ನಡು ಹಗಲಿನ ಉರಿ ಬಿಸಿಲಿಗೆ
ಬೀದಿಯ ಬದಿಯಲ್ಲಿ ನಾನು ನಿಂತಿರುವೆ
ನನ್ನ ಹಿಂಬದಿಗೆ ಮರ
ಅದರ ನೆರಳು ನನ್ನೆದುರು ನಿಂತಿದೆ
ಮರದ ಕೊಂಬೆ ಕಪ್ಪು, ರೆಂಬೆ ಬೂದು ಕಪ್ಪು,
ಎಲೆ ಹಸಿರು, ನೀಲ-ಶ್ಯಾಮಲ ಹೂವು
ಅದರ ಮೇಲೊಂದು ಕರ್ರಗಿನ ಕಾಗೆ ಕೂತಿದೆ
ಮರದಲ್ಲಿ ಬಣ್ಣ ಅನೇಕ
ಕಪ್ಪು, ಬೂದು, ನೀಲ, ಶ್ಯಾಮಲ, ಹಸಿರು
ನನ್ನೆದುರಿನ ನೆರಳು ಮಾತ್ರ ಕಪ್ಪು
ಎಲ್ಲ ಬಣ್ಣ ಭೇದ ಭಾವವ ಮರೆತು
ನೆರಳಲ್ಲಿ ಕಪ್ಪು ಒಂದಾಗಿದೆ.
ಮರ ತನ್ನ ರೂಪವನ್ನು ಅದರಲ್ಲಿ ಕಂಡು
ನಿಜಕ್ಕಿಂತ ಹೆಚ್ಚು ಜೀವಂತವಾಗಿದೆ.
ಮೂಲ: ಶಾಂತಾ ಶೆಳ್ಕೆ
(ಮರಾಠಿ)
*****