Home / Poem

Browsing Tag: Poem

ರಸ ತುಂಬಿದ ಬಣ್ಣ ಬಣ್ಣದ ಹಣ್ಣ ಕೈಯಲ್ಲಿ ಹಿಡಿದುಕೊಂಡು, ಬಾಯಲ್ಲಿಡದೆ ನೋಡುತ್ತಾ ಕೂಡುವುದೇನೋ! ಹಾಗೆ ನೋಡುವಾಗ ಊರಿನಿಂತ ಬಾಯಿನೀರೇನೋ! ಒತ್ತಿ ಹಿಚುಕದೆ, ಕಿತ್ತೆಸೆದು ಸಿಪ್ಪೆಸುಲಿಯದೆ, ಮುಖ ಮೈಗಳ ಮುಟ್ಟಿಮುಟ್ಟಿ ಬಾಯಿ ಬಿಡುವುದೇನೋ! ಮೂಸಿ ಮೂಗ...

ಮೋಡಿನ ಗರ್ಭಕ್ಕೆ ಸಿಡಿಲಿನ ಚೂರಿ ಇರಿದಿರಬೇಕು ಅದಕ್ಕೆಂದೇ ದಬ ದಬನೆ ನಿಸರ್ಗದ ನೆತ್ತರು ಬಿದ್ದು ಹಿಡಿತಕ್ಕೆ ಬರದೇ ಹರಿದೋಡುತ್ತಿದೆ. *****...

ಕಂಬಳಿಹುಳಕ್ಕೆ ಯಾವಾಗಲೂ ಛಳಿಯಾದ್ದರಿಂದ ಅದು ಯಾವಾಗಲೂ ಕಂಬಳಿ ಹೊದ್ದುಕೊಂಡೇ ಇರುವುದು. ಕಪ್ಪು ಟೋಪಿಯ ಕೆಳಗೆ ಕಪ್ಪು-ಬೂದು-ಹೊಂಬಣ್ಣದ ಗೆರೆಗೆರೆಯ ಕಂಬಳಿ ಛಳಿಗಾಲದ ಮುಂಜಾನೆಗಳಲ್ಲಂತೂ ಇಬ್ಬನಿಯನ್ನು ದಾಟಿ ಬರುವ ಬಿಸಿಲಿಗೆ ಅಲ್ಲಲ್ಲಿ ಹೊಳೆಯುವುದ...

ಇಂದು ಮುಂಜಾವಿನಿಂದ ಸಂಜೆಯವರೆಗೂ ನಮ್ಮೊಡನಿದ್ದು, ಅನೇಕ ವಿಷಯಗಳ ಮೇಲೆ ಬೆಳಕು ಚೆಲ್ಲಿ ಮಾರ್ಗದರ್ಶನ ನೀಡಿ, ದಿನದ ಕಾರ್ಯಕ್ರಮವನ್ನು ಯಶಸ್ವಿಯಾಗಿ ನಡೆಸಿಕೊಟ್ಟು ಈಗ ತುರ್ತು ಕೆಲಸದ ಮೇಲೆ ನಿರ್ಗಮಿಸುತ್ತಿರುವ ಸನ್ಮಾನ್ಯ ‘ದಿವಸ್ಪತಿ ಹೆಗಡೆ’ಯವರಿಗ...

ನೀರನು ಚೆಲ್ಲುವ ಮೋಡಕ್ಕೆ ಭೇದ ಬುದ್ಧಿ ಇಲ್ಲ, ಬಿಸಿಲನು ಸುರಿಸುವ ಸೂರ್ಯನಿಗೆ ಪಕ್ಷಪಾತವಿಲ್ಲ, ಪರಿಮಳ ಹರಡುವ ವಾಯುವಿಗೆ ಜಾತಿ ಪಂಥವಿಲ್ಲ, ಮಾನವರಲ್ಲಿ ಮಾತ್ರವೆ ಇಂಥ ಏರು ತಗ್ಗು ಎಲ್ಲ. ಎಲ್ಲರ ಮೈಲೂ ಹರಿಯುವುದು ರಕ್ತ ಮಾತ್ರವೇನೇ, ಚಳಿ ಮಳೆ ಗಾ...

ಇವರ ಡೊಳ್ಳು ಹೊಟ್ಟೆಗಳನೆಲ್ಲ ನಗಾರಿ ಬಾರಿಸಬೇಕು ಒಡೆಯುವವರೆಗೆ ಇವರ ಮುಖವಾಡಗಳ ಕಿತ್ತೆಸೆದು ಇವರ ಕತ್ತೆ ಮುಖಗಳ ಕತ್ತುಹಿಡಿದು ಹೊಲೆಗೇರಿಗಳ ಕೊಳಚೆಗಳಲ್ಲದ್ದಬೇಕು ಇವರು ಕಟ್ಟಿದ ಸಂಚುಕೋಟೆಗಳ ನುಡಿಗುಂಡುಗಳಿಂದ ಒಡೆಯಬೇಕು ಇವರು ಹಾಕಿದ ಲಕ್ಷ್ಮಣರ...

ಒಂದು ದೊಡ್ಡದಾದ ಬೆಲೂನನ್ನು ಕಂಡರೆ ಎಲ್ಲರಿಗೂ ತಮಾಷೆ ಅದನ್ನು ಹಿಡಿದೆತ್ತಿ ಒಡೆಯಬೇಕೆನ್ನುವ ವಿಚಿತ್ರ ಆಸೆ ಆದರೆ ನಿಜಕ್ಕೂ ಒಂದು ದೊಡ್ಡ ಬೆಲೂನಿನಷ್ಟು ಮಜವಾದ ವಸ್ತು ಈ ಲೋಕದಲ್ಲಿ ಇನ್ನೊಂದಿಲ್ಲ ಎಂಬುದು ಎಲ್ಲರಿಗೂ ಗೊತ್ತು ಉದಾಹರಣೆಗೆ ಒಂದು ಕೋ...

ತಿಮ್ಮಣ್ಣ ನಮ್ಮೂರಿನ ಪಕ್ಕದ ಹಳ್ಳಿಯಲ್ಲಿನ ಅಡುಗೆ ಭಟ್ಟ ತಿಪ್ಪಾಭಟ್ಟರ ಮಗ. ತಿಪ್ಪಾಭಟ್ಟರಿಗೆ ಮದುವೆಯಾಗಿ ಹತ್ತು ವರ್ಷ ಕಳೆದರೂ ಮಕ್ಕಳಾಗಿರಲಿಲ್ಲ. ಕೊನೆಗೆ ಪಕ್ಕದ ಮನೆಯ ಕಮಲಾಕ್ಷಮ್ಮನ ಸಲಹೆ ಮೇರೆಗೆ ಮಗುವಾದರೆ ತಿರುಪತಿಗೆ ಹೋಗಿ ಬರುವ ಹರಕೆ ಹೊತ್ತರು. ತಿಮ್ಮಪ್ಪನ ಕೃಪಾಕಟಾಕ್ಷವೋ ...

ಬೆಳಗಿನ ಜಾವ ಆಗಲೇ ಐದು ಬಡಿದಿತ್ತು. ಎಲ್ಲೋ ಮಾಮರದಲ್ಲಿ ಕೋಗಿಲೆಯೂ ಕುಹೂ ಕುಹೂ ಎಂದು ಹಾಡುತಿತ್ತು. ಅಲ್ಲಲ್ಲಿ ಗಿಡಮರಗಳಲ್ಲಿ ಹಕ್ಕಿಗಳ ಚಿಲಿಚಿಲಿ ಕಲರವದೊಂದಿಗೆ ಸುಪ್ರಭಾತ ಹಾಡುತ್ತಿದ್ದವು. ಪ್ರಶಾಂತವಾದ ವಾತಾವರಣದಲ್ಲಿ ಸ್ವಾಮೀಜಿ, ಬೆಳಗಿನ ಪೂಜೆ ಮುಗಿಸಿ, ನಿತ್ಯದಂತೆ ಮಠದ ಪಾಕಶಾ...

“ಇನ್ನು ಗೇಣಿ ಕೊಡಬೇಕಾಗಿಲ್ಲವಂತೆ. ಒಕ್ಕಲಿಗೇ ಭೂಮಿಯಂತೆ.” ಊರಲ್ಲಿ ದಟ್ಟವಾಗಿ ಹಬ್ಬಿದ್ದ ಆ ವಾರ್‍ತೆ ಕುಂಞಂಬುನಲ್ಲಿ ಅಸಾಧ್ಯ ಕುತೂಹಲ ಕೆರಳಿಸಿತ್ತು. ಗೇಣಿ ಕೊಡದಿದ್ದರೆ ಧನಿಗಳು ಬಿಟ್ಟಾರೆಯೆ? ಗೇಣಿ ಕೊಡದೆ ಬೇರೆಯವರ ಭೂಮಿಯನ್ನು ಇಟ್ಟುಕೊಳ್ಳುವುದು ತಪ್ಪಲ್ಲವೆ? ಕು...

“ಮಮ್ಮಿ ! ಮಮ್ಮಿ ! ಬೇಗ ಬಾ” “ಅಡಿಗೆ ಮಾಡುತ್ತಾ ಇದ್ದೇನೆ, ಯಾಕೆ ಕಿರಿಚಿಕೊಳ್ಳುತ್ತಾ ಇದ್ದಿಯಾ ರೋಜಿ? ಬರುತ್ತೀನಿ ತಾಳು” ಎಂದಳು ಕೆಲಸದಲ್ಲಿ ನಿರತ ತಾಯಿ. “ಮಮ್ಮಿ! ಒಂದು ನಿಮಿಷ ಬಂದು ನೋಡು, ಕಾಗೆ ಪುಟ್ಟ ಅಳಿಲನ್ನು ಕುಕ್ಕಿ ನೋವು ಮಾಡುತ್ತಾ ...

ಈ ದಿನ ಹಿತ್ತಲ ತುಂಬ ಪಾರಿಜಾತ ಹೂವು ಸುರಿದಿದೆ. ಮತ್ತೆ ಸಂಪಿಗೆ ಮರದಿಂದ ಹೂವರಳಿ ಘಮ್ಮೆಂದು ವಾಸನೆ ಹರಿದಿದೆ. ಎರಡು ಪರಿಮಳ ಸೇರಿ ಎದೆಯಾಳಕೆ ಇಳಿದು ಒಳಗೊಳಗೆ ಒಂಥರಾ ಭಾವ ವಿಸ್ಮಯ ಅರಳಿದೆ. ಅಮ್ಮ ಒಲೆಯ ಮೇಲೆ ಕಡುಬು ಬೇಯಿಸುತ್ತಿದ್ದಾಳೆ. ಕೊಟ್ಟೆ ಕಡುಬಿನ ವಾಸನೆ ಇಡೀ ಮನೆಯನ್ನು ಪಸ...

ಆ ದಿನ, ಡಾಕ್ಟರ್ ಪಾರ್ವತಿಯವರಿಗೆ ಆತಂಕದ ದಿನ! ಒಂದು ವಿಧದ ಚಂಡಮಾರುತವನ್ನೆಬ್ಬಿಸಿದಂತಹ ಘಟನೆಯಿಂದ ನಗರದ ಅನೇಕರೂ, ಗಣ್ಯರೂ ಸೇರಿದಂತೆ, ಆ ಕೋರ್‍ಟಿನಲ್ಲಿ ಜನಸಂದಣಿ ಕಿಕ್ಕಿರಿದಿತ್ತು. ಆ ನಗರದ ಪ್ರಖ್ಯಾತ ವೈದ್ಯ ಡಾಕ್ಟರ್ ಪಾರ್ವತಿದೇವಿಯವರು ಸಾಕ್ಷಿ ನೀಡಬೇಕಾಗಿದ್ದರಿಂದ ಕೋರ್ಟಿನ ...