೆರಯಹಾಕಿ
ಬಾಳ ಪುಟದ ತೆರೆಯ ಬಿಚ್ಚಿ
ಕುಂಚ ಹಿಡಿದು ಬಣ್ಣ ಹಚ್ಚಿ
ಚಿತ್ತಾರ ಬಿಡಿಸಿತು ಚಂಚಲ ಮನಸು ||

ಭಾವಲತೆಯ ದಳವ ಬಿಡಿಸಿ
ಬಿರಿದ ಚೆಂದ ಹೂವಾ ಮುಡಿಸಿ
ಮುಡಿಯ ಏರಿ ಒಲವ ತೋರಿ
ಮನವ ಸೆಳೆಯಿತು ಚಂಚಲ ಮನಸು ||

ಕತ್ತಲೆಯ ನೀಗಿಸಿ ಬೆತ್ತಲೆ
ಬೆಳಕನಿರಿಸಿ ಅಂಗಳ ಬೆಳಗಿ
ಬೊಗಸೆ ಕಂಗಳನೊಸೆದು ಕಲ್ಪನಾ
ಲಿಂಗವ ಬಯಸಿತು ಚಂಚಲ ಮನಸು ||

ಕನಸು ಕಂಡ ಮನಸಿಗೆ
ನೆನಪು ತಂದ ಹೊಸತಿಗೆ
ಸುಖ ಸೋಪಾನ ನೀಲಚಿತ್ತ
ಓಕುಳಿ ಎರಚಿತು ಚಂಚಲ ಮನಸು ||
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಪ್ರಗತಿ ಅಥವಾ ದಾಸ್ಯವಿಮೋಚನೆ – ೬ನೆಯ ಖಂಡ – ಸಮಯಸಾಫಲ್ಯ
Next post ನೆರಳು

ಸಣ್ಣ ಕತೆ

  • ಏಡಿರಾಜ

    ಚಲೋ ವಂದು ಅರಸು ಮನಿ, ಗಂಡ-ಹೆಂಡ್ತಿ ದೊಡ್ಡ ಮನ್ತಾನದಲ್ ಆಳ್ಕತಿದ್ರು. ಆವಾಗೆ ಆ ಅರಸೂಗೆ ಗಂಡ್ ಹುಡ್ಗರಿಲ್ಲ. ಸಂತತ್ಯಲ್ಲ, ಇದ್ರದು ನಿಚ್ಚಾ ಕೆಲ್ಸಯೇನಪ್ಪ ಅರಸು ಹಿಂಡ್ತಿದು, ಮನಿ… Read more…

  • ಬಾಳ ಚಕ್ರ ನಿಲ್ಲಲಿಲ್ಲ

    ತಂದೆಯ ಸಾವು ಕುಟುಂಬವನ್ನೇ ಬೀದಿಪಾಲು ಮಾಡಿತು. ಹೊಸಪೇಟೆಯ ಚಪ್ಪರದ ಹಳ್ಳಿಯಲ್ಲಿ ವಾಸವಾಗಿದ್ದ ಇಮಾಮ್ ಸಾಬ್ ಹಾಗೂ ಝೈನಾಬ್ ದಂಪತಿಗಳಿಗೆ ೬ ಹೆಣ್ಣು ಮಕ್ಕಳು, ಒಂದು ಗಂಡು ಮಗು.… Read more…

  • ಬಲಿ

    ಅವಳು ಭಾಗಶಃ ಚಟ್ಟೆಯಾದ ಕಪ್ಪು ಬಣ್ಣಕ್ಕೆ ತಿರುಗಿದ ಅಲ್ಯೂಮೀನಿಯಂ ತಟ್ಟೆಯೊಳಗೆ ಸ್ವಲ್ಪ ಹಾಲು ಸುರಿದು ಅದಕ್ಕೆ ಸ್ವಲ್ಪ ನೀರನ್ನು ಬೆರೆಸಿ, ಒಲೆಯ ಮೇಲಿಟ್ಟು ಮುಚ್ಚಳ ಮುಚ್ಚಿದಳು. ಒಲೆಯ… Read more…

  • ಎರಡು ಪರಿವಾರಗಳು

    ಇದು ಎರಡು ಪರಿವಾರದ ಕತೆ. ಒಂದು ಹಕ್ಕಿ ಪರಿವಾರ, ಇನ್ನೊಂದು ಮನುಷ್ಯ ಪರಿವಾರದ್ದು. ಒಂದು ಸುಂದರ ತೋಟ; ವಿಧವಿಧದ ಗಿಡ ಮರಗಳು; ಅವುಗಳ ಕವಲು ಬಿಟ್ಟ ರೆಂಬೆಗಳಲ್ಲಿ… Read more…

  • ಸ್ನೇಹಲತಾ

    ೧೫-೯-೧೯.. ಈಗ ಮನಸ್ಸಿಗೆ ನೆಮ್ಮದಿಯೆನಿಸುತ್ತಿದೆ. ಇಂದಿನಿಂದ ಮತ್ತೆ ನನ್ನ ದಿನಚರಿ ಬರೆಯುವ ಕಾರ್ಯಕ್ರಮವನ್ನು ಆರಂಭಿಸಬೇಕು. ದಿನಚರಿಯೆ ನನ್ನ ಸಹಧರ್ಮಿಣಿ; ನನ್ನ ಸಹ-ಸಂಚಾರಿ; ಅದೆ ನನಗೆ ಸಂತಸ ಕೊಡುವುದು.… Read more…