ನಾ ನೋಡುನೋಡುತಿಹ ನೋಟವಿದ ನಾನರಿಯೆ
ಎಲ್ಲು ಕಾಣದ ಬೆರಗನಿಲ್ಲಿ ನಾ ಪಡುವೆ;
ಹೊರಜಗದ ನಿಜವಲ್ಲ ಭವದ ತೋರಿಕೆಯಲ್ಲ
ನಟನೆಯಲ್ಲಿದು, ನನ್ನಿ, ಎಂಥದಿದು ಎನುವೆ-
ಅಲ್ಲಿ ಮೊಳೆವಾಸೆಭಯಕಲ್ಲೆ ಶಮನವ ಕಾಣೆ
ಇಲ್ಲಿಗೈತಹ ಮಂದಿಯಚ್ಚರಿಯದಿರಲಿ
ಅಲ್ಲಿಯದನೇನನೂ ಒಲ್ಲದಿಹ ನಿಸ್ಪೃಹರು
ಇಲ್ಲಿ ತುಷ್ಟಿಯ ಪಡೆವ ಬೆರಗಿಗೇನೆನಲಿ?
ಆವ ತುಂಬಿಹುದಿಲ್ಲಿ ಎರೆವವರಿಗೆರೆನಷ್ಟನೀವ
ಮನತುಂಬುವಷ್ಟರಿವ ಎದೆತುಂಬುವಷ್ಟೊಲವ ಪಡೆಯೆ ಜೀವ?
*****


















