ಹರಿಯೆ ನಿನ್ನ ಮರೆತು ನಾನು
ಭಾವಗಳ ಭಾವದಲಿ ತೇಲಿಹೋದೆ
ದೀಪವೇ ಸುಖ ನೀಡುವದೆಂಬ ಭ್ರಮದಿ
ಪತಂಗ ಸುಳಿದು ಜಲಿಸಿದಂತೆ ಸೋರಿಹೋದೆ
ಬಿಸಿಲೆ ಬೆಳದಿಂಗಳೆಂದು ಚಲ್ಲಾಟವಾಡಿ
ಬದುಕೆಲ್ಲ ಹೋರಾಡಿ ದುಃಖದಿ ಬೆಂದು ಹೋದೆ
ಗಗನ ಕುಸುಮಕ್ಕೆ ಕೈಯ ಚಾಚಿ ನಾನು
ನಶ್ವರ ತನುವಿನ ಸ್ವಾರ್ಥಕ್ಕೆ ನಾನೊಂದೆ
ಲಿಂಗ ಪೂಜೆಯ ಮರೆತು ಅಂಗ ಸುಖಕೆ ಬಯಸಿ
ನರಕ ಕೂಪಕ್ಕೆ ನಿತ್ಯ ಜಾರುತ್ತ ಹೋದೆ
ಜನುಮ ಜನುಮಗಳು ಹೀಗೆ ಪಡೆದು ನಾನು
ಮತ್ತೆ ಇಂದ್ರಿಯ ಸುಖಗಳಿಗೆ ಮೀರುತ್ತ ಹೋದೆ
ಯಾವುದು ನನ್ನಕೈಯ ಹಿಡಿದು ಕಾಪಾಡಲಿಲ್ಲ
ಮಸಣಕ್ಕೆ ಅಟ್ಟುವಂತೆ ಎನ್ನ ಹುನ್ನಾರ ಹೂಡಿತ್ತು
ಅರಿವು ಆ ಚಣ ಎನ್ನಲಿ ಉದಿತಗೊಂಡಿತ್ತು
ಮಾಣಿಕ್ಯ ವಿಠಲನಿಗೆ ಹೂಹಾರ ಮಾಡಿತ್ತು
*****